Weekly Horoscope: ವಾರ ಭವಿಷ್ಯ, ಮೇ 21 ರಿಂದ ಮೇ 27ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ

2023ರ ಮೇ ಮೇ 21 ರಿಂದ ಮೇ 27ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರ ಭವಿಷ್ಯ, ಮೇ 21 ರಿಂದ ಮೇ 27ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ಜ್ಯೋತಿಷ್ಯ
Follow us
ವಿವೇಕ ಬಿರಾದಾರ
|

Updated on:May 21, 2023 | 6:16 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಮೇ 21 ರಿಂದ ಮೇ 27ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಮೇಷ: ಇದು ಮೇ ತಿಂಗಳ ನಾಲ್ಕನೇ ವಾರವಾಗಿದ್ದು ಸೂರ್ಯ ಹಾಗೂ ಕು ಇವರಿಬ್ಬರೂ ಸ್ಥಾನವನ್ನು ಬದಲಿಸಿದ್ದಾರೆ. ಸೂರ್ಯ ಉಚ್ಚಸ್ಥಾನದಿಂದ ಮುಂದೆ ಹೋಗಿದ್ದಾನೆ. ಕುಜನು ತನ್ನ ನೀಚಸ್ಥಾನದಲ್ಲಿ ಇದ್ದಾನೆ. ಆದ್ದರಿಂದ ಭೂಮಿಗೆ ಸಂಬಂಧಿಸಿದ ಕಾರ್ಯಗಳು ಸಫಲವಾಗದು. ದ್ವಿತೀಯದ ಸೂರ್ಯನು ತಂದೆಯಿಂದ ಲಾಭವನ್ನು ಮಾಡಿಸಿಕೊಡುವನು. ಗುರು, ಬುಧ, ರಾಹುಗಳು ನಿಮ್ಮ ಗೃಹದಲ್ಲಿ ಇದ್ದು ಮಿಶ್ರ ಫಲವನ್ನು ಕೊಡುವವರಾಗಿದ್ದಾರೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಶುಕ್ರನು ತೃತೀಯದಲ್ಲಿದ್ದು ಸಹೋದರಿಯಿಂದ‌ ನಿಮಗೆ ಅನುಕೂಲವಿದೆ. ಸಹಾಯವನ್ನು ಕೇಳಿದರೆ ಮಾಡಿಕೊಡುವರು.

ವೃಷಭ: ಮೇ ತಿಂಗಳ ನಾಲ್ಕನೇ ವಾರದ ಭವಿಷ್ಯವು ಮಿಶ್ರವಾಗಿದೆ. ನಿಮ್ಮ ಮನೆಯಲ್ಲಿಯೇ ಸೂರ್ಯನಿದ್ದು ಆತ್ಮವುಶ್ವಾಸವು ಚೆನ್ನಾಗಿರಲಿದೆ. ಯಾವದೇ ಕೆಲಸವನ್ನೂ ನಕಾರಾತ್ಮಕ ಮನಸ್ಸಿನಿಂದ ನೋಡದೇ ಮುನ್ನಡೆಯುವಿರಿ. ದ್ವಿತೀಯದಲ್ಲಿ ಶುಕ್ರನಿದ್ದು ನಾನಾ ವಿಧವಾದ ಸಂಪತ್ತನ್ನು ಹೆಚ್ಚಿಸುವನು.‌ ವಿಶೇಷವಾಗಿ ತಾಯಿಯ ಕಡೆಯಿಂದ ಅಥವಾ ಪತ್ನಿಯ ಕಡೆಯಿಂದ ಧನಸಹಾಯವು ಸಿಗಬಹುದು. ತೃತೀಯದಲ್ಲಿ ಕುಜನಿದ್ದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವನು. ಬಂದ ಸವಾಲುಗಳನ್ನು ಎದುರಿಸುವಿರಿ. ದ್ವಾದಶ ಸ್ಥಾನದಲ್ಲಿ ಗುರು, ಬುಧ ಹಾಗೂ ರಾಹುವಿದ್ದು ಸಂಪತ್ತಿನ ವ್ಯಯವಾದೀತು. ಸದ್ವಿನಿಯೋಗ ಮಾಡಿದರೆ ಸುಫಲವು ಸಿಗಲಿದೆ. ವಿಷ್ಣುಸಹಸ್ರನಾಮವನ್ನು ಪಠಿಸಿ.

ಮಿಥುನ: ಈ ತಿಂಗಳ ನಾಲ್ಕನೇ ವಾರದಲ್ಲಿ ಹೆಚ್ಚು ಶುಭಫಲವನ್ನು ಅನುಭವಿಸುವಿರಿ. ನಿಮ್ಮ ರಾಶಿಯಲ್ಲಿ ಶುಕ್ರನಿದ್ದು ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡಲಿದ್ದೀರಿ. ದ್ವಿತೀಯ ಸ್ಥಾನದಲ್ಲಿ ಕುಜನಿದ್ದು ಬರಬೇಕಾದ ಸಂಪತ್ತನ್ನು ಬಹಳ ಬಲವಂತವಾಗಿ ಪಡೆದುಕೊಳ್ಳುವಿರಿ. ಪಂಚಮದಲ್ಲಿರುವ ಕೇತುವು ನಿಮಗೆ ಮಕ್ಕಳಿಂದ‌ ಕಿರಿಕಿರಿ ಕೊಟ್ಟಾನು. ಹಿರಿಯರಿಗೆ ಗೌರವವನ್ನು ಕೊಡಲು ಯೋಚಿಸುವಿರಿ. ಏಕಾದಶದಲ್ಲಿರುವ ಗುರು, ಬುಧ, ರಾಹುಗಳು ಅಧಿಕ ಲಾಭವನ್ನು ಉಂಟುಮಾಡುವರು. ಇಚ್ಛಿಸಿದ ಕೆಲಸಗಳು ಪೂರ್ಣವಾಗುವುದು. ದ್ವಾದಶದಲ್ಲಿ ಸೂರ್ಯನಿದ್ದು ಸರ್ಕಾರದ ಅಧಿಕಾರಿಗಳಿಗೆ ತೊಂದರೆ ಇರಲಿದೆ.

ಕಟಕ: ಈ ಮಾಸದ ನಾಲ್ಕನೇ ವಾರದಲ್ಲಿ ಕುಜನು ನಿಮ್ಮ ಮನೆಯಲ್ಲಿಯೇ ಇರುವನು. ದೇಹಪೀಡಗಳು ಹೆಚ್ಚಾಗಬಹುದು. ಚತುರ್ಥದಲ್ಲಿರುವ ಕೇತುವು ಬಂಧುಗಳಿಂದ‌ ಕಿರಿಕಿರಿಯನ್ನು ನೀಡುವನು. ಅಷ್ಟಮದಲ್ಲಿ ಶನಿಯ ವಾಸನಾಗಿದ್ದು ದೀರ್ಘಾಯುಷ್ಯವನ್ನು ಕೊಡುವನು. ದಶಮದಲ್ಲಿ ಗುರು, ಬುಧ, ರಾಹುವಿನ ಸಂಯೋಗದಿಂದ ವೃತ್ತಿಯು ದೃಢವಾಗಿದ್ದರೂ ಒತ್ತಡಗಳು, ಸಮಯಕ್ಕೆ ಸರಿಯಾಗಿ ಕೆಲಸಗಳು ಮುಗಿಯದೇ ಇರುವುದು, ಕೆಲಸದಲ್ಲಿ ನೆಮ್ಮದಿಯ ಕೊರತೆಗಳನ್ನು ಕಾಣಬಹುದು. ಏಕಾದಶಲ್ಲಿ ಸೂರ್ಯನಿದ್ದು ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳುವುದು ಉತ್ತಮ. ಸರ್ಕಾರಿ ಕೆಲಸವನ್ನು ಇಚ್ಛಿಸುವವರು ಪ್ರಯತ್ನವನ್ನು ಮಾಡಬಹುದು.

ಸಿಂಹ: ಈ ವಾರದಲ್ಲಿ ಕೇತುವು ತೃತೀಯದಲ್ಲಿ ಇದ್ದು ಸಹೋದರರ ವಿಚಾರದಲ್ಲಿ ಸಣ್ಣ ಮನಸ್ತಾಪಗಳು ಆರಂಭವಾಗಬಹುದು. ಸಪ್ತಮದಲ್ಲಿರುವ ಶನಿಯು ನಿಮಗೆ ಪತ್ನಿಯ ವಿಚಾರದಲ್ಲಿ ನಿರಾಸಕ್ತಿಯನ್ನು ತೋರಿಸಿಯಾನು. ನವಮದಲ್ಲಿ ಗುರು, ಬುಧ, ರಾಹುವಿನ ಸ್ಥಿತಿಯು ಇರಲಿದ್ದು ಕೈಗೊಂಡ ಕೆಲಸಗಳು ಮುಂದೆ ಹೋಗದೇ ಇರಬಹುದು.‌ ಎಲ್ಲದಕ್ಕೂ ನಿಮ್ಮ ಪ್ರಯತ್ನವೇ ಇರಬೇಕಾದೀತು. ದಶಮದಲ್ಲಿ ಸೂರ್ಯನಿದ್ದು ಸರಕಾರಿ ಉದ್ಯೋಗಿಗಳಿಗೆ ಯಾವುದೇ ತೊಂದರೆಗಳು ಬಂದರೂ ಅನಾಯಾಸವಾಗಿ ಸ್ಥಗಿತಗೊಳ್ಳುವುದು. ಏಕಾದಶದಲ್ಲಿ ಶುಕ್ರನಿದ್ದು ನಿಮಗೆ ನಾನಾ ಪ್ರಕಾರದಲ್ಲಿ ಹಣವನ್ನು ಕೊಡಿಸುವನು. ದ್ವಾದಶದ ಕುಜನು ನಿಮಗೆ ಬಹಳ ಖರ್ಚನ್ನು ಮಾಡಿಸುವನು.

ಕನ್ಯಾ: ಈ ವಾರ ಮಿಶ್ರವಾರವಾಗಿದ್ದರೂ ಅಶುಭವೇ ಹೆಚ್ಚೆಂದು ತಿಳಿಯುವುದು ಒಳ್ಳೆಯದು. ದ್ವಿತೀಯದ ಕೇತುವಿನಿಂದ ಮಾತಿನಲ್ಲಿ ದೋಷ ಬರಬಹುದು‌.‌ ಕೆಟ್ಟ ಮಾತುಗಳನ್ನು ಆಡಬೇಕಾದೀತು‌. ಷಷ್ಠದ ಶನಿಯು ನಿಮ್ಮ ಆರೋಗ್ಯವನ್ನು ಕೆಡಿಸಿಯಾನು. ಶತ್ರುಗಳನ್ನು ಇಲ್ಲದಂತೆ ಮಾಡಿಯಾನು. ಅಷ್ಟಮದಲ್ಲಿರುವ ಗ್ರಹಗಳು ನಿಮಗೆ ಅನೇಕ ವಿಧವಾದ ತೊಂದರೆಗಳನ್ನು ತರುವರು. ಪ್ರಾಣಾಂತಿಕವಾದ ರೋಗಗಳೂ ಗೊತ್ತಾಗಬಹುದು. ಅಪಮಾನವನ್ನು ಎದುರುನೋಡಬಹುದು. ನಿಮ್ಮ‌ ಮಾತಿಗೆ ಅನಾದರವೂ ಸಿಗಬಹುದು. ಮಕ್ಕಳಿಂದಲೂ ನೋವಾದೀತು. ನಿಮ್ಮ ಕೆಲಸವನ್ನು ಮಾಡಿಕೊಡುವವರೂ ನಿಮ್ಮ ಬಗ್ಗೆ ಆಡಿಕೊಳ್ಳುವರು. ನವಮದಲ್ಲಿರುವ ಸೂರ್ಯನು ಪಿತೃಗಳ ಅನುಗ್ರಹವು ಆಗುವಂತೆ‌ಮಾಡುವನು. ದಶಮದಲ್ಲಿ ಶುಕ್ರನಿದ್ದು ನಿಮಗೆ ಭೋಗವಸ್ತುಗಳ ಮಾರಾಟದಲ್ಲಿ ಮನಸ್ಸು ಇರುವಂತೆ ಮಾಡುವನು. ಏಕಾದಶದ ಕುಜನು ನಿಮಗೆ ಯಂತ್ರೋಪಕರಣದಿಂದ‌ ಲಾಭವನ್ನು ಮಾಡಿಸುವನು. ಗುರುಚರಿತ್ರೆ ಪಾರಾಯಣ ಮಾಡಿ.

ತುಲಾ: ಈ ವಾರವು ನಿಮಗೆ ಶುಭಫಲವಿರಲಿದೆ. ನಿಮ್ಮ ಮನೆಯಲ್ಲಿಯೇ ಕೇತುವಿರುವುದರಿಂದ ದೇಹಾಯಾಸವು ಅಧಿವಾಗಲಿದೆ. ಪಂಚಮದಲ್ಲಿ ಶನಿಯ ಉಪಸ್ಥಿತಿನಿದ್ದು ಅನೇಕ ಪ್ರಯೋಜನವನ್ನು ಮಾಡಿಸುವನು.‌ ತುಲಾ ರಾಶಿಯು ಶನಿಯ ಉಚ್ಚಕ್ಷೇತ್ರವಾಗಿದೆ. ಸಪ್ತಮದಲ್ಲಿ ಗುರುವಿದ್ದು ವಿವಾಹವು ನಡೆಯಲಿದೆ. ಅರ್ಹರಿಗೆ ಗೌರವಗಳು ಸಿಗಬಹುದು. ವಿದ್ಯಾರ್ಥಿಗಳು ಹೆಚ್ವಿನ ಶುಭವನ್ನು ಪಡೆಯುವರು. ವಿದ್ಯಾಭ್ಯಾಸಕ್ಕೆ ಉತ್ತಮವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಿರಿ. ಅಷ್ಟಮ ಸ್ಥಾನದಲ್ಲಿ ಸೂರ್ಯನಿದ್ದು ಮುತ್ತೈದೆಯರು ಮೃತ್ಯುಂಜಯನ ಸ್ಮರಣೆಯನ್ನು ಮಾಡಿ. ಅಷ್ಟಮಾಧಿಪತಿಯು ನವಮದಲ್ಲಿ ಇದ್ದು ಅಲ್ಪಭಾಗ್ಯವನ್ನು ಮಾತ್ರ ಪಡೆಯುವಿರಿ. ಕುಜನು ದಶಮಸ್ಥಾನದಲ್ಲಿದ್ದು ಹೆಚ್ಚು ಶ್ರಮವನ್ನು ಮಾಡಿಸುವನು.

ವೃಶ್ಚಿಕ:  ಈ ವಾರವು ನಿಮಗೆ ಅಶುಭವೆಂದೇ ಹೇಳಬೇಕು. ಚತುರ್ಥದಲ್ಲಿ ಶನಿಯು ಸ್ಥಿನಾಗಿದ್ದು ಕುಟುಂಬದಲ್ಲಿ ನೆಮ್ಮದಿಯು ಕಡಿಮೆ ಆದೀತು. ಷಷ್ಠಸ್ಥಾನದಲ್ಲಿ ಗುರು, ಬುಧ, ರಾಹುವಿದ್ದು ರಾಹುವು ಮಾತ್ರ ನಿಮಗೆ ಅನುಕೂಲನಾಗಿದ್ದಾನೆ. ಉಳಿದವರಿಂದ ನಿಮಗೆ ಶತ್ರುಭೀತಿಯು ಸೊಂಟ ನೋವುಗಳು ಕಾಣಿಸಿಕೊಂಡೀತು. ಸಪ್ತಮದ ಸೂರ್ಯನು ಪತಿಯಿಂದ ತೊಂದರೆ ಕೊಟ್ಟಾನು. ಅಷ್ಟಮದ ಶುಕ್ರನು ಸುಂದರ ಯುವತಿಯಿಂದ ಅಪಮಾನ ಮಾಡಿಸುವನು. ನವಮದ ಕುಜನು ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗುವಂತೆ ಮಾಡುವನು. ದ್ವಾದಶದ ಕೇತುವಿಂದ ಅಕಾರ್ಯಕ್ಕೆ ಧನವ್ಯಯವಾಗಬಹುದು.

ಧನಸ್ಸು: ಈ ವಾರವು ತೃತೀಯ ಸ್ಥಾನದಲ್ಲಿ ಶನಿಯಿದ್ದು ನಿಮ್ಮ ಸಾಮರ್ಥ್ಯವನ್ನು ಪ್ರಕಾಶಪಡಿಸುವನು. ಪಂಚಮದ ಗುರುವು ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸುವನು. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗವನ್ನು ತೋರಿಸುವನು. ಆದರೆ ರಾಹುವು ಇರುವುದರಿಂದ‌ ಸ್ವಲ್ಪ ಕಷ್ಟಪಡಬೇಕಾದೀತು ಅನಂತರ. ಷಷ್ಠದಲ್ಲಿ ಸೂರ್ಯನಿದ್ದುದರಿಂದ ಮೇಲಿನಿಂದ ಬಿದ್ದು ಗಾಯಮಾಡಿಕೊಳ್ಳುವ ಸಾಧ್ಯತೆ ಇದೆ. ಸ್ವಲ್ಪ ಎಚ್ಚರವಿರಲಿ. ಸಪ್ತಮದಲ್ಲಿ ಶುಕ್ರನು ಸಾನ್ನಿಧ್ಯವನ್ನು ಇಟ್ಟಿದ್ದು ಭೋಗಜೀವನಕ್ಕೆ ಬೇಕಾದ ಅನೇಕ ಅನುಕೂಲತೆಗಳನ್ನು ಮಾಡಿಸುವನು. ವಿವಾಹ, ವಾಹನ ಖರೀದಿ, ಪ್ರೇಮ ನೀವೇದನೆ ಇವೆಲ್ಲವು ಆಗಲಿದೆ. ಅಷ್ಟಮದಲ್ಲಿ ಕುಜನಿದ್ದುದರಿಂದ ವಾಜನ ಸಂಚಾರದಲ್ಲಿ ಸ್ವಲ್ಪ ಜಾಗರೂಕತೆ ಇರಲಿ. ಭೂಮಿಯ ವ್ಯವಹಾರವನ್ನು, ಭೂಮಿಯ ಮಾರಾಟವನ್ನೂ ನೂತನ‌ ಭೂಮಿಯನ್ನೂ ಖರೀದಿಸುವ ಸಾಹಸಕ್ಕೆ ಹೋಗಬೇಡಿ. ಏಕಾದಶದ ಕೇತುವು ಪ್ರೇಮಿಯಿಂದ ನಿಮಗೆ ಸಂಪತ್ತು ಸಿಗಬಹುದು.

ಮಕರ: ಇದು ಮೇ ತಿಂಗಳ ನಾಲ್ಕನೇ ವಾರವಾಗಿದ್ದು ಮಿಶ್ರಫಲವಗಳು ಸಿಗಬಹುದು. ದ್ವಿತೀಯದಲ್ಲಿ ಶನಿಯಿದ್ದು ಸಾಡೆಸಾಥ್ ನ ಉತ್ತರಾರ್ಧದಲ್ಲಿ ನೀವಿದ್ದೀರಿ. ಕೆಲಸಗಾರ ನಿಮ್ಮ ಮಾತನ್ನು ಸರಿಯಾಗಿ ಪಾಲಿಸದೇ ಇರಬಹುದು. ಆದರೂ ಅವರ ಸಹಕಾರದಿಂದ ನಿಮಗೆ ಒಂದಿಷ್ಟು ಲಾಭವಾಗುವುದು. ಚತುರ್ಥದಲ್ಲಿ ಗುರು, ಬುಧ, ರಾಹುವು ಇದ್ದುದರಿಂದ‌ ಸುಂದರವಾಗಿ ನೂತನ ಗೃಹನಿರ್ಮಾಣವನ್ನು ಮಾಡುತ್ತಿದ್ದರೂ ಅಡೆತಡೆಗಳು ಬರಬಹುದು. ಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಪಂಚಮದಲ್ಲಿ ಸೂರ್ಯನಿದ್ದು ತಂದೆ‌ ಹಾಗೂ ಮಕ್ಕಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಷಷ್ಠದಲ್ಲಿ ಶುಕ್ರನಿದ್ದು ಪತ್ನಿಗೆ ಅನಾರೋಗ್ಯ ತೊಂದರೆಯಾದೀತು. ಸಪ್ತಮದ ಕುಜನು ನಿಮ್ಮ ಮನಸ್ಸನ್ನು ಚಂಚಲಗೊಳಿಸಿಯಾನು. ದಶಮದಲ್ಲಿ ಕೇತುವಿದ್ದು ಬಹಳ ಶ್ರಮವಹಿಸಿ ಕೆಲಸಗಳನ್ನು ಮಾಡುವಿರಿ. ಮೃತ್ಯುಂಜಯನ ಮಂತ್ರವನ್ನು ಜಪಿಸಿರಿ.

ಕುಂಭ: ಈ ತಿಂಗಳ ನಾಲ್ಕನೇ ವಾರದ ಮಿಶ್ರಫಲಗಳು ಇರಲಿವೆ. ಸ್ವಗೃಹದಲ್ಲಿ ಶನಿಯಿದ್ದು ಸಾಡೇಸಾಥ್ ಮಧ್ಯಭಾಗದಲ್ಲಿ ನೀವಿದ್ದೀರಿ. ಆಲಸ್ಯದಿಂದ ಹೆಚ್ಚು ಅವಕಾಶವನ್ನು ಕಳೆದುಕೊಳ್ಳಬಹುದು. ತೃತೀಯದಲ್ಲಿ ಗುರು, ಬುಧ, ರಾಹುವಿದ್ದು ಒಳ್ಳೆಯ ಕೆಲಸದಲ್ಲಿ ನಿಮಗೆ ತೊಡುವಂತೆ ಮಾಡಿ ಪರಿಶ್ರಮದಿಂದ‌‌ಮುಂದೆ ಬರುವಂತೆ ಪ್ರೇರೇಪಿಸುವರು. ಚತುರ್ಥದಲ್ಲಿ ಸೂರ್ಯನಿದ್ದು ಹಳೆಯ ಮನೆಯನ್ನು ಹೊಸತನ್ನು ಮಾಡಲಿದ್ದೀರಿ. ಪಂಚಮದಲ್ಲಿ ಶುಕ್ರನಿದ್ದಕಾರಣ ಸಂತಾನವಾರ್ತಯನ್ನು ಕೇಳಬಹುದು. ಷಷ್ಠದಲ್ಲಿ ಕುಜನಿದ್ದು ಆಯುಧದಿಂದ, ವಾಹನದಿಂದ ಗಾಯವಾಗಲಿದೆ. ನವಮದಲ್ಲಿ ಕೇತುವಿದ್ದು ಅದೃಷ್ಟವೂ ಕಡಿಮೆ ಇರಲಿದೆ. ಹನುಮಾನ್ ಚಾಲೀಸ್ ಪಾಠವನ್ನು ಮಾಡಿ.

ಮೀನ: ಮೇ ತಿಂಗಳ ನಾಲ್ಕನೇ ವಾರದಲ್ಲಿ ಗ್ರಹಗಳು ಮಿಶ್ರಫಲವನ್ನು ಕೊಡುವರು. ದ್ವಿತೀಯದಲ್ಲಿ ಗುರು, ಬುಧ, ರಾಹುವಿದ್ದು ಕುಟುಂಬದ ವಿಚಾರದಲ್ಲಿ ನಿಮಗೆ ಕಿರಿಕಿರಿಯಾಗಲಿದೆ. ತೃತೀಯದಲ್ಲಿ ಸೂರ್ಯನಿದ್ದು ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸುವನು. ಚತುರ್ಥದಲ್ಲಿ ಶುಕ್ರನು ವಾಸವಾಗಿದ್ದು ಸುಂದರವಾದ ಗೃಹದಲ್ಲಿ ವಾಸಮಾಡುವಿರಿ. ಪಂಚಮದ ಕುಜನು ಮಕ್ಕಳ ವಿಚಾರದಲ್ಲಿ ನಿಮಗೆ ಸಿಟ್ಟಾಗುವಂತೆ ಮಾಡುವನು. ಅಷ್ಟಮ ಸ್ಥಾನದಲ್ಲಿ ಕೇತುವಿದ್ದು ಜಾಗರೂಕರಾಗಿ ಓಡಾಡುವುದು ಒಳ್ಳೆಯದು. ದ್ವಾದಶದ ಶನಿಯು ನೀಚ ಕಾರ್ಯದಲ್ಲಿ ಅಥವಾ ಹಣವು ಬಾರದ ಕೆಲಸದಲ್ಲಿ ವ್ಯಯಿಸುವಂತೆ ಮಾಡುವನು. ಶನಿವಾರದಂದು ರುದ್ರಾಭಿಷೇಕ ಮಾಡಿಸಿ.

-ಲೋಹಿತಶರ್ಮಾ 8762924271

Published On - 6:15 am, Sun, 21 May 23

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!