Nithya Bhavishya: ಈ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಉಂಟಾಗಲಿದೆ

|

Updated on: Mar 28, 2023 | 5:00 AM

ಇಂದಿನ (2023 ಮಾರ್ಚ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಈ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಉಂಟಾಗಲಿದೆ
ಪ್ರಾತಿನಿಧಿಕ ಚಿತ್ರ
Image Credit source: bhaskar.com
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 03 :40 ರಿಂದ 11:15ರವರೆಗೆ, ಯಮಘಂಡ ಕಾಲ 09:35ರಿಂದ 11:06ರ ವರೆಗೆ, ಗುಳಿಕ ಕಾಲ 12:38 ರಿಂದ 02:09ರ ವರೆಗೆ.

ಮೇಷ: ಮಕ್ಕಳ ಜೀವನವನ್ನು ಕಂಡು ಸಂಕಟಪಡಲಿದ್ದೀರಿ.‌ ಅದಕ್ಕಾಗಿ ಏನಾದರೂ ಮಾಡಲೂ ನಿಮಗೆ ಮನಸ್ಸಾಗಲಿದೆ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ನಿರೀಕ್ಷಿತ ಮಟ್ಟವನ್ನು ಇಂದು ನಿಮ್ಮ‌ಕೆಲಸವು ತಲುಪದು. ಹಿರಿಯರನ್ನು ಗೌರವಿಸುವುದು ನಿಮ್ಮ ಸ್ವಭಾವವಾಗಿರುತ್ತದೆ. ಹತ್ತಿರದ ಬಂಧುಗಳ ಅಕಸ್ಮಾತ್ ಅಗಲುವಿಕೆ ನಿಮಗೆ ಆಶ್ಚರ್ಯವನ್ನು ತಂದೀತು. ಇಂದು ನಿಮ್ಮ ಊರಿನ ಗ್ರಾಮದೇವರಿಗೆ ಪೂಜೆ ಸಲ್ಲಿಸಿರಿ.

ವೃಷಭ: ಸಹೋದ್ಯೋಗಿಗಳು ನಿಮಗೆ ಸಿಗುವ ಅಧಿಕಾರವನ್ನು ಸಿಗದಂತೆ ಮಾಡಿಲಿದ್ದಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಅನಾಯಾಸಕರವಾದ ಪ್ರಯಾಣವನ್ನು ಮಾಡಲಿದ್ದೀರಿ. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಿ ಇರಲಿವೆ. ಸಂಗಾತಿಯ ಬಗ್ಗೆ ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವಿರಿ. ಆಪ್ತರೊಂದಿಗೆ ಅದನ್ನು ಹಂಚಿಕೊಂಡು ಸಮಾಧಾನಪಡುವಿರಿ. ಆರ್ಥಿಕತೆಯನ್ನು ಸುಧಾರಿಸಲು ಕ್ರಮವನ್ನು ಕೈಗೊಳ್ಳುವಿರಿ. ಲಕ್ಷ್ಮೀನಾರಾಯಣನ ಕೃಪಾಕಟಾಕ್ಷವನ್ನು ಗಳಿಸಿಕೊಳ್ಳುವುದು ಉತ್ತಮ.

ಮಿಥುನ: ಸರಿಯಾಗಿ ನಿದ್ರೆ ಇಲ್ಲದೇ ಮನಸ್ಸು ಕ್ಷೀಣಿಸುವುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ‌. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಇಲ್ಲ ಸಲ್ಲದ ಆಲೋಚನೆಗಳನ್ನು ಬಿಡಿ. ನಿಮ್ಮ ಕಾರ್ಯಕ್ಕೆ ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಶಿಸ್ತನ್ನು ಕಾಪಾಡಿಕೊಳ್ಳಲು ಬಯಸುವಿರಿ. ಸುಬ್ರಹ್ಮಣ್ಯನ ಸ್ತೋತ್ರವು ನಿಮಗೆ ನೆಮ್ಮದಿಯನ್ನು ಕೊಡಲಿದೆ.

ಕಟಕ: ಮಕ್ಕಳ ಜೊತೆ ಅಧಿಕವಾದ ಸಮಯವನ್ನು ಕಳೆಯಬೇಕು ಎಂದು ಅನಿಸದರೂ ಅದು ಸಾಧ್ಯವಾಗದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಕಛೇರಿಯ ಕೆಲಸಗಳು ಒಂದು ಹಂತ ಮುಗಿದರೂ ಮತ್ತೊಂದಿಷ್ಟು ನಿಮಗೆ ಬರಲಿದೆ. ಹಿರಿಯರನ್ನು ಪ್ರೀತಿಯಿಂದ ಗೌರವಿಸಿ‌. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಭವಿಷ್ಯದ ಕುರಿತು ಯೋಚನೆಯನ್ನು ಮಾಡಲಿದ್ದೀರಿ.

ಸಿಂಹ: ಅಪರಿಚಿತ ಕರೆಗಳು ನಿಮ್ಮನ್ನು ಕೆಲಸಕ್ಕೆಂದು ಕರೆಯಲಿವೆ. ಸಂಪೂರ್ಣ ಮಾಹಿತಿಯ ಜೊತೆ ಕೆಲಸಕ್ಕೆ ಮುಂದುವರಿಯಿರಿ. ವ್ಯಕ್ತಿಗಳ ನಿಂದನೆಯನ್ನು ಮಾಡುವ ಕೆಲಸಕ್ಕೆ ವಿರಾಮವನ್ನು ಹೇಳಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟಿಕೊಂಡಿದ್ದೀರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಮ್ಮ ಬಂಧುಗಳಿಗೆ ನಿಮ್ಮ ಬಗ್ಗೆ ಕೆಲವು ವಿಚಾರಗಳು ತಿಳಿಯಲಿವೆ. ಅವಕಾಶಗಳು ನಿಮಗೆ ಸಿಗದೇ ಕೊರಗುವ ಸಾಧ್ಯತೆ ಇದೆ.

ಕನ್ಯಾ: ಗೃಹನಿರ್ಮಾಣಕ್ಕೆ ಮನೆಯವರ ಜೊತೆ ಚರ್ಚೆಗಳನ್ನು ಮಾಡಲಿದ್ದೀರಿ‌. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ನಿಮಗೆ ಇಂದು ಆದರ್ಶವ್ಯಕ್ತಿತ್ವವು ಸಿಗಲಿದ್ದು ಅವರನ್ನು ಅನುಸರಿಸುವ ಸಾಧ್ಯತೆ ಇದೆ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ಆಹಾರದ ವ್ಯತ್ಯಾಸದಿಂದ ರೋಗಗಳು ಬರಬಹುದು. ಸಮಯವನ್ನು ಕಳೆಯಲು ಬಹಳ ಪ್ರಯಾಸಪಡಲಿದ್ದೀರಿ. ಧಾರ್ಮಿಕವಾದ ಕೆಲಸಗಳನ್ನು ಮಾಡುವ ಹಂಬಲವಿರಲಿದೆ. ಶ್ರೀರಾಮನ ಮಂದಿರಕ್ಕೆ ಹೋಗುವ ಅವಕಾಶವು ತಾನಾಗಿಯೇ ಸಿಗಲಿದೆ. ಹೋಗಿಬನ್ನಿ.

ತುಲಾ: ಸ್ನೇಹಿತರ ಜೊತೆಗಿನ ಅತಿಯಾದ ಸಲುಗೆ ದ್ವೇಷಕ್ಕೆ ಕಾರಣವಾಗಬಹುದಿ. ನಿಮ್ಮ ದಾಂಪತ್ಯದ‌ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು ಅದಕ್ಕಾಗಿ ನಿಮ್ಮ ಹಣವನ್ನು ಖರ್ಚು ಮಾಡಬೇಕಾಗಿ ಬರಬಹುದು. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನೀವಿಂದು ಒಬ್ಬೊಂಟಿಯಾಗಿ ರಮಣೀಯ ಸ್ಥಳಕ್ಕೆ ಹೋಗಲಿದ್ದೀರಿ. ನೆಮ್ಮದಿಯು ನಿಮಗೆ ಆಗಲಿದೆ. ನಿಮ್ಮ ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡಬೇಕಿದೆ. ಮೋಸ ಹೋಗುವ ಸಾಧ್ಯತೆಯು ಇರಲಿದೆ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಗಣಪತಿಗೆ ಪ್ರಿಯವಾದ ಮೋದಕವನ್ನು ನೈವೇದ್ಯ ಮಾಡಿ.

ವೃಶ್ಚಿಕ: ಯಾವುದಾರೂ ಪ್ರಾಣಿಯಿಂದಲೋ ಕೀಟದಿಂದಲೋ ಕಚ್ಚಿಕೊಳ್ಳಲಿದ್ದೀರಿ. ಅದು ಊತವಾಗಿ ಅಂಗವನ್ನು ವಿಕಾರಗೊಳಿಸಲಿದೆ. ಇನ್ನೊಬ್ಬರಿಂದ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ತಮ್ಮ ನಿರ್ಧಾರವನ್ನು ಗಟ್ಟಿ ಮಾಡಳ್ಳಬೇಕಿದೆ. ಅಪರಿಚಿತರ ವಾಹನವನ್ನು ಹತ್ತಬೇಡಿ. ವಿನಾಕಾರಣ ಸಂತೋಷವಾಗಿ ಇರುವಿರಿ. ಕಛೇರಿಯ ಕೆಲಸವು ನಿಧಾನವಾಗಿ ಮೇಲಧಿಕಾರಿಗಳಿಂದ ಬೈಯಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಕೆಲಸದಲ್ಲಿ ನಿರಾಸಕ್ತಿಯೂ ಆಗಲಿದೆ.

ಧನು: ಇಂದು ದೂರದ ಪ್ರಯಾಣವನ್ನು ಮಾಡಲು ಇಚ್ಛಿಸಿ ಸ್ನೇಹತರ ಜೊತೆ ಹೊರಡಲಿದ್ದೀರಿ. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಅಪರಿಚಿತ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಕಲಹವಾಗಲಿದೆ. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಒಂದಿಷ್ಟು ಗೊಂದಲಗಳು ಇರಬಹುದು. ಹಿರಿಯರು ನಿಮಗೆ ಜೀವನದ ಬಗ್ಗೆ ಉಪದೇಶವನ್ನು ಮಾಡಲಿದ್ದಾರೆ. ಇದು ನಿಮಗೆ ಉಪಯೋಗವಾಗಲಿದೆ.

ಮಕರ: ನಿಮಗೆ ಇಂದು ಉಡುಗೊರೆಯು ಅನಿರೀಕ್ಷಿತವಾಗಿ ಬರಲಿದೆ. ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳುವಿರಿ. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಇರಲಿದೆ. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ನಿಮಗೆ ಆಸುರಕ್ಷತೆಯ ಭಯವು ಉಂಟಾಗಬಹುದು. ಕಛೇರಿಯಲ್ಲಿ ನಿಮ್ಮ ಯೋಜನೆಗಳನ್ನು ಮೆಚ್ಚಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ನೀವು ಸಮಯಕ್ಕೆ ಮಹತ್ತ್ವವನ್ನು ಕೊಡುವುದು ಬಹಳ ಇಷ್ಟದ ಸಂಗತಿಯಾಗಿದೆ. ಶನೈಶ್ಚರನ ಸ್ತೋತ್ರದಿಂದ ನೆಮ್ಮದಿಯು ಸಿಗಲಿದೆ.

ಕುಂಭ: ಏನೂ ಕೆಲಸವಿಲ್ಲದೇ ಸಮಯವನ್ನು ಕಳೆಯುವುದು ನಿಮಗೆ ಸಾಹಸದ ಕೆಲಸವಾಗಿರಲಿದೆ. ಆದಕಾರಣ ಹತ್ತಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ನಿಮಗೆ ಸಮಯವನ್ನು ಕೊಟ್ಟವರನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ಭೋಜನಪ್ರಿಯರಿಗೆ ಒಳ್ಳೆಯ ಭೋಜನ ಸಿಗಲಿದೆ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ತಂತ್ರಜ್ಞರು ಉತ್ತಮ‌ವಾದ ಕೆಲಸವನ್ನು ಹುಡುಕುವ ಪ್ರಯತ್ನ ಮಾಡಲಿದ್ದಾರೆ. ನಿಧಾನವಾಗಿ ಸಿಗಲಿದೆ. ತಾಳ್ಮೆಯನ್ನು ಇಟ್ಟುಕೊಳ್ಳಿ.

ಮೀನ: ನಿಮ್ಮ ಸ್ನೇಹಿತರನ್ನು ನಂಬಿ ಯಾರಿಗೋ ಹಣವನ್ನು ಕೊಡುವಿರಿ. ಬಟ್ಟೆಯ ವ್ಯಾಪಾರಿಗಳು ಲಾಭವನ್ನು ಗಳಿಸಲಿದ್ದಾರೆ. ವಿವಾಹಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ವ್ಯಾಪಾರದಲ್ಲಿ ಉಂಟಾಗುವ ಕ್ಲೇಶಗಳನ್ನು ಕಂಡು ವ್ಯಾಪಾರವನ್ನು ಬಿಡುವ ಯೋಚನೆ ಮಾಡುವಿರಿ. ಆದಾಯ ಮೂಲವಿಲ್ಲದೇ ಮತ್ತದೆರಲ್ಲಿಯೇ ಮುಂದುವರಿಯುವ ಸ್ಥಿತಿಯೂ ಬರಲಿದೆ. ಹನುಮಾನ್ ಚಾಲೀಸ್ ಪಠಣವನ್ನು ಪ್ರಾತಃಕಾಲದಲ್ಲಿ ಶುದ್ಧಮನಸ್ಸಿನಿಂದ, ಸ್ನಾನವನ್ನು‌ ಮಾಡಿ.

ಲೋಹಿತಶರ್ಮಾ ಇಡುವಾಣಿ