Daily horoscope: ಹಳೆಯ ಘಟನೆಯೇ ಈ ರಾಶಿಯವರ ದಾಂಪತ್ಯದಲ್ಲಿ ಜಗಳಕ್ಕೆ ಕಾರಣವಾಗಲಿದೆ

|

Updated on: Apr 26, 2023 | 5:00 AM

ಇಂದಿನ (2023 ಏಪ್ರಿಲ್​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily horoscope: ಹಳೆಯ ಘಟನೆಯೇ ಈ ರಾಶಿಯವರ ದಾಂಪತ್ಯದಲ್ಲಿ ಜಗಳಕ್ಕೆ ಕಾರಣವಾಗಲಿದೆ
ಇಂದಿನ ರಾಶಿ ಭವಿಷ್ಯ
Image Credit source: Getty Images
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 02:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:48 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:30ರ ವರೆಗೆ.

ಮೇಷ: ವ್ಯಾಪಾರದಿಂದ ಅಧಿಕ ಹಣವು ಉಳಿತಾಯವಾಗಲು ಚಿಂತನೆ ನಡೆಸುವಿರಿ. ಕೆಲಸವನ್ನು ಮಾಡಿಸಿಕೊಳ್ಳಲು ಜಾಣ್ಮೆಯಿಂದ ಮಾತನಾಡುವಿರಿ. ವಿದ್ಯಾರ್ಥಿಗಳು ಮುಂದಿನ ಓದಿಗೆ ಬೇಕಾದ ತಯಾರಿ ನಡೆಸುವರು. ಉದ್ಯೋಗದಲ್ಲಿ ಜವಾಬ್ದಾರಿ ಸ್ಥಾನವವನ್ನು ಪಡೆಯುವಿರಿ. ಬಂಧುಗಳ ಬೆಂಬಲ‌ ನಿಮ್ಮ ಕಾರ್ಯಕ್ಕೆ ಸದಾ ಇರಲಿದೆ. ಇಂದು ನಿಧಾನವಾಗಿ ಕೆಲಸಕಾರ್ಯಗಳು ನಡೆಯಲಿವೆ. ಪುಣ್ಯಕ್ಣೇತ್ರಗಳ ಭೇಟಿಯನ್ನು ಮಾಡುವಿರಿ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಾಲಬಾಧೆಯಿಂದ ನೀವು ಮುಕ್ತಾರಾಗಲಿದ್ದೀರಿ. ಮನೆಯ ಹಿರಿಯರ ಬಗ್ಗೆ ಪ್ರೀತಿ ಹೆಚ್ಚಾಗಬಹುದು.

ವೃಷಭ: ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಸಂತೋಷದಿಂದ ಇಂದು ಇರುವಿರಿ. ನಿಮ್ಮ ಕಾರ್ಯಕ್ಕೆ ಉತ್ತಮವಾದ ಯಶಸ್ಸು ಸಿಗಲಿದೆ‌. ನಿಮ್ಮನ್ನು ಪರಿಚಿತರು ಮಾತನಾಡಿಸದೇ ಇರಬಹುದು. ಕೃಷಿಕರು ಇಂದು ತಮ್ಮ ಕಾರ್ಯದಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. ವೃತ್ತಿಪರರು ಬಹಳ ಉತ್ಸಾಹದಿಂದ ಕಛೇರಿಯಲ್ಲಿ ಕೆಲಸವನ್ನು ಮಾಡುವರು. ಮನಸ್ಸಿನಲ್ಲಿ ಕೆಟ್ಟದ್ದಿದ್ದರೆ ಜೀವನವೂ ಹಾಳಾಗುತ್ತದೆ ಎಂಬ ಸತ್ಯವು ನೆನಪಿನಲ್ಲಿ ಇರಲಿ. ಸಂಪತ್ತಿನ ವಿಚಾರದಲ್ಲಿ ಜಾಗಕರೂಕರಾಗಿರಿ. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಅತಿಥಿಗಳ ಜೊತೆ ಒಡನಾಡುವಿರಿ.

ಮಿಥುನ: ಮಾತನಾಡಲು ಬಹಳ ಮುಜುಗರವಾದೀತು. ನಿಮಗೆ ಬೇಕಾದುದನ್ನೇ ಮಾಡಿಸಿಕೊಳ್ಳುವ ಜಾಯಮಾನದವರಾಗಿದ್ದೀರಿ. ಆನ್ ಲೈನ್‌ಶಾಪಿಂಗ್ ನಿಂದ ಅಧಿಕ ಹಣವನ್ನು ಖರ್ಚು ಮಾಡುವಿರಿ. ಒಳ್ಳೆಯ ಸಮಯವನ್ನು ನಿರೀಕ್ಷಿಸಿ. ಕಾಲವು ಎಲ್ಲವನ್ನೂ ಒದಗಿಸಿಕೊಡುತ್ತದೆ. ಹೆಚ್ಚಿನ ಜವಾಬ್ದಾರಿಗಳು ಸಿಗಬಹುದು. ಓಡಾಟದಿಂದ ದೇಹಾಯಾಸವಾಗಬಹುದು. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ಮಾತಿನಿಂದ ಕಲಹವಾಗಬಹುದು. ತಂದೆಗೆ ಸಮಾನರಾದವರ ಜೊತೆ ಕಲಹವನ್ನು ಮಾಡಿಕೊಳ್ಳಬೇಡಿ.

ಕಟಕ: ಆಗಿಹೋದ ವಿಷಯವನ್ನು ಮತ್ತೆ ನೆನಪಿಸಿಕೊಂಡು ದಾಂಪತ್ಯದಲ್ಲಿ ಜಗಳವಾಗಬಹುದು. ಶತ್ರುಗಳಿಂದ ಸಣ್ಣ ಕಿರಿಕಿರಿಯಾಗಲಿದೆ. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ಆರ್ಥಿಕಸ್ಥಿತಿಯನ್ನು ಊರ್ಜಿತಗೊಳಿಸಲು ಬಹಳ ಶ್ರಮ ಪಡುವಿರಿ. ತಂದೆ ಹಾಗು ತಾಯಿಯರ ಆಶೀರ್ವಾದವನ್ನು ಪಡೆದು ನಿಮ್ಮ ಕೆಲಸಕ್ಕೆ ತೆರಳಿ. ಪಾಲುದಾರಿಕೆಯ ವಿಚಾರದಲ್ಲಿ ನೀವು ಆತುರಪಡಬಾರದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ಇಂದು ಎಲ್ಲವನ್ನೂ ಅಳೆದು ತೂಗಿ ಮಾಡಬೇಕಾದ ಸ್ಥಿತಿ ಬರಬಹುದು. ಅತಿಯಾಗಿ ಮಾತಾನಾಡಿ ಗುಟ್ಟನ್ನು ರಟ್ಟು ಮಾಡುವಿರಿ.

ಸಿಂಹ: ಮನೆ ಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಮನೆಗೆಲಸವು ಇಂದಿನಿಂದ ಅನಾಯಾಸಕರವಾಗಿರುವುದು. ಹಣದ ವಿಚಾರದಲ್ಲಿ ನಿಮಗಿಂದು ನಿರಾಸಕ್ತಿ ಬರಬಹುದು. ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು ಎಂಬ ಬೇಸರವು ಹೆಚ್ಚಾಗಿ ಕಾಡಬಹುದು. ಹಳೆಯ ಮಿತ್ರರ ಭೇಟಿಯಾಗಲಿದೆ. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಇನ್ನೊಬ್ಬರ ಕೆಲಸಕ್ಕೆ ದೂರ ಪ್ರಯಾಣಮಾಡಬೇಕಾಗಿ ಬರಬಹುದು. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು.

ಕನ್ಯಾ: ಆಸ್ತಿ ಖರೀದಿಯ ಬಗ್ಗೆ ಹೆಚ್ಚಿನ ಒಲವಿರಲಿದೆ‌. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಲಿದೆ. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡುವಿರಿ. ಧಾರ್ಮಿಕಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಕ್ಕೆ ನಿಮ್ಮನ್ನು ಗೌರವಿಸಲಿದ್ದಾರೆ. ಗುರುವಿನ ದರ್ಶನವನ್ನು ಪಡೆಯುವಿರಿ. ಹೂಡಿಕೆಯ ವಿಚಾರದಲ್ಲಿ ಮಾಹಿತಿಯು ಸ್ಪಷ್ಟವಾಗಿರಲಿ. ಕಂಕಣಭಾಗ್ಯವು ಅವಿವಾಹಿತರಿಗೆ ಕೂಡಿಬರಲಿದೆ. ವಿದೇಶಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ.

ತುಲಾ: ಆರೋಗ್ಯವು ಚೆನ್ನಾಗಿ ಇರಲಿದೆ. ಹಣ ಸಂಪಾದನೆಗೆ ದೂರಪ್ರಯಾಣ ಮಾಡಬೇಕಾದೀತು. ಮಾಡಲು ತುಂಬ ಕೆಲಸಗಳಿದ್ದು ಯಾವುದನ್ನು ಮಾಡುವುದು ಎಂಬ ಗೊಂದಲ ಸೃಷ್ಟಿಯಾಗಬಹುದು. ಹಿರಿಯರು ನಿಮ್ಮನ್ನು ಪ್ರಶಂಸಿಸುವರು. ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ಅದರ ಫಲವು ಸಂಜೆಯ ತನಕ ಇರಲಿದೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾದೀತು. ಇಂದು ಬರುವ ಅತಿಥಿಗಳನ್ನು ಸತ್ಕರಿಸಿ. ತುಂಬ ಸಮಸ್ಯೆಗಳು ಬಂದಂತೆ ಕಾಣಬಹುದು. ಹೊಸ ಉದ್ಯೋಗವನ್ನು ಮಾಡುವ ಸಾಮರ್ಥ್ಯ ಇದ್ದರೂ ಅಳುಕು ನಿಮ್ಮನ್ನು ಹಿಂದೆ ಸರಿಯುವಂತೆ ಮಾಡುವುದು.

ವೃಶ್ಚಿಕ: ಇಂದು ಸ್ನೇಹಿತರ ಜೊತೆ ಹೋಗಬೇಕಿದ್ದ ನಿಮ್ಮ ಪ್ರಯಾಣವು ತುರ್ತು ಕಾರ್ಯದಿಂದ ರದ್ದಾಗಬಹುದು. ಬಹಳ ಆಯಾಸವಾದರೂ ಒತ್ತಡಗಳಿದ್ದರೂ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಅಪರಿಚಿತ ದೂರವಾಣಿಯ ಕರೆಯಿಂದ ಲಾಭದಾಯಕವಾದ ಕೆಲಸವು ಸಿಗಬಹುದು. ಸರ್ಕಾರಿ ಕೆಲಸಗಳು ನಿಧಾನವಾಗಲಿದೆ. ಬೇಸರ ಪಡುವ ಅವಶ್ಯಕತೆ ಇಲ್ಲ. ನಿಧಾನವಾಗಿಯಾದರೂ ಚಲಿಸುತ್ತದೆ ಎಂಬ ಸಂತೋಷವಿರಲಿ. ನಿಮಗೆ ಆಗದವರು ತೊಂದರೆ ಕೊಡುತ್ತಿದ್ದಾರೆ ಎಂಬ ಅನುಮಾನವು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆಯಾಗಲಿದೆ.

ಧನು: ನಿಮ್ಮ ಮಾತಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಆಮೇಲೆ ಅದಕ್ಕೆ ಬೆಲೆಯೇ ಇಲ್ಲದಂತಾದೀತು. ಕೃಷಿಯ ಚಟುವಟಿಕೆಯಲ್ಲಿ ತೊಡಗುವ ಮನಸ್ಸಾದೀತು. ಉದರಬಾಧೆಯು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಕೃಷಿಯಲ್ಲಿ ಇಂದು ಹೆಚ್ಚು ತೊಡಗಿಕೊಳ್ಳುವಿರಿ. ಉದ್ಯೋಗದಲ್ಲಿ ಸಿಗುವ ಪದೋನ್ನತಿಯು ಸಿಗುವುದು ತಪ್ಪಲಿದೆ. ಆಪ್ತರ ಜೊತೆ ಈ ಕುರಿತು ಸಮಾಲೋಚನೆ ಮಾಡುವಿರಿ. ಸಕಾರಾತ್ಮಕವಾದ ಚಿಂತನೆ ಇರಲಿ. ಹಿರಿಯರಿಗೆ ನೋವುಂಟು ಮಾಡದಂತೆ ಮಾತನಾಡಿ. ಮನಸ್ಸು ಭಾರವಾಗಬಹುದು. ಸಂಜೆ ವಾಯುವಿಹಾರ ಮಾಡಿ ಬನ್ನಿ.

ಮಕರ: ಸಣ್ಣ ಸಣ್ಣ ವಿಚಾರಕ್ಕೂ ಕಲಹ ಮಾಡುವುದನ್ನು ಕಡಿಮೆ ಮಾಡಿ. ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡಿಕೊಳ್ಳುವರು. ಇಂದು ಹಣದ ಅವಶ್ಯಕತೆಯಿದ್ದು ಸಹೋದರನನ್ನು ಕೇಳುವಿರಿ. ನೂತನ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುವಿರಿ. ಆಪ್ತರಿಂದ ಹಣದ ವಿಚಾರದಲ್ಲಿ ಮೋಸ ಹೋಗುವಿರಿ. ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳು ಇರಲಿದ್ದಾರೆ. ಅವರ ಜೊತ ಸಮಯವನ್ನು ಕಳೆಯಲು ಬಯಸುವಿರಿ. ದೀಪದ ಬುಡ ಕತ್ತಲು ಎಂದು ಗೊತ್ತಿದ್ದೂ ನಿಮ್ಮನ್ನು ನಿಮ್ಮವರು ಗೌರವಿಸಬೇಕು ಎನ್ನುವುದು ಮೂರ್ಖತನವಾದೀತು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು.

ಕುಂಭ: ನಿಮಗೆ ಕೆಲಸಗಳು ಒಂದಾದಮೇಲೆ‌‌ ಒಂದರಂತೆ ಬರಲಿದೆ. ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಹೋಗುವಿರಿ. ತಂದೆಯಿಂದ ಬರಬಹುದಾದ ಧನವು ವಿಳಂಬವಾಗಲಿದೆ. ನಿಮ್ಮ ವಿವಾಹವನ್ನು ಮಾಡಿಸಬೇಕೆಂಬ ಪ್ರಯತ್ನವು ವ್ಯರ್ಥವಾದೀತು. ರಾಜಕಾರಿಣಿಗಳಿಗೆ ಒಳ್ಳೆಯ ಬೆಂಬಲ ಸಿಗಲಿದೆ‌. ಮೂರನೆಯ ವ್ಯಕ್ತಿಯ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ ಎಂಬ ಆತಂಕ ಇರಲಿದೆ. ಧನಲಾಭವಾಗುವುದೆಂದು ಕೆಟ್ಟ ಕಾರ್ಯದಲ್ಲಿ ಮಗ್ನರಾಗುವಿರಿ. ಎಷ್ಟೇ ಅನುಕೂಲವಿದ್ದರೂ ಪ್ರತಿಕೂಲ ಸನ್ನಿವೇಶಗಳನ್ನು ಚಿಂತಿಸುವಿರಿ.

ಮೀನ: ಅಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ಇದರಿಂದ ನಿಮ್ಮ ಕೆಳಗಿನವರು ಸಿಟ್ಟಗೊಂಡಾರು.‌ ನಿಮ್ಮ ಕೆಲಸದ ಮೇಲೆ ಇದರ ಪರಿಣಾಮವಿರಲಿದೆ. ವಿದೇಶಕ್ಕೆ ಹೋಗಲು ಇಚ್ಛಿಸಿದರೆ ನಿಮಗೆ ಅವಕಾಶವಿದೆ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಡಿ. ಸರಿಯಾಗಿ ಸಮಯವನ್ನು ಬಳಸಿ. ಕಷ್ಟದಿಂದ ಮುಕ್ತಿ ಸಿಕ್ಕಿತೆಂಬ ಸಂತೋಷದಲ್ಲಿರುವಾಗ ನಿಮಗೆ ಅನಾರೋಗ್ಯ ಉಂಟಾಗಲಿದೆ. ದೂರಪ್ರಯಾಣವನ್ನು ನಿಷೇಧಿಸಿ ಅಥವಾ ಮುಂದೂಡಿ. ಮಕ್ಕಳ ಜೊತೆ ಇರಲು ನಿಮಗೆ ಇಂದು ಅಸಾಧ್ಯವಾದೀತು. ಒಳ್ಳೆಯ ಕಾಲದ ನಿರೀಕ್ಷೆಯಲ್ಲಿ ಇರುವಿರಿ.

-ಲೋಹಿತಶರ್ಮಾ ಇಡುವಾಣಿ