ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ರಿಂದ 1 1ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ರಿಂದ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:24 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:14ರ ವರೆಗೆ.
ಮೇಷ: ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಕಾರಣಾಂತರಗಳಿಂದ ನಿಮ್ಮ ಯಾತ್ರೆಯು ಸ್ಥಗಿತವಾದೀತು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಇಂದು ಗೋವುಗಳ ಸಹವಾಸವನ್ನು ಮಾಡಲಿದ್ದೀರಿ. ಕೆಲವು ಸಮಯದ ಅಧ್ಯಾತ್ಮದ ಚಿಂತನೆಯನ್ನು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಹೆಸರನ್ನು ಗಳಿಸಲು ನಿಮಗೆ ನಾನಾ ದಾರಿಗಳು ಸಿಗಬಹುದು. ತಾಯಿಯ ಆರೋಗ್ಯವು ಸುಧಾರಿಸಬಹುದು. ಹೆಚ್ಚು ಮಾತನಾಡುವುದು ಅಪಾಯವೆನಿಸುವ ಸಾಧ್ಯತೆ ಇದೆ.
ವೃಷಭ: ಇರುವುದನ್ನು ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ನಿಮ್ಮನ್ನು ನೀವೇ ತಳ್ಳಿಕೊಳ್ಳುವಿರಿ. ನೀವು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಲು ಬಯಸುವಿರಿ. ಕೆಲವು ನಿಮಿತ್ತಗಳು ನಿಮಗೆ ಭವಿಷ್ಯದ ಸೂಚನೆಯನ್ನು ಕೊಡಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೂ ಇರಬಹುದು. ನಿಮ್ಮ ನೌಕರರನ್ನು ಬಹಳ ಕೆಳದೃಷ್ಟಿಯಿಂದ ನೋಡುವಿರಿ. ಅಧಿಕಾರಿಗಳು ನಿಮ್ಮ ಉತ್ತರವನ್ನು ಪಡೆಯಲು ನಾನಾ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ ಸಿಕ್ಕಿ ಹಾಕಿಸಬಹುದು. ಇನ್ನೊಬ್ಬರ ಇಚ್ಛೆಯಂತೆ ನಡೆಯಲಿದ್ದು ನೀವು ಎಲ್ಲದಕ್ಕೂ ಸಾಕ್ಷಿಯಾಗಿರುವಿರಿ.
ಮಿಥುನ: ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ ನಿಮಗೆ ಗೊಂದಲವು ಬರಬಹುದು. ಕಛೇರಿಯಲ್ಲಿ ನಿಮ್ಮ ಮಾತನ್ನು ಕೇಳುವರು. ವಿದೇಶೀ ವಿನಿಮಯದಲ್ಲಿ ಲಾಭವಿರಲಿದೆ. ನಿಮ್ಮ ಕೆಲಸವನ್ನು ಬೇರೆಯವರು ಮಾಡಬೇಕಾದೀತು. ಮನೆಯಬಕೆಲಸವನ್ನು ಬೇಗನೆ ಮುಕ್ತಾಗೊಳಿಸುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದವರೇ ಹೊರಗೆ ಹೋಗಲು ಇಚ್ಛಿಸುವಿರಿ. ಕೆಲಸವನ್ನು ಸರಳ ಮಾಡಿಕೊಂಡು ಎಲ್ಲರಿಂದ ಪ್ರಶಂಸೆ ಗಳಿಸುವಿರಿ. ನಿದ್ರೆಯನ್ನು ಕಡಿಮೆ ಮಾಡುವಿರಿ.
ಕಟಕ: ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ನಿಮಗೆ ಆಗದು. ಅಶಿಸ್ತಿನ ಕಾರಣ ನೀವು ಹಿರಿಯರಿಂದ ಬೈಸಿಕೊಳ್ಳಬೇಕಾಗಬಹುದು. ಸದಾ ಕಾಲ ಹೊಸತನ್ನು ನೀವು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರಬಹುದು. ಭೂಮಿಯ ಉತ್ಪನ್ನದಿಂದ ಲಾಭವಾಗಕಿದೆ. ಕಲೆಯಲ್ಲಿ ಆಸಕ್ತಿಯು ಕಡಿಮೆ ಆಗಬಹುದು. ಬಂಧುಗಳಿಂದ ದೂರವಿರುವಿರಿ.
ಸಿಂಹ: ನಿಮ್ಮ ವಸ್ತುವನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂವನೆಯನ್ನು ನೀವು ಇಷ್ಟಪಡುವಿರಿ. ನಿಮಗೆ ವಹಸಿದ ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ನಿಮ್ಮ ನಡತೆಯ ಪರೀಕ್ಷೆಯೂ ನಡೆಯಲಿದೆ. ವೃಥಾ ಕಾಲಹರಣವನ್ನು ಮಾಡಿ ಸಂಪತ್ತನ್ನೂ ಕಳೆದುಕೊಳ್ಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಪಡೆಯುವಿರಿ. ಅಹಂಕಾರವನ್ನು ಎಲ್ಲರದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ನಿಲುವನ್ನು ಸಂಗಾತಿಯು ಪ್ರೋತ್ಸಾಹಿಸಬಹುದು.
ಕನ್ಯಾ: ಸಾಲವನ್ನು ಮರುಪಾವತಿ ಮಾಡಿ ನಿರಾಳವಾಗುವಿರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸದೇ ಕೋಪಗೊಳ್ಳುವಿರಿ. ಯಾರದೋ ಸಿಟ್ಟನ್ನು ನಿಮ್ಮವರ ಮೇಲೆ ತೋರಿಸುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಆರಂಭಿಸುವುದಕ್ಕಿಂತ ಸಾಮರ್ಥ್ಯವನ್ನು ಕಂಡುಕೊಂಡು ಮಾಡುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆತು ನಿಮ್ಮ ಎಲ್ಲ ಕೆಲಸಗಳನ್ನು ಬದಿಗಿರಿಸುವುದು. ಕಾನೂನು ಸಮರದಲ್ಲಿ ಸೋಲಾಗಬಹುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಪ್ರಬಲವಾಗಬೇಕಿದೆ. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇದು ನಿಮ್ಮನ್ನು ಉದ್ವೇಗಕ್ಕೆ ಒಳಗಾಗಿಸುವುದು. ವಿಷ್ಣುವಿನ ಸ್ತೋತ್ರವನ್ನು ಮಾಡಿ.
ತುಲಾ: ದಾಂಪತ್ಯದಲ್ಲಿ ಸುಖವನ್ನು ಕಾಣುವಿರಿ. ಮನಸ್ಸು ಉದ್ವಿಗ್ನದಿಂದ ಹೊರಬರಲು ಮಾರ್ಗವನ್ನು ಹುಡುಕುವಿರಿ. ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ನಿರ್ಧಾರವನ್ನು ಮಾಡುವಿರಿ. ಅನಿರೀಕ್ಷಿತ ಲಾಭದಿಂದ ಸಂತೋಷವಾದರೂ ನಿಮಗೆ ಸಂದೇಹಗಳು ಇರಬಹುದು. ತಂದೆಯ ಬಳಿ ವಿವಾಹದ ಪ್ರಸ್ತಾಪವನ್ನು ಮಾಡುವಿರಿ. ನಿಮ್ಮ ವರ್ತನೆಯು ತೋರಿಕೆಯಂತೆ ಕಾಣಬಹುದು. ತಾಯಿಯ ಜೊತೆ ಕಲಹ ಮಾಡಿ ನಿಮಗೆ ಬೇಸರವಾಗಬಹುದು. ಉದ್ಯಮಿಗಳ ಭೇಟಿಯಾಗುವ ಸಾಧ್ಯತೆ ಇದೆ.
ವೃಶ್ಚಿಕ: ನಿಮ್ಮ ಯೋಜನೆಯನ್ನು ಸರಳೀಕರಿಸಿ ಕಡಿಮೆ ಖರ್ಚನ್ನು ಮಾಡಿಕೊಳ್ಳಿ. ಈ ದಿನವು ದುರಂತದಲ್ಲಿ ಕೊನೆಯಾಗುವ ಸಾಧ್ಯತೆ ಇದೆ. ನಿಮ್ಮ ಉಪಯೋಗವನ್ನು ಪಡೆದುಕೊಳ್ಳಲು ಇಚ್ಛಿಸಬಹುದು. ಸ್ನೇಹಿತರ ಮಾತುಗಳು ನಿಮಗೆ ಉಪಯೋಗಬಹುದು. ಉದ್ಯಮವನ್ನು ನೀವು ಹೆಚ್ಚಿಸುವ ಯೋಚನೆ ಇರಲಿದೆ. ನಿಮ್ಮ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಕೆಲಸವನ್ನು ಹಂಚುವಿರಿ. ನೀವು ಇಂದು ಹೋರಾಟದ ಮನೋಭಾವವನ್ನು ಇಟ್ಟಕೊಳ್ಳುವಿರಿ. ಸೌಂದರ್ಯ ವರ್ಧನೆಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಇನ್ನೊಬ್ಬರ ಮೇಲೆ ಆಕರ್ಷಣೆ ಉಂಟಾಗಬಹುದು. ಧಾರ್ಮಿಕ ಆಚರಣೆಗಳನ್ನು ಮಾಡಲೂ ಚಿಂತಿಸುವಿರಿ.
ಧನುಸ್ಸು: ಕಛೇರಿಯಲ್ಲಿ ನಿಮ್ಮ ಕೆಲಸವು ಅಡೆರಡೆಯ ಕಾರಣ ಬಹಳ ನಿಧಾನವಾಗುವುದು. ಸ್ವಂತ ಉದ್ಯಮವು ಕುಂಟುತ್ತ ಸಾಗುವುದು. ತಂದೆಗೆ ನಿಮ್ಮಿಂದ ಧನಸಹಾಯವು ಆಗಲಿದೆ. ಸಹೋದ್ಯೋಗಿಗಳ ಹಾದಿಯನ್ನು ಸೇರಿ ಮೇಲಧಿಕಾರಿಗಳಿಂದ ಬುಗುಳ ತಿನ್ನುವಿರಿ. ಭಯವು ಅವಕಾಶಗಳಿಂದ ವಂಚಿನೆಯಾಗುವಂತೆ ಮಾಡುವುದು. ಇಂದು ದುಸ್ಸಾಹಸಕ್ಕೆ ತೊಡಗುವುದುಬೇಡ. ಪ್ರಯಾಣವನ್ನು ನಿಷೇಧಿಸಿದ್ದು ಉತ್ತಮವಾಗಿದೆ. ಒಳ್ಳೆಯದರ ಬಗ್ಗೆ ನಿಮ್ಮ ಗಮನವಿರಲಿ. ಖುಷಿಯ ವಿಚಾರವನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಏಕಾಂತವನ್ನು ಇಷ್ಟಪಟ್ಟರು ಇರಲಾಗದು.
ಮಕರ: ನೀವು ಇಂದು ಯಾರ ಸಹಾಯವನ್ನೂ ಪಡೆಯಲು ಇಚ್ಛಿಸುವುದಿಲ್ಲ. ಆಲಸ್ಯದಿಂದ ಕಛೇರಿಯ ಕೆಲಸವನ್ನು ಮಾಡಲು ಆಸಕ್ತಿ ತೋರಿಸುವುದಿಲ್ಲ. ನಿಮ್ಮ ಸ್ವಭಾವವು ಬದಲಾಗಿದ್ದು ನಿಮ್ಮನ್ನು ಇಷ್ಟಪಡುವವರಿಗೆ ಇದು ಕಷ್ಟವಾದೀತು. ಹಿತಶತ್ರುಗಳನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಜೀವನ ಸಂಗಾತಿಯ ಜೊತೆ ಹೆಚ್ಚು ಮಾತನಾಡುವಿರಿ. ಸಾಮಾಜಿಕ ಕೆಲಸಗಳಿಂದ ಗೌರವಪ್ರಾಪ್ತಿಯಾಗಲಿದೆ. ಪ್ರಯೋಜನವಿಲ್ಲ ಎಂದು ತೆಗೆದಿಟ್ಟ ವಸ್ತುವಿನ ಅಥವಾ ವ್ಯಕ್ತಿಯ ಮರುಬಳಕೆ ಇಂದಾಗಲಿದೆ. ಭೂಮಿಯ ವಿಚಾರವು ನ್ಯಾಯಾಲಯದಲ್ಲಿ ತೀರ್ಮಾನವಾಗುವುದು.
ಕುಂಭ: ಬಂಧುಗಳ ಭೇಟಿಯಿಂದ ಚಿತ್ತವು ಉತ್ಸಾಹದಿಂದ ಇರವುದು. ಮಾಡಬೇಕಾದ ಕೆಲಸಗಳನ್ನು ವೇಗವಾಗಿ, ಎಚ್ಚರಿಕೆಯಿಂದ ಮಾಡಿ. ಸಹೋದರನ ಅನಿರೀಕ್ಷಿತ ಸಹಾಯವು ಸಂತಸವನ್ನು ತರುವುದು. ದಾಂಪತ್ಯದ ಕಲಹವನ್ನು ನೀವೇ ಶಾಂತಗೊಳಿಸಿ. ಮಾತಿಗೆ ಮಾತನ್ನು ಬೆಳೆಸುವುದು ಬೇಡ. ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಿ. ನೀವು ಇಂದು ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಮಡಿಕೊಳ್ಳುವಿರಿ. ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ಕಡಿಮೆ ಮಾಡಿ. ನಿಮ್ಮ ವಸ್ತುವನ್ನು ಇನ್ನೊಬ್ಬರು ಬಳಸಿಕೊಳ್ಳುವರು. ಕೆಟ್ಟ ಆಹಾರವನ್ನು ತಿನ್ನಬೇಕಾಗಬಹುದು.
ಮೀನ: ಅಸ್ತಿಯ ಹಂಚಿಕೆಯ ವಿಚಾರದಲ್ಲಿ ಚರ್ಚೆಗಳು ಆಗಲಿದೆ. ನಿಮ್ಮ ಕೆಲಸಗಳಿಗೆ ವಿಘ್ನಗಳು ಬರಬಹುದು. ವ್ಯಾಪಾರವು ಅಭಿವೃದ್ಧಿಯಾಗಿ ಒಂದೊಂದೇ ಹಂತವನ್ನು ಏರುವಿರಿ. ಕುಟುಂಬವೂ ನಿರಾತಂಕವಾಗಿ ಜೀವನ ನಡೆಸುವುದು. ಉನ್ನತ ಸ್ಥಾನಮಾನಗಳು ಪ್ರಭಾವೀ ವ್ಯಕ್ತಿಯ ಸಹಾಯದಿಂದ ಸಿಗುವುದು. ನಿಮ್ಮ ಮತವನ್ನು ನೀವು ಬದಲಿಸಿವುದು ಬೇಡ. ನಿಮ್ಮ ನಿರೀಕ್ಷೆಯ ಮಟ್ಟ ಕಡಿಮೆಯಾಗಲಿದೆ. ನಂಬಿಕೆಯ ಜೊತೆ ಪ್ರೀತಿಯನ್ನೂ ಕಳೆದುಕೊಳ್ಳಬಹುದು. ನಿಮ್ಮ ಬಗ್ಗೆ ಆಡಿಕೊಳ್ಳಲು ಏನಾದರೂ ಸಿಗಲಿದೆ. ಇದು ನಿಮಗೆ ಬೇಸರವನ್ನು ತರಿಸುವುದು.