Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ
ನೀವು ಧನು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಶೂಲ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಸಂಜೆ 05:12 ರಿಂದ 06:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ.
ಧನುಸ್ಸು: ಕೋಪದ ಕೈಗೆ ಬುದ್ಧಿಕೊಟ್ಟು ತೊಂದರಗೆ ಸಿಕ್ಕಿಹಾಕಿಕೊಳ್ಳಬಹುದು. ಅತಿಯಾದ ಆಸೆಯಿಟ್ಟುಕೊಂಡು ಅದನ್ನು ಪಡೆಯಲಾಗದೇ ಸೋಲುವಿರಿ. ಅನಾರೋಗ್ಯದಿಂದ ನೀವು ಆಸ್ಪತ್ರೆಗೆ ಹೋಗಬೇಕಾಗಿ ಬರಬಹುದು. ಖರ್ಚನ್ನು ಕಡಿಮೆ ಮಾಡುವ ನೆಪದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ದುಷ್ಟರ ಸಹವಾಸದಿಂದ ಇಂದು ದೂರವಿಲಾಗಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಿ ಆ ವೃತ್ತಿಯನ್ನು ಬಿಡಲಿದ್ದೀರಿ.
ಮಕರ: ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಅನ್ಯರ ಮಾತನ್ನು ಕೇಳಿ ಸಂಬಂಧದಲ್ಲಿ ಒಡಕು ತಂದುಕೊಳ್ಳುವಿರಿ. ನಿಮ್ಮ ಸಹೋದರಿಗೆ ಧನಸಹಾಯ ಮಾಡಬೇಕಾಗಿಬರಬಹುದು. ನಿಮ್ಮ ಒತ್ತಡವನ್ನು ಕಂಡು ಕಛೇರಿಯಲ್ಲಿ ನಿಮಗೆ ಸಹಾಯಕ್ಕೆ ಬರಲಿದ್ದಾರೆ. ಸ್ನೇಹಿತ ಜೊತೆ ಔತಣಕೂಟವಿರಲಿದೆ. ನಿಮ್ಮ ಯೋಚನೆಗಳನ್ನು ಪತ್ನಿಯು ಗೌರವಿಸುವಳು. ಆಪತ್ತಿನ ಧನವನ್ನು ಇಂದು ಖರ್ಚುಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಲವು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವುದು ಬೇಡ. ಹಾಗೆಯೇ ಇರಲಿ.
ಕುಂಭ: ಆಸ್ತಿಯ ವಿಚಾರವಾಗಿ ತಂದೆ ಹಾಗೂ ಸಹೋದರರ ನಡುವೆ ಮಾತಿನ ತಿಕ್ಕಾಟವಿರಲಿದೆ. ನ್ಯಾಯಾಲಯದ ತೀರ್ಮಾನವನ್ನು ಒಪ್ಪದೇ ಧಿಕ್ಕರಿಸುವ ಹಂತಕ್ಕೆ ಹೋಗುವಿರಿ. ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ಕೃತಘ್ನತೆಯ ಅನುಭವವು ನಿಮಗಾಗಲಿದೆ. ಮಕ್ಕಳು ನಿಮಗೆ ವಂಚನೆ ಮಾಡಲಿದ್ದಾರೆ. ನಿಮಗಾದ ನೋವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ನಿಮ್ಮ ಉದ್ಯೋಗವು ನಿಧಾನವಾಗಿ ವೃದ್ಧಿಯಾಗಲಿದೆ. ಸಮಾರಂಭಗಳಿಗೆ ಹೋಗಲಿದ್ದೀರಿ.
ಮೀನ: ನಿಮಗೆ ಪರೀಕ್ಷೆಯ ಕಾಲವಿದಾಗಲಿದೆ. ಮನೆಯನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸುವಿರಿ. ಸತಿಗೆ ಅನಿರೀಕ್ಷಿತ ಕೊಡುಗೆಯನ್ನು ನೀಡುವಿರಿ. ನಿದ್ರೆಯಾಗದೇ ಹಿಂಸೆಪಡುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ. ಸಮಾಜದಿಂದ ಮನ್ನಣೆಯು ಸಿಗಬಹುದು. ನಾಯಕರಿಗೆ ಬೆಂಬಲವು ಸಿಗಲಿದೆ. ದೂರ ಹೋಗುವ ಪ್ರಯಾಣವು ರದ್ದಾಗಲಿದೆ. ಅವಘಟದಿಂದ ಪಾರಾಗುವಿರಿ.
-ಲೋಹಿತಶರ್ಮಾ ಇಡುವಾಣಿ