
ನೀವು ಮೀಸಲಿಟ್ಟ ಸಮಯಕ್ಕೆ ಹಾಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು, ಸಮಾಧಾನ- ತೃಪ್ತಿ ದೊರೆಯುವ ದಿನ ಇದಾಗಿರುತ್ತದೆ. ಟೀಮ್ ಔಟಿಂಗ್ ಗಾಗಿ ಸಹೋದ್ಯೋಗಿಗಳ ಜೊತೆಗೆ ತೆರಳಿ, ಸಂತೋಷವಾದ ಸಮಯ ಕಳೆಯುವ ದಿನ ಇದಾಗಿರುತ್ತದೆ. ಪರ್ಸ್, ವ್ಯಾಲೆಟ್ ಬಳಸುವವರು ಹಣವನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ಇನ್ನು ಕೆಲವು ವಸ್ತುಗಳನ್ನು ಎಲ್ಲೋ ಇಟ್ಟು, ಬೇರೆಲ್ಲೋ ಹುಡುಕುವಂತೆ ಸಹ ಆಗಬಹುದು. ನಿಮಗೆ ಬಹಳ ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ನೀಡುವ ಯೋಗ ಇದೆ. ಕುಟುಂಬದ ಜತೆಗೂಡಿ ರೆಸಾರ್ಟ್, ರೆಸ್ಟೋರೆಂಟ್ ಗೆ ತೆರಳುವ ಸಾಧ್ಯತೆ ಸಹ ಇದೆ. ನಿಮ್ಮಲ್ಲಿ ಕೆಲವರು ಈ ದಿನ ಹೆಲ್ತ್ ಇನ್ಷೂರೆನ್ಸ್ ಖರೀದಿ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಅದೇ ರೀತಿ ಈಗಾಗಲೇ ಹೆಲ್ತ್ ಇನ್ಷೂರೆನ್ಸ್ ಇದೆ ಎಂದಾದಲ್ಲಿ ಇನ್ಷೂರ್ಡ್ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳು ಇವೆ. ಬಹುತೇಕ ಸಮಯ ಸಂತೋಷದಿಂದ ಕೂಡಿರುತ್ತದೆ.
ನಿಶ್ಚಿತವಾಗಿ ನೀವು ಅಂದುಕೊಂಡಂತೆಯೇ ಆಗಲಿದೆ ಎಂದುಕೊಂಡಿದ್ದ ಕೆಲವು ವಿಚಾರಗಳು ನಿಮ್ಮ ವಿರುದ್ಧವಾಗಿ ಸಾಗಲಿವೆ. ಯಾವುದೇ ಕೆಲಸ ಪೂರ್ಣಗೊಳ್ಳುವ ಮುಂಚೆ ಅದರ ಬಗ್ಗೆ ಹೇಳಿಕೊಂಡು ಬರಬೇಡಿ. ಅಧಿಕೃತವಾಗಿ ಖಚಿತ ಆಗುವ ಮುನ್ನ ಸೆಲಬ್ರೇಷನ್ ಮಾಡದಿರುವುದು ಒಳ್ಳೆಯದು. ಕುಟುಂಬ ಸದಸ್ಯರ ಹಣವನ್ನು ಅವರಿಂದ ಕೇಳಿ ಪಡೆದುಕೊಂಡಿದ್ದಲ್ಲಿ ಅದನ್ನು ಹಿಂತಿರುಗಿಸುವುದಕ್ಕೆ ಆದ್ಯತೆ ನೀಡಿ. ವಾಪಸ್ ಕೊಟ್ಟರೆ ಆಯಿತು, ಅಂಥ ಆತುರ ಏನಿದೆ ಎಂಬ ಧೋರಣೆ ಯಾವ ಕಾರಣಕ್ಕೂ ಬೇಡ. ನಿಮ್ಮಲ್ಲಿ ಕೆಲವರು ಬೆಟ್ಟ- ಗುಡ್ಡಗಾಡು ಪ್ರದೇಶಗಳಿಗೆ ತೆರಳುವಂಥ ಸಾಧ್ಯತೆ ಇದೆ. ಕನಿಷ್ಠ ಪಕ್ಷ ನಿಮ್ಮ ಮನೆಯ ಬಳಿ ಇರುವಂಥ ಈ ರೀತಿಯ ಪರಿಸರಕ್ಕಾದರೂ ತೆರಳುವ ಯೋಗ ನಿಮ್ಮ ಪಾಲಿಗೆ ಇದೆ. ನೇರವಂತಿಕೆ ಹಾಗೂ ಪಾರದರ್ಶಕತೆ ಈ ಎರಡು ನಿಮ್ಮನ್ನು ಕಾಯುವಂಥ ಸಂಗತಿಗಳಾಗಲಿವೆ. ಆದ್ದರಿಂದ ಈ ಗುಣದಲ್ಲಿ ರಾಜೀ ಮಾಡಿಕೊಳ್ಳಬೇಡಿ.
ನಿಮ್ಮಲ್ಲಿ ಕೆಲವರು ಸ್ನೇಹಿತರು ಅಥವಾ ಸಂಬಂಧಿಗಳಿಗೆ ಉಡುಗೊರೆ ನೀಡುವುದಕ್ಕೆ ಮನೆಗೆ ಬಳಸುವಂಥ ಪೀಠೋಪಕರಣಗಳ ಖರೀದಿ ಮಾಡುವುದಕ್ಕೆ ಆಲೋಚಿಸಲಿದ್ದೀರಿ. ಕಣ್ಣಿಗೆ ಸಂಬಂಧಿಸಿದ ಕಿರಿಕಿರಿ ಅನುಭವಿಸುತ್ತಾ ಇದ್ದಲ್ಲಿ ಸೂಕ್ತ ವೈದ್ಯರ ಬಳಿ ಔಷಧೋಪಚಾರ ಮಾಡಿಸುವ ಕಡೆಗೆ ಗಮನವನ್ನು ನೀಡಿ. ರಾಜಕಾರಣದಲ್ಲಿ ಇರುವವರಿಗೆ ವಿಶ್ವಾಸ ದ್ರೋಹ ಆಗಿರುವುದು ತಿಳಿದು ಬರಲಿದೆ. ನಿಮಗೆ ಸಿಗಬೇಕಾಗಿದ್ದ ಹುದ್ದೆ- ಸ್ಥಾನಮಾನವನ್ನು ತಪ್ಪಿಸಲಾಗಿದೆ, ಅದು ಕೂಡ ಯಾರನ್ನು ನಿಮ್ಮ ವಿಶ್ವಾಸಿಗಳು ಎಂದು ಭಾವಿಸಿರುತ್ತೀರೋ ಅಂಥವರೇ ನಿಮ್ಮ ಏಳ್ಗೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ತಿಳಿದುಬರಲಿದೆ. ಯುಪಿಐ ಮೂಲಕ ಹಣ ಪಾವತಿ ಮಾಡುತ್ತೀರಿ, ಅದರಲ್ಲೂ ದೊಡ್ಡ ಮೊತ್ತದ ಹಣದ ವರ್ಗಾವಣೆ ಮಾಡುತ್ತಿದ್ದೀರಿ ಅಂತಾದಲ್ಲಿ ಎಷ್ಟು ಮೊತ್ತ ಹಾಗೂ ಹೆಸರು ಸರಿಯಾಗಿದೆಯೇ ಹೀಗೆ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಪರಿಶೀಲನೆ ಮಾಡಿ, ಆ ನಂತರ ಟ್ರಾನ್ಸ್ ಫರ್ ಮಾಡಿ.
ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಪ್ಲಾನಿಂಗ್ ಮಾಡಿಕೊಳ್ಳಿ. ಇನ್ನೂ ನಿಮ್ಮ ಕೈ ಸೇರದ ಮೊತ್ತಕ್ಕೆ ಲೆಕ್ಕ ಹಾಕಿಕೊಂಡು ಹಣ ಸಾಲ ತರುವುದೋ ಅಥವಾ ಇಎಂಐನಲ್ಲಿ ಖರೀದಿ ಮಾಡುವುದೋ ಬೇಡ. ಈಗಾಗಲೇ ನೀವು ಶುರು ಮಾಡಿ, ಅರ್ಧದ ತನಕ ಮುಗಿದಂಥ ಪ್ರಾಜೆಕ್ಟ್ ವೊಂದರ ಬಗ್ಗೆ ನಿಮಗೆ ಆಸಕ್ತಿ ಕಳೆದುಕೊಳ್ಳುವಂತೆ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರು ತುರ್ತಾಗಿ ಕುಟುಂಬದ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಲೇಬೇಕು ಎಂಬ ಪರಿಸ್ಥಿತಿ ಉದ್ಭವಿಸುವುದರಿಂದ ಈ ಮೂಲಕ ಕೂಡ ಇತರ ವಿಚಾರಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುವುದು ಅಸಾಧ್ಯ ಆಗಲಿದೆ. ಎಲ್ಲ ಕಷ್ಟ- ಸುಖಗಳಲ್ಲಿ ಜೊತೆಯಲ್ಲಿ ಇರುವುದಾಗಿ ಮಾತು ನೀಡಿದ್ದಂಥ ವ್ಯಕ್ತಿಯೊಬ್ಬರು ನಿಮ್ಮಿಂದ ದೂರ ಆಗುವ ಸೂಚನೆ ಸಿಗಲಿದೆ. ಒಂದು ವೇಳೆ ನೀವು ಅವರಿಂದ ಸಾಲ ಪಡೆದಿದ್ದಲ್ಲಿ ಕೂಡಲೇ ವಾಪಸ್ ಮಾಡಬೇಕಾದ ಸನ್ನಿವೇಶ ಉದ್ಭವ ಆಗಲಿದೆ.
ಬೆಲೆ ಬಾಳುವ ಸೀರೆ, ಒಡವೆ ಇತ್ಯಾದಿಗಳನ್ನು ಖರೀದಿ ಮಾಡುವ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮ ಸಂಬಂಧಿಗಳ ಮನೆ ಕಾರ್ಯಕ್ರಮದ ಸಲುವಾಗಿ ಅವರಿಗೆ ಉಡುಗೊರೆ ನೀಡುವುದಕ್ಕೆ ಕೆಲವು ಖರೀದಿ ಸಹ ಮಾಡುವ ಸಾಧ್ಯತೆ ಇದೆ. ಹೆಣ್ಣುಮಕ್ಕಳಿಗೆ ತವರಿನ ಮನೆಯಲ್ಲಿ ಮುಖ್ಯವಾದ ಕಾರ್ಯಕ್ರಮಗಳಿಗೆ ಆಹ್ವಾನ ಬರಬಹುದು. ಸೋದರ ಸಂಬಂಧಿಗಳ ಮಧ್ಯೆ ಇರುವ ಭಿನ್ನಾಭಿಪ್ರಾಯ ದೂರ ಮಾಡುವುದಕ್ಕೆ ನೀವು ಬಂದು ಮಾತುಕತೆ ನಡೆಸುವಂತೆ ಕೇಳಿಕೊಳ್ಳಲಿದ್ದಾರೆ. ಇಷ್ಟು ಸಮಯ ಯಾವುದು ಹವ್ಯಾಸ ಆಗಿತ್ತೋ ಅದನ್ನು ಆದಾಯ ಬರುವಂಥ ದಾರಿಯನ್ನಾಗಿ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಲಿದ್ದೀರಿ. ನಿಮ್ಮಲ್ಲಿ ಕೆಲವರು ಇದಕ್ಕಾಗಿಯೇ ಖರೀದಿ ಮಾಡಬೇಕಾದ ಸಲಕರಣೆ- ಉಪಕರಣಗಳಿಗಾಗಿ ಹೂಡಿಕೆ ಸಹ ಮಾಡಲಿದ್ದೀರಿ. ವಿವಾಹಿತರಾಗಿದ್ದಲ್ಲಿ ನಿಮ್ಮ ಸಂಗಾತಿ ಕೂಡ ಬೆಂಬಲವಾಗಿ ನಿಂತು, ಪ್ರೋತ್ಸಾಹವನ್ನು ನೀಡಲಿದ್ದಾರೆ.
ಹಣಕ್ಕೆ ವಿಪರೀತ ಪ್ರಾಮುಖ್ಯ ಕೊಟ್ಟು ಮಾತನ್ನಾಡಲಿದ್ದೀರಿ. ನೀವು ಯಾವುದೇ ವೃತ್ತಿಯಲ್ಲಿ ಇರಲಿ, ವ್ಯವಹಾರ- ವ್ಯಾಪಾರ ಮಾಡುತ್ತಲಿರಲಿ ಅಥವಾ ಉದ್ಯೋಗದಲ್ಲಿಯೇ ಇರಲಿ, ಆ ಕೆಲಸ ಮಾಡುವುದರಿಂದ ಆರ್ಥಿಕವಾಗಿ ಹೇಗೆ ಅನುಕೂಲ ಆಗುತ್ತದೆ ಎಂಬುದನ್ನೇ ಕೇಂದ್ರ ವಿಷಯವಾಗಿ ಇಟ್ಟುಕೊಂಡು ಚರ್ಚೆ ನಡೆಸಲಿದ್ದೀರಿ. ಕೆಲವು ನಿರರ್ಥಕವಾದ ಕಾರ್ಯಗಳನ್ನು ಪೂರ್ಣ ಮಾಡುವಂತೆ ನಿಮ್ಮ ತಲೆಗೆ ಕಟ್ಟಿ, ಗೋಳು ಹೊಯ್ದುಕೊಳ್ಳಲಿದ್ದಾರೆ. ಕೋಳಿ ಸಾಕಣೆ ಮಾಡುವವರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಯೋಗ ಇದೆ. ಕೆಲವು ದೀರ್ಘಾವಧಿಯ ಆರ್ಡರ್ ಗಳು ನಿಮಗೆ ಬರಲಿವೆ. ಪ್ರೇಮಿಗಳಿಗೆ ಉತ್ತಮವಾದ ದಿನ ಇದಾಗಲಿದ್ದು, ಒಂದು ವೇಳೆ ಕಳೆದ ಕೆಲ ಸಮಯದಿಂದ ಅಭಿಪ್ರಾಯ ಭೇದ- ಮನಸ್ತಾಪ ಆಗಿದ್ದಲ್ಲಿ ಅದು ದೂರ ಮಾಡಿಕೊಳ್ಳಲು ಬೇಕಾದ ವೇದಿಕೆ ನಿಮಗೆ ದೊರೆಯಲಿದೆ. ಯಾವ ಕೆಲಸದಲ್ಲೂ ಆತುರದ ಪ್ರವೃತ್ತಿ ಬೇಡ.
ಆನ್ ಲೈನ್ ಕನ್ಸಲ್ಟೇಷನ್ ಮೂಲಕ ನಿಮ್ಮ ವೃತ್ತಿಯನ್ನು ಮಾಡುತ್ತಿದ್ದೀರಿ ಅಂತಾದಲ್ಲಿ ಈ ದಿನ ಹಣದ ಹರಿವು ಉತ್ತಮವಾಗಿ ಇರಲಿದೆ. ನೀವು ಇದುವರೆಗೆ ಪ್ರಯತ್ನ ಮಾಡದ ಹೊಸ ಖಾದ್ಯ, ಆಹಾರವನ್ನು ಪ್ರಯತ್ನ ಮಾಡಲಿದ್ದೀರಿ. ಗೆಳೆಯರ ಮೂಲಕವಾಗಿ ಕೆಲವು ಉದ್ಯೋಗದ ರೆಫರೆನ್ಸ್ ನಿಮಗೆ ದೊರೆಯಬಹುದು. ಅಪ್ಲೈ ಮಾಡಬೇಕು ಎನಿಸಿದಲ್ಲಿ ಆಮೇಲೆ ಎಂದು ಮುಂದಕ್ಕೆ ಹಾಕುತ್ತಾ ಹೋಗಬೇಡಿ. ನಲವತ್ತು ವರ್ಷದ ಮೇಲೆ ವಯಸ್ಸಾಗಿರುವವರಿಗೆ ಕೆಲವು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ವೈದ್ಯರೇ ಸಲಹೆ ನೀಡಿದ್ದಲ್ಲಿ ಅದನ್ನು ಮಾಡಿಸಿಕೊಳ್ಳುವ ಕಡೆಗೆ ಲಕ್ಷ್ಯ ನೀಡಿ. ನಿಮ್ಮಲ್ಲಿ ಕೆಲವರು ಪಿಎಫ್ ನಿಂದ ಹಣವನ್ನು ಹಿಂತೆಗೆದುಕೊಂಡು ಸ್ಥಿರಾಸ್ತಿ ಮೇಲೆ ಹಾಕುವಂಥ ಸಾಧ್ಯತೆ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕೇನಾದರೂ ಸ್ವಲ್ಪ ಪ್ರಮಾಣದ ಹಣದ ಕೊರತೆ ಕಂಡುಬಂದಲ್ಲಿ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವುದಾಗಿ ಭರವಸೆ ನೀಡಲಿದ್ದಾರೆ.
ಕೆಲವು ಪರಿಸ್ಥಿತಿಗೆ ನೀವೇ ಹೊಂದಿಕೊಂಡುಬಿಟ್ಟಿರಿ ಎಂದೆನಿಸಲಿದೆ. ಭಾವನಾತ್ಮಕವಾಗಿ ಯಾವ ಸಂಗತಿಗಳು ನಿಮಗೆ ಚಿಂತೆಗೆ ಗುರಿ ಮಾಡುತ್ತಿದ್ದವೋ ಅವು ಈಗ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ ಎಂದೆನಿಸುವುದಕ್ಕೆ ಶುರು ಆಗಲಿದೆ. ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಮುಖ್ಯವಾದ ಸಲಹೆ- ಮಾರ್ಗದರ್ಶನ ದೊರೆಯಲಿದೆ. ಈ ದಿನ ನಿಮಗೆ ಎಷ್ಟೇ ಚಿಕ್ಕ ಕೆಲಸ ಬಂದರೂ ಅದನ್ನು ಖುದ್ದು ನೀವೇ ಪೂರ್ಣಗೊಳಿಸುವುದಕ್ಕೆ ಪ್ರಯತ್ನಿಸಿ. ಏಕೆಂದರೆ ಇದರ ಮೂಲಕವಾಗಿ ನಿಮಗೆ ದೊಡ್ಡ ಕೆಲಸಗಳು, ಹೆಚ್ಚಿನ ಆದಾಯ ತರುವಂಥವು ದೊರೆಯುವ ಯೋಗ ಇರಲಿದೆ. ನಿಮ್ಮಲ್ಲಿ ಕೆಲವರು ಅಚಾನಕ್ ಎಂಬಂತೆ ದೇವಾಲಯ ದರ್ಶನ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಸ್ನೇಹಿತರು- ಸಂಬಂಧಿಗಳು ನಿಮ್ಮನ್ನು ಬಲವಂತ ಮಾಡಿಯಾದರೂ ದೇಗುಲ ದರ್ಶನವನ್ನು ಮಾಡಿಸಲಿದ್ದಾರೆ. ಇದರಿಂದ ಕೆಲವು ಪಾಸಿಟಿವ್ ಬದಲಾವಣೆಗಳು ಗಮನಕ್ಕೆ ಬರಲಿದೆ.
ನೀವು ಈ ದಿನ ಮಾಡುವ ಯಾವುದೇ ಕೆಲಸದಲ್ಲೂ ಒಂದು ಅಚ್ಚುಕಟ್ಟುತನ, ಕಸುಬುದಾರಿಕೆ ಎದ್ದು ಕಾಣುವಂತೆ ಇರಲಿದೆ. ಸಂಘ- ಸಂಸ್ಥೆಗಳಲ್ಲಿ ನಿಮ್ಮಲ್ಲಿ ಕೆಲವರನ್ನು ಪ್ರಭಾರಿಯಾಗಿ ಮುಖ್ಯ ಹುದ್ದೆಯಲ್ಲಿ ಕೂರಿಸುವ ಸಾಧ್ಯತೆ ಇದೆ. ನೀವಾಗಿಯೇ ಮೈ ಮೇಲೆ ಹಾಕಿಕೊಂಡು ಮಾಡಿದ ಜವಾಬ್ದಾರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಾಲಿನ ಪಾದ, ಮೀನಖಂಡ ಇವುಗಳಲ್ಲಿ ಸ್ವಲ್ಪ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮಲ್ಲಿ ಕೆಲವರಿಗೆ ಹೆಜ್ಜೆ ಎತ್ತಿಡುವುದೇ ಕಷ್ಟ ಎಂಬ ಪರಿಸ್ಥಿತಿ ಉದ್ಭವಿಸಬಹುದು. ಅಂಥ ಸಂದರ್ಭದಲ್ಲಿ ಕೂಡಲೇ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಇನ್ಯಾರೋ ಮಾಡಿದ ತಪ್ಪಿನಿಂದಾಗಿ ನಿಮ್ಮ ಮೇಲೆ ಕೆಲವರು ವೈಷಮ್ಯ ಸಾಧಿಸುವುದಕ್ಕೆ ಪ್ರಯತ್ನ ಮಾಡಲಿದ್ದಾರೆ. ಆದರೆ ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ.
ಲೇಖನ- ಎನ್.ಕೆ.ಸ್ವಾತಿ