Daily Horoscope: ಇಂದಿನ ರಾಶಿಭವಿಷ್ಯ, ಅನಿರೀಕ್ಷಿತ ವಾರ್ತೆಯು ಈ ರಾಶಿಯವರ ಕೆಲಸವನ್ನು ವ್ಯತ್ಯಾಸ ಮಾಡೀತು

|

Updated on: Jun 01, 2023 | 12:01 AM

ಇಂದಿನ (2023 ಜೂನ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಇಂದಿನ ರಾಶಿಭವಿಷ್ಯ, ಅನಿರೀಕ್ಷಿತ ವಾರ್ತೆಯು ಈ ರಾಶಿಯವರ ಕೆಲಸವನ್ನು ವ್ಯತ್ಯಾಸ ಮಾಡೀತು
ಇಂದಿನ ರಾಶಿಭವಿಷ್ಯ
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ 03:43ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ.

ಮೇಷ: ಕಳೆದುದರ ಬಗ್ಗೆ ನಿಮಗೆ ಚಿಂತೆ ಇರದಿದ್ದರೂ ಅದು ನಿಮ್ಮನ್ನು ಕಾಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮ ಕೆಲಸವನ್ನು ವ್ಯತ್ಯಾಸ ಮಾಡೀತು. ಭೂಮಿಯ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ದುಡಿಕಿನ ನಿರ್ಧಾರವನ್ನು ಮಾಡಿ ದಿನವನ್ನು ಹಾಳು ಮಾಡಿಕೊಳ್ಳಬೇಡಿ. ವಿವಾಹ ಕಾಲವು ಬಂದಾಗ ಅದನ್ನು ನಿರಾಕರಿಸುವುದು ಒಳ್ಳೆಯದಲ್ಲ. ಸಮಸ್ಯೆಯನ್ನು ಆಪ್ತರ ಜೊತೆ ಸಮಾಲೋಚನೆ‌ ಮಾಡಿಕೊಂಡು ಮುಂದುವರಿಯಿರಿ. ನಿಮ್ಮ‌ ನಿಷ್ಪಕ್ಷಪಾತ ಧೋರಣೆಯು ಕೆಲವರಿಗೆ ಇಷ್ಟವಾದೀತು. ನಿಮ್ಮ ನಿರ್ಧರಗಳಿಗೆ ನೀವು ಬದ್ಧರಾಗಿರುವಿರಿ.

ವೃಷಭ: ಉದ್ಯೋಗದ ಸ್ಥಳದಲ್ಲಿ ನಿಮ್ಮನ್ನು ಹಾಸ್ಯ ಮಾಡಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ಸರ್ಕಾರಿ ಉದ್ಯೋಗಿಗಳಿಗೆ ಸಂತೋಷದ ಸುದ್ದಿ ಬರಬಹುದು. ಅಧಿಕ ಶ್ರಮದಿಂದ ಅಲ್ಪ ಲಾಭವನ್ನು ನೀವು ಗಳಿಸುವಿರಿ. ಬುದ್ಧಿಪೂರ್ವಕವಾಗಿ ಕೆಲಸವನ್ನು ಬದಲಾಯಿಸುವಿರಿ. ನೋವನ್ನು ನುಂಗುವುದು ನಿಮಗೆ ಸಹಜವಾಗಲಿದೆ. ಹಳೆಯ ನೋವಿನಿಂದ ನೀವು ಬಳಲಬಹುದು. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ.

ಮಿಥುನ: ಸುಂದರವಾದ ದಿನವನ್ನು ಕಳೆಯಲು ನೀವು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ನಿದ್ರೆಯ ತೊಂದರೆಯಿಂದ ನಿಮಗೆ ಕಿರಿಕಿರಿಯಾಗಬಹುದು. ಮನಸ್ಸನ್ನು ಚಂಚಲವಾಗಿಸದೇ ಕೆಲಸದಲ್ಲಿಯೇ ಇಟ್ಟಿರಿ. ಇಲ್ಲವಾದರೆ ಇಂದಿನ ಪ್ರಮುಖ ಕೆಲಸವು ವ್ಯತ್ಯಾಸ ಆಗಬಹುದು. ಇನ್ನೊಬ್ಬರ ಮೇಲೆ‌ಕರುಣೆ ಬರಬಹುದು. ಆಪ್ತರಿಗೆ ಧನಸಹಾಯವನ್ನು ಮಾಡುವಿರಿ. ತಣ್ಣೀರಿನ್ನೂ ತಣಿಸಿ ಕುಡಿಯುವ ಸಂದರ್ಭವು ಬರಬಹುದು. ಅನಗತ್ಯ ವಿಷಯಕ್ಕೆ ತಲೆ ಹಾಕುವುದು ಬೇಡ. ನಿರಂತರ ಕೆಲಸದ ಪರಿಣಾಮ ನಿಮಗೆ ಫಲ ಸಿಗಬಹುದು.

ಕಟಕ: ಸಂತೋಷವನ್ನು ಅನುಭವಿಸಬೇಕೆಂದು ಏನನ್ನಾದರೂ ಮಾಡಲು ಹೋಗಬೇಕಾದೀತು. ನಿಮ್ಮ ನಡತೆಯ ಬಗ್ಗೆ ನಿಮಗೆ ಗೊತ್ತಿರಲಿ. ಆರ್ಥಿಕವಾಗಿ ಸಬಲರಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಸಿಗುವ ಸಹಾಯದಿಂದ ಬೇಕಾದುದನ್ನು ಸಾಧಿಸಿಕೊಳ್ಳುವಿರಿ. ಕುಟುಂಬದ ಬಗ್ಗೆ ನಿಮಗೆ ಒಳ್ಳೆಯ ಮನಸ್ಸು ಇರದು. ಸಹೋದರನಿಂದ ಸಹಾಯವಾಗಲಿದೆ‌. ವಿವಾಹಕ್ಕೆ ಮಾತುಕತೆಗಳು ನಡೆಯುವುದು. ಗೆಳೆತನಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗಬಹುದು. ಆರೋಗ್ಯದ ಮೇಲೆ ಗಮನವಿರಲಿ. ಆಧಿಕ ಖರ್ಚನ್ನು ಮಾಡಿಕೊಳ್ಳುವುದು ಬೇಡ.

ಸಿಂಹ: ಬಹಳ‌ ದಿನಗಳ ಸಂಬಂಧವು ಹಳಸಿಹೋಗುವ ಸಾಧ್ಯತೆ ಇದೆ. ಭವಿಷ್ಯವನ್ನು ಅತಿಯಾಗಿ ಕಲ್ಪಿಸಿಕೊಂಡು ಸಮಯವನ್ನು ಹಾಳುಮಾಡಿಕೋಳ್ಳುವುದು ಯೋಗ್ಯವಲ್ಲ. ಅಪರಿಚಿತ ವ್ಯಕ್ತಿಗಳು ಉದ್ಯೋಗಕ್ಕೆ ಒತ್ತಾಯ ಮಾಡಬಹುದು. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟುಕೊಂಡಿದ್ದರೆ ಸ್ವಲ್ಪ ಸಮಯ ಕಾಯಬೇಕಾದೀತು. ಅಪರೂಪಕ್ಕೆ ಬಂದ ಅವಕಾಶದಲ್ಲಿ ಆಯ್ಕೆ ಮಾಡುತ್ತ ಇರುವುದು ಬೇಡ.‌ ಉದ್ವೇಗದಲ್ಲಿ ಏನ್ನಾದರೂ ಮಾಡಿಕೊಳ್ಳಲು ಹೋಗಬೇಡಿ. ಕೆಲಸಕ್ಕೆ ಸಮಯಮಿತಿಯನ್ನು ಹಾಕಿಕೊಳ್ಳಿ.

ಕನ್ಯಾ: ಗೃಹನಿರ್ಮಾಣವನ್ನು ಮಾಡುವ ಅನಿವಾರ್ಯತೆ ಸೃಷ್ಟಿಯಾವಗುವುದು. ನಿಮ್ಮನ್ನು ಇಷ್ಟಪಡುವವರ ಜೊತೆ ಕಳೆಯಲು ಸಮಯವನ್ನು ಹೊಂದಿಸಿಕೊಳ್ಳುವಿರಿ. ರಾಜಕೀಯವು ನಿಮ್ಮನ್ನು ಕೈ ಬೀಸಿ ಕರೆಯಬಹುದು. ನಿಮಗೆ ವ್ಯಕ್ತಿಯ ಮೇಲೆ ಉಂಟಾದ ಆಕರ್ಷಣೆಯಿಂದ ಹೊರಬರಲು ಬಹಳ ಕಷ್ಟಪಡುವಿರಿ.‌ ಧಾರ್ಮಿಕವಾಗಿ ನೀವು ಏನನ್ನಾದರೂ ದೈವಜ್ಞರ, ಹಿರಿಯರ ಸಲಹೆಯನ್ನು ಪಡೆದು ಮಾಡಿ. ಹೆಚ್ಚು ಮಾತನಾಡುವುದರಿಂದ ಸಮಯವೂ ವ್ಯರ್ಥ, ಆಯಾಸವೂ ಆದೀತು.‌ ಒಂಟಿಯಾಗಿ ನೀವು ಎಲ್ಲಿಗೂ ಹೋಗುವುದು ಬೇಡ. ಆಪ್ತ ಬಂಧುವನ್ನು ನೀವು ಕಳೆದುಕೊಳ್ಳುವಿರಿ.

ತುಲಾ: ಸಂಗಾತಿಯ ಜೊತೆಗಿನ ಅನ್ಯೋನ್ಯತೆಯು ಹೆಚ್ಚಾಗಬಹುದು. ಅಧಿಕಾರದ ಆಸೆಯಿಂದ ಅವ್ಯವಹಾರವನ್ನು ಮಾಡುವುದು ಬೇಡ. ಸಂಕುಚಿತ ಸ್ವಭಾವವು ನಿಮಗೆ ಅನೇಕ ಅವಕಾಶವನ್ನು ತಪ್ಪಿಸೀತು. ಸಂಗಾತಿಗಾಗಿ ಹಣವನ್ನು ಖರ್ಚುಮಾಡುವಿರಿ. ಪಕ್ಷಪಾತ ನೀತಿಯನ್ನು ಬಿಡುವ ಅನಿವಾರ್ಯತೆ ಸೃಷ್ಟಿಯಾದೀತು. ಹಣಕಾಸಿನ ಗೊಂದಲಕ್ಕೆ ಸರಿಯಾದ ತೆರೆ ಬೀಳಲಿದೆ. ಹೋಗುವ ಕೆಲಸವು ಇಂದು ಪೂರ್ಣವಾಗದೇ ಹೋದೀತು.‌ ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ನಿಮ್ಮ ಕಾಲ್ಪನಿಕ ಜಗತ್ತು ವಾಸ್ತವದಿಂದ ಬಹಳ ದೂರವಿರಲಿದೆ.

ವೃಶ್ಚಿಕ: ನಿಮ್ಮ ಸಮಯವನ್ನು ಯಾರಾದರೂ ವ್ಯರ್ಥವಾಗಿಸಬಹುದು. ಆ ಬಗ್ಗೆ ಹೆಚ್ಚಿನ ಗಮನವಿರಲಿ. ಇನ್ನೊಬ್ಬರ ನೋವಿನಿಂದ ಖುಷಿಪಡುವುದು ಒಳ್ಳೆಯದಾಗದು. ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆಯಾಗುವುದು.‌ ಹೊಸತನ್ನು ಕಲಿಯುವ ಬಯಕೆ ಇದ್ದರೂ ಸಮಯ, ವ್ಯವಸ್ಥೆಯು ಕಷ್ಟವಾದೀತು. ನೇರ ನುಡಿಯನ್ನು ನಿಮ್ಮಿಂದ ಇಷ್ಟಪಡರು‌. ಉದ್ಯೋಗದಲ್ಲಿ ನೆಮ್ಮದಿ ಇದ್ದರೂ ಆದಾಯವು ಅಧಿಕವಿಲ್ಲ ಎಂಬ ಕೊರಗು ಇರಬಹುದು. ಹೆಚ್ಚಿ ಆದಾಯಕ್ಕೆ ದಿನ ಉಳಿದ ಸಮಯವನ್ನು ಬಳಸಿಕೊಲ್ಳಬಹುದು. ನಿಮ್ಮ ನಿರ್ಧಾರಗಳು ಅಸ್ಪಷ್ಟವಾಗಿ ಇರಿಲಿದೆ.

ಧನು: ಯಂತ್ರೋಪಕರಣವು ನಿಮಗೆ ಲಾಭವನ್ನು ತಂದೀತು. ನಿಮಗಾಗದ್ದನ್ನು ನೀವು ಎಂದಿನಂತೆ ವಿರೋಧಿಸುವಿರಿ. ಕಛೇರಿಯಲ್ಲಿ ಕೆಲಸವು ಬಹಳ ಒತ್ತಡವಿದ್ದರೂ ಕೆಲಸವನ್ನು ಬದಲಾಯಿಸುವ ಬಗ್ಗೆ ಆಲೋಚನೆ ಬೇಡ. ನೀವು ಏನನ್ನಾದರೂ ಸಾಧಿಸಬೇಕು ಎಂಬ ಫಲವನ್ನು ಇಟ್ಟುಕೊಂಡೇ ಕೆಲಸಕ್ಕೆ ಸೇರಿರುವಿರಿ. ನಿಮಗಾದ ಅವಮಾನವು ನಿಮ್ಮನ್ನು ಹಠವಾದಿಯನ್ನಾಗಿ ಮಾಡಿದೆ. ವಿವಾಹಕ್ಕೆ ಸಂಬಂಧಿಸಿದ ಮಾತುಗಳನ್ನು ನೀವು ಕೇಳಿದರೂ ಯಾವ ಪ್ರತಿಕ್ರಿಯೆಯು ನಿಮ್ಮಿಂದ ಬಾರದು. ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚುಗಳು ಸಮವಾಗಿರಲಿದೆ.

ಮಕರ: ಹೊಸಬರನ್ನು ಪರಿಚಯ ಮಾಡಿಕೊಳ್ಳುವ ಉತ್ಸಾಹವು ನಿಮಗೆ ಇರಲಿದೆ. ಸ್ತ್ರೀಯರ ಜೊತೆ ಹೆಚ್ಚು ಮಾತನಾಡುವಿರಿ. ಹಿರಿಯರು ನಿಮಗೆ ಕಾಲಕ್ಕೆ ಬೇಕಾದುದನ್ನು ಹೇಳಿಕೊಟ್ಟಾರು. ಸರಳತೆಯನ್ನು ರೂಢಿಸಿಕೊಳ್ಳಲು ನಿಮಗೆ ಇಷ್ಟವಿದ್ದರೂ ನಿಮ್ಮವರು ಅದನ್ನು ಬಿಡರು. ನೀವು ನಿಮ್ಮ ಸಮಯವನ್ನು ಇತರರಿಗೆ ನೀಡಲಿದ್ದೀರಿ. ನಿಮ್ಮ ಹಾಸ್ಯ ಪ್ರವೃತ್ತಿಯು ಬೇಸರವನ್ನು ತರಿಸೀತು. ಒಳ್ಳೆಯದನ್ನು ನೀವು ಎದುರುನೋಡುತ್ತಿರಬಹುದು. ಅಕಾರಣ ಸಂತೋಷವು ನಿಮಗೆ ಆತಂಕವನ್ನು ತಂದುಕೊಟ್ಟೀತು. ಪ್ರೇಮಿಗಳು ಇಂದು ಒಟ್ಟಿಗೇ ಹೆಚ್ಚು ಕಾಲ ಕಳೆಯುವರು.

ಕುಂಭ: ಪ್ರಭಾವೀ ವ್ಯಕ್ತಿಗಳ ಜೊತೆ ಮಾತನಾಡುವಾಗ ಎಚ್ಚರಿಕೆ ಅಗತ್ಯ.‌ ನಿಮ್ಮ ಎಂದಿನ ವರಸೆಯನ್ನು ಅವರ ಮುಂದೆ ತೆರೆಯಬೇಡಿ. ಸಾಹಸಪ್ರವೃತ್ತಿಯು ಹುಟ್ಟಿಕೊಳ್ಳಬಹುದು. ನಿಮ್ಮ ತಲೆಯಲ್ಲಿ ನೂರಾರು ಆಲೋಚನೆಗಳು ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಸಮಯವು ಹಿಡಿಯಬಹುದು. ಕಛೇರಿಯಲ್ಲಿ ನಿಮಗೆ ಸಹಾಯವನ್ನು ಮಾಡಲು ಬರಬಹುದು. ಸ್ತ್ರೀಯರು ತಮ್ಮ ಅನುಕೂಲತೆಗಳನ್ನು ಕೆಲಸಮಾಡುವರು. ಸಮಯಕ್ಕೆ ಗೌರವವನ್ನು ಕೊಡಿ. ನಿಮ್ಮನ್ನು ದ್ವೇಷಿಸುವವರು ನಿಮ್ಮೆದುರೇ ಬರಬಹುದು. ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಉತ್ತಮ.

ಮೀನ: ನಿಮ್ಮ ಸ್ನೇಹಿತರ ಮೇಲಿನ ವಿಶ್ವಾಸದಿಂದ ಯಾರಿಗೋ ನಿಮ್ಮ ಹಣವನ್ನು ಕೊಟ್ಟರೆ ಮತ್ತೆ ಬಾರದೇ ಇದ್ದೀತು. ಅಮೂಲ್ಯವಾದ ನಿಮ್ಮ ವಸ್ತುವು ಕಾಣಿಸದೇ ಇದ್ದೀತು ಅಥವಾ ಕಳ್ಳತನವೂ ಆಗಬಹುದು. ಮಕ್ಕಳಿಂದ ನಿಮಗೆ ಪ್ರಶಂಸೆಯು ಸಿಗಬಹುದು. ವ್ಯವಹಾರವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅದಕ್ಕಾಗಿ ಬಿಡುವ ಯೋಚನೆಯನ್ನು ಮಾಡುವಿರಿ. ಆದಾಯದ ಮೂಲಕ್ಕೇ ತೊಂದರೆಯು ಬರಬಹುದು. ಅತಿಯಾದ ಆತ್ಮವಿಶ್ವಾಸವು ನಿಮಗೆ ಕಂಟಕವಾದೀತು. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಉತ್ತಮ.

-ಲೋಹಿತಶರ್ಮಾ ಇಡುವಾಣಿ (ವಾಟ್ಸ್​ಆ್ಯಪ್- 8762924271)