Daily Horoscope 04 July: ಅನವಶ್ಯಕ ಮಾತುಗಳಿಂದ ವಿವಾದ ಸೃಷ್ಟಿ, ಹಿರಿಯರನ್ನು ಗೌರವಿಸಿ

| Updated By: Digi Tech Desk

Updated on: Jul 04, 2023 | 11:20 AM

ಇಂದಿನ (2023 ಜುಲೈ​ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 04 July: ಅನವಶ್ಯಕ ಮಾತುಗಳಿಂದ ವಿವಾದ ಸೃಷ್ಟಿ, ಹಿರಿಯರನ್ನು ಗೌರವಿಸಿ
ಪ್ರಾತಿನಿಧಿಕ ಚಿತ್ರ
Image Credit source: Getty Images
Follow us on

ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ:ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಐಂದ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:50 ರಿಂದ 05:27 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 ರಿಂದ 10:59 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:14 ರ ವರೆಗೆ.

ಮೇಷ: ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ‌ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರಪಡಬೇಕಾದೀತು. ಧಾರ್ಮಿಕ ಸ್ಥಳಗಳಿಗೆ ಹೋಗುವ ಹುನ್ನಾರ ನಡೆಸುವಿರಿ. ತಾಯಿಯ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಾಯಿಯ ಕಡೆಯವರು ನಿಮಗೆ ಸಹಾಯ ಮಾಡುವರು. ಸುಖದಲ್ಲಿ‌ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ.‌ ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ.

ವೃಷಭ: ಇಂದು ಜೀವನವು ತಿರುವನ್ನು ಪಡೆದುಕೊಳ್ಳಲಿದೆ. ಹೊಸ ವ್ಯಕ್ತಿಗಳು, ವಿಚಾರಗಳು ನಿಮಗೆ ಗೊತ್ತಾಗಬಹುದು. ಬಾಂಧವ್ಯವು ಗಟ್ಟಿಯಾಗಬಹುದು. ಸಂಗಾತಿಯಿಂದ ಉತ್ತಮ‌ ಸಲಹೆಯನ್ನು ಪಡೆಯುವಿರಿ. ನಿಮ್ಮ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಕಾನೂನಿನ ಸಮರದಲ್ಲಿ ನಿಮಗೆ ಜಯವಾಗಬಹುದು. ಒತ್ತಡದಿಂದ ಹೊರಬಂದ ಕಾರಣ ನಿರಾಳವೆನಿಸಬಹುದು. ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಮಿಥುನ: ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡಲಿದೆ. ಹಿರಿಯರನ್ನು ಗೌರವಿಸುವಿರಿ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವಿರಿ. ನಿಮ್ಮವರ ಬಳಿ ಸಹಾಯವನ್ನು ಕೇಳುವಿರಿ. ಇಂದು ನಿದ್ರೆಯು ಬಾರದೇ ಮನಸ್ಸು ಸರಿ ಇರದು. ಅನವಶ್ಯಕ ಮಾತುಗಳಿಂದ ವಿವಾದವು ಸೃಷ್ಟಿಯಾಗುವುದು. ಎಲ್ಲ ಕೆಲಸವನ್ನು ನೀವೇ ಮಾಡಲಾಗದು. ಹಂಚಿಕೊಂಡು ಕೆಲಸವನ್ನು ಮಾಡಿ ಮುಗಿಸಿ. ಹೊಸ ಸ್ಥಾನವು ನಿಮಗೆ ಸಿಗಲಿದ್ದು ನಿರ್ವಹಣೆಯನ್ನು ಮಾಡಲು ಕಷ್ಟವಾದೀತು. ಸಹೋದರನಿಂದ ಸಹಕಾರವು ನಿಮಗೆ ಸಿಗಬಹುದು. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ.

ಕಟಕ: ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ. ನಿಮ್ಮ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ತಿಂದರೆ ಇಲ್ಲ. ಸರಿಯಾಗಿರಲಿ. ಮೋಸ ಹೋಗಬೇಕಾದೀತು. ನಿಮಗೆ ಇಂದು ನಿಮ್ಮ ಸಹೋದ್ಯೋಗಿಗಳ ವರ್ತನೆಯಲ್ಲಿ ಅನುಮಾನ ಕಾಣಬಹುದು. ಅವರಿಂದ ದೂರವಿರುವುದು ಉತ್ತಮ. ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಶಂಸೆ ಸಿಗಲಿದೆ. ಅನಿರೀಕ್ಷಿತ ವಿಚಾರಕ್ಕೆ ನೀವು ಗಟ್ಟಿಯಾದ ಮನಸ್ಸನ್ನು ಮಾಡುವಿರಿ. ಹಣಕ್ಕಾಗಿ ತಲೆ ಕೆಡಸಿಕೊಳ್ಳುವುದಿಲ್ಲ.‌ ಬೇಕಾಗಿದ್ದನ್ನು ಪಡೆಯುವಿರಿ. ಸೇವಾ ಮನೋಭಾವವನ್ನು ಇಟ್ಟುಕೊಳ್ಳುವಿರಿ.

ಸಿಂಹ: ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು. ಉದ್ಯೋಗದಲ್ಲಿ ಅಸಹಾಯಕರಾಗಿ ಕೆಲಸವನ್ನು ಪೂರ್ಣಮಾಡುವಿರಿ‌. ಅವಕಾಶಗಳು ಪಡೆಯಲು ತಂತ್ರವನ್ನು ಹೂಡುವಿರಿ. ಮಾತಿನಲ್ಲಿ ಸತ್ಯತೆ ಇದ್ದರೂ ಸ್ಪಷ್ಟತೆ ಇರಲಿ. ಉದ್ಯೋಗದ ನಿಮಿತ್ತ ದೂರ ಹೋದವರಿಗೆ ತೊಂದರೆ ಆಗಬಹುದು. ಇಂದು ನಿಮ್ಮ ಅರಿವಿನ ಹಂತವು ನಿಮಗೆ ಗೊತ್ತಾಗುವುದು. ನಿಮ್ಮ ವರ್ತನೆಯನ್ನು ಕಂಡು ಗುಂಪಿನಿಂದ ಹೊರಗಿಡಲು ಯತ್ನಿಸುವರು. ಇಂದು ನಿಮಗೆ ಸಿಕ್ಕಿದ್ದರಲ್ಲಿ ಸಂತೋಷಿಸಿ. ಭೋಜನದ ಸಮಯವು ವ್ಯತ್ಯಾಸವಾಗಬಹುದು. ಅಧಿಕಾರಿಗಳ ಕರುಣೆಯ ಕಾರಣ ಆಪತ್ತಿನಿಂದ ಹೊರಬರುವಿರಿ.

ಕನ್ಯಾ: ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳು ಲಭ್ಯವಾಗುವುವು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಬಹುದು. ನಿಮ್ಮ ಇಂದಿನ ಕಾರ್ಯಕ್ಕೆ ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಅವಶ್ಯಕ. ಭವಿಷ್ಯದ ಕಲ್ಪನೆಯನ್ನು ಕುಟುಂಬದವರ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನವು ದೂರವಾಗಲು ಕಾರಣವಾಗಬಹುದು. ನಿಮ್ಮ ಹೇಳಿಕೆಗಳು ಸ್ಪಷ್ಟವಾಗಿರಲಿ. ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಪಶ್ಚಾತ್ತಾಪ ಪಡುವುದು ಬೇಡ. ಮಕ್ಕಳ ವಿವಾಹಕ್ಕಾಗಿ ಓಡಾಡುವಿರಿ. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸಿರಿ.

ತುಲಾ: ಹಿರಿಯರ ಉಪದೇಶವು ನಿಮಗೆ ಕಿರಿಕಿರಿ ಎನಿಸಬಹುದು. ಆರ್ಥಿಕ ಪರಿಸ್ಥಿತಿಯು ಸುಧಾರಿಸಬಹುದು. ಕುಟುಂಬವು ನಿಮ್ಮ ಮಾರ್ಗದರ್ಶನದಲ್ಲಿ ನೆಮ್ಮದಿಯನ್ನು ಕಾಣಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು. ಹಳೆಯ ರೋಗಕ್ಕೆ ಔಷಧದಿಂದ ಪರಿಹಾರ ಸಿಗಲಿದೆ. ನಿಮ್ಮ ಪ್ರೀತಿಪಾತ್ರರನ್ನು ನೀವು ಭೇಟಿಯಾಗಲು ಬಯಸುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದ ಅಧಿಕಾರಿಹಳಿಂದ ಒತ್ತಡವು ಬರಬಹುದು. ಆಪ್ತರ ಜೊತೆ ಪ್ರಯಾಣ ಮಾಡುವಿರಿ. ಸಮಾರಂಭಗಳಿಗೆ ಹೋಗುವವರಿದ್ದೀರಿ. ನೀರನ ಪ್ರದೇಶದಲ್ಲಿ ಜಾಗರೂಕತೆ ಅವಶ್ಯಕ.

ವೃಶ್ಚಿಕ: ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ. ಆಲಸ್ಯವು ಇಂದಿನ ಕಾರ್ಯವನ್ನು ನಿಧಾನ ಮಾಡಬಹುದು. ನೀವು ಇಟ್ಟ ನಂಬಿಕೆ ಹುಸಿಯಾಗುವ ಸಾಧ್ಯತೆ ಇದೆ. ಮಗನ ವಿವಾಹಕ್ಕೆ ಬಹಳ ಪ್ರಯತ್ನ ಮಾಡುವಿರಿ. ವಸ್ತ್ರಗಳನ್ನು ಮಾರಾಟ ಮಾಡುವವರು ತಮ್ಮ ಯೋಜನೆಯನ್ನು ಬದಲಿಸಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಉದ್ಯೋಗದಲ್ಲಿ ಕಲಹವಾಗುವ ಸಾಧ್ಯತೆ ಇದೆ. ವಾಹನವನ್ನು ಬಹಳ ಜಾಗರೂಕತೆಯಿಂದ ಚಲಾಯಿಸಿ. ವಿದ್ಯಾರ್ಥಿಗಳಿಗೆ ಸಮಯದ ಅಭಾವವು ಆಗಬಹುದು. ಕೆಲವು ದಿನಗಳ ವಿರಾಮವನ್ನು ಪಡೆದು ಪ್ರವಾಸ ಹೋಗುವಿರಿ. ನಿಮ್ಮ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ.

ಧನು: ಧನನಷ್ಟವಾದರೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಮಾಡಲು ಇಚ್ಛಿಸುವಿರಿ. ನಿಮ್ಮ ಕೆಲಸಗಳಿಗೆ ಆಪ್ತರ ವಿರೋಧವಿರಲಿದೆ. ಆತುರದ ನಿರ್ಧಾರದಿಂದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಒಳಿತಿಗಾಗಿ ಸಮಯವನ್ನು ನೀವು ನಿರೀಕ್ಷಿಸಬೇಕಾಗುತ್ತದೆ. ನೀವು ಮಾನಸಿಕವಾಗಿ ಗಟ್ಟಿಯಾಗಬೇಕಾಗಿದೆ. ದುರ್ಬಲ ಮನಸ್ಸಿಗೆ ನಕಾರಾತ್ಮಕ ಅಂಶಗಳು ಬರಬಹುದು. ನೆಮ್ಮದಿಯನ್ನು ಪಡೆಯಲು ಸಮೀಪದ ದೇವಾಲಯಕ್ಕೆ ಹೋಗುವಿರಿ. ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮುಂದು ಹೋಗಬಹುದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಆಸೆಯಾಗಲಿದೆ.

ಮಕರ: ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಭಯವಾಗಬಹುದು. ಇನ್ನೊಬ್ಬರಿಗೆ ಸಹಾಯ ಮಾಡಿದ ಧನ್ಯತೆ‌ ನಿಮಗೆ ಆಗಲಿದೆ‌. ಇದು ನಿಮ್ಮನ್ನು ಖುಷಿಯಿಂದ ಇಡುವುದು. ಕಲಹವು ಸಣ್ಣದೇ ಆಗಿದ್ದರೂ ಅದ ಫಲವು ಬಹಳ ದೊಡ್ಡಾದಾಗಿರುವುದು. ಮಾತಿನ ಮೇಲೆ ನಿಮ್ಮ ನಿಯಂತ್ರಣವಯ ಅಗತ್ಯ. ಕಳೆದುಕೊಂಡ ವಸ್ತುವನ್ನು ಅವರಿಗೆ ತಲುಪಿಸುವ ಮನಸ್ಸು ಮಾಡುವಿರಿ. ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಬಯಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು. ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು.

ಕುಂಭ: ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ. ಬಂಧುಗಳ ಪ್ರೀತಿ ಸಿಗಲಿದೆ. ಶ್ರಮವಹಿಸಿದರೂ ನಿರೀಕ್ಷಿತ ಆದಾಯವನ್ನು ಗಳಿಸುವುದು ಕಷ್ಟವಾದೀತು. ಇದು ನಿಮ್ಮನ್ನು ಚಿಂತೆಗೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗವು ನಿಮ್ಮ ಮೇಲೆ‌ ಒತ್ತಡವನ್ನು ತರಬಹುದು. ನಿಮ್ಮನ್ನು ಕಡೆಗಣಿಸಿದ ಜನರ ಮುಂದೇ ನೀವು ಎದ್ದು ನಿಲ್ಲುವಿರಿ. ಇಂದಿನ‌ ಕಾರ್ಯಗಳು ಮುಕ್ತಾಯವಾಗದೇ ಆತಂಕ ಪಡುವಿರಿ. ಸಂಗಾತಿಯನ್ನು ಹೆಚ್ಚು ಇಷ್ಟಪಡುವಿರಿ. ಸಾಮರಸ್ಯದ ಕೊರೆತೆಯು ನೀಗಲಿದೆ.

ಮೀನ: ಸುತ್ತಲಿನವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಆದರೆ ಅವರಿಂದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳಲು ಜನರು ತಂತ್ರಗಳನ್ನು ಬಳಸಬಹುದು. ಆರ್ಥಿಕವಾಗಿ ಸಬಲರಾಗುವಿರಿ. ಮನೋರಂಜನೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಿ. ಕೆಲಸದಿಂದ ಹೊರಬಂದ ಸ್ನೇಹಿತರಿಗೆ ಸಹಾಯ ಮಾಡುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಉಳಿದುಕೊಳ್ಳಬೇಕಾಗಬಹುದು. ಪತ್ನಿಗೆ ಸಹಕಾರವನ್ನು ಇಂದು ನೀಡಲಿದ್ದೀರಿ.

-ಲೋಹಿತಶರ್ಮಾ 8762924271 (what’s app only)

Published On - 12:02 am, Tue, 4 July 23