Horoscope Today: ಈ ರಾಶಿಯವರು ಮುನಿಸುಗೊಂಡ ತಮ್ಮ ಪತ್ನಿಯೊಂದಿಗೆ ಮರುಮಾತನಾಡದೆ ಇರುವುದು ಉತ್ತಮ

|

Updated on: Apr 10, 2023 | 11:02 PM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಈ ರಾಶಿಯವರು ಮುನಿಸುಗೊಂಡ ತಮ್ಮ ಪತ್ನಿಯೊಂದಿಗೆ ಮರುಮಾತನಾಡದೆ ಇರುವುದು ಉತ್ತಮ
ಇಂದಿನ ರಾಶಿ ಭವಿಷ್ಯ
Image Credit source: Pixabay
Follow us on

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್​ 010) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವ್ಯತಿಪಾತ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:56 ರಿಂದ 09:29ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:01 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:06 ರಿಂದ 03:39ರ ವರೆಗೆ.

ಸಿಂಹ: ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲವಿರಲಿದೆ‌. ಆರೋಗ್ಯವು ಹದ ತಪ್ಪಿ ಬಹಳ ಹಿಂಸೆಯನ್ನು ಅನುಭವಿಸುವಿರಿ. ಆಪ್ತರಿಂದ ನೀವು ದೂರಾಗುವಿರಿ. ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಅತಿಯಾದ ಹಠದ ಸ್ವಭಾವದಿಂದ ನೀವು ಒಂಟಿಯಾಗುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಉನ್ನತ ಪದವಿಗೆ ಅವಕಾಶಗಳು ಸಿಗಲಿದೆ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾದೀತು. ನೀವೇ ನಿಮ್ಮ ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ಮನೋಜಾಡ್ಯವು ಹೆಚ್ಚಿರಲಿದೆ. ಗೋವುಗಳಿಗೆ ಬೇಕಾದ ಆಹಾರವನ್ನು ನೀಡಿ.

ಕನ್ಯಾ: ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಔಷಧೋಪಚಾರಗಳು ನಿಮ್ಮ ಆರೋಗ್ಯವನ್ನು ಕಾಪಾಡದೇ ದೇವರ ಮೊರೆ ಹೋಗುವಿರಿ. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಕಾಳಜಿಗೆ ಇಂದು ಹೆಚ್ಚು ಸಮಯವನ್ನು ಅದಕ್ಕಾಗಿ ಮೀಸಲಿಡುವಿರಿ. ಕಾಳಜಿ ಮಾಡಿದಷ್ಟೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯನ್ನು ಸ್ವತಂತ್ರವಾಗಿ ಬಿಡಿ. ಅವರ ಭಾವನೆಗಳಿಗೆ ನೋವನ್ನು ತರಲಬೇಡಿ. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ಅದನ್ನು ಆಲೋಚಿಸಿ ಮುಂದುವರಿಯಿರಿ. ದೇವಾಲಯಕ್ಕೆ ಹೋಗಿ ಸ್ವಲ್ಪ ಸಕಾರಾತ್ಮಕ ಅಂಶಗಳನ್ನು ಪಡೆದುಕೊಳ್ಳಿ. ಔದಂಬರವೃಕ್ಷಕ್ಕೆ ನೀರೆದು ಪ್ರದಕ್ಷಿಣೆ ಮಾಡಿ.

ತುಲಾ: ವಾಹನದಿಂದ ಭಯಗೊಂಡ ನೀವು ಸಂಚಾರವನ್ನು ನಿಲ್ಲಿಸುವಿರಿ. ಸ್ನೇಹಿತರ ಜೊತೆ ಪುಣ್ಯಕ್ಷೇತ್ರಗಳಿಗೆ ಹೋಗಬಹುದು. ಮನೆಯಲ್ಲಿ ಗೊತ್ತಿಲ್ಲ ಕೆಲಸವನ್ನು ಮಾಡಲು ಹೋಗಿ ಅಪಮಾನವಾಗಲಿದೆ. ಸಂಗಾತಿಯ ಮುನಿಸನ್ನು ತಣ್ಣಗಾಗಿಸಿ. ಕಾರಣವನ್ನು ತಿಳಿದು ಸಮಾಧಾನ ಮಾಡಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮನೆಯ ನೆನಪಾಗಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಮನಸ್ಸನ್ನು ಇಡಬೇಕು. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು. ಆಹಾರವನ್ನು ಸರಿಯಾಗಿ ಸ್ವೀಕರಿಸಿ ಅದನ್ನು ಸರಿಮಾಡಿಕೊಳ್ಳಿ. ಪಿರ್ತಾರ್ಜಿತ ಆಸ್ತಿಯ ವಿಷಯದಲ್ಲಿ ಗೊಂದಲವಿಬಹುದು.

ವೃಶ್ಚಿಕ: ನೀವು ಇಷ್ಟ ಪಟ್ಟಿದ್ದು ಆಗಿಲ್ಲವೆಂಬ ಆಲೋಚನೆ ಬಲವಾಗಿರುವುದು. ಕಛೇರಿಯಲ್ಲಿ ಇಂದು ನಿಮ್ಮ ಜವಾಬ್ದಾರಿಗಳನ್ನು ಪೂರೈಸಿಕೊಂಡು ನಿಶ್ಚಿಂತರಾಗಿರುವಿರಿ. ಬಹಳ ದಿನದ ಭೂಮಿಯ ವ್ಯವಹಾರದ ಕಲಹದಿಂದ ನಿಮಗೆ ಜಯವಾಗುವ ಸಾಧ್ಯತೆ ಇದೆ. ನಿಮ್ಮ ಮಕ್ಕಳ ಮೇಲೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಸ್ವಲ್ಪ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಉದ್ಯೋಗದ ಸ್ಥಾನವು ಖುಷಿ ಕೊಡಲಿದೆ. ಪ್ರವಾಸ ಹೋಗುವ ಮನಸ್ಸಾಗಲಿದೆ.

-ಲೋಹಿತಶರ್ಮಾ ಇಡುವಾಣಿ

Published On - 6:00 am, Mon, 10 April 23