Horoscope: ಇಂದಿನ ರಾಶಿಭವಿಷ್ಯ, ಯಾರೋ ಮಾಡಿದ ತಪ್ಪಿಗೆ ನಿಮಗೆ ತೊಂದರೆಯಾಗಲಿದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 2) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಯಾರೋ ಮಾಡಿದ ತಪ್ಪಿಗೆ ನಿಮಗೆ ತೊಂದರೆಯಾಗಲಿದೆ
ರಾಶಿ ಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Aug 02, 2023 | 12:30 AM

ಇಂದಿನ ನಿಮ್ಮ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಪ್ರೀತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:52 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ.

ಸಿಂಹ ರಾಶಿ: ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದು ಹೊರಟರೂ ಅದು ಮತ್ತೆಲ್ಲೋ ಒಂದು ಕಡೆ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಸಣ್ಣ ಕಲಹವಾದರೂ ಅನಂತರ ಒಂದಾಗುವಿರಿ. ಮಕ್ಕಳನ್ನು ಪಡೆಯುವ ಬಯಕೆ ಅತಿಯಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿದ್ದು ವೈದ್ಯರ ಸಲಹೆಯನ್ನು ಪಡೆಯಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ವಂಚಿತರಾಗುವ ಸಾಧ್ಯತೆ ಇದೆ.‌ ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಇರಲಿದೆ. ನಿಮ್ಮ ಗುಣಗಳನ್ನು ದುರುಪಯೋಗ ಮಾಡಿಕೊಳ್ಳುವರು. ಪ್ರೀತಿಯಿಂದ‌ ಗೆಲ್ಲುವ ನಿರ್ಧಾರವು ಒಳ್ಳೆಯದು.

ಕನ್ಯಾ ರಾಶಿ: ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮಮಕಾರದಿಂದ ನಿಮಗೆ ತೊಂದರೆಯಾಗಲಿದೆ. ಹಣದ ಸಂಪಾದನೆಗೆ ಅನೇಕ ಮಾರ್ಗಗಳು ಇದ್ದರೂ ನಿಮಗೆ ಅದಾವುದೂ ಇಷ್ಟವಾಗದು. ಪಾಲುದಾರಿಕೆಯಲ್ಲಿ ಉದ್ಯೋಗವನ್ನು ಪ್ರಾರಂಭಿಸಿ.‌ ಇಂದು ನಿಮ್ಮ ಒಬ್ಬರ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವು ದೊಡ್ಡದಾಗಬಹುದು. ನಿರ್ಮಾಣದ ಕೆಲಸವು ಬಹಳ ನಿಧಾನವಾಗಬಹುದು. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಬಹುದು. ಯಾರೋ ಮಾಡಿದ ತಪ್ಪಿಗೆ ನಿಮಗೆ ತೊಂದರೆಯಾಗಲಿದೆ. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಟ್ಟೀತು. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.

ತುಲಾ ರಾಶಿ: ಯಾರದೋ ಮಾತಿನ ಮೇರೆಗೆ ಇಂದು ಕುಟುಂಬದಲ್ಲಿ ಕಲಹವಾಗಬಹುದು. ಯಾರನ್ನೂ ನಿಮ್ಮ ಮೂಗಿನ ನೇರಕ್ಕೆ ಅಳೆಯಬಾರದು. ಇಂದು ನಿಮಗೆ ಕಛೇರಿಯ ಕೆಲಸಗಳು ಅತಿಯಾಗಿದೆ ಎಂದು ಅನ್ನಿಸಬಹುದು. ಸಂಗಾತಿಗೆ ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಸಾಮರ್ಥ್ಯದಿಂದ ಉನ್ನತ ಹುದ್ದೆಯನ್ನು ನೀವು ಅಲಂಕರಿಸುವಿರಿ. ಚಂಚಲವಾದ ಮನಸ್ಸು ನಿಮಗೆ ಅನೇಕ ಒಳ್ಳೆಯ ಆಯ್ಕೆಯನ್ನು ತಪ್ಪಿಸುವುದು.

ವೃಶ್ಚಿಕ ರಾಶಿ: ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಯಾರನ್ನೋ ಸಂಶಯಿಸುತ್ತ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ.‌ ಇಂದು ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವುದು ಕಷ್ಟವಾದೀತು. ಧಾರ್ಮಿಕ ವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವುದು ಸರಿಯಲ್ಲ. ಕಾರಣಾಂತರಗಳಿಂದ ನೀವು ಹೋಗುವ ಪ್ರಯಾಣವು ಸ್ಥಗಿತಗೊಳ್ಳಬಹುದು.‌ ಆಡಳಿತಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಆಗಬಹುದು. ದೂರ ಪ್ರಯಾಣವು ನಿಮಗೆ ಇಷ್ಟವಾದೀತು.

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್