
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 20ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇಲ್ಲಿಯವರೆಗಿನ ಆದಾಯ- ಖರ್ಚು ಹಾಗೂ ಭವಿಷ್ಯದಲ್ಲಿ ಮಾಡಿಕೊಳ್ಳಬೇಕಾದ ಉಳಿತಾಯ, ಹೂಡಿಕೆ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲಿದ್ದೀರಿ. ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ನಿಮಗೆ ಬಹಳ ಆಪ್ತರಾದ ವ್ಯಕ್ತಿಗಳಿಗೆ ಕೆಲವು ಉಡುಗೊರೆ ನೀಡುವ ಚಿಂತನೆ ಮಾಡಲಿದ್ದೀರಿ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿವಾದ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ವೇದಿಕೆ ಸಿಗಲಿದೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಈ ದಿನ ಸಣ್ಣದಾದರೂ ಗಾಯ ಆಗುವಂಥ ಸಾಧ್ಯತೆ ಇದೆ.
ಇನ್ನು ಸಾಕು ಎಂದುಕೊಂಡು ನೀವಾಗಿಯೇ ನಿಲ್ಲಿಸಿದ್ದ ಕೆಲಸ- ಕಾರ್ಯಗಳನ್ನು ಮತ್ತೆ ಮುಂದುವರಿಸಿಕೊಂಡು ಹೋಗಲೇಬೇಕು ಎಂಬ ಪರಿಸ್ಥಿತಿ ಎದುರಾಗಲಿದೆ. ದೂರ ಪ್ರಯಾಣವೋ ಅಥವಾ ತೀರ್ಥಕ್ಷೇತ್ರಕ್ಕೆ ಅಂತ ಹೊರಟಿದ್ದೀರಿ ಅಂತಾದಲ್ಲಿ ಸಾಮಾನ್ಯವಾಗಿ ತೆಗೆದುಕೊಂಡು ಹೋಗುವುದಕ್ಕಿಂತ ಹೆಚ್ಚಿನ ಹಣವನ್ನು ಕೈಲಿಟ್ಟುಕೊಂಡು ಹೊರಡಿ. ಒಂದು ವೇಳೆ ಸ್ವಂತ ವಾಹನದಲ್ಲಿ ತೆರಳುತ್ತಿದ್ದೀರಿ ಅಂತಾದಲ್ಲಿ ವಾಹನ ಉತ್ತಮ ಸ್ಥಿತಿಯಲ್ಲಿ ಇದೆಯಾ ಹಾಗೂ ಸರ್ವೀಸ್ ಆಗಿದೆಯಾ ಎಂಬುದನ್ನು ಸರಿಯಾಗಿ ಪರಿಶೀಲಿಸಿದ ನಂತರಷ್ಟೇ ಹೊರಡಿ.
ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ಕುಟುಂಬ ವಿಚಾರಗಳು ವಿಪರೀತ ಪ್ರಾಮುಖ್ಯ ಪಡೆದುಕೊಳ್ಳಲಿವೆ. ಸಂಗಾತಿಯ ಆರೋಗ್ಯ, ಮಕ್ಕಳ ಶಿಕ್ಷಣ, ತಂದೆ- ತಾಯಿಯ ಪರಿಸ್ಥಿತಿ ಹೀಗೆ ನಾನಾ ವಿಚಾರಗಳು ಏಕ ಕಾಲಕ್ಕೆ ಮುನ್ನೆಲೆಗೆ ಬರಲಿವೆ. ನಿಮ್ಮ ಕೆಲವು ಸಿದ್ಧಾಂತ- ನಂಬಿಕೆಗಳ ಜೊತೆಗೆ ರಾಜೀ ಮಾಡಿಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಬಹುದು. ನಿಮ್ಮಲ್ಲಿ ಯಾರು ಕಾಲಿನ ಮೀನಖಂಡದ ಸಮಸ್ಯೆಯಿಂದ ಈಗಾಗಲೇ ಬಳಲುತ್ತಾ ಇದ್ದೀರಿ, ಅಂಥವರಿಗೆ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಚರ್ಮ ಕಾಯಿಲೆಗಳು ಈಗಾಗಲೇ ಇದ್ದಲ್ಲಿ ಉಲ್ಬಣ ಆಗಬಹುದು.
ಲೇಖನ- ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ