ವೃಶ್ಚಿಕ ಲಗ್ನದಲ್ಲಿ ಹುಟ್ಟಿದವರಿಗೆ ಶತ್ರುಗಳ ಕಾಟ ವಿಪರೀತ ಹೆಚ್ಚು ಏಕೆ ಗೊತ್ತೇ?

ವೃಶ್ಚಿಕ ಲಗ್ನಕ್ಕೆ ಮಾತ್ರ ಶತ್ರುಗಳು ವಿಪರೀತ ಹೆಚ್ಚು ಎಂದು ಹೇಳುವುದಕ್ಕೆ ಯಾವುದಾದರೂ ಜ್ಯೋತಿಷ್ಯ ಕಾರಣ ಇದೆಯಾ?- ಅದನ್ನು ಹೇಳುವುದಕ್ಕೆ ಅಂತಲೇ ಈ ಲೇಖನವನ್ನು ನಿಮಗಾಗಿ ಬರೆಯಲಾಗಿದೆ.

ವೃಶ್ಚಿಕ ಲಗ್ನದಲ್ಲಿ ಹುಟ್ಟಿದವರಿಗೆ ಶತ್ರುಗಳ ಕಾಟ ವಿಪರೀತ ಹೆಚ್ಚು ಏಕೆ ಗೊತ್ತೇ?
ವೃಶ್ಚಿಕ ಲಗ್ನ
Follow us
TV9 Web
| Updated By: Ganapathi Sharma

Updated on: May 31, 2023 | 5:22 AM

ನೀವು ನಿತ್ಯದ ಜೀವನದಲ್ಲೂ ಗಮನಿಸಬಹುದಾದ ಸಂಗತಿಯೊಂದನ್ನು ಸರಳವಾಗಿ ವಿವರಿಸುವಂಥ ಪ್ರಯತ್ನವಾಗಿ ನಿಮ್ಮ ಮುಂದೆ ಈ ಲೇಖನ ಇದೆ. ನಿಮಗೆ ಅನಿಸಬಹುದು, ಶತ್ರುಗಳು ಅಂತ ಯಾವ ಲಗ್ನದವರಿಗೆ ಇರುವುದಿಲ್ಲ ಹೇಳಿ? ಆದರೆ ವೃಶ್ಚಿಕ ಲಗ್ನಕ್ಕೆ ಮಾತ್ರ ವಿಪರೀತ ಹೆಚ್ಚು ಎಂದು ಹೇಳುವುದಕ್ಕೆ ಯಾವುದಾದರೂ ಜ್ಯೋತಿಷ್ಯ ಕಾರಣ ಇದೆಯಾ?- ಅದನ್ನು ಹೇಳುವುದಕ್ಕೆ ಅಂತಲೇ ಈ ಲೇಖನವನ್ನು ನಿಮಗಾಗಿ ಬರೆಯಲಾಗಿದೆ.

ಯಾವ ಜಾತಕಕ್ಕೆ ಲಗ್ನಾಧಿಪತಿ ಹಾಗೂ ಲಗ್ನದಿಂದ ಆರನೇ ಮನೆಯ ಅಧಿಪತಿ ಒಂದೇ ಗ್ರಹ ಆಗಿರುತ್ತದೋ ಅಂಥವರು ಅವರ ಇಡೀ ಜೀವನ ಶತ್ರುಗಳಿಂದ ಭಾರೀ ಮಟ್ಟದಲ್ಲಿ ವಿರೋಧಗಳನ್ನು ಎದುರಿಸುತ್ತಾರೆ. ಹಲವು ಸಂದರ್ಭದಲ್ಲಿ ಇವರ ಕಥೆಯೇ ಮುಗಿದು ಹೋಯಿತು ಅನ್ನುವ ಮಟ್ಟಿಗೆ ದಾಳಿಗಳು ಆಗುವುದುಂಟು. ಅದು ಹೇಗೆಂದರೆ, ಆ ರಾಶ್ಯಾಧಿಪತಿಯ ಕಾರಕತ್ವ ಯಾವುದಕ್ಕೆ ಇರುತ್ತದೋ ಅದಕ್ಕೆ ಸಂಬಂಧಿಸಿದಂತೆಯೇ ನಿಂದೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

ಇಲ್ಲಿ ನಿಂದೆಯ ಪ್ರಮಾಣವನ್ನು ತಿಳಿದುಕೊಳ್ಳುವುದಕ್ಕೆ ಒಂದು ಸೂತ್ರ ಇದೆ. ಅದೇನೆಂದರೆ, ಚಂದ್ರ ಇರುವ ರಾಶಿ ಬೇರೆ ಆಗಿ ಮತ್ತು ಲಗ್ನಾಧಿಪತಿಯು ಲಗ್ನದಲ್ಲಿ ಅಲ್ಲದೆ ಬೇರೆ ರಾಶಿಯಲ್ಲಿ ಇದ್ದಲ್ಲಿ ಆಗ ಬೇರೆ ಪ್ರಮಾಣ ಹೇಳಬೇಕು. ಇನ್ನು ಚಂದ್ರ ಹಾಗೂ ಲಗ್ನ ಎರಡೂ ಒಂದೇ ಆಗಿರುತ್ತದೆ. ಅಂಥ ಸಂದರ್ಭದಲ್ಲಿ ಆರನೇ ಮನೆಯ ಅಧಿಪತಿ ಆದ ಗ್ರಹವು ಆ ಲಗ್ನ- ರಾಶಿಗೆ ಅಧಿಪತಿಯೂ ಆಗಿ, ಲಗ್ನದಲ್ಲೇ ಇದ್ದಾಗ ಅದರ ಪ್ರಮಾಣ ಭಾರೀ ಆಗಿರುತ್ತದೆ.

ಇಷ್ಟೆಲ್ಲ ವಿವರಿಸಿರುವುದರಿಂದ, ಹೀಗೆ ಯಾವ ಲಗ್ನದವರಿಗೆ ಆಗುತ್ತದೆ ಎಂಬುದನ್ನು ಗಮನಿಸೋಣ. ಹನ್ನೆರಡು ಲಗ್ನಗಳ ಪೈಕಿ ವೃಶ್ಚಿಕ ಲಗ್ನಕ್ಕೆ ಮಾತ್ರ ಹೀಗಾಗುವುದಕ್ಕೆ ಸಾಧ್ಯ. ಏಕೆಂದರೆ, ವೃಶ್ಚಿಕ ರಾಶಿಯ ಅಧಿಪತಿ ಕುಜ. ಅಲ್ಲಿಂದ ಆರನೇ ಮನೆ ಅಂದರೆ ಮೇಷ ರಾಶಿ ಆಗುತ್ತದೆ. ಅದರ ಅಧಿಪತಿ ಸಹ ಕುಜ. ಯಾರದು ವೃಶ್ಚಿಕ ರಾಶಿ, ವೃಶ್ಚಿಕ ಲಗ್ನವೂ ಆಗಿ, ಅಲ್ಲಿಯೇ ಕುಜ ಸ್ಥಿತನಾಗಿದ್ದಲ್ಲಿ (ಇದು ಜನ್ಮ ಜಾತಕಕ್ಕೆ ಸಂಬಂಧಿಸಿದ ವಿಚಾರ) ಇಂಥವರು ಏನು ಮಾಡಿದರೂ ಟೀಕೆ, ವೈರ, ಶತ್ರುತ್ವವನ್ನು ಅನುಭವಿಸಲೇ ಬೇಕಾಗುತ್ತದೆ.

ಇದನ್ನೂ ಓದಿ: Shukra Gochar 2023: ಕರ್ಕಾಟಕ ರಾಶಿ ಪ್ರವೇಶಿಸಲಿರುವ ಶುಕ್ರ; ಈ 5 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ!

ಜಾತಕದಲ್ಲಿ ಇಂಥದ್ದೊಂದು ಗ್ರಹ ಸ್ಥಿತಿ ಇರುವಂಥವರು ತಮ್ಮ ಮೇಲೆ ಬರುವ ನಿಂದೆ, ಟೀಕೆಗಳಿಗೆ ಉತ್ತರಿಸುವುದರಲ್ಲೇ ಸಾಮಾನ್ಯವಾಗಿ ಹೈರಾಣಾಗಿ ಬಿಡುತ್ತಾರೆ. ಆದರೆ ಜನ್ಮ ಜಾತಕದಲ್ಲಿ ಇತರ ಗ್ರಹ ಸ್ಥಿತಿಗಳು ಬಲವಾಗಿದ್ದಾಗ ಟೀಕೆಗಳಿಗೆ ಉತ್ತರಿಸುವುದಕ್ಕೆ ಹೋಗುವುದಿಲ್ಲ. ನಿರ್ಧಾರದ ವಿವೇಚನೆಯನ್ನು ಕಾಲಕ್ಕೆ ಬಿಟ್ಟುಬಿಡುತ್ತಾರೆ.

ಇಂಥದ್ದೊಂದು ಜಾತಕವನ್ನು ಉದಾಹರಣೆಯಾಗಿ ನೀಡಬೇಕು ಎಂದು ಹುಡುಕಾಡಿದಾಗ, ಥಟ್ಟನೆ ಕಂಡುಬಂದಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜಾತಕ. ಅವರದು ವೃಶ್ಚಿಕ ಲಗ್ನ ಹಾಗೂ ವೃಶ್ಚಿಕ ರಾಶಿ. ಅಂದರೆ ಚಂದ್ರನೂ ಅಲ್ಲೇ ಇದ್ದಾನೆ. ಜತೆಗೆ ಕುಜ ಸಹ ಅದೇ ರಾಶಿಯಲ್ಲಿ ಇದೆ. ಒಬ್ಬ ವ್ಯಕ್ತಿ ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳದಿರಬಹುದು. ಆದರೆ ಆತ ಎಲ್ಲ ಬರೀ ತಪ್ಪು ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ ಎಂಬ ರೀತಿ ಸಹ ಬಿಂಬಿಸುವುದು ಸರಿಯಲ್ಲ. ವಿಮರ್ಶೆಗೆ ಯಾರೂ ಅತೀತರಲ್ಲ. ಆದರೆ ಬರೀ ಟೀಕೆಗೆ ಗುರಿ ಆಗುವುದು ಅಂದರೆ ಅದನ್ನು ಎದುರಿಸಲು, ಜೀರ್ಣಿಸಿಕೊಳ್ಳಲು ಶಕ್ತಿ ಬೇಕು.

ನಿಮ್ಮದು ವೃಶ್ಚಿಕ ಲಗ್ನವೆ? ಜಾತಕದಲ್ಲಿ ಕುಜ ಗ್ರಹ ಎಲ್ಲಿದೆ ನೋಡಿಕೊಳ್ಳಿ. ನಿಮ್ಮ ನಿರ್ಧಾರ, ತೀರ್ಮಾನಗಳಿಗೆ ವಿರೋಧವೇ ಬರುತ್ತಿದೆ ಎಂದು ಅಧೀರರಾಗಬೇಡಿ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿಗಳು, ಕಾಪು (ಉಡುಪಿ)

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?