AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ರಾಶಿಚಕ್ರ ಚಿಹ್ನೆಯ ಆಧಾರದ ಮೇಲೆ ಮದುವೆ ಹೊಂದಾಣಿಕೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ

ನಿಮ್ಮ ರಾಶಿ ಆಧಾರದ ಮೇಲೆ ಮದುವೆ ಹೊಂದಾಣಿಕೆ ತಿಳಿದುಕೊಳ್ಳಬೇಕಾ? ನಿಮ್ಮ ರಾಶಿಯ ಚಿಹ್ನೆ ಯಾವ ರಾಶಿಯೊಂದಿಗೆ ಹೊಂದಿಕೆ ಯಾಗುತ್ತೆ ತಿಳಿಯಬೇಕಾ? ಇಲ್ಲಿದೆ ಮಾಹಿತಿ.

ನಿಮ್ಮ ರಾಶಿಚಕ್ರ ಚಿಹ್ನೆಯ ಆಧಾರದ ಮೇಲೆ ಮದುವೆ ಹೊಂದಾಣಿಕೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk|

Updated on:May 01, 2023 | 1:55 PM

Share

ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಆದರೆ ನಮಗೆ ಹುಡಿಕಿದ ಕೂಡಲೇ ವರ ಅಥವಾ ವಧು ಹಣೆಯಲ್ಲಿ ಬರೆದವರೇ ಸಿಗುತ್ತಾರೆ ಎನ್ನುವುದು ಕೂಡ ತಪ್ಪು. ಹುಡುಕಾಟ ಸಾಮಾನ್ಯ. ಎಷ್ಟೋ ವರುಷಗಳು ಕಾದವರು ಇದ್ದಾರೆ. ಹುಡುಕಲು ಶುರು ಮಡಿದ ಕೂಡಲೇ ಸಿಕ್ಕವರು ಇದ್ದಾರೆ. ಹಾಗಾಗಿ ಪ್ರಯತ್ನ ಮುಖ್ಯ ಅದರ ಜೊತೆ ಹುಡುಕಾಟಕ್ಕೆ ಮೊದಲು ನಮ್ಮ ರಾಶಿ (Zodiac Sign) ಅಥವಾ ರಾಶಿ ಚಕ್ರದ ಆಧಾರದ ನಡುವಿನ ಹೊಂದಾಣಿಕೆ ಮಾಡಬಹುದು.

ಯಾವ ರಾಶಿ ಚಿಹ್ನೆಗಳು ಒಟ್ಟಿಗೆ ಚೆನ್ನಾಗಿ ಹೊಂದಿಕೆಯಾಗುತ್ತವೆ?

ವಿರುದ್ಧ ರಾಶಿಚಕ್ರ ಚಿಹ್ನೆಗಳನ್ನು ಆತ್ಮಸಂಗಾತಿಗಳು ಎಂದು ಹೇಳಲಾಗುತ್ತದೆ ಏಕೆಂದರೆ ಅವು ಪರಸ್ಪರ ಸಂಬಂಧದಲ್ಲಿ ಸಮತೋಲನವನ್ನು ತರುತ್ತವೆ. ಉದಾಹರಣೆಗೆ, ಸಂವೇದನಾಶೀಲ ಭೂಮಿಯ ಚಿಹ್ನೆಯು ಹೆಚ್ಚು ಹಗುರವಾದ ವಾಯು ಚಿಹ್ನೆಯಯನ್ನು ಬಯಸಬಹುದು, ಇದು ಜೀವನವನ್ನು ಹೆಚ್ಚು ಸಂತೃಪ್ತಿದಾಯಕವಾಗಿಸುತ್ತದೆ. ಪರಸ್ಪರ ಹೊಂದಿಕೊಳ್ಳಲು ದಂಪತಿಗಳು ಸಮಾನ ಮನಸ್ಕರಾಗಿರಬೇಕಾಗಿಲ್ಲ ಎಂಬುದಕ್ಕೆ ವಿರುದ್ಧ ರಾಶಿಚಕ್ರದ ಸಂಬಂಧಗಳು ಪುರಾವೆಗಳಾಗಿವೆ. ಅಲ್ಲದೆ ಯಾವಾಗಲೂ ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳಬೇಕಾಗಿಲ್ಲ.

ವೈವಾಹಿಕ ಜೀವನದಲ್ಲಿ ಅತೀ ಹೆಚ್ಚು ಆನಂದವನ್ನು ತರುವ ವಿರುದ್ಧ ರಾಶಿಗಳು:

ತುಲಾ – ಮೇಷ ರಾಶಿ

ವೃಷಭ – ವೃಶ್ಚಿಕ ರಾಶಿ

ಮಿಥುನ – ಧನು ರಾಶಿ

ಕರ್ಕಾಟಕ – ಮಕರ ರಾಶಿ

ಸಿಂಹ – ಕುಂಭ ರಾಶಿ

ಮೀನ – ಕನ್ಯಾರಾಶಿ

ಹೇಳುವುದಾದರೆ, ಪ್ರತಿಯೊಂದು ಸಂಬಂಧವು ಅನನ್ಯವೇ. ಆದರೆ ರಾಶಿ, ನಕ್ಷತ್ರ, ಎಲ್ಲವನ್ನು ನೋಡಿ ಅದೊಂದು ಮೆಡಲಿಯನ್ ಹಾರದಂತೆ.

ಇದನ್ನೂ ಓದಿ;

ಕೆಲವು ರಾಶಿಚಕ್ರ ಚಿಹ್ನೆಗಳು ಇತರರಿಗಿಂತ ಹೆಚ್ಚು ಹೊಂದಿಕೊಳ್ಳುತ್ತವೆಯೇ?

ಸಂಬಂಧಗಳು ಜಟಿಲವಾಗಿದ್ದರೂ ಅದ್ಕಕೆ ಪ್ರಯತ್ನದ ಅವಶ್ಯಕೆತೆ ಇದ್ದರೂ, ಒಂದೇ ಅಂಶವನ್ನು ಹೊಂದಿರುವ ರಾಶಿಚಕ್ರದ ದಂಪತಿಗಳು ಪರಸ್ಪರ ಅತ್ಯುತ್ತಮ ಅನ್ಯೋನತೆ ಹೊಂದಲು ಸಾಧ್ಯ. ಏಕೆಂದರೆ ಅವರು ಒಂದೇ ರೀತಿಯ ಗುಣಗಳನ್ನು ಹಂಚಿಕೊಳ್ಳುತ್ತಾರೆ. ವಿಶಿಷ್ಟವಾಗಿ, ರಾಶಿಚಕ್ರ ಜೋಡಿಗಳು ಬೆಂಕಿ ಮತ್ತು ಗಾಳಿಯ ಚಿಹ್ನೆಗಳು, ಅಥವಾ ಭೂಮಿ ಮತ್ತು ನೀರಿನ ಚಿಹ್ನೆಗಳ ಮಿಶ್ರಣದಂತೆ ಹೊಂದಾಣಿಕೆಯಾಗಿರುತ್ತವೆ. ತೊಂದರೆಗಳು ಉದ್ಭವಿಸುವುದಿಲ್ಲ ಎಂದು ಇದರ ಅರ್ಥವಲ್ಲ. ನೀವು ಮತ್ತು ನಿಮ್ಮ ಸಂಗಾತಿ ಜೀವನದ ಬಗ್ಗೆ ಒಂದೇ ರೀತಿಯ ದೃಷ್ಟಿಕೋನವನ್ನು ಹಂಚಿಕೊಳ್ಳುವುದರಿಂದ ನಿಮ್ಮ ಚಿಂತೆಗಳನ್ನು ಒಟ್ಟಿಗೆ ನಿಭಾಯಿಸುವುದು ನಿಮಗೆ ಸುರಕ್ಷಿತವಾಗಿರುತ್ತದೆ.

ಅಗ್ನಿ ರಾಶಿ: ಮೇಷ, ಸಿಂಹ, ಧನು ರಾಶಿ

ವಾಯು ರಾಶಿ: ಮಿಥುನ, ತುಲಾ, ಕುಂಭ

ಭೂ ರಾಶಿಗಳು: ವೃಷಭ, ಕನ್ಯಾ, ಮಕರ

ನೀರಿನ ರಾಶಿ: ಕರ್ಕ, ವೃಶ್ಚಿಕ, ಮೀನ ರಾಶಿ

ರಾಶಿಚಕ್ರ ಹೊಂದಾಣಿಕೆ

ಹೊಂದಾಣಿಕೆ ಎಂದರೆ ಸಂಘರ್ಷದ ಅನುಪಸ್ಥಿತಿ ಎಂದರ್ಥವಲ್ಲ, ಅದು ಕಡಿಮೆ ಅಥವಾ ಅದನ್ನು ನಿವಾರಿಸುವ ಸರಳ ಸೂತ್ರ ತಿಳಿದಿದೆ ಎಂಬುದನ್ನು ಅರ್ಥೈಸಬಹುದು. ಮದುವೆಯಲ್ಲಿ ಮುಖ್ಯವಾದುದು ಏನೆಂದರೆ ನಿಮ್ಮಿಬ್ಬರಿಗೂ ಏನು ಬೇಕು ಮತ್ತು ಏನನ್ನು ನೀಡುತ್ತೀರಿ ಎಂಬುದು ನಿಮಗೆ ತಿಳಿದಿರಬೇಕು. (ನೀವಿಬ್ಬರೂ ಅನುಭವದಿಂದ ಮತ್ತು ನೀವು ಹುಟ್ಟಿದಾಗ ಹೊಂದಿರುವ ಗುಣಲಕ್ಷಣಗಳು). ನೀವು ಹೇಗೆ ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ ಎಂಬುದನ್ನು ನೀವಿಬ್ಬರೂ ಅರ್ಥಮಾಡಿಕೊಳ್ಳಬೇಕು ಹಾಗೂ ಪ್ರತಿಯೊಬ್ಬರೂ ಒಟ್ಟಿಗೆ ಎಷ್ಟು ಸಮಯವನ್ನು ಕಳೆಯಲು ನಿರೀಕ್ಷಿಸುತ್ತೀರಿ ಎಂಬುದನ್ನು ಗೌರವಿಸಬೇಕು.

Published On - 7:15 am, Wed, 26 April 23

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ