Daily Horoscope 12 June: ಸುಖ-ದುಃಖಗಳೆರಡನ್ನು ಸ್ವೀಕರಿಸಿ, ಹಳೆ ವಿಷಯಗಳನ್ನ ಮರೆತು ಹೊಸ ಜೀವನ ಆರಂಭಿಸಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2023 | 12:02 AM

ಇಂದಿನ (2023 ಜೂನ್​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope 12 June: ಸುಖ-ದುಃಖಗಳೆರಡನ್ನು ಸ್ವೀಕರಿಸಿ, ಹಳೆ ವಿಷಯಗಳನ್ನ ಮರೆತು ಹೊಸ ಜೀವನ ಆರಂಭಿಸಿ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ಆಯುಷ್ಮಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:55 ರಿಂದ ಮಧ್ಯಾಹ್ನ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ.

ಮೇಷ: ನಿಮ್ಮದಲ್ಲದ ವಸ್ತುವನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮಗೆದುರಾದ ಸನ್ನಿವೇಶಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ. ನಿಮ್ಮ ಚಿಂತನೆಯನ್ನು ಹೇಳಲು ಸಮಯವನ್ನು ತೆಗೆದುಕೊಳ್ಳುವುದು ಬೇಡ. ಸರ್ಕಾರಿ ನೌಕರರಿಗೆ ಅನೇಕ ಕಡೆಗಳಿಂದ‌ ಒತ್ತಡ ಬರಲಿದೆ. ಕೆಲವು ಕೆಲಸಕ್ಕೆ ಕಠಿಣಶ್ರಮದ ಅವಶ್ಯಕತೆ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಗೆ ಹೆಚ್ಚಿನ ಸ್ಥಾನ ಸಿಗಬಹುದು. ಪ್ರಯತ್ನಿಸಿದ ಕ್ಷೇತ್ರಗಳಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯದ ಕಾರಣ ಅಸಮಾಧಾನ ಇರಲಿದೆ.

ವೃಷಭ: ಇಂದಿನ ದಿನಗಳು ಸಂಘರ್ಷಗಳು ಮತ್ತು ಚಿಂತೆಗಳಿಂದ ತುಂಬಿವೆ. ಹಳೆಯ ವಿಷಯಗಳನ್ನು ಮರೆತು ಜೀವನವನ್ನು ಹೊಸದಾಗಿ ಆರಂಭಿಸಿ. ಸುಖ-ದುಃಖಗಳೆರಡೂ ಒಂದಾದಮೇಲೊಂದು ಬರುತ್ತಲೇ ಇರುತ್ತವೆ ಎಂಬ ಸತ್ಯವು ಮನವರಿಕೆ ಆಗಲಿದೆ. ಸಂಬಂಧಗಳಲ್ಲಿ ಅಹಂಕಾರ ಸರಿಯಲ್ಲ. ಕೆಲಸದ ಸ್ಥಳದಲ್ಲಿ ನಿಷ್ಠೆಯಿಂದ ಕೆಲಸ ಮಾಡುವಿರಿ. ಕುಟುಂಬದ ಜವಾಬ್ದಾರಿಗಳನ್ನು ಸಮಯಕ್ಕೆ ಪೂರೈಸಲು ಗಮನ ಕೊಡಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ಹೊಸ ಸೌಲಭ್ಯಗಳನ್ನು ಪಡೆಯಲು ಖರ್ಚು ಮಾಡುವಿರಿ.

ಮಿಥುನ: ಪ್ರತಿಕೂಲ ಸ್ಥಿತಿಯಲ್ಲಿ ದೈವವು ಸಹಾಯ ಮಾಡಲಿದೆ. ಧೃತಿಗೆಡದೇ ನೀವು ನಿಮ್ಮ ಕೆಲಸವನ್ನು ಮುಂದುವರಿಸಿ. ವ್ಯಾಪಾರದಲ್ಲಿ ನೀವು ಹೆಚ್ವು ಲಾಭವನ್ನು ಗಳಿಸಿಸುವಿರಿ. ನಿಮ್ಮ ಮತ್ತು ಸಹೋದರರ ನಡುವೆ ಸಣ್ಣ ವಿರಸು ಏರ್ಪಡಬಹುದು. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಖಾಸಗಿ ಉದ್ಯೋಗಿಗಳನ್ನು ಕೈ ಬಿಡಲು ಸಂಸ್ಥೆ ನಿರ್ಧರಿಸಬಹುದು. ಕಳೆದ ದಿನಗಳನ್ನು ನೀವು ಮೆಲುಕು ಹಾಕಿ ಸಂತೋಷಗೊಳ್ಳುವಿರಿ. ಮಕ್ಕಳಿಂದ‌ ಶುಭವಾರ್ತೆ ಇರಲಿದೆ.

ಕಟಕ: ಹೆಚ್ಚಿನ‌ ಅಧ್ಯಯನವನ್ನು ನೀವು ಕೈಗೊಳ್ಳುವಿರಿ. ಅಧಿಕಾರಿ ವರ್ಗದವರ ಜೊತೆ ಇಂದು ಹೆಚ್ಚು ಮಾತುಕತೆ ನಡೆಸುವಿರಿ. ವಿವಾಹದ ಚಿಂತೆಯು ನಿಮ್ಮನ್ನು ಕಾಡಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವಿರಿ. ಆಸ್ತಿಯನ್ನು ಭಾಗ ಮಾಡಿಕೊಳ್ಳಲು ನೀವು ಇಂದು ಮುಂದಾಗುವಿರಿ. ಮನೆಯರ ಸಣ್ಣ ಮಾತಿಗೆ ಬೇಸರಿಸಬೇಡಿ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಖರ್ಚು ಸಾಧ್ಯ. ನೀವು ಭೌತಿಕ ಸೌಕರ್ಯಗಳನ್ನು ಸಂಗ್ರಹಿಸುವ ಬಗ್ಗೆ ಚಿಂತಿಸುತ್ತೀರಿ. ಸರ್ಕಾರಿ ನೌಕರರು ಇಂದು ಹೆಚ್ಚಿನ ಕೆಲಸದಲ್ಲಿ ತೊಡಗುವರು. ಮನೆಯಲ್ಲಿ ಹಿರಿಯರ ಅನಾರೋಗ್ಯದಿಂದ ಮನಸ್ಸು ವಿಚಲಿತಗೊಳ್ಳುವುದು.

ಸಿಂಹ: ನಿಮ್ಮ ಅಸಭ್ಯ ಮಾತುಗಳು ವ್ಯಕ್ತಿತ್ವವನ್ನು ತೋರಿಸಲಿವೆ. ಸಮಸ್ಯೆಗಳನ್ನು ಬಹಳ ಉತ್ಸಾಹದಿಂದ ಎದುರಿಸುವಿರಿ. ಉದ್ಯೋಗದಲ್ಲಿ ನಿಮಗೆ ಉಂಟಾದ ಗೊಂದಲವನ್ನು ಮೇಲಧಿಕಾರಿಗಳಿಗೆ ತಿಳಿಸಿ. ಪರಿಹಾರವನ್ನು ಕಂಡುಕೊಳ್ಳಿ. ತಿಳಿಸದೇ ಇರಬೇಡಿ. ನೀವು ಇತರರನ್ನು ಟೀಕಿಸುವುದನ್ನು ನಿಲ್ಲಿಸಿದರೆ, ಸಂಬಂಧಗಳಿಂದ ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ. ಎಲ್ಲವೂ ಸಾಮಾನ್ಯವಾಗಿದ್ದರೂ ಮನಸ್ಸು ನಿರಾಸಕ್ತಿಯಿಂದ ಬಳಲುತ್ತದೆ. ನಿಮ್ಮ ಕಡಿಮೆಯಾಗುವ ಭಯವು ಕಾಡಬಹುದು. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳುವಿರಿ. ತಂದೆಯ ಮಾತು ನಿಮಗೆ ಸರಿ ಕಾಣಿಸದೇ ಇರುವುದು.

ಕನ್ಯಾ: ಚಿಂತೆಗಳಿಂದ ಸುತ್ತುವರಿದ ಮನಸ್ಸನ್ನು ದೇವರಲ್ಲಿ ನೆಲೆಗೊಳಿಸಿ ಸಮಾಧಾನಪಟ್ಟುಕೊಳ್ಳಿ. ದೃಢವಾದ ನಿರ್ಧಾರವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ಕೆಲಸದ ಸ್ಥಳದಲ್ಲಿ ಅನೂಹ್ಯ ಸನ್ನಿವೇಶಗಳು ಅಡ್ಡಿಯಾಗಬಹುದು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ನಿಷ್ಕಾಳಜಿಯಿಂದ ಇರಬಾರದು. ಧಾರ್ಮಿಕ ನಾಯಕರಿಗೆ ಹೆಚ್ಚು ಲಾಭ ಹಾಗೂ ಯಶಸ್ಸು ಸಿಗಬಹುದು. ಪುಣ್ಯಸ್ಥಳಕ್ಕೆ ನೀವು ಹೋಗಲಿದ್ದೀರಿ. ಮಕ್ಕಳ ವಿಚಾರದಲ್ಲಿ ಮನಸ್ಸು ವ್ಯಾಕುಲತೆಯಿಂದ ಇರಲಿದೆ. ಇಂದು ಆಧ್ಯಾತ್ಮಿಕ ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಹುದು.

ತುಲಾ: ನಿಮ್ಮ ಮೇಲೆ ನೀವು ನಂಬಿಕೆಯಿಡಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ನಿಮ್ಮ ಸಾಮರ್ಥ್ಯವನ್ನು ಪರಿಚಯಿಸುವಿರಿ. ಬಹಳ ಕಾಲದಿಂದ ಮಾಡಬೇಕಿದ್ದ ಕೆಲಸವು ಅಪೂರ್ಣವಾಗಲಿದೆ. ಯೋಜಿತ ಕೆಲಸಗಳು ಫಲಪ್ರದವಾಗಲಿವೆ. ನೈತಿಕ ಮತ್ತು ಅನೈತಿಕತೆಯ ಬಗ್ಗೆ ಯೋಚಿಸುವ ಮನಸ್ಸು ಭೌತಿಕ ಪರಿಸರದೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗುವುದಿಲ್ಲ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಹೊಸ ವ್ಯಾಪಾರ ಸಂಬಂಧಗಳು ತೀವ್ರಗೊಳ್ಳಬಹುದು. ಇಂದು ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ಕೆಲಸದ ವಾತಾವರಣವು ಆಹ್ಲಾದಕರವಾಗಿರುತ್ತದೆ.

ವೃಶ್ಚಿಕ: ಕೆಲವು ಘಟನೆಗಳು ಇಂದು ಆರ್ಥಿಕ ಮತ್ತು ಕೌಟುಂಬಿಕ ಕಾಳಜಿಗಳ ಮನಸ್ಸಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ನೀವು ಚಾತುರ್ಯದಿಂದ ಸಂಬಂಧದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ವಾಕ್ಚಾತುರ್ಯದಿಂದ ಲಾಭವನ್ನು ನೀವು ಪಡೆದುಕೊಳ್ಳುವಿರಿ. ಮನಸ್ತಾಪವನ್ನು ತಣಿಸಲು ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವಿರಿ. ಅನನುಕೂಲದ ಸ್ಥಿತಿಯಲ್ಲಿಯೂ ಲಾಭವನ್ನು ಪಡೆಯವ ಕಲೆಯನ್ನು ನೀವು ತಿಳಿದಿರುವಿರಿ. ಕೆಲಸಗಳ ನಡೆವೆಯೂ ನೀವು ನಿಮ್ಮ ಸಂಗಾತಿಯ ಕುರಿತು ಆಲೋಚನೆ ಮಾಡುವಿರಿ.

ಧನುಸ್ಸು: ದೈವದ ಮೇಲಿನ ನಂಬಿಕೆಯಿಂದ ನೀವು ಹೆಚ್ಚು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಹಠದ ಸ್ವಭಾವವು ಪ್ರತಿಯೊಂದು ಸಮಸ್ಯೆಯನ್ನು ಸರಿಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಹಳೆಯ ಘಟನೆಗಳ ನೆನಪಿನಿಂದ ಮನಸ್ಸು ಭಾರವಾಗಬಹುದು. ಕುಟುಂಬದಲ್ಲಿ ಘನತೆಯನ್ನು ಕಾಪಾಡಿಕೊಳ್ಳಲು ನೀವು ತಾಳ್ಮೆಯನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಯಾವ ಬಂಧಗಳನ್ನೂ ಬಯಸದೇ ಮನಸ್ಸಿಗೆ ಒಂಟಿತನ ಬೇಕು ಎನಿಸಬಹುದು. ಕ್ರಿಯಾತ್ಮಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿರಲಿದೆ. ಆಕಸ್ಮಿಕವಾದ ಕೆಲವು ಸಂತೋಷಕರ ಸುದ್ದಿಗಳಿಂದ ಮನಸ್ಸು ಅರಳುವುದು.

ಮಕರ: ಹೊಸ ಕೆಲಸಗಳಲ್ಲಿ ತತ್ಪರತೆ ಹೆಚ್ಚಾಗಿ ಕಾಣಿಸುವುದು. ಮಕ್ಕಳ ವರ್ತನೆಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಜೀವನ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಇಂದಿನ ಕರ್ತವ್ಯಗಳನ್ನು ನಿರ್ಲಕ್ಷಿಸದೇ ಮಾಡಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಒಳ್ಳೆಯ ಭಾವನೆಗಳು ಕಾರ್ಯದಲ್ಲಿ ಯಶಸ್ಸನ್ನು ತರುತ್ತವೆ. ಪ್ರಮುಖ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಕೆಟ್ಟ ಮತ್ತು ಎದುರು ಹೊಗಳುವ ಸ್ವಭಾವದ ಜನರ ಸಹವಾಸದಿಂದ ನಿಮಗೆ ತೊಂದರೆ ಆಗಲಿದೆ.

ಕುಂಭ: ಬೆರೆಯುವ ಮೂಲಕ ನಿಮ್ಮ ಸಂಬಂಧಗಳು ಗಟ್ಟಿಯಾಗುವುವು. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಮನಸ್ಸನಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ಹಳೆಯ ಮನಸ್ತಾಪಗಳನ್ನು ಬಿಟ್ಟು ಸಂಬಂಧವನ್ನು ಮಧುರವಾಗಿಸಿ. ದಾಂಪತ್ಯದ ಸುಖವು ಇಂದು ಸ್ವಲ್ಪ ಮಾತ್ರ ಸಿಗಬಹುದು. ಆತುರದ ಕಾರ್ಯಗಳಿಂದ ನಷ್ಟವಾಗುವ ಸಾಧ್ಯತೆ. ರಾಜಕಾರಣಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಯ ವರ್ತನೆಯಿಂದ ತೊಂದರೆ ಉಂಟಾಗಬಹುದು.

ಮೀನ: ಹಿಂದಿನದನ್ನು ಮರೆತು ವರ್ತಮಾನದಲ್ಲಿ ಬದುಕಲು ಪ್ರಯತ್ನಿಸಿ, ಆನಂದವು ಅಧಿಕವಾಗುವುದು. ಹೊಸ ಕ್ರಮಗಳ ಮೂಲಕ ಉದ್ಯೋಗದಲ್ಲಿ ಲಾಭವನ್ನು ಗಳಿಸುವಿರಿ. ಚಂಚಲವಾದ ಮನಸ್ಸಿನಿಂದ ನೀವು ಗುರಿಯನ್ನು ಸಾಧಿಸಲು ಕಷ್ಟಪಡುವಿರಿ. ನಿಮ್ಮಂತಹ ಮಾನಸಿಕವಾಗಿ ಬಲವುಳ್ಳವರು ಹೃದಯಶೂನ್ಯ ಆಗಬಾರದು. ಇಡೀ ಕುಟುಂಬದ ಹೊರೆ ನಿಮ್ಮ ಮೇಲೆ ಇಂದು ಬರಬಹುದು. ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆಗಳು ಸುಳಿದಾಡಬಹುದು. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ನೀವು ಉತ್ಸಾಹದಿಂದ ಸಿದ್ಧರಾಗಿರುವಿರಿ.

ಲೋಹಿತಶರ್ಮಾ – 8762924271 (what’s app only)