Daily Horoscope: ಈ ರಾಶಿಯವರಿಗೆ ಹಿತಶತ್ರುಗಳ ತೊಂದರೆ ಅಧಿಕವಾಗಿ ಇರಲಿದೆ

|

Updated on: Apr 10, 2023 | 6:15 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರಿಗೆ ಹಿತಶತ್ರುಗಳ ತೊಂದರೆ ಅಧಿಕವಾಗಿ ಇರಲಿದೆ
ಇಂದಿನ ರಾಶಿ ಭವಿಷ್ಯ
Image Credit source: istock
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 10 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವ್ಯತಿಪಾತ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:56 ರಿಂದ 09:29ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:01 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:06 ರಿಂದ 03:39ರ ವರೆಗೆ.

ಧನುಸ್ಸು: ಇಷ್ಟು ದಿನ ಮಕ್ಕಳ ಜೊತೆಗಿದ್ದ ನಿಮಗೆ ಇಂದು ಮಕ್ಕಳಿಲ್ಲದೇ ಬೇಸರವೆನಿಸೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ. ಅಧಿಕ ಪ್ರಯಾಣದ ಆಯಾಸದಿಂದ ಬಳಲಿ ಬೆಂಡಾಗುವಿರಿ. ಯಾರ ಬಳಿ ಏನನ್ನು ಮಾತನಾಡುತ್ತಿದ್ದೇನೆ ಎಂಬ ಎಚ್ಚರಿಕೆ ಇರಲಿ. ಬೇರೆಯವರನ್ನು ಹಾಳುಮಾಡಲು ಹೋಗಿ ನೀವೇ ಹಾಳಾಗುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ನಿದ್ರೆಯು ಚೆನ್ನಾಗಿ ಆಗದೇ ಸಂಕಟಪಡುವಿರಿ. ಸಂಗಾತಿಯ ಜೊತೆ ಇಂದು ಸಂತೋಷದಿಂದ ಕಳೆಯುವಿರಿ. ಕುಟುಂಬವು ನಿಮ್ಮ ಬೆಂಬಲಕ್ಕೆ ಇರಲಿದೆ.

ಮಕರ: ನಿಮ್ಮವರಿಗೆ ಸಹಾಯ ಮಾಡದೇ ಅವರು ನಿಮ್ಮ ಮೇಲೆ ದ್ವೇಷ ಸಾಧಿಸುವರು. ವಾಗ್ಮಿಗಳಾಗಿದ್ದರೆ ನಿಮಗೆ ಸಭೆಗಳಿಗೆ ಆಹ್ವಾನವಯ ಬರಲಿದೆ‌. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ಸುಂದರ ಸ್ಥಳಗಳನ್ನು ನೋಡಲು ಬಯಸಿ, ದೂರದ ಊರಿಗೆ ಪ್ರಯಾಣ ಹೋಗುವಿರಿ. ಮಂದಗತಿಯಲ್ಲಿ ಸಾಗುವ ಜೀವನಕ್ಕೆ ವೇಗ ಬೇಕು ಎನ್ನಿಸಬಹುದು. ಬರಬೇಕಾದ ಹಣದ ಬಗ್ಗೆ ತಿಳಿದಿರಲಿ. ಹಣವನ್ನು ನೀವೇ ಕೇಳಿ ಒಡೆಯುವುದು ಉತ್ತಮ. ಶಿವಪಂಚಾಕ್ಷರವನ್ನು ಮಾಡಿ.

ಕುಂಭ: ಸರ್ಕಾರಿ ಉದ್ಯೋಗವರಿಗೆ ಬರಬೇಕಾದ ಹಣವು ಬರಲಿದೆ. ನಿಮ್ಮ ಆಲೋಚನೆಗಳನ್ನು ಅಚಲವಾಗಿ ಇಟ್ಟುಕೊಳ್ಳಿ. ಸಮಾಜದ ಮುಖಂಡರ ಭೇಟಿಯಾಗಲಿದೆ. ದೈವಭಕ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸಾಡೇಸಾಥ್ ಶನಿಯಿಂದ ಸ್ವಲ್ಪ ಹಿತವೆನಿಸುವುದು. ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಈ ದಿನವನ್ನು ಅನಾಯಾಸವಾಗಿ ಕಳೆಯುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಶನಿಕವಚವನ್ನು ಪಠಿಸಿ. ಶನಿಯ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆಯ ದೀಪ ಬೆಳಗಿ.

ಮೀನ: ಜ್ವರ ಬರುವ ಸಾಧ್ಯತೆ ಇದೆ. ವೈದ್ಯರನ್ನು ಭೇಟಿಯಾಗಿ ಔಷಧೋಪಚಾರವನ್ನು ಮಾಡಿಕೊಳ್ಳಿ. ನಿಮ್ಮ ಶಕ್ತಿ, ಸಾಮರ್ಥ್ಯಗಳು ಅನ್ಯರಿಗೂ ತಿಳಿಯಲಿದೆ ಇಂದು. ಅಧ್ಯಾತ್ಮದ ಕಡೆ ಮನಸ್ಸು ಒಲಿಯಲಿದೆ. ಹಾಗಾಗಿ ಬೇಸರದ ಸಂಗತಿಗಳು ಇದ್ದರೂ ಸುಖದಿಂದ ಖುಷಿಯಿಂದ ಇರುವಿರಿ. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅನ್ಯಮಾರ್ಗವನ್ನು ಬಳಸಿಕೊಳ್ಳುವಿರಿ. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಿ ಆಶ್ಚರ್ಯಪಡುವಿರಿ. ಮಕ್ಕಳಿಗೆ ನಿಮ್ಮ ಬಗ್ಗೆ ಹೆಮ್ಮೆಯಾಗಲಿದೆ.

-ಲೋಹಿತಶರ್ಮಾ ಇಡುವಾಣಿ