ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:10 ರಿಂದ 07:47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ 11:00ರ ವರೆಗೆ.
ಮೇಷ: ನಿಮ್ಮದಲ್ಲದ ವಿಚಾರದಲ್ಲಿ ಸಲಹೆಯನ್ನು ಕೊಡಲು ಹೋಗುವುದು ಬೇಡ. ಯಾರದೋ ಅಸೆಗೆ ನೀವು ಬಲಿಯಾಗಬಹುದು. ನಿಮ್ಮ ನಡುವಲ್ಲಿ ಬಿಟ್ಟು ಆನಂದಿಸುವರು. ಗೃಹ ನಿರ್ಮಾಣ ಕಾರ್ಯದಲ್ಲಿ ಅತಿಯಾ ಗಡಿಬಿಡಿ ಬೇಡ. ಒಂದೊಂದೇ ಮೆಟ್ಟಿಲೇರಿ ತುದಿಯನ್ನು ಮುಟ್ಟಬೇಕು. ಒಂದೇ ಬಾರಿಗೆ ಆಗುವುದಿಲ್ಲ. ಸಜ್ಜನರ ಸಹವಾಸ ಸಿಗಬಹುದು. ಅನಪೇಕ್ಷಿತ ವಿಷಯವನ್ನು ಯಾರ ಜೊತೆಯೂ ಮಾತನಾಡಬೇಡಿ. ನಿಮ್ಮ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ.
ವೃಷಭ: ಇಂದು ನೀವು ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುವಿರಿ. ಅನಿಸಿದ್ದನ್ನು ಹೇಳಿಕೊಂಡು ಮನಸ್ಸು ನಿರಾಳವಾಗಲಿದೆ. ವ್ಯವಹಾರದಿಂದ ವಂಚಿತರಾಗುವಿರಿ. ತಾಯಿಯು ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ಉಸಿರಾಟ ತೊಂದರೆ ಕಾಣಿಸಿಕೊಳ್ಳಬಹುದು. ಸಮಯಪಾಲನೆಯಲ್ಲಿ ಸೋಲುವಿರಿ. ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ಅನಿರೀಕ್ಷಿತ ಸುದ್ದಿಯು ಇಂದು ಬರಬಹುದು. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಮನೆಯವರ ಜೊತೆ ಸಮಯವನ್ನು ಕಳೆಯುವಿರಿ.
ಮಿಥುನ: ನಿಮ್ಮ ಮಾತುಗಳು ಇನ್ನೊಬ್ಬರಲ್ಲಿ ಕರುಣೆಯನ್ನು ಉಂಟುಮಾಡುವುದು. ಇಂದಿನ ನಿಮ್ಮ ಕಾರ್ಯಪರತೆಯಿಂದ ಸಂಸ್ಥೆಯು ಯಶಸ್ಸನ್ನು ಸಾಧಿಸಬಹುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಏಳಬಹುದು. ಒಬ್ಬರು ತಟಸ್ಥರಾಗಿ. ವಿದ್ಯಾರ್ಥಿಗಳು ಇಂದು ಖುಷಿಪಡಲಿದ್ದಾರೆ. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ನಿಮ್ಮ ಇಷ್ಟದವರ ಜೊತೆ ಸಮಯವನ್ನು ಕಳೆಯುವಿರಿ.
ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ. ಶ್ರಮಕ್ಕೆ ತಕ್ಕ ಫಲವು ಸಿಗಬಹುದು.
ಕಟಕ: ಸಾರ್ವಜನಿಕವಾಗಿ ಸ್ಥಾನಮಾನವನ್ನು ಪಡೆಯಲು ಹಂಬಲಿಸುವಿರಿ. ರಾಜಕಾರಣ ಗಾಳಿ ಬೀಸಲಿದೆ. ಇದರಿಂದ ನೀವು ಪ್ರಭಾವಿತರೂ ಆಗಬಹುದು. ಆದಾಯದ ಮೂಲವನ್ನು ನೀವು ಗಟ್ಟಿ ಮಾಡಿಕೊಳ್ಳುವಿರಿ. ನಿಮ್ಮ ಸಹೋದರನ ಆರೋಗ್ಯವು ವ್ಯತ್ಯಾಸವಾಗಬಹುದು. ಸಂಗಾತಿಯೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಹುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ವೇಗವಾಗಲಿದೆ. ಜೊತೆ ಇರುವವರ ಮೇಲೆ ನಂಬಿಕೆ ಕಡಿಮೆ ಆದೀತು. ಸೇವಾ ಮನೋಭಾವವು ನಿಮಗೆ ಉಂಟಾಗಲಿದೆ. ನಿಮ್ಮ ಕುಲದವರನ್ನು ಕಳೆದುಕೊಳ್ಳಬಹುದು.
ಸಿಂಹ: ಸಣ್ಣ ಪುಟ್ಟ ತೊಂದರೆಗಳಿಗೆ ನೀವು ಇಂದು ಹಿಂದೆ ಹೆಜ್ಜೆ ಇಡುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಮುನ್ನಡೆಯಿರಿ. ಹಣಕಾಸಿನ ತೊಂದರೆಯನ್ನು ಸ್ನೇಹಿತರು ನೀಗಿಸುವರು. ಸಂಗಾತಿಯ ನಡುವಣ ಕಲಹವನ್ನು ನೀವು ಸರಿ ಮಾಡಿಕೊಳ್ಳಿ. ಸುಳ್ಳಾಡಿ ಆತ್ಮವಂಚನೆಯನ್ನು ಮಾಡಿಕೊಳ್ಳಬೇಡಿ. ನಿಮ್ಮ ವಿರುದ್ಧ ಮಾತನಾಡಿಲ್ಲವೆಂದರೆ ನಿಮ್ಮ ಕ್ರಮ ಸರಿ ಇದೆ ಎಂದಲ್ಲ. ಬೇಸರವಾಗಬಾರದೆಂದೂ ಸುಮ್ಮನಿರುವರು. ಇಂದಿನ ನಿಮ್ಮ ವಾತಾರಣವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ನೀರಿನಿಂದ ನೀವು ಭಯಪಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಮನೆಯಲ್ಲಿ ಮದ್ದನ್ನು ಮಾಡಿಕೊಂಡು ಆರಾಮಾಗಿರಿ.
ಕನ್ಯಾ: ಸರಿಯಾದ ಸಮಯಕ್ಕೆ ಬುದ್ಧಿ ಸೂಚಿಸದೇ ಇದ್ದೀತು. ದುರ್ವ್ಯಸನವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಪಶ್ಚಾತ್ತಾಪದಿಂದ ನಿಮ್ಮ ತಪ್ಪುಗಳು ಸರಿಯಾಗಬಹುದು. ಆತ್ಮವಿಶ್ವಾಸವನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುವುದು. ಕುಟಂಬದವರು ಸೇರಿಕೊಂಡು ಎಲ್ಲರ ಶ್ರೇಯಸ್ಸಿಗೆ ಧಾರ್ಮಿಕ ಕಾರ್ಯಗಳನ್ನು ಮಾಡುವರು. ಹೊಸ ವ್ಯವಹಾರವನ್ನು ಆರಂಭಿಸಿರುವವರಿಗೆ ಗೊಂದಲವಾಗಲಿದೆ. ದೊಡ್ಡವರ ವಿಚಾರದಲ್ಲಿ ನೀವು ಇಂದು ತಗ್ಗಿ ಬಗ್ಗಿ ನಡೆಯಬೇಕಾದೀತು. ಕೋಪವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಕೊಳ್ಳಿ. ಏಕಾಗ್ರತೆಯ ಕೊರತೆಯನ್ನು ಸರಿ ಮಾಡಿಕೊಳ್ಳಿ.
ತುಲಾ: ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಿ. ಗೋಡೆಯ ಮೇಲಿನ ದೀಪದಂತೆ ಆಗುವುದು ಬೇಡ. ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕೊಡುವುದು ಉತ್ತಮ. ಭೂಮಿಯ ವ್ಯವಹಾರವು ಅಲ್ಪ ಅಭಿವೃದ್ಧಿಯನ್ನು ಕಾಣಲಿದೆ. ಆರ್ಥಿಕ ಒತ್ತಡವು ಮನೆಯಲ್ಲಿ ಅಶಾಂತಿಯನ್ನು ಎಬ್ಬಿಸಬಹುದು. ನಿಮ್ಮ ಮನಸ್ಸಿನ ನಿಯಂತ್ರಣವು ನಿಮ್ಮ ಕೈಯಲ್ಲಿರಲಿ. ತಂತ್ರಜ್ಞರು ವಿದೇಶ ಪ್ರವಾಸವನ್ನು ಮಾಡಿ ಬರಲಿರುವರು. ನಿಮ್ಮವರನ್ನು ಬೀಳ್ಕೊಡಲು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.
ವೃಶ್ಚಿಕ: ಅಂದುಕೊಂಡ ಸಮಯಕ್ಕೆ ಕೆಲಸಗಳು ಆಗದು ಎಂದು ಬೇಸರವಾಗಲಿದೆ. ಅದೃಷ್ಟವನ್ನು ನಂಬಿ ಕಾರ್ಯದಲ್ಲಿ ಪ್ರವೃತ್ತರಾಗಿ. ಗೊತ್ತಿಲ್ಲದ ವಿಚಾರವನ್ನು ಪ್ರಸಾರ ಮಾಡುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯು ಬೇಸರ ತರಿಸಿದ್ದು ಹೊರ ಕಡೆ ಸುತ್ತಾಡುವ, ವಿರಾಮ ಪಡೆಯುವ ಮನಸ್ಸಾಗಲಿದೆ. ಇಂದು ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಮನೆಯಲ್ಲಿ ನೀವು ಸಂಭ್ರಮವನ್ನು ಆಚರಿಸುವಿರಿ. ಕಾಲಕ್ಕೆ ಬೇಕಾದ ಮಾರ್ಗದರ್ಶನದ ಅಗತ್ಯವಿರಲಿದೆ. ಆಗಿಹೋದುದಕ್ಕೆ ಕಾರಣವನ್ನು ಹುಡುಕುತ್ತ ಕುಳಿತುಕೊಳ್ಳಬೇಡಿ. ಮುಂದಿನದ್ದರ ಬಗ್ಗೆ ಆಲೋಚನೆ ಇರಲಿ.
ಧನಸ್ಸು: ಸ್ಥಿರಾಸ್ತಿಯನ್ನು ಕೊಡುವ ಆಲೋಚನೆಯನ್ನು ಮಾಡುವಿರಿ. ಮನೆಯ ಕೆಲಸದಿಂದ ನಿಮಗೆ ಅಧಿಕ ಶ್ರಮವಾಗಲಿದೆ. ಮನೆಯಲ್ಲಿ ಇಂದು ಬಹಳ ಸಂತೋಷದಿಂದ ಇರುವಿರಿ. ಬಹಳ ಹಿಂದಿನ ಆಸೆಯನ್ನು ಸಂಗಾತಿಯು ಪೂರೈಸುವನು. ಇಂದು ನಿಮ್ಮ ಅನಗತ್ಯ ಮಾತುಗಳಿಂದ ವಿವಾದವು ಹುಟ್ಟಬಹುದು. ನಿಮ್ಮದಲ್ಲದ ವಸ್ತುವಿನ ಬಗ್ಗೆ ನಿಮಗೆ ಚಿಂತೆ ಬೇಡ. ಸಾಲದ ಮರುಪಾವತಿಗೆ ಸಮಯವನ್ನು ಕೇಳುವಿರಿ. ವಿದ್ಯಾರ್ಥಿಗಳು ಅಧ್ಯಯನಕ್ಜೆ ಆಯ್ಕೆ ಮಾಡೊಕೊಂಡ ವಿಷಯದಲ್ಲಿ ಪಾಂಡಿತ್ಯವನ್ನು ಪಡೆಯುವ ಸಾಧ್ಯತೆ ಇದೆ.
ಮಕರ: ಸಂತೋಷದಲ್ಲಿ ಮೈಮರೆತು ತುರ್ತು ಕೆಲಸವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ಅಸಹಜ ವರ್ತನೆಯು ಮನೆಯಲ್ಲಿ ಸಂದೇಹಕ್ಕೆ ಕಾರಣವಾಗುವುದು. ಹಿರಿಯರನ್ನು ಅನಾದರದಿಂದ ನೋಡಬೇಡಿ. ನಿಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉದ್ಯೋಗದಲ್ಲಿ ಎದುರಾದ ಸನ್ನಿವೇಶಗಳನ್ನು ಶಾಂತ ಮಾಡುವಿರಿ. ಇಂದು ಸಿಟ್ಟಗೊಂಡರೂ ಬೇಗ ಉಪಶಮನವಾಗಿ ಸಹಜ ಸ್ಥಿತಿಗೆ ಬರುವಿರಿ. ಸ್ವಂತ್ರವಾಗಿ ಜೀವನವನ್ನು ಸಾಗಿಸುವ ನಿರ್ಧಾರವನ್ನು ಮಾಡುವಿರಿ. ಕೇಳದೇ ಇರುವವರಿಗೆ ಏನನ್ನೂ ಕೊಡಬೇಡಿ. ನಿಮ್ಮ ಸುಪ್ತಮತಿಯನ್ನು ಪ್ರಕಟಿಸಿ.
ಕುಂಭ: ವಸ್ತುಗಳ ಮಾರಾಟದ ನಿಮಿತ್ತ ನೀವು ಪರ ಊರಿಗೆ ಹೋಗಲಿದ್ದೀರಿ. ನಿಮಗೆ ವಿವಾಹವಾಗಿಲ್ಲ ಎಂಬ ಕೊರಗು ಕಾಡುವುದು. ವಿವಾಹವಾಗಲು ಯಾರನ್ನಾದರೂ ನೀವೇ ಕೇಳುವ ಸ್ಥಿತಿ ಬರಲಿದೆ. ನಿಮ್ಮ ಸ್ವಭಾವಕ್ಕೆ ಹಿಂದಿಕೊಳ್ಳುವವರು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗಲಿದೆ. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಬೇಡ. ಯಥೇಷ್ಟ ಭೋಜನವು ಆರೋಗ್ಯದ ಮೇಲೆ ಪರಿಣಾಮವನ್ನು ಬೀರಲಿದೆ. ಇನ್ನೊಬ್ಬರ ಬಗ್ಗೆ ಅಸೂಯೆ ಉಂಟಾಗಬಹುದು.
ಮೀನ: ಉಪಕಾರ ಮಾಡಲು ಹೋಗಿ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ನಿಮ್ಮ ನೋವನ್ನು ಹಂಚಿಕೊಳ್ಳುವಿರಿ. ತಂದೆಯ ಜೊತೆ ಸಮಾರಂಭಗಳಿಗೆ ಹೋಗುವಿರಿ. ಸ್ಥೂಲವಾದ ಲೆಕ್ಕಾಚಾರವನ್ನು ಇಟ್ಟುಕೊಂಡು ಮುಂದುವರಿಯಿರಿ. ವಾಹನ ರಿಪೇರಿಯ ಕೆಲಸದಲ್ಲಿ ಇಂದಿನ ಸಮಯವು ವ್ಯರ್ಥವಾಗಬಹುದು. ಮಕ್ಕಳು ನಿಮ್ಮ ಬಳಿ ನಾನಾ ಪ್ರಶ್ನೆಗಳನ್ನು ಕೇಳುವರು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ಸ್ತ್ರೀಯರ ಮೇಲೆ ನಿಮಗೆ ಕರುಣೆ ಬರಬಹುದು. ಕೆಟ್ಟ ಗಳಿಗೆಯೊಂದು ಇಂದು ಹಾದುಹೋಗಿ ಸಣ್ಣ ಅವಘಡವನ್ನು ಮಾಡುವುದು.