ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಭರಣೀ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 35 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:14 ರಿಂದ 03:41ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:58 ರಿಂದ 08:25ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:52 ರಿಂದ 11:20ರ ವರೆಗೆ.
ಮೇಷ ರಾಶಿ: ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗಿದ್ದರೂ ಸಮಚಿತ್ತದಿಂದ ಅದನ್ನು ಎದುರಿಸುವ ಧೈರ್ಯ ಮಾಡುವಿರಿ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ಮಾಡುವುದು ಸರಿ ಕಾಣದು. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಯಂತ್ರದ ವ್ಯಾಪಾರವು ಲಾಭದಾಯಕವಾಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಹಣಕಾಸಿನ ವಿಚಾರದಲ್ಲಿ ನೀವು ನಾಜೂಕುತನವನ್ನು ಇಟ್ಟುಕೊಳ್ಳುವಿರಿ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಸಂಗಾತಿಯ ಜೊತೆ ಜೀವನದ ಕುರಿತು ಆಪ್ತಸಮಾಲೋಚನೆಯನ್ನು ಮಾಡುವಿರಿ. ಗತಿಸಿದ್ದನ್ನು ಮತ್ತೆ ಸ್ಮರಿಸಿಕೊಳ್ಳುವುದು ಬೇಡ.
ವೃಷಭ ರಾಶಿ: ಇಂದು ನಿಮ್ಮ ಸಾಮಾಜಿಕ ಕಾರ್ಯಗಳು ಪ್ರಕಾಶಕ್ಕೆ ಬರುವುದು. ಅಮೂಲ್ಯ ವಸ್ತುಗಳ ಸಂಪಾದನೆಯನ್ನು ಕಷ್ಟವಾದರೂ ಮಾಡುವಿರಿ. ಮಕ್ಕಳು ಮತ್ತು ಕುಟುಂಬದವರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ. ಸಂಗಾತಿಯ ಅಪನಂಬಿಕೆಯನ್ನು ಪ್ರಶ್ನಿಸುವ ಮನಸ್ಸು ಮಾಡುವಿರಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ. ವಿದ್ಯಾರ್ಥಿಗಳು ಗೊಂದಲದಲ್ಲಿ ಇರಬಹುದು. ಹೇಳಿಕೊಳ್ಳುವುದು ಸೂಕ್ತ. ಒರಟು ಮಾತುಗಳಿಂದ ಸಂಗಾತಿಗೆ ಬೇಸರ ತರಿಸುವಿರಿ.
ಮಿಥುನ ರಾಶಿ: ಇಂದು ನೆಮ್ಮದಿಯನ್ನು ಪ್ರಯತ್ನಪೂರ್ವಕವಾಗಿ ಪಡೆಯುವಿರಿ. ಅಸಂಬದ್ಧ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಿ ಇರುವುದು. ಸಂಗಾತಿಯನ್ನು ಎಲ್ಲಿಗಾದರೂ ದೂರ ಕರೆದುಕೊಂಡು ಹೋಗಲು ಆಸೆಯಾಗುವುದು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ವ್ಯವಹಾರದಲ್ಲಿ ಗೊಂದಲವನ್ನು ಇಟ್ಟುಕೊಂಡು ಕೊರಗುವುದು ಬೇಡ. ತಮಾಷೆಯ ಅತಿಯಾಗಿ ವೈಮನಸ್ಯವು ಬರಬಹುದು.
ಕರ್ಕ ರಾಶಿ: ಇಂದು ನೀವು ಕಾನೂನಾತ್ಮಕ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಸರಿಯಾದ ಮಾಹಿತಿ ದೊರಕದೇ ಬೇಸರಿಸುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರಲಿದೆ. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ಎಲ್ಲಿಗಾದರೂ ದೂರ ಪ್ರಯಾಣವನ್ನು ಮಾಡುವಿರಿ. ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಯಾರಾದರೂ ಪ್ರಾಬಲ್ಯವನ್ನು ಸಾಧಿಸಬಹುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು. ನಿಮ್ಮ ಪ್ರಾಮಾಣಿಕತೆಯು ಅಪ್ರಯೋಜಕ ಎನಿಸಬಹುದು.