Horoscope: ಈ ರಾಶಿಯವರು ಇಂದು ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ​​​​ 14) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Horoscope: ಈ ರಾಶಿಯವರು ಇಂದು ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ
ರಾಶಿ ಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 14, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 35 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:47 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:26 ರಿಂದ 09:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ.

ಸಿಂಹ ರಾಶಿ : ಈ ರಾಶಿಯವರಿಗೆ ಇಂದಿನ ದಿನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. ದಾಂಪತ್ಯ ಸುಖವು ಹೆಚ್ಚಾಗುವುದು. ಸಂಕೀರ್ಣ ಕಾರ್ಯಗಳನ್ನು ಸರಳ ಮಾಡಿಕೊಂಡು ಕಾರ್ಯಗತಗೊಳಿಸಲಾಗುವುದು. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಂಡು ಮುನ್ನಡೆಯಿರಿ. ಭೂಮಿಗೆ ಹೂಡಿಕೆ ಮಾಡಲು ಆಸಕ್ತಿಯಿಂದ ಇರುವುದು. ನಿಮಗೆ ಇಂದು ಶುಭವಾರ್ತೆಯು ಬರುವುದು. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ಕಾರ್ಯದ ಸ್ಥಳದಲ್ಲಿ ಎಂದಿನ ಉತ್ಸಾಹವು ಇರದು. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಕಡ್ಡಿ ಮುರಿದಂತೆ ಮಾತನ್ನು ಹೇಳುವುದು ಬೇಡ.

ಕನ್ಯಾ ರಾಶಿ : ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಇಂದು ಶುಭಕರವಾಗಿದ್ದು ಅಹಿತಕರ ವಾತಾವರಣಕ್ಕೆ ಆಸ್ಪದವನ್ನು ಕೊಡಲಾರಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಭಯ ಹೆಚ್ಚಾಗುವುದು. ನಿಮ್ಮ ಮೇಲಿನ ಪ್ರಕರಣಗಳು ಒಂದೊಂದಾಗಿ ಬಗೆಹರಿಯುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ. ಮಿತವಾದ ಆಹಾರ ಸೇವನೆಯನ್ನು ಮಾಡುವಿರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಎಲ್ಲ ತೊಂದರಗಳಿಗೂ ಯಾರನ್ನೋ ಬೈಯುತ್ತಾ ಕುಳಿತಿರುವುದರಲ್ಲಿ ಅರ್ಥವಿರದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವಿರಿ. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಕಾಣಿಸಿಕೊಳ್ಳಬಹುದು.

ತುಲಾ ರಾಶಿ : ಇಂದು ಶುಭವನ್ನು ನೀವು ನಿರೀಕ್ಷಿಸಿದರೂ ನಿಮಗೆ ಹತಾಶೆಯು ಬರಬಹುದು. ಇಂದು ನೀವು ನಿಮ್ಮ ಕುಟುಂಬದ ಜೊತೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಿರಿ. ಅದು ನಿಮಗೆ ಹಣವನ್ನು ಸಹ ವೆಚ್ಚ ಮಾಡಿಸಬಹುದು.‌ ಸ್ವಲ್ಪ ಜಾಣ್ಮೆಯಿಂದ ಮುಂದುವರಿದರೆ ನಿಮಗೆ ಅನುಕೂಲಕರವಾದ ಸಂದರ್ಭವು ಸಿಗುವುದು. ಅನಪೇಕ್ಷಿತ ಚರ್ಚೆಯು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡವು ಬರಬಹುದು.

ವೃಶ್ಚಿಕ ರಾಶಿ : ಇಂದು ಹಣಕಾಸಿನ ವಿಷಯಗಳಲ್ಲಿ ಪ್ರಯೋಜನ ಪಡೆಯುತ್ತಾರೆ ಮತ್ತು ನಿಮ್ಮ ಎಲ್ಲಾ ಕೆಲಸಗಳು ಇಂದು ಸಮಯಕ್ಕೆ ಸರಿಯಾಗಿ ಮಾಡಲಾಗುತ್ತದೆ. ಸಜ್ಜನರ ಸಂಯೋಗದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ ಇಂದು ಕಷ್ಟವಾದರೂ ಅನಿವಾರ್ಯವಾಗಬಹುದು. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅನುಭವಗಳನ್ನು ನೀವು ಪಡೆಯುತ್ತೀರಿ. ಪ್ರತಿಭೆಯ ಖ್ಯಾತಿಯನ್ನು ನೀವು ಪಡೆಯಬಹುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿ ದೈವಾನುಕೂಲದ ಬಗ್ಗೆಯೂ ಮಾತನಾಡಿ.

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?