Horoscope: ನಿತ್ಯಭವಿಷ್ಯ; ಈ ರಾಶಿಯವರು ತಮ್ಮ ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ

|

Updated on: Feb 13, 2024 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಫೆಬ್ರವರಿ​​​​ 13ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ನಿತ್ಯಭವಿಷ್ಯ; ಈ ರಾಶಿಯವರು ತಮ್ಮ ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ
ನಿತ್ಯಭವಿಷ್ಯ
Image Credit source: Getty Images
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ರೇವತೀ, ಯೋಗ : ಸಿದ್ಧ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:53 ರಿಂದ 11:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ.

ಧನು ರಾಶಿ: ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಸಾಲವನ್ನು ಮರುಪಾವತಿ ಮಾಡದೇ ಇರುವ ನಿಮ್ಮ ಸಂಬಂಧಿಕರಿಗೆ ಇಂದು ಸಾಲ ಕೊಡಬಾರದು. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಕಲೆಯನ್ನು ಗೊತ್ತುಮಾಡಿಕೊಳ್ಳುವಿರಿ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ನಿಮ್ಮ ಉತ್ಸಾಹದ ಕೆಲಸವು ಇನ್ನೊಬ್ಬರಿಗೆ ಮಾದರಿಯಾದೀತು. ನಿಮ್ಮ ನಿರ್ಲಕ್ಷ್ಯದ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ.

ಮಕರ ರಾಶಿ: ಇಂದು‌ನೀವು ದೈಹಿಕ ಸೌಕರ್ಯವನ್ನು ಇಷ್ಟಪಡುವಿರಿ. ಎಲ್ಲ ಕಡೆಗಳಲ್ಲಿ ನೀವು ಆತ್ಮರಕ್ಷಣೆಯನ್ನು ಮಾಡಿಕೊಳ್ಳುವಿರಿ. ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಪ್ರಯಾಣದ ಸಮಯದಲ್ಲಿ ಖರ್ಚು ಹೆಚ್ಚಾಗುತ್ತದೆ. ನೀವು ಕೆಲವು ವ್ಯವಹಾರ ಅಥವಾ ಒಪ್ಪಂದದೊಂದಿಗೆ ಸಂಪರ್ಕ ಹೊಂದಿದ್ದರೆ, ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಣುವರು. ನಿಮ್ಮ ಕಾರ್ಯವನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು. ಧಾರ್ಮಿಕ ಸ್ಥಳಗಳ ಭೇಟಿಯು ನಿಮಗೆ ಸಾಕಷ್ಟು ನೆಮ್ಮದಿನ್ನು ಕೊಡುವುದು. ನಿಮ್ಮ ವ್ಯವಹಾರದಲ್ಲಿ ಯಾರ ಹಸ್ತಕ್ಷೇಪವೂ ಇಷ್ಟವಾಗದು.

ಕುಂಭ ರಾಶಿ: ಇಂದು ನಿಮ್ಮ ಎಲ್ಲ ಕೆಲಸವನ್ನು ಬಿಟ್ಟು ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಹಳೆಯ ರೋಗ ನಿಮ್ಮನ್ನು ಕಾಡಲಿದ್ದು, ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು.ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಜೀವನದ ತೊಂದರೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಹಳೆಯ ಮನೆಯ ದುರಸ್ತಿಗೆ ಹಣವನ್ನು ಖರ್ಚು ಮಾಡುವಿರಿ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ. ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು. ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ.

ಮೀನ ರಾಶಿ: ಇಂದು ಬಂಧುಗಳ ಆಗಮನವಾದ ಕಾರಣ ಕುಟುಂಬ ಜೊತೆ ಹೆಚ್ವು ಕಾಲ ಕಳೆಯಿರಿ. ನೀವು ಕೆಲಸದಲ್ಲಿ ಇಂದು ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ಮಾನಸಿಕವಾಗಿ ಸ್ವಲ್ಪ ಮಟ್ಟಿನ ಕಿರಿಕಿರಿಯನ್ನು ಅನುಭವಿಸುವಿರಿ. ಒಂಟಿತನವನ್ನು ಇಷ್ಟಪಡುತ್ತೀರಿ. ಗುರುವಿನ ದರ್ಶನವನ್ನು ಪಡೆಯಿರಿ. ಒಳ್ಳೆಯ ಸಮಾಚರ ನಿಮ್ಮನ್ನು ಸೇರಬಹುದು. ನಂಬಿಕೆಯೇ ಸ್ವಭಾವವಾಗಿರುವ ನಿಮ್ಮನ್ನು ಅದು ಕೈ ಬಿಡದು. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುವುದು. ಓಡಾಟಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ನೀವು ಹಣಕಾಸನ್ನು ಉಳಿಸಲು ನಾನಾಪ್ರಕಾರವಾಗಿ ಯೋಚಿಸುವಿರಿ. ಸರಳವಾಗಿರಲು ನಿಮಗೆ ಸಾಧ್ಯವಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ