Daily Horoscope 10 July: ಸರ್ಕಾರಿ ಕೆಲಸದಲ್ಲಿ ಮುನ್ನಡೆ, ರಾಜಕಾರಣಿ ಆಗಬೇಕೆಂಬ ಹಂಬಲ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2023 | 12:02 AM

ಇಂದಿನ (2023 ಜುಲೈ​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 10 July: ಸರ್ಕಾರಿ ಕೆಲಸದಲ್ಲಿ ಮುನ್ನಡೆ, ರಾಜಕಾರಣಿ ಆಗಬೇಕೆಂಬ ಹಂಬಲ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ರಿಂದ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:48 ರಿಂದ 09:24ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:01 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:51ರ ವರೆಗೆ.

ಮೇಷ: ನಿಮ್ಮ ಸಮಾಧಾನಚಿತ್ತವೇ ಎಲ್ಲ ಸಂದರ್ಭವನ್ನು ಹಿಡಿತಕ್ಕೆ ತರಲು ಸಹಾಯ ಮಾಡುವುದು. ಸಂಗಾತಿಗೆ ಉಡುಗೊರೆಯನ್ನು ನೀಡಿ ಕೋಪವನ್ನು ಕಡಿಮೆ ಮಾಡಿಸುವಿರಿ. ಇಷ್ಟಪಟ್ಟರ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ನಿಮ್ಮ ಆಲೋಚನೆಯಂತೆ ಹೊಸ ಕಾರ್ಯಗಳು ಆರಂಭವಾಗುವುದು. ಬಯಸಿದ್ದನ್ನು ಪಡೆಯುವ ತನಕ ನಿಮ್ಮ ಹೋರಾಟವು ಇರಲಿದೆ. ನಿಮ್ಮ ಉತ್ಸಾಹಕ್ಕೆ ತೊಂದರೆಯಾಗಬಹುದು. ಸಮಯವನ್ನು ಹೆಚ್ಚು ತೆಗೆದುಕೊಂಡು ಇಂದೇ ಮುಗಿಸುವಿರಿ. ಇದರಿಂದ ನಿರಾಳ ಎನಿಸಬಹುದು.

ವೃಷಭ: ಮೂಲಭೂತ ವಿಚಾರದಲ್ಲಿ ನಿಮ್ಮ ನಿಲುವನ್ನು ಹೇಳಿರಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಷಯವನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ಆಪ್ತರ ಜೊತೆ ನಿಮ್ಮನ್ನು ಹಂಚಿಕೊಳ್ಳುವಿರಿ. ಬಾಯಾರಿಕೆಯು ಇಂದು ಹೆಚ್ಚಾದೀತು. ನಿಮ್ಮ ಸ್ವಭಾವದಲ್ಲಿ ಬದಲಾವಣೆಯಾಗಲಿದೆ. ಪ್ರಣಯದಲ್ಲಿ ಅತಿಯಾದ ಆಸಕ್ತಿಯೂ ಇರುವುದು. ಬಂಧುವರ್ಗವು ನಿಮ್ಮ ವಿವಾಹದ ಖುಷಿಯಲ್ಲಿ ಇರಲಿದೆ. ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಪತ್ತಿಗಾಗಿ ನೀವು ಬಹಳ ಶ್ರಮಪಡುವಿರಿ. ಆರ್ಥಿಕತೆಯ ಅಭಿವೃದ್ಧಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ.

ಮಿಥುನ: ಹೂಡಿಕೆಗೆ ಮೇಲಿಂದ ಮೇಲೆ ಒತ್ತಡವು ಬರಬಹುದು. ಈ ದಿನವನ್ನು ಕೆಲಸದ ಜೊತೆ ಕಳೆಯುವಿರಿ. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಮುಕ್ತಾಯವಾಗಬಹುದು. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಹಳೆಯ ವ್ಯಾಧಿಯಿಂದ ಬಳಸಬಹುದು. ಎಲ್ಲಿಯೋ ಇಟ್ಟಕೊಂಡು ನಿಮ್ಮ ವಸ್ತುವನ್ನು ಕಳೆದುಕೊಳ್ಳುವಿರಿ. ವಿರಾಮದಿಂದ ಬಂದ ಕಾರಣ ನಿಮ್ಮ ಕಛೇರಿಯ ಕೆಲಸವೇ ಇಂದು ಅಧಿಕವಾದೀತು. ಅತಿಥಿಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ಪ್ರೀತಿಯಿಂದ ನಿಮ್ಮನ್ನು ಗೆಲ್ಲುವರು. ವಿಷ್ಣುಸಹಸ್ರನಾಮವನ್ನು ಪಠಿಸಿ.

ಕಟಕ: ನಿಮ್ಮ ಕೆಲಸಗಳು ನಿಮಗೇ ಇಷ್ಟವಾಗದೇ ಹೋದೀತು. ಕೆಲವು ವಿಚಾರಗಳಿಗೆ ಕುಟುಂಬದಿಂದ ವಿರೋಧವು ಬರಬಹುದು. ಅದನ್ನು ಗಮನಸಿಕೊಂಡು ವಿಷಯವನ್ನು ಪ್ರಸ್ತಾಪಿಸಿ. ಸ್ನೇಹಿತರ ಜೊತೆ ಸುತ್ತಟ ಹಾಗೂ ಉತ್ತಮ ಭೋಜನವು ಸಿಗಲಿದೆ. ನಿಮ್ಮದಲ್ಲದ್ದನ್ನು ಪಡೆಯಲು ನೀವು ಬಯಸುವಿರಿ. ಹಠ ಸ್ವಭಾವವನ್ನು ಕಡಿಮೆ ಮಾಡಿಕೊಂಡರೆ ಉತ್ತಮ. ನಿಮ್ಮ ಗೆಳೆಯನನ್ನು ಬಯಸುವರು. ಮಾನಸಿಕವಾಗಿ ಕಿರಿಕಿರಿ ಎನಿಸದರೆ ಕುಲದೇವರನ್ನು ಸ್ಮರಿಸಿ ಮುನ್ನಡೆಯಿರಿ. ಸಜ್ಜರ ಸಹಾವಸವು ನಿಮಗೆ ಸಿಗಬಹುದು.

ಸಿಂಹ: ನಿಮ್ಮನ್ನು ಕಾರ್ಯಕ್ಕೆ ಉಪಯೋಗಿಸಿಕೊಂಡು ಬಿಡಬಹುದು. ಇದು ನಿಮಗೆ ಸಿಟ್ಟನ್ನು ತರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಅದನ್ನು ಸರಿ ಮಾಡುವಿರಿ.‌ ಸಹೋದರರ ನಡುವೆ ಮನಸ್ತಾಪವು ಬರಬಹುದು. ವಿವಾಹೇತರ ಸಂಬಂಧವು ನಿಮಗೆ ಬೇಸರ ತರಿಸಬಹುದು. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯಬಹುದು. ಸ್ವಂತ ಉದ್ಯೋಗದತ್ತ ನಿಮ್ಮ ಚಿತ್ತ ಹೊರಳಬಹುದು. ಅಂತರಂಗವನ್ನು ನೋಡಿಕೊಳ್ಳುವುದು ಉತ್ತಮ. ಸೂರ್ಯನಮಸ್ಕಾರವನ್ನು ಮಾಡಿ. ಕ್ಷಣಿಕದತ್ತ ನಿಮ್ಮ ಗಮನವಿರುವುದು.

ಕನ್ಯಾ: ನೀವು ನಿರಂತರ ಕಾರ್ಯವನ್ನು ಬದಲಿಸುತ್ತಿರುವುದು ನಿಮ್ಮ ಅಭ್ಯಾಸವಾಗಲಿದೆ. ದಾನವನ್ನು ಮಾಡಿ ಪುಣ್ಯವನ್ನು ಸಂಪಾದಿಸುವಿರಿ. ನಿಮ್ಮ ಮಕ್ಕಳ ಮನೋಭಾವವನ್ನು ಅರಿತುಕೊಂಡ ಇಷ್ಟವಾದುದನ್ನು ಮಾಡಿ. ವ್ಯಾಪಾರದಿಂದ ನಿಮ್ಮ ಆರ್ಥಿಕತೆಯು ಸಬಲವಾಗಬಹುದು. ಮಕ್ಕಳನ್ನು ಹಣಕಾಸಿನ ಕಾರಣದಿಂದ ಓದನ್ನು ನಿಲ್ಲಿಸಬೇಡಿ. ಕಛೇರಿಯಲ್ಲಿ ನಿಮಗೆ ಸ್ತ್ರೀಯಿಂದ ಸಹಾಯವಾದರೂ ಜನರು ಅದನ್ನು ಅಪಾರ್ಥಮಾಡಿಕೊಳ್ಳಬಹುದು. ಸಿಗಬೇಕಾದವರಿಗೆ ಕಾದು ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ನಾಗರ ಆರಾಧನೆಯನ್ನು ಮಾಡಿ. ಯಶಸ್ಸಿಗೆ ಇರುವ ಬಂಧನವು ಕಳಚಿಕೊಳ್ಳುವುದು.

ತುಲಾ: ಪ್ರಾಮಾಣಿಕ ಕೆಲಸದಿಂದ ಇಂದು ಪ್ರಶಂಸೆ ಸಿಗಲಿದೆ. ನಿಮ್ಮ ಹಿತಶತ್ರುಗಳಿಂದ ತೊಂದರೆ ಬರುವ ಸಾಧ್ಯತೆ ಇದ್ದು, ಅದನ್ನು ಮೊದಲೇ ನೀವು ನಿವಾರಿಸಿಕೊಳ್ಳುವಿರಿ.
ಉದ್ಯೋಗವನ್ನು ಕೊಡಿಸಲು ನಿಮ್ಮ ಬಳಿ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಒತ್ತಡದಿಂದಾಗಿ ಹೇಳುವುದಿಲ್ಲ. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆಯು ಹೆಚ್ಚಾಗಬಹುದು. ನಿಮ್ಮವರನ್ನು ನೀವು ದೂಷಿಸುವಿರಿ. ನಂಬಿಕೆಯನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೂ ಆದೀತು. ಮನೆಯಿಂದ ಹೊರಗಡೆ ಇರಲಿದ್ದೀರಿ. ಮಕ್ಕಳ ಪ್ರೀತಿಯು ನಿಮಗೆ ಸಿಗಲಿದೆ. ತಾಳ್ಮೆಯು ಇಂದು ಅಧಿಕವಾಗಿರಲಿದೆ.

ವೃಶ್ಚಿಕ: ನ್ಯಾಯಾಲಯದ ವ್ಯವಹಾರಗಳು ಒಂದು ಹಂತದವರೆಗೆ ನಿಲ್ಲಬಹುದು.‌ ನಿಮ್ಮ ಬಯಕೆಯನ್ನು ಇನ್ನೊಬ್ಬರ ಬಳಿ ಹೇಳುಕೊಳ್ಳುವಿರಿ. ಭೂಮಿಯ ವಿಚಾರದಲ್ಲಿ ಧನಾಗಮನವನ್ನು ನಿರೀಕ್ಷಿಸಬಹುದು. ಹಿರಿಯರ ಮಾತುಗಳು ನಿಮಗೆ ಸಹಾಯವನ್ನು ಮಾಡಬಹುದು. ವಿದ್ಯಾರ್ಥಿಗಳು ನಿರಂತರವಾಗಿ ಓದಿನ ಬಗ್ಗೆ ಗಮನ ಹರಿಸುವುದು ಮುಖ್ಯವಾಗಬಹುದು. ಯಾವುದನ್ನೇ ಆದರೂ ಪರೀಕ್ಷಿಸಿ ಮತ್ತೆ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಮುಂದೂಡುವಿರಿ. ಏಕಾಂತವು ನಿಮಗೆ ಸುಖವನ್ನು ಕೊಡಬಹುದು. ನಿಮ್ಮವರನ್ನು ಅಪಾರ್ಥಮಾಡಿಕೊಳ್ಳುವಿರಿ.

ಧನು: ಪಾಲುದಾರಿಕೆಯಲ್ಲಿ ನಿಮಗೆ ಮೋಸವಾದಂತೆ ಅನ್ನಿಸಬಹುದು. ಸ್ನೇಹಿತರಾಗಿದ್ದವರು ನಿಮ್ಮ‌ ಸಹಾಯಕ್ಕೆ ಬರದೇ ಇದ್ದುದು ನಿಮಗೆ ಅನುಮಾನವನ್ನು ಹುಟ್ಟಿಸುವುದು. ನಿಮ್ಮ‌ ಪ್ರೇಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಜಯ ಸಿಗಬಹುದು. ಅಂದುಕೊಂಡಂತೆ ಆಗಿದ್ದಕ್ಕೆ ಖುಷಿಪಡುವಿರಿ. ವಿದೇಶದಲ್ಲಿ ಉದ್ಯೋಗಕ್ಕೆ ಅವಕಾಶಗಳು ಸಿಗಬಹುದು. ಇಂದು ಕಛೇರಿಯ ಕೆಲಸಗಳು ಅಸ್ತವ್ಯಸ್ತವಾಗಬಹುದು. ಅನ್ಯರ ಗೌಪ್ಯವಾಗಿ ನಡೆಸುವಿರಿ. ಲೋಭದಿಂದ‌ ಇರುವ ಸಂಪತ್ತನ್ನೂ ಕಳೆದುಕೊಳ್ಳುವಿರಿ. ಸಹವಾಸದಿಂದ ನಿಮಗೆ ಲಾಭಗಳು ಆಗಲಿವೆ.

ಮಕರ: ಬಂಗಾರದ ಮೇಲೆ‌ ಹೂಡಿಕೆ ಮಾಡುವ ಪ್ರಯತ್ನವು ಇರಲಿದೆ. ತಾಯಿಯ ಕಡೆಯಿಂದ ನಿಮಗೆ ಅನುಕೂಲವನ್ನು ನಿರೀಕ್ಷಿಸಬಹುದು. ಆತುರದ ಪ್ರಯಾಣವನ್ನು ಮಾಡಬೇಕಾದೀತು. ವಾಹನ‌ವನ್ನು ಚಲಾಯಿಸುವಾಗ ನಿಯಂತ್ರಣವಿರಲಿ. ಯಂತ್ರೋಪಕರಣಗಳು ನಷ್ಡವಾಗಬಹುದು. ಅವಕಾಶಗಳನ್ನು ನೀವೇ ಕೈ ಚೆಲ್ಲಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವನ್ನು ತಂದೀತು. ಕೆಲಸದಲ್ಲಿನ ಶ್ರದ್ಧೆಯು ಕಡಿಮೆ ಆಗಬಹುದು. ಸತ್ಕಾರ್ಯಲ್ಲಿ ತೊಡಗಿಕೊಳ್ಳುವಿರಿ. ಹನುಮಾನ್ ಚಾಲೀಸ್ ಪಠಣ‌ ಮಾಡಿ.

ಕುಂಭ: ಇಂದು ಆಸ್ತಿ ಹಂಚಿಕೆಯಲ್ಲಿ ಬಿಡಿಸಲಾಗದ ಸಮಸ್ಯೆಗಳು ಬರಬಹುದು. ಮಕ್ಕಳಿಗೆ ಉತ್ತಮ‌ ಉದ್ಯೋಗವನ್ನು ಕೊಡಿಸಲು ತಿರುಗಾಟ ಮಾಡಬೇಕಾದೀತು. ಕಣ್ಣಿನ ತೊಂದರೆಯಿಂದ ಕಷ್ಟಪಡುವಿರಿ. ನಿರುದ್ಯೋಗದಿಂದ‌ ಮನೆಯಲ್ಲಿಯೇ ಕುಳಿತು ಬೇಸರವಾಗಬಹುದು. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಬರಬಹುದು. ಹಣದ ಹರಿವೂ ಸಾಮಾನ್ಯವಾಗಿ ಇರಲಿದೆ. ಸಣ್ಣ ವಾಗ್ವಾದವು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಜವಾಬ್ದಾರಿಯ ಸ್ಥಾನವು ಕೈ ತಪ್ಪಿ ಹೋಗಬಹುದು. ಹೊಸ ವೃತ್ತಿಯನ್ನು ಆನಂದಿಸುವಿರಿ. ಶಿವಕವಚದಿಂದ‌ ನಿಮ್ಮ‌ ದಿನದ ಕಾರ್ಯಗಳು ನಿರಾತಂಕವಾಗಿ ನಡೆಯುವುದು.

ಮೀನ: ರಾಜಕಾರಣಿಗಳಲ್ಲಿ ಬಿರುಸಿನ ಓಡಾಟ ಇರಲಿದೆ. ಗೌರವವನ್ನು ಪಡೆಯುವಿರಿ. ಸರ್ಕಾರದ ಕೆಲಸದಲ್ಲಿ ಮುನ್ನಡೆ ಸಿಗಲಿದೆ. ಸ್ವಾಸ್ಥ್ಯವು ಕೆಡಬಹುದು. ಆಸ್ತಿಯಲ್ಲಿ ಲಾಭವು ಇರಲಿದೆ. ಕೊಟ್ಟ ಮಾತಿನಿಂದ ನಿಮಗೆ ಕಷ್ಟವಾದೀತು. ಅನಾರೋಗ್ಯದಿಂದ ವಿಶ್ರಾಂತಿ ಪಡೆಯುವಿರಿ. ಖರ್ಚಿನ ವಿಚಾರದಲ್ಲಿ ಹೆಚ್ಚು ಸಂದಿಗ್ಧತೆ ಇರಲಿದೆ. ಅಧಿಕಾರಿ ವರ್ಗದಿಂದ ಒತ್ತಡವು ಬರಬಹುದು. ಎಲ್ಲರ ಮೇಲೂ ಕೋಪಗೊಳ್ಳುವಿರಿ. ಸಮಯಪಾಲನೆಗೆ ಹೆಚ್ಚು ಒತ್ತುಕೊಡುವಿರಿ. ಸಂಗಾತಿಯನ್ನು ಪ್ರೀತಿಯಿಂದ ನೋಡುವಿರಿ. ಗುರುದರ್ಶನವನ್ನು ಪಡೆದುಕೊಳ್ಳಿ.