ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ 07:42 ರಿಂದ 09:17ರ ವರೆಗೆ, ಯಮಘಂಡ ಕಾಲ 10:53 ರಿಂದ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:40ರ ವರೆಗೆ.
ಮೇಷ: ನಿಮ್ಮ ಆರೋಗ್ಯವಾಗಲಿ ಅಥವಾ ನಿಮ್ಮ ವ್ಯವಹಾರವಾಗಲಿ ನಿಮ್ಮ ಪಾಲುದಾರರು ನಿಮಗೆ ತುಂಬಾ ಬೆಂಬಲ ನೀಡುವರು. ಅವರು ನಿಮಗೆ ನೋಡಿಕೊಳ್ಳುತ್ತಾರೆ. ಈ ಸಂಬಂಧದ ಜೊತೆ ಮುಂದುವರಿಯುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಆಲೋಚನೆಗಳನ್ನು ಸುಗಮಗೊಳಿಸುತ್ತದೆ. ನೀವು ಒಬ್ಬೊಂಟಿಯಾಗಿದ್ದರೆ ಹಿತವೆನಿಸೀತು. ಅತ್ಯಾಕರ್ಷಕ ವಸ್ತುಗಳಿಗೆ ನೀವು ಮನಸೋಲುವಿರಿ. ನೀವು ಇಂದು ಯಾವುದೇ ಅಧಿಕ ಲಾಭವನ್ನೂ ಅನುಭವಿಸುವುದಿಲ್ಲ. ನೀವು ಇನ್ನೊಬ್ಬರ ಮಾತನ್ನು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿಯೂ ತೆಗೆದುಕೊಳ್ಳಬಹುದು.
ವೃಷಭ: ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಯೋಗ, ಕ್ಷೇಮವು ಚೆನ್ನಾಗಿರಲಿದೆ. ಈ ದಿನ ನೀವು ಹೆಚ್ಚಿನ ಪ್ರೀತಿಯನ್ನು ಅನುಭವಿಸುವಿರಿ. ಇದು ನಿಮಗೆ ಮೋಜಿನ ದಿನವಾಗಬಹುದು. ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. ಅದೇ ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ತುಂಬಾ ಸಂತೋಷವನ್ನು ಅನುಭವಿಸುವಿರಿ. ನೀವು ಬಯಸಿದ್ದನ್ನು ಸಂಗಾತಿಯು ಸಾಧಿಸುತ್ತಾರೆ. ನಿಮ್ಮ ಪ್ರಗತಿಯ ಬಗ್ಗೆ ಸಿಂಹಾವಲೋಕನ ಮಾಡುವ ಅವಶ್ಯಕತೆ ಇದೆ.
ಮಿಥುನ: ನಿಮ್ಮ ಸಂಗಾತಿಯಿಂದ ನಿಮಗೆ ಸಿಗುತ್ತಿರುವ ಬೆಂಬಲದ ಕೊರತೆಯಿಂದ ನೀವು ಸಿಟ್ಟಾಗುವಿರಿ. ಈ ದಿನದ ಆರಂಭದಲ್ಲಿ ನಿಮ್ಮ ಪ್ರೀತಿಯ ಜೀವನವು ತುಂಬಾ ಅಸಮಾಧಾನವನ್ನು ಅನುಭವಿಸುತ್ತದೆ. ನೀವು ಮತ್ತು ನಿಮ್ಮ ಪಾಲುದಾರರು ದಿನದ ಕೊನೆಯ ವೇಳೆಗೆ ಹೆಚ್ಚು ಉತ್ತಮವಾಗುವಿರಿ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಲಸದ ವಿಷಯಕ್ಕೆ ಬಂದಾಗ ನೀವು ಬಹಳ ಕಠೋರರಾಗುವಿರಿ. ನಿಮ್ಮ ನಾಯಕತ್ವದ ಕೌಶಲ್ಯಗಳು ಯಾವುದೇ ತೊಂದರೆಗಳನ್ನು ಅನಾಯಾಸವಾಗಿ ದಾಟಲು ಸಹಾಯ ಮಾಡುತ್ತದೆ.
ಕರ್ಕಾಟಕ: ಈ ದಿನ ನಿಮಗೆ ಅತ್ಯಂತ ಸುಂದರವಾಗಿ ಇರಲಿದೆ. ನೀವು ಧನಾತ್ಮಕ ಹಾದಿಯಲ್ಲಿ ಸಾಗುತ್ತಿರುವಂತೆ ತೋರಿಸುತ್ತದೆ. ನೀವು ಅನುಭವಿಸುತ್ತಿರುವ ಧನಾತ್ಮಕ ಶಕ್ತಿಯನ್ನು ಆನಂದಿಸಿ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಇದೀಗ ಸೂಕ್ತ ಸಮಯ. ನಿಮ್ಮ ಸಂಬಂಧದಲ್ಲಿ ನೀವು ತುಂಬಾ ಸುರಕ್ಷಿತ ಸ್ಥಳದಲ್ಲಿರುವಿರಿ. ಅದು ಕ್ರಮೇಣ ಉತ್ತಮಗೊಳ್ಳುತ್ತದೆ. ನಿಮ್ಮ ಪ್ರೇಮ ಜೀವನವು ಈ ದಿನ ಹಿಂದೆಂದಿಗಿಂತಲೂ ಉತ್ತಮವಾಗಿರುತ್ತದೆ. ನಿಮ್ಮ ಸಂಬಂಧವನ್ನು ಒಂದು ಹಂತ ಮೇಲಕ್ಕೆ ಇಡಲು ಯೋಚಿಸುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಗುರಿಯನ್ನು ತಲುಪಬಹುದು.
ಸಿಂಹ: ನೀವು ಸ್ವಲ್ಪ ಸಮಯದಲ್ಲಿ ವ್ಯಕ್ತಿಗಳ ಗಮನವನ್ನು ಸೆಳೆಯಲು ಪ್ರಯತ್ನಿಸುವಿರಿ. ಅದೃಷ್ಟವು ನಿಮ್ಮನ್ನು ಕೈ ಬಿಡದು. ಈ ಕ್ಷಣದಲ್ಲಿ ಬದುಕುವುದನ್ನು ಕಲಿಯಿರಿ. ಬೇಡದ ಸಂಗತಿಗಳನ್ನು ಹೊರಗೆ ಕಳುಹಿಸಿ. ನೆಮ್ಮದಿ ಅನ್ನಿಸೀತು. ಇಂದು ನಿಮಗೆ ಸಾಕಷ್ಟು ಸಮಯವಿರುವಂತೆ ಭಾಸವಾದೀತು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವಿರಿ. ಅದಕ್ಕೆ ಘಾಸಿಯಾಗಂತೆ ನೋಡಿಕೊಳ್ಳುತ್ತೀರಿ ಕೂಡ. ಈ ದಿನ ತಪ್ಪುಯಿಂದ ಹೊರಬರುವಿರಿ. ವಾಸ್ತವದಲ್ಲಿ ಇರುವಿರಿ.
ಕನ್ಯಾ: ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲೇ ಬೇಕು ಎಂಬ ಮಹದಾಸೆ ನಿಮ್ಮಲ್ಲಿ ಇರಲಿದೆ. ನಿಮ್ಮ ಉದ್ಯೋಗ ಯಶಸ್ಸಿಗೆ ನೀವು ಹೊಸ ಆಲೋಚನೆಗಳ ಜೊತೆ ಮುಂದುವರಿಯಬೇಕು. ಈ ವಿಷಯದಲ್ಲಿ, ಹಿರಿಯ ಅಧಿಕಾರಿಗಳ ಸಲಹೆಯು ನಿಮಗೆ ಪ್ರಯೋಜನವಾಗಲಿದೆ. ಆರ್ಥಿಕವಾದ ಅಭಿವೃದ್ಧಿಗೆ ಹೊಸ ಯೋಜನೆಯನ್ನು ಮಾಡುವಿರಿ. ಇದರಿಂದ ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಸಂಗಾತಿಯ ಜೊತೆ ಸಮಯವನ್ನು ಇಂದು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆ ಉಂಟಾಗಬಹುದು. ಇಂದು ನಿಮಗೆ ಇಷ್ಟವಾದವರ ಜೊತೆ ಹರಟೆ ಹೊಡೆಯುವಿರಿ.
ತುಲಾ: ಇಂದು ನಿಮ್ಮ ವಿದ್ಯಾಭ್ಯಾಸಕ್ಕೆ ಒಳ್ಳೆಯ ದಿನ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ ಫಲಿತಾಂಶವು ಸಿಗಬಹುದು. ಸಂಶೋಧಕರಿಗೆ ಹೆಚ್ಚಿನ ಪ್ರಶಂಸೆಯು ಸಿಗಬಹುದು. ಇಂದಿನ ಸಂದರ್ಭಗಳು ನಿಮಗೆ ಅನುಕೂಲಕರವಾಗಿರುವುದು. ಪ್ರೀತಿಪಾತ್ರರೊಂದಿಗೆ ಉದ್ವಿಗ್ನತೆಗೆ ಒಳಗಾಗಿ ಮಾತನಾಡಬೇಡಿ. ನಿಮ್ಮ ಕೈ ಮೀರುವ ಪರಿಸ್ಥಿತಿಯನ್ನು ನಿಯಂತ್ರಿಸಬಲ್ಲಿರಿ. ಸಹೋದ್ಯೋಗಿಗಳ ಜೊತೆ ನೀವು ವಿವಾದವನ್ನು ಮಾಡಿಕೊಳ್ಳಬಹುದು, ಜಾಗರೂಕರಾಗಿರಿ. ಇಂದು ನಿಮ್ಮ ಕಾರ್ಯವು ನಿಮಗೆ ಸಂತೋಷವನ್ನು ತರಬಹುದು. ನಿಮ್ಮ ಕೆಲಸವು ಮೇಲಧಿಕಾರಿಗಳ ಬೆಂಬಲಕ್ಕೆ ಪೂರಕವಾಗುವುದು.
ವೃಶ್ಚಿಕ: ಇಂದು ನಿಮ್ಮ ಕುಟುಂಬದವರ ಜೊತೆ ಕಲಹವಾಗಬಹುದು. ನಿಮ್ಮ ಕೋಪವನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಮುಖ್ಯ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಲಿದ್ದೀರಿ. ಅದು ಬಹಳ ಅಮೂಲ್ಯವಾಗಿರಲಿದೆ ನಿಮ್ಮ ಪಾಲಿಗೆ. ಅದನ್ನು ಬಹಳ ಎಚ್ಚರಿಕೆಯಿಂದ ಕಾಯ್ದುಕೊಳ್ಳಿ. ನಿಮ್ಮ ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಬಿಸಿ ತುಪ್ಪದಂತೆ ಆಗಬಹುದು. ನಿಮಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸಿ. ವಿದೇಶಿ ವ್ಯಾಪಾರದಿಂದ ತೊಂದರೆ ಎದುರಾಗಬಹುದು.
ಧನು: ಇಂದು ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳಬಹುದು. ನಿಮ್ಮ ಪ್ರತಿ ಮಾತಿನ್ನೂ ಇನ್ನೊಬ್ಬರು ಗಮನಿಸುವರು. ನೀವು ತಾಳ್ಮೆಯಿಂದ ಇದ್ದಷ್ಟೂ ನಿಮ್ಮ ಸಂಬಂಧವು ಗಟ್ಟಿಯಾಗುವುದು. ಇಂದು ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸುವಿರಿ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಯೋಚನೆಗಳು ಇದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದೇ ಇರದಬಹುದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗುವ ಸಾಧ್ಯತೆ ಇದೆ. ಅನ್ಯಾಯದ ಮಾರ್ಗದಲ್ಲಿ ನೀವಿದ್ದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಈಗಲೇ ಬೇಕಾದ ಕ್ರಮವನ್ನು ಕೈಗೊಳ್ಳಿ.
ಮಕರ: ಇಂದು ನೀವು ಮನೆಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯಿಂದ ಪ್ರಯತ್ನಿಸಬೇಕಾದೀತು. ಇಂದು ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುವಿರಿ. ನಿಮ್ಮ ಗುರಿಯನ್ನು ಸಾಧಿಸುವ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳಿ. ನಿಮ್ಮ ದುರಭ್ಯಾಸಗಳನ್ನು ಬಿಟ್ಟು ಉತ್ತಮ ನಡತೆಯನ್ನು ಅಳವಡಿಸಿಕೊಳ್ಳಲು ಇಚ್ಛಿಸಬಹುದು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆಗ ನಿರ್ಧಾರಗಳು ಸರಿಯಾಗಿರುತ್ತವೆ. ನೂತನ ಗೃಹವನ್ನು ಖರೀದಿಸುವ ಯೋಚನೆ ಮಾಡುವಿರಿ.
ಕುಂಭ: ಇಂದು ನಿಮ್ಮ ಸ್ನೇಹಿತರು ನಿಮಗೆ ಅಗತ್ಯವಾಗಿ ಬೇಕಾದ ಸಹಾಯವನ್ನು ಮಾಡುವರು. ಕೆಲವು ಸವಾಲಿನ ಪರಿಸ್ಥಿತಿಗಳು ಬರುವ ಸಾಧ್ಯತೆ ಇದೆ. ನೀವು ಅವುಗಳನ್ನು ಸುಲಭವಾಗಿ ಎದುರಿಸಬಲ್ಲಿರಿ. ನೀವು ಇಂದು ನಿಮ್ಮ ಬಲವನ್ನೇ ನಂಬಿ ಮುನ್ನಡೆಯುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಮೆಚ್ಚಗೆಯು ಸಿಗಬಹುದು. ಇದು ಕೆಲಸಕ್ಕೆ ಉತ್ತೇಜನವನ್ನು ಕೊಡುವುದು. ಪ್ರತಿ ಬಾರಿಯೂ ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸುವಲ್ಲಿ ಸೋಲುವಿರಿ. ಕೆಲ ಕಾಲ ಹೊಸ ಉದ್ಯಮಕ್ಕೆ ಪಾಲುದಾರರಾಗುವುದು ಬೇಡ. ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ.
ಮೀನ: ನಾಯಕ ಸ್ಥಾನದಿಂದ ನೀವು ಕೆಳಗಿಳಿಯುವ ಆಲೋಚನೆ ಮಾಡುವಿರಿ. ಸಾಮಾಜಿಕ ಕೆಲಸವು ನಿಮಗೆ ಬೇಸರ ತರಿಸಬಹುದು. ನೆಮ್ಮದಿಗಾಗಿ ಎಲ್ಲಿಗಾದರೂ ಹೋಗುವ ಮನಸ್ಸು ಮಾಡುವಿರಿ. ಕಛೇರಿಯಲ್ಲಿ ಎಂದಿನ ಉತ್ಸಾಹವು ಇರುವುದಿಲ್ಲ. ಮಕ್ಕಳ ಮನಸ್ಸು ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ಸೋಲುವಿರಿ. ನಿಮ್ಮ ಮೂಗಿನ ನೇರದ ವಿಷಯಕ್ಕೆ ಜನ ಕುಟುಂಬದಲ್ಲಿ ಬೆಂಬಲ ಸಿಗದು. ಅಧ್ಯಾತ್ಮದ ವಿಚಾರದಲ್ಲಿ ಒಲವು ಅತಿಯಾಗಬಹುದು. ಅಪವಾದದ ಮೂಲವನ್ನು ಹುಡುಕುವ ಪ್ರಯತ್ನ ಮಾಡುವಿರಿ.
ಲೋಹಿತಶರ್ಮಾ – 8762924271 (what’s app only)