Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಇಂದು ದುಷ್ಟರ ಸಹವಾಸ ಆಗಬಹುದು

|

Updated on: May 21, 2023 | 6:01 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಇಂದು ದುಷ್ಟರ ಸಹವಾಸ ಆಗಬಹುದು
ಮೇ 21ರ ರಾಶಿ ಭವಿಷ್ಯ
Image Credit source: Getty Images
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ಗಂಟೆ 06:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ.

ಸಿಂಹ: ಅಸಾಧ್ಯವನ್ನು ಸಾಧಿಸುವ ಛಲವನ್ನು ಬಿಟ್ಟು ಸರಿಯಾದುದರ ಕಡೆಗೆ ಹೋಗುವುದು ಒಳ್ಳೆಯದು. ಸಮಯ ಹಾಗೂ ಹಣ ಎರಡನ್ನೂ ಜೋಪಾನ‌ ಮಾಡಿಕೊಳ್ಳಿ. ಬೆನ್ನು ನೋವಿನಿಂದಾಗಿ ಸಂಕಟ‌ಪಡಬೇಕಾದೀತು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ದೂರದ ಪ್ರದೇಶಕ್ಕೆ ಕಳುಹಿಸಿಕೊಡುವಿರಿ. ಮನಸ್ಸು ಬಹಳ ಜಾಡ್ಯವಾಗಿದ್ದು ಸರಿಯಾದ ಕೆಲಸವನ್ನು ಮನಸ್ಸಿಗೆ ಕೊಡಿ‌. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು‌. ಸಮಯೋಚಿತ ಉತ್ತರಗಳು ನಿಮಗೆ ಧನಾತ್ಮಕ ಅಂಕಗಳನ್ನು ತಂದುಕೊಡುವುದು. ಎಲ್ಲರದ ವ್ಯಕ್ತಿತ್ವವಾದರೂ ಸಾಮನ್ಯರಂತೆ ವರ್ತಿಸುವಿರಿ.

ಕನ್ಯಾ: ನಿಮ್ಮ ಉತ್ತಮ‌ವಾದ ಹವ್ಯಾಸಕ್ಕೆ ಗೌರವ ಸಿಗಬಹುದು. ಅನವರತ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯು ಇಂದು ಸಿಗಲಿದೆ. ನೂತನ ಗೃಹ ನಿರ್ಮಾಣದ ಬಗ್ಗೆ ಯೋಜನೆಯನ್ನು ಕುಟುಂಬದ ಜೊತೆ ಕುಳಿತು ರೂಪಿಸುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತುಕತೆಗಳು ನಡೆಯಬಹುದು. ಸುಂದರವಾದ ಸಂಬಂಧಗಳು ಅಪನಂಬಿಕೆಯಿಂದ ಹಾಳಾಗುವ ಸಾಧ್ಯತೆ ಇದೆ. ಸಮಯವನ್ನು ಬಹಳ ಗೌರವಿಸುವಿರಿ. ಸಮಯಕ್ಕೆ ಸರಿಯಾಗಿ ಎಲ್ಲವೂ ನಡೆಯಬೇಕು ಎಂಬುದು ನಿಮ್ಮ ದೃಢವಾದ ಸಂಕಲ್ಪ. ಯೋಗ್ಯವಾದ ಸ್ಥಾನಮಾನಗಳನ್ನು ಪಡೆಯಲು ಹಾತೊರೆಯುವಿರಿ. ನಿಮ್ಮ ಸ್ವಾತಂತ್ರ್ಯದ ಹರಣವಾದಂತೆ ನಿಮಗೆ ಅನ್ನಿಸಬಹುದು.

ತುಲಾ: ಸಹನೆಯನ್ನೇ ನಿಮ್ಮ ಆಯುಧವನ್ನಾಗಿ ಮಾಡಿಕೊಳ್ಳಿ. ದ್ವೇಷವನ್ನು ಇಟ್ಟುಕೊಂಡು ನಿಮ್ಮ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿಕೊಳ್ಳುವುದು ಬೇಡ. ವೃತ್ತಿಯನ್ನು ಆನಂದಿಸಿ, ಖುಷಿಯಿಂದ ಕೆಲಸಮಾಡಿ. ಕೆಲಸವೂ ಚೆನ್ನಾಗಿ ಆಗುವುದು, ಉತ್ಸಾಹವೂ ಇದ್ದೀತು. ಸಂಗಾತಿಯ ಕಾರಣದಿಂದ ಮನೆಯಲ್ಲಿ ನಿಮ್ಮ ಸಂತೋಷವು ಇಮ್ಮಡಿಸಬಹುದು. ದುಷ್ಟರ ಸಹವಾಸವು ಆಗಬಹುದು.‌ ಆದಷ್ಟು ಅವರಿಂದ ದೂರವಿರುವುದು ಒಳ್ಳೆಯದು. ಇಲ್ಲವಾದರೆ ಅಪವಾದಗಳೂ ಬರಬಹುದು. ಹೊಸ ವಸ್ತ್ರಗಳನ್ನು ಧರಿಸುವ ಮನಸ್ಸಾಗಲಿದೆ. ನಿಮ್ಮ ವರ್ತನೆಗಳನ್ನು ನಿಮ್ಮ ಸುತ್ತಲಿನವರು ಗಮನಿಸುವರು.

ವೃಶ್ಚಿಕ: ಅಪರೂಪದ ಆಹಾರವನ್ನು ಅತಿಯಾಗಿ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಶೋಧನೆಯನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹಗಳು ಸಿಗಬಹುದು. ಇಷ್ಟದವರು ಸಿಕ್ಕಾಗ ನಿಮಗೆ ಮಾತನಾಡಲು ಸಂತೋಷವನ್ನು ಹೇಳಿ ಕೊಳ್ಳಲು ಕಷ್ಟಪಡುವಿರಿ.‌ ದೂರದ ಊರಿಗೆ ನಿಮ್ಮ ವಾಹನದಲ್ಲಿ ಸವಾರಿ ಮಾಡುವುದು ಬೇಡ. ಅಪರಿಚಿತರ ಮಾತುಗಳು ನಮಗೆ ಇಷ್ಟವಾಗಿ ಅವರ ಗೆಳೆತನ ಮಾಡಬಹುದು. ಸಮಸ್ಯೆಗಳನ್ನು ಬೇಗ ಪರಿಹರಿಸಿಕೊಳ್ಳಲು ಆಲೋಚಿಸಿ. ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಸೊಂಟ ಭಾಗದಲ್ಲಿ ನೋವುಗಳು ಕಾಣಿಕೊಂಡೀತು.

-ಲೋಹಿತಶರ್ಮಾ ಇಡವಾಣಿ