
ಒಂದು ಕೆಲಸ ಮುಗಿಸುವುದಕ್ಕೆ ನಾಲ್ಕಾರು ಸಲ ಓಡಾಡಬೇಕು ಎಂಬ ಪರಿಸ್ಥಿತಿ ಎದುರಿಸುತ್ತೀರಿ. ನೀವು ಈ ದಿನ ಮನೆಗೆ ಬೇಕಾದಂಥ ದಿನಸಿ ಪದಾರ್ಥಗಳನ್ನು ಖರೀದಿ ಮಾಡುವಂತೆ ಇದ್ದಲ್ಲಿ ಗುಣಮಟ್ಟದ ಬಗ್ಗೆ ಹೆಚ್ಚು ನಿಗಾ ವಹಿಸಿ. ನಿಮ್ಮ ವೈಯಕ್ತಿಕ ನಿರ್ಧಾರಗಳಲ್ಲಿ ಇತರರು ವಿಪರೀತ ಮೂಗು ತೂರಿಸುತ್ತಿದ್ದಾರೆ, ಇದು ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತಿದೆ ಎಂಬುದನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಯಾವ ಮುಲಾಜು ಸಹ ನೋಡದೆ ಹೇಳುತ್ತೀರಿ. ಬೆಳಗ್ಗೆ ಹಾಸಿಗೆಯಿಂದ ಎದ್ದ ಕ್ಷಣದಿಂದಲೇ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಕುಟುಂಬ ಸದಸ್ಯರೊಬ್ಬರ ಆರೋಗ್ಯದ ಸ್ಥಿತಿ ಸ್ವಲ್ಪ ಮಟ್ಟಿಗೆ ಚಿಂತೆಗೆ ಕಾರಣ ಆಗಲಿದೆ. ಮಕ್ಕಳ ಒತ್ತಾಯದ ಮೇರೆಗೆ ನೀವು ತೆರಳುವಂಥ ಸ್ಥಳದಲ್ಲಿ ವಿಪರೀತ ಜನರು ಸೇರಿರುವುದು ನಿಮಗೆ ದಣಿವು, ಮುಜುಗರ ಉಂಟು ಮಾಡುತ್ತದೆ. ವಾಹನ ಪಾರ್ಕಿಂಗ್ ಬಗ್ಗೆ ಮುಂಚಿತವಾಗಿಯೇ ಪ್ಲಾನಿಂಗ್ ಮಾಡಿಕೊಳ್ಳುವುದು ಒಳ್ಳೆಯದು.
ನಿಮಗೆ ಗೊತ್ತಿರುವ ವಿಷಯ- ವಿಚಾರವನ್ನು ಎಷ್ಟೇ ಹತ್ತಿರದ ಸ್ನೇಹಿತರಾದರೂ ಉಚಿತವಾಗಿ ಹಂಚಿಕೊಳ್ಳಬಾರದು ಎಂಬ ಬಗ್ಗೆ ಗಟ್ಟಿ ನಿರ್ಧಾರ ಮಾಡಲಿದ್ದೀರಿ. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಆದಾಯ ಹಾಗೂ ಲಾಭದಲ್ಲಿ ಏರಿಕೆ ಆಗುವ ಸಾಧ್ಯತೆಗಳಿವೆ. ಸಣ್ಣ ಅಳತೆಯ ಫಾರ್ಮ್ ಹೌಸ್ ವೊಂದು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವ ಆಸ್ತಿಯೊಂದು ದೊರೆಯಲಿದೆ. ಕುಟುಂಬ ಸದಸ್ಯರಿಗೆ ಕೂಡ ಈ ಸ್ಥಳ ಇಷ್ಟವಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದೆ. ಹೆಣ್ಣುಮಕ್ಕಳು ಇರುವಂಥವರು ಅವರ ಶಿಕ್ಷಣ, ಮದುವೆಗಾಗಿ ಹೂಡಿಕೆ ಮಾಡುವುದಕ್ಕೆ ಸಂಗಾತಿ ಜೊತೆಗೂಡಿ ಚರ್ಚೆ ಮಾಡಲಿದ್ದೀರಿ. ನೀವು ಬಹಳ ಇಷ್ಟಪಡುವಂಥ- ರುಚಿಕಟ್ಟಾದ ಊಟ- ತಿಂಡಿಗಳನ್ನು ಈ ದಿನ ಸವಿಯಲಿದ್ದೀರಿ.
ಸಾವಯವ ಕೃಷಿ ಮಾಡುವಂಥ ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗೋಪಾಯಗಳು ಕಾಣಿಸಿಕೊಳ್ಳಲಿವೆ. ಇಷ್ಟು ಸಮಯ ಒತ್ತಡ ಎನಿಸಿದ್ದ ಪ್ರಾಜೆಕ್ಟ್ ನಿಮ್ಮ ಕೈ ಹಿಡಿಯಲಿದೆ. ನಿಮ್ಮಲ್ಲಿ ಯಾರು ಮನೆ ನಿರ್ಮಾಣ ಅಥವಾ ನವೀಕರಣ ಮಾಡಬೇಕು ಎಂದಿದ್ದೀರಿ, ಆಗ ಆರ್ಥಿಕ ಅಗತ್ಯಗಳು ಇದೆ ಎಂದಾದರೂ ಹೊಸದಾಗಿ ನಿಮಗೆ ಸ್ನೇಹಿತರಾದವರ ಮೇಲೆ ಹಣಕಾಸು ವಿಚಾರಕ್ಕೆ ಅವಲಂಬಿತರಾಗುವುದಕ್ಕೆ ಹೋಗಬೇಡಿ. ವಿವಾಹ ವಯಸ್ಕರಾಗಿದ್ದು, ವಧು ಅಥವಾ ವರ ಅನ್ವೇಷಣೆಯಲ್ಲಿ ತೊಡಗಿರುವಂಥವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ಸ್ವಂತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಇರುವವರು ಹೊಸದಾಗಿ ಹೂಡಿಕೆ ಬೇಕು ಎಂಬ ಕಾರಣಕ್ಕೆ ಪಾಲುದಾರರನ್ನು ಹುಡುಕಿಕೊಳ್ಳಲಿದ್ದೀರಿ. ಕೆಲವರು ತಾವಾಗಿಯೇ ಈ ಬಗ್ಗೆ ನಿಮ್ಮ ಬಳಿ ಪ್ರಸ್ತಾವ ತರುವ ಸಾಧ್ಯತೆ ಕೂಡ ಇದೆ.
ನಿಮ್ಮ ಬೆನ್ನು ಬಿದ್ದ ವ್ಯಕ್ತಿಯೊಬ್ಬರು ಇಡೀ ದಿನ ಮಾನಸಿಕವಾಗಿ ಕಿರಿಕಿರಿ ಮಾಡಲಿದ್ದಾರೆ. ಅದರಲ್ಲೂ ವಯಸ್ಸಿನಲ್ಲಿ ಹಿರಿಯರು ಅಂತಲೋ ಅಥವಾ ಸಮಸ್ಯೆಯಲ್ಲಿ ಇರುವವರು ಎಂಬ ಅನುಕಂಪ ತೋರಿಸಿ, ಸಹಾಯದ ಭರವಸೆ ನೀಡುವ ಮಾತುಗಳನ್ನು ಆಡುವುದೇ ಸಮಸ್ಯೆಯಾಗಿ ನಿಮ್ಮನ್ನು ಕಾಡಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಬೆಳ್ಳಿಯಿಂದ ತಯಾರಿಸಿದ ಒಡವೆ, ತಟ್ಟೆ- ಲೋಟಗಳನ್ನು ಖರೀದಿ ಮಾಡುವ ಯೋಗ ಈ ದಿನ ಇದೆ. ವಿಜ್ಞಾನಿಗಳು, ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಸರ್ಕಾರದ ಪ್ರಾಜೆಕ್ಟ್ ವೊಂದರ ಭಾಗವಾಗಿ ಅಥವಾ ಮುನ್ನಡೆಸುವಂತೆ ಕೇಳಿಕೊಳ್ಳಬಹುದು. ಚಾಲನೆಯನ್ನು ವೃತ್ತಿಯಾಗಿ ಮಾಡುತ್ತಾ ಇರುವವರು ವಾಹನ ಚಾಲನೆ ಮಾಡುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವ ಎಚ್ಚರಿಕೆಗಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ.
ಬಹಳ ದಿನಗಳ ನಂತರ ನಿಮ್ಮ ಮನಸ್ಸಿಗೆ ಹತ್ತಿರ ಆದವರನ್ನು ಭೇಟಿ ಆಗುವ ಯೋಗ ಈ ದಿನ ಇದೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಡಯಟ್ ಅಂದರೆ ಆಹಾರ ಪಥ್ಯದ ವಿಚಾರಕ್ಕೆ ಆದ್ಯತೆಯನ್ನು ನೀಡಲಿದ್ದೀರಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ತಜ್ಞರನ್ನೇ ಭೇಟಿ ಆಗಿ, ಅವರಿಂದ ಸಲಹೆ ಪಡೆಯುವ ಬಗ್ಗೆ ಕೂಡ ಚಿಂತನೆ ನಡೆಸಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಗೆ ಸಾಕು ಪ್ರಾಣಿಗಳನ್ನು ತರುವಂಥ ಸಾಧ್ಯತೆ ಇದೆ. ಗ್ಯಾಜೆಟ್ ಖರೀದಿ ಮಾಡಬೇಕು, ಅದರಲ್ಲೂ ಈಗ ಆಫರ್ ಇದೆ ಅಂತಲೋ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದಲ್ಲಿ ನೋ ಕಾಸ್ಟ್ ಇಎಂಐ ಸಿಗುತ್ತದೆ ಎಂಬ ಕಾರಣಕ್ಕೋ ಕೊಳ್ಳುವುದಕ್ಕೆ ಮುಂದಾಗಬೇಡಿ. ಏಕೆಂದರೆ, ನಿಮಗೆ ಅಗತ್ಯ ಇಲ್ಲದ ವಸ್ತುವೊಂದನ್ನು, ಅದರಲ್ಲೂ ಈ ರೀತಿಯಾದ್ದನ್ನು ಕೊಳ್ಳುವ ಸಾಧ್ಯತೆ ಇದೆ. ವಿವೇಚನೆ ಬಳಸಿ ಯಾವುದೇ ನಿರ್ಧಾರ ಮಾಡುವುದು ಒಳ್ಳೆಯದು.
ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಉದ್ಯೋಗ ದೊರೆಯಲು ನಿಮ್ಮ ಶಿಫಾರಸು ಮಾಡಬೇಕು ಎಂದು ಕೆಲವರು ನಿಮ್ಮನ್ನು ಹುಡುಕಿಕೊಂಡು ಬರಲಿದ್ದಾರೆ. ನಿಮ್ಮ ಪ್ರಭಾವದ ಕಾರಣಕ್ಕೆ ಉದ್ಯೋಗ ದೊರಕಿಸಿ ಕೊಡುವುದಕ್ಕೆ ಸಾಧ್ಯವಿದ್ದಲ್ಲಿ ಸಹಾಯವನ್ನು ಮಾಡಿ. ಗೋಬಿ ಮಂಚೂರಿ, ನೂಡಲ್ಸ್, ಪಾನಿಪೂರಿ- ಮಸಾಲಪೂರಿ ಇಂಥವುಗಳ ಮಾರಾಟ ಮಾಡುತ್ತಾ ಆ ಮೂಲಕ ಆದಾಯ ಗಳಿಸುತ್ತಾ ಇರುವವರಿಗೆ ದೊಡ್ಡ ಆರ್ಡರ್ ದೊರೆಯುವ ಯೋಗ ಇದೆ. ಇನ್ನು ನಿಮ್ಮಲ್ಲಿ ಕೆಲವರು ವ್ಯವಹಾರ ವಿಸ್ತರಣೆಗೆ ಶ್ರಮವನ್ನು ಹಾಕಲಿದ್ದೀರಿ. ಬಾಡಿಗೆ ಮನೆಯಲ್ಲಿ ಇದ್ದು, ಅದರ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಮನಸ್ಸಿಗೆ ಹಿಡಿಸಿದಂಥ ಪ್ರದೇಶದಲ್ಲಿ ಮನೆ ದೊರೆಯುವ ಅವಕಾಶ ಇದೆ. ನಿಮ್ಮಲ್ಲಿ ಕೆಲವರು ಈಗಾಗಲೇ ಎಫ್.ಡಿ. ಮಾಡಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ಮೀಸಲು ಇಡಬೇಕಾಗುತ್ತದೆ. ಎಷ್ಟು ಸಾವಧಾನದಿಂದ ಕೆಲಸ- ಕಾರ್ಯಗಳು ಮಾಡಬೇಕು ಅಂತ ಅಂದುಕೊಂಡರೂ ಎದ್ದು ಬಿದ್ದು ಆತುರದಲ್ಲಿ ಪೂರ್ಣ ಮಾಡಬೇಕು ಎಂಬ ಸನ್ನಿವೇಶ ಎದುರಾಗಲಿದೆ. ಸ್ನೇಹಿತರು- ಆಪ್ತರು ಕೇಳಿದರೆ ಸಹಾಯ ಮಾಡುತ್ತಾರೆ, ಹಣಕಾಸಿನ ಸಾಲ ನೀಡುತ್ತಾರೆ ಎಂಬ ಕಾರಣಕ್ಕೆ ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತ ಆಗುವುದು, ಪ್ರತಿ ಸಲ ಅವರ ಮೇಲೇ ಒತ್ತಡ ಹಾಕುವುದು ಹೇಗೆ ಎಂಬ ಬಗ್ಗೆ ನಿಮ್ಮಲ್ಲಿ ಚಿಂತನೆ ಶುರು ಆಗಲಿದೆ. ಸಂತಾನ ಅಪೇಕ್ಷಿತರಿಗೆ ನಿರೀಕ್ಷಿತವಾದ ಬೆಳವಣಿಗೆಯಿಂದ ಮನಸ್ಸಿಗೆ ಸಮಾಧಾನ ಆಗಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತಾತ್ಕಾಲಿಕವಾಗಿ- ಕೆಲವು ದಿನಗಳ ಅಥವಾ ತಿಂಗಳುಗಳ ಮಟ್ಟಿಗೆ ಹೊಸ ಜವಾಬ್ದಾರಿಯೊಂದನ್ನು ನೀಡುವುದಾಗಿ ಮೇಲಧಿಕಾರಿಗಳು ಸೂಚಿಸುವಂಥ ಸಾಧ್ಯತೆಗಳು ಇವೆ.
ಶುಭ ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಭಾಗೀ ಆಗಲಿದ್ದೀರಿ. ಸಂಗಾತಿಯ ಅಪೇಕ್ಷೆ ಮೇರೆಗೆ ಕೆಲವು ಸ್ಥಳಗಳಿಗೆ ಕರೆದುಕೊಂಡು ಹೋಗಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗ ಮಾಡುತ್ತಿರುವ ಉದ್ಯೋಗದಿಂದ ಬದಲಾವಣೆಗಾಗಿ ಪ್ರಯತ್ನ- ಸಿದ್ಧತೆಯನ್ನು ಮಾಡಿಕೊಳ್ಳಲು ಕೆಲವು ಸ್ನೇಹಿತರನ್ನು ಭೇಟಿ ಆಗಲಿದ್ದೀರಿ. ಕಣ್ಣಿನ ಪವರ್ ಗೆ ಸಂಬಂಧಿಸಿದಂತೆ ಕನ್ನಡಕ ಖರೀದಿ ಅಥವಾ ಲೆನ್ಸ್ ಕೊಳ್ಳುವುದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಖರೀದಿಸುತ್ತಿದ್ದೀರಿ ಅಂತಾದಲ್ಲಿ ಬೆಲೆಯ ಮೇಲೆ ಸರಿಯಾದ ಗಮನವನ್ನು ಕೊಡಿ. ಬ್ರ್ಯಾಂಡೆಡ್ ಎಂಬ ಮಾಯೆಗೆ ಸಿಲುಕಿಕೊಂಡು ಹೆಚ್ಚು ಹಣ ಹಾಕಿ ಕೊಂಡರೆ ಆ ನಂತರ ಪರಿತಪಿಸುವಂತೆ ಆಗಲಿದೆ. ಸಿಹಿ ಪದಾರ್ಥಗಳ ಸೇವನೆಯಿಂದ ಸಾಧ್ಯವಾದಷ್ಟೂ ದೂರ ಇರುವುದು ಒಳಿತು. ಅದರಿಂದ ನಿಮ್ಮಲ್ಲಿ ಕೆಲವರಿಗೆ ಅನಾರೋಗ್ಯ ಸಮಸ್ಯೆಗಳು ಆಗಬಹುದು, ಎಚ್ಚರಿಕೆ.
ಕೆಲವು ಗಂಭೀರವಾದ ಸನ್ನಿವೇಶ ಈ ದಿನ ಎದುರಾಗಲಿದೆ. ಭವಿಷ್ಯದಲ್ಲಿ ದೊಡ್ಡ ಬದಲಾವಣೆಗಳನ್ನು ಎದುರುಗೊಳ್ಳುವುದಕ್ಕೆ ಸಿದ್ಧತೆ ಆರಂಭ ಮಾಡಬೇಕಾಗುತ್ತದೆ ಎಂಬ ಸುಳಿವು ಸಿಗಲಿದೆ. ತಂದೆ ಅಥವಾ ತಂದೆ ಸಮಾನರಾದವರ ಆರ್ಥಿಕ ಅಗತ್ಯಗಳನ್ನು ಪೂರೈಸುವುದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣ ಮಾಡಲಿದ್ದೀರಿ. ಷೇರು- ಮ್ಯೂಚುವಲ್ ಫಂಡ್ ಗಳಲ್ಲಿ ಹೊಸ ಸ್ಟ್ರಾಟೆಜಿ ಜೊತೆಗೆ ಹೂಡಿಕೆ ಮಾಡುವ ಬಗ್ಗೆ ಪರಿಣತರ ಜೊತೆಗೆ ಚರ್ಚೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣದ ಸಲುವಾಗಿ ಈಗಾಗಲೇ ಮಾಡಿಕೊಂಡಿದ್ದಂಥ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಈ ದಿನ ಮನೆ ಮಟ್ಟಿಗಾದರೂ ಸಣ್ಣ- ಪುಟ್ಟ ಕಾರ್ಯಕ್ರಮ ಆಯೋಜನೆ ಮಾಡುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನಿಮಗೆ ಗೊತ್ತಿರುವಂಥ ಕೌಶಲವೊಂದಕ್ಕೆ ಬೇಡಿಕೆ ಕಂಡುಬಂದು, ತುರ್ತಾಗಿ ಕೆಲಸ ಮುಗಿಸಿಕೊಡಿ ಎಂದು ಕೆಲವರು ನಿಮ್ಮ ಸಹಾಯ ಕೇಳಿಕೊಂಡು ಬರಬಲಿದ್ದಾರೆ.
ಲೇಖನ- ಎನ್.ಕೆ.ಸ್ವಾತಿ