Daily Horoscope: ಈ ರಾಶಿಯವರ ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು

|

Updated on: Apr 26, 2023 | 5:45 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರ ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು
ಇಂದಿನ ರಾಶಿ ಭವಿಷ್ಯ
Image Credit source: Shutterstock
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 26 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 02:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:48 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:30ರ ವರೆಗೆ.

ಸಿಂಹ: ಮನೆ ಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಮನೆಗೆಲಸವು ಇಂದಿನಿಂದ ಅನಾಯಾಸಕರವಾಗಿರುವುದು. ಹಣದ ವಿಚಾರದಲ್ಲಿ ನಿಮಗಿಂದು ನಿರಾಸಕ್ತಿ ಬರಬಹುದು. ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು ಎಂಬ ಬೇಸರವು ಹೆಚ್ಚಾಗಿ ಕಾಡಬಹುದು. ಹಳೆಯ ಮಿತ್ರರ ಭೇಟಿಯಾಗಲಿದೆ. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಇನ್ನೊಬ್ಬರ ಕೆಲಸಕ್ಕೆ ದೂರ ಪ್ರಯಾಣಮಾಡಬೇಕಾಗಿ ಬರಬಹುದು. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು.

ಕನ್ಯಾ: ಆಸ್ತಿ ಖರೀದಿಯ ಬಗ್ಗೆ ಹೆಚ್ಚಿನ ಒಲವಿರಲಿದೆ‌. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಲಿದೆ. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡುವಿರಿ. ಧಾರ್ಮಿಕಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಕ್ಕೆ ನಿಮ್ಮನ್ನು ಗೌರವಿಸಲಿದ್ದಾರೆ. ಗುರುವಿನ ದರ್ಶನವನ್ನು ಪಡೆಯುವಿರಿ. ಹೂಡಿಕೆಯ ವಿಚಾರದಲ್ಲಿ ಮಾಹಿತಿಯು ಸ್ಪಷ್ಟವಾಗಿರಲಿ. ಕಂಕಣಭಾಗ್ಯವು ಅವಿವಾಹಿತರಿಗೆ ಕೂಡಿಬರಲಿದೆ. ವಿದೇಶಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ.

ತುಲಾ: ಆರೋಗ್ಯವು ಚೆನ್ನಾಗಿ ಇರಲಿದೆ. ಹಣ ಸಂಪಾದನೆಗೆ ದೂರಪ್ರಯಾಣ ಮಾಡಬೇಕಾದೀತು. ಮಾಡಲು ತುಂಬ ಕೆಲಸಗಳಿದ್ದು ಯಾವುದನ್ನು ಮಾಡುವುದು ಎಂಬ ಗೊಂದಲ ಸೃಷ್ಟಿಯಾಗಬಹುದು. ಹಿರಿಯರು ನಿಮ್ಮನ್ನು ಪ್ರಶಂಸಿಸುವರು. ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ಅದರ ಫಲವು ಸಂಜೆಯ ತನಕ ಇರಲಿದೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾದೀತು. ಇಂದು ಬರುವ ಅತಿಥಿಗಳನ್ನು ಸತ್ಕರಿಸಿ. ತುಂಬ ಸಮಸ್ಯೆಗಳು ಬಂದಂತೆ ಕಾಣಬಹುದು. ಹೊಸ ಉದ್ಯೋಗವನ್ನು ಮಾಡುವ ಸಾಮರ್ಥ್ಯ ಇದ್ದರೂ ಅಳುಕು ನಿಮ್ಮನ್ನು ಹಿಂದೆ ಸರಿಯುವಂತೆ ಮಾಡುವುದು.

ವೃಶ್ಚಿಕ: ಇಂದು ಸ್ನೇಹಿತರ ಜೊತೆ ಹೋಗಬೇಕಿದ್ದ ನಿಮ್ಮ ಪ್ರಯಾಣವು ತುರ್ತು ಕಾರ್ಯದಿಂದ ರದ್ದಾಗಬಹುದು. ಬಹಳ ಆಯಾಸವಾದರೂ ಒತ್ತಡಗಳಿದ್ದರೂ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಅಪರಿಚಿತ ದೂರವಾಣಿಯ ಕರೆಯಿಂದ ಲಾಭದಾಯಕವಾದ ಕೆಲಸವು ಸಿಗಬಹುದು. ಸರ್ಕಾರಿ ಕೆಲಸಗಳು ನಿಧಾನವಾಗಲಿದೆ. ಬೇಸರ ಪಡುವ ಅವಶ್ಯಕತೆ ಇಲ್ಲ. ನಿಧಾನವಾಗಿಯಾದರೂ ಚಲಿಸುತ್ತದೆ ಎಂಬ ಸಂತೋಷವಿರಲಿ. ನಿಮಗೆ ಆಗದವರು ತೊಂದರೆ ಕೊಡುತ್ತಿದ್ದಾರೆ ಎಂಬ ಅನುಮಾನವು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆಯಾಗಲಿದೆ.

-ಲೋಹಿತಶರ್ಮಾ ಇಡುವಾಣಿ