
ಈ ದಿನವು ಸಾಮಾಜಿಕವಾಗಿ ಬಿಡುವಿಲ್ಲದಷ್ಟು ಕೆಲಸಗಳು ಇರುತ್ತವೆ. ಸಮಾಜದ ಮುಖಂಡರಿಗೆ, ರಾಜಕಾರಣಿಗಳಿಗೆ ಮತ್ತು ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳಿಗೆ ಶುಭವಾದ ದಿನ ಇದಾಗಿರಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವದ ಗುಣಗಳು ಮೆಚ್ಚುಗೆಗೆ ಪಾತ್ರವಾಗಲಿವೆ. ಉದ್ಯಮಿಗಳು ಹೊಸ ಮಾರುಕಟ್ಟೆ ತಂತ್ರಗಳನ್ನು ಜಾರಿಗೆ ತರಲು ಅತ್ಯುತ್ತಮ ಸಮಯ. ಕೃಷಿಕರಿಗೆ ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸ ಬೆಳೆಸಿಕೊಳ್ಳುವಿರಿ. ಆರ್ಥಿಕವಾಗಿ ಹಳೆಯ ಹೂಡಿಕೆಗಳು ಲಾಭ ತರಲಿದ್ದು, ಹೊಸ ಆಸ್ತಿ ಖರೀದಿಯ ಯೋಜನೆ ಸಫಲವಾಗಲಿದೆ. ಮಹಿಳೆಯರು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದೀರಿ. ಇನ್ನು ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ರಕ್ತದೊತ್ತಡದ ಬಗ್ಗೆ ಜಾಗರೂಕರಾಗಿರಿ.
ಕಲಾವಿದರು, ಬರಹಗಾರರು ಮತ್ತು ಮನೋವಿಜ್ಞಾನಿಗಳಿಗೆ ಅತ್ಯಂತ ಕ್ರಿಯೇಟಿವ್ ಆ ದಿನ. ಸ್ವಂತದ್ದೊಂದು ಕ್ಲಿನಿಕ್ ಆರಂಭಿಸುವ ಸಾಧ‌್ಯತೆ ವೈದ್ಯರಿಗೆ ಇದೆ. ಇನ್ನು ಸ್ನೇಹಿತರ ಮಧ್ಯೆ ಇರುವಂಥ ಅಭಿಪ್ರಾಯ ಭೇದವನ್ನು ದೂರ ಮಾಡಿ, ಭಾವನಾತ್ಮಕ ಬಂಧಗಳನ್ನು ಬೆಸೆಯುವಲ್ಲಿ ನೀವು ಪ್ರಮುಖ ಪಾತ್ರ ವಹಿಸುವಿರಿ. ಗೃಹಿಣಿಯರಿಗೆ ಕುಟುಂಬದ ಸದಸ್ಯರ ನಡುವೆ ಸಾಮರಸ್ಯ ಮೂಡಿಸಲು ಉತ್ತಮ ಅವಕಾಶ ಸಿಗಲಿದೆ. ಸಣ್ಣ ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ನಂಬಿಕೆ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಗೌರವ ವೃದ್ಧಿಯಾಗುವ ದಿನವಿದು. ಯುವಜನತೆ ವೈಯಕ್ತಿಕ ಸಂಬಂಧಗಳಲ್ಲಿ ಹೊಸ ತಿರುವು ಕಾಣಲಿದ್ದಾರೆ. ಮಾನಸಿಕ ಶಾಂತಿಗಾಗಿ ಸಂಗೀತ ಅಥವಾ ಪ್ರಕೃತಿಯ ಒಡನಾಟದಲ್ಲಿ ಸಮಯ ಕಳೆಯುವುದು ಉತ್ತಮ. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡವರಿಗೆ ಎಲ್ಲ ಕಡೆಯಿಂದ ಉತ್ತಮ ಮನ್ನಣೆ ದೊರೆಯಲಿದೆ.
ಬೌದ್ಧಿಕ ವಿಚಾರಗಳನ್ನೇ ಚಿಂತಿಸುವವರು, ಜ್ಞಾನಾರ್ಜನೆಯಲ್ಲಿ ತೊಡಗಿರುವವರಿಗೆ ಪ್ರಗತಿಯ ದಿನ ಇದಾಗಿರಲಿದೆ. ವಕೀಲರು, ಬ್ಯಾಂಕಿಂಗ್ ಅಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹಿರಿಯ ನಾಗರಿಕರಿಗೆ ಕುಟುಂಬದಲ್ಲಿ ವಿಶೇಷ ಗೌರವ ಮತ್ತು ಸಲಹೆಗಳಿಗೆ ಮೌಲ್ಯ ದೊರೆಯಲಿದೆ. ಆರ್ಥಿಕವಾಗಿ ಹೂಡಿಕೆ ಮಾಡಲು ಇದು ಪ್ರಶಸ್ತ ಸಮಯವಾಗಿದ್ದು, ಷೇರು ಮಾರುಕಟ್ಟೆಯಲ್ಲಿ ತೊಡಗಿರುವವರಿಗೆ ಲಾಭದಾಯಕ ದಿನ. ವಿದ್ಯಾರ್ಥಿಗಳು ಸಂಶೋಧನಾ ಕಾರ್ಯಗಳಲ್ಲಿ ಯಶಸ್ಸು ಕಾಣುವರು. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳ ನಿರ್ವಹಣೆಯಲ್ಲಿ ನಿಮ್ಮ ಪಾತ್ರ ದೊಡ್ಡದಾಗಿರಲಿದೆ. ಬಡವರ ಮತ್ತು ಅಸಹಾಯಕರ ಸೇವೆಗೆ ನಿಮ್ಮ ಒಲವು ಹೆಚ್ಚಿರಲಿದ್ದು, ಸಮಾಜಮುಖಿ ಕೆಲಸಗಳಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ವಿಶೇಷವಾಗಿ ಪಿತ್ತಕೋಶದ ಸಮಸ್ಯೆಗಳ ಬಗ್ಗೆ ಗಮನವಿರಲಿ.
ತಾಂತ್ರಿಕ ಪರಿಣತರು, ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಸರ್ಕಾರಿ ಕೆಲಸಗಳನ್ನು ಗುತ್ತಿಗೆ ಪಡೆದು ಮಾಡಿಸುವಂಥ ಗುತ್ತಿಗೆದಾರರಿಗೆ ಹೊಸದಾಗಿ ಪ್ರಗತಿ ಕಂಡುಬರಲಿದೆ. ನೀವು ಪ್ರತಿನಿಧಿಸುವ ಸಮಾಜದ ಅಭಿವೃದ್ಧಿಗಾಗಿ ಆಧುನಿಕ ಯೋಜನೆಗಳನ್ನು ರೂಪಿಸುವಿರಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಚೇತರಿಕೆ ಕಂಡುಬರಲಿದೆ. ಮಧ್ಯಮ ವರ್ಗದವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕತೆ ವಹಿಸುವುದು ಅಗತ್ಯ, ಅನಗತ್ಯ ಖರ್ಚುಗಳು ಎದುರಾಗಬಹುದು. ಕಾರ್ಮಿಕರು ಮತ್ತು ಶ್ರಮಿಕ ವರ್ಗದವರು ತಮ್ಮ ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ಗೌರವ ಪಡೆಯುವರು. ಅನಿರೀಕ್ಷಿತ ತಿರುವುಗಳು ಜೀವನದಲ್ಲಿ ಹೊಸ ದಾರಿಯನ್ನು ತೋರಿಸಲಿವೆ. ಪ್ರಯಾಣದ ವೇಳೆ ಅಪರಿಚಿತ ವ್ಯಕ್ತಿಗಳ ಮೇಲೆ ಅತಿಯಾದ ನಂಬಿಕೆ ಬೇಡ. ನಿಮ್ಮ ವಿಭಿನ್ನ ಆಲೋಚನಾ ಶೈಲಿಯಿಂದಾಗಿ ಕಠಿಣ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಲಿದೆ.
ಮಾಧ್ಯಮ ಪ್ರತಿನಿಧಿಗಳು, ಮಾರ್ಕೆಟಿಂಗ್ ವೃತ್ತಿಪರರು ಮತ್ತು ಸಂವಹನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಅತ್ಯಂತ ಲಾಭದಾಯಕ ದಿನ ಇದಾಗಿರಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಹೊಸ ಗ್ರಾಹಕರ ಸಂಪರ್ಕ ಮತ್ತು ವಹಿವಾಟು ವೃದ್ಧಿಯಾಗುವ ಎಲ್ಲ ಲಕ್ಷಣಗಳಿವೆ. ಯುವಕರು ತಾಂತ್ರಿಕ ಕೌಶಲಗಳನ್ನು ಕಲಿಯಲು ಹಣವನ್ನು ಖರ್ಚು ಮಾಡುವಿರಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಅಥವಾ ವೇತನ ಹೆಚ್ಚಳದ ಸೂಚನೆ ಸಿಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ದೀರ್ಘಕಾಲದ ಸಾಲಗಳಿಂದ ಮುಕ್ತಿ ಪಡೆಯುವ ಹಾದಿ ಸುಗಮವಾಗಲಿದೆ. ಮಾತಿನ ಚತುರತೆಯಿಂದ ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಹೇಳುವುದಾದರೆ, ನರಗಳ ದೌರ್ಬಲ್ಯ ಅಥವಾ ನಿದ್ರಾಹೀನತೆಯ ಸಮಸ್ಯೆ ಕಾಡಬಹುದು. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ ನಿರ್ಲಕ್ಷ್ಯ ಬೇಡ. ಹೊಸ ಸ್ನೇಹ ಸಂಬಂಧಗಳು ವೃತ್ತಿ ಜೀವನಕ್ಕೆ ಸಹಕಾರಿಯಾಗಲಿವೆ.
ಸಿನಿಮಾ, ಫ್ಯಾಷನ್, ಹೋಟೆಲ್ ಉದ್ಯಮ ಮತ್ತು ಸೌಂದರ್ಯವರ್ಧಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ವೈಭವದ ದಿನ ಇದಾಗಿರಲಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ಹೊಸ ಉದ್ಯೋಗ ಅಥವಾ ಉದ್ಯಮದ ಅವಕಾಶಗಳನ್ನು ಪಡೆಯುವರು. ಸಮಾಜದ ಗಣ್ಯ ವ್ಯಕ್ತಿಗಳೊಂದಿಗೆ ಒಡನಾಟ ಹೆಚ್ಚಾಗಲಿದ್ದು, ಇದು ನಿಮ್ಮ ವೃತ್ತಿ ಜೀವನಕ್ಕೆ ಪೂರಕವಾಗಲಿದೆ. ಪ್ರೇಮಿಗಳಿಗೆ ತಮ್ಮ ಸಂಬಂಧವನ್ನು ವಿವಾಹದ ಹಂತಕ್ಕೆ ಕೊಂಡೊಯ್ಯಲು ಮನೆಯವರ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಸಮೃದ್ಧಿಯ ದಿನವಾಗಿದ್ದು, ಐಷಾರಾಮಿ ವಸ್ತುಗಳ ಮೇಲೆ ಹೂಡಿಕೆ ಮಾಡುವಿರಿ. ನಿಮ್ಮ ಆಕರ್ಷಕ ವ್ಯಕ್ತಿತ್ವವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೇಂದ್ರಬಿಂದು ಆಗಲಿದೆ. ಮನೆಯಲ್ಲಿ ಸೃಜನಾತ್ಮಕ ಮತ್ತು ಕಲಾತ್ಮಕ ಪರಿಸರವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಲಿದ್ದು, ಅದರಲ್ಲಿ ನೀವು ಯಶಸ್ವಿಯಾಗುವಿರಿ. ಹಾರ್ಮೋನ್ ಸಮಸ್ಯೆಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳಿ.
ಸಂಶೋಧಕರು, ವೈದ್ಯಕೀಯ ಕ್ಷೇತ್ರದ ಪರಿಣತರು ಮತ್ತು ವಿಜ್ಞಾನಿಗಳಿಗೆ ಮಹತ್ವದ ಸಾಧನೆಯ ದಿನ ಆಗಿರಲಿದೆ. ಸಮಾಜದ ಒಳಿತಿಗಾಗಿ ಹೊಸ ಸಂಶೋಧನೆಗಳಲ್ಲಿ ತೊಡಗಿರುವವರಿಗೆ ಮನ್ನಣೆ ಸಿಗಲಿದೆ. ಆಧ್ಯಾತ್ಮಿಕ ಚಿಂತಕರಿಗೆ ಮತ್ತು ಯೋಗ ಗುರುಗಳಿಗೆ ನಿಮ್ಮನ್ನು ಅನುಸರಿಸುವಂಥ ಜನರು ಹೆಚ್ಚೆಚ್ಚು ಸೇರ್ಪಡೆ ಆಗಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಮಧ್ಯಮ ವರ್ಗದವರು ಸಣ್ಣಪುಟ್ಟ ಸಂಕಷ್ಟ ಎದುರಿಸಿದರೂ ಸ್ನೇಹಿತರು- ಸಂಬಂಧಿಗಳ ಸಮಯೋಚಿತ ಸಹಾಯದಿಂದ ಅದರಿಂದ ಹೊರಗೆ ಬರುವಿರಿ. ಒಬ್ಬರೇ ತಮ್ಮ ಗುರಿಯ ಕಡೆಗೆ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಸತ್ಯದ ಪರವಾಗಿ ಮಾತನಾಡುವ ನಿಮ್ಮ ಗುಣವು ಮಾಧ್ಯಮ- ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಪ್ರತಿಷ್ಠೆ ತರಲಿದೆ. ಹಳೆಯ ವೈಮನಸ್ಸು ಮರೆತು ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಇದು ಸಕಾಲ. ಮಾನಸಿಕ ಶಾಂತಿಗಾಗಿ ಧ್ಯಾನ ಮತ್ತು ಓದಿನಲ್ಲಿ ಸಮಯ ಕಳೆಯಿರಿ.
ಕಾರ್ಖಾನೆ ಮಾಲೀಕರು, ಶ್ರಮಿಕ ವರ್ಗ ಮತ್ತು ನ್ಯಾಯಾಂಗ ಇಲಾಖೆಯಲ್ಲಿ ಇರುವವರಿಗೆ ಬೆಳವಣಿಗೆಗೆ ಅನುಕೂಲವಾದ ದಿನ ಇದಾಗಿರುತ್ತದೆ. ನೀವು ಕಾರ್ಯ ನಿರ್ವಹಿಸುವ ವ್ಯವಸ್ಥೆಯ ಒಳಗೆ ಶಿಸ್ತು ಮತ್ತು ಕೆಲವು ನೀತಿ ಸಂಹಿತೆ ಜಾರಿಗೆ ತರಲು ಶ್ರಮಿಸುವಿರಿ. ಆರ್ಥಿಕ ಲಾಭವು ನಿಧಾನವಾಗಿ ಬರಬಹುದು, ಆದರೆ ಅದು ಬಹಳ ಸ್ಥಿರವಾಗಿರುತ್ತದೆ. ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಹೊಸ ಭೂಮಿ ಅಥವಾ ಉಪಕರಣಗಳ ಖರೀದಿಯಲ್ಲಿ ಲಾಭ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವರ ಮಾರ್ಗದರ್ಶನ ಪಡೆಯುವುದು ಅವಶ್ಯಕ. ನ್ಯಾಯಾಲಯದ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಇಂದು ಶುಭ ಸುದ್ದಿ ಕೇಳಿಬರಲಿದೆ. ಎನ್ ಜಿಒಗಳಲ್ಲಿ ಕಾರ್ಯ ನಿರ್ವಹಿಸುವವರು ಸಮಾಜದ ಕೆಳವರ್ಗದ ಜನರ ಅಭ್ಯುದಯಕ್ಕಾಗಿ ಪ್ರಮುಖ ಯೋಜನೆಗಳನ್ನು ರೂಪಿಸುವಿರಿ. ನಿಮ್ಮ ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ- ಸನ್ಮಾನದ ಮೂಲಕವಾಗಿ ಪ್ರತಿಫಲ ದೊರೆಯಲಿದೆ.
ಸೈನ್ಯ, ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ, ಕ್ರೀಡಾಳುಗಳಿಗೆ ಮತ್ತು ಶಸ್ತ್ರಚಿಕಿತ್ಸಕರಿಗೆ ಅತ್ಯಂತ ಶುಭವಾದ ದಿನ ಇದಾಗಿರುತ್ತದೆ. ಕುಟುಂಬ ಸದಸ್ಯರ ಸಂಕಷ್ಟಗಳಿಗೆ ಸಹಾಯ ಮಾಡುವಲ್ಲಿ ನೀವು ಮುಂಚೂಣಿಯಲ್ಲಿರುವಿರಿ. ಯುವಕರು ಸಾಹಸಮಯ ಕೆಲಸಗಳಲ್ಲಿ ಅಥವಾ ಸ್ಪರ್ಧೆಗಳಲ್ಲಿ ಯಶಸ್ಸು ಕಾಣುವರು. ಭೂಮಿಗೆ ಸಂಬಂಧಿಸಿದ ವ್ಯವಹಾರಸ್ಥರಿಗೆ ಅಥವಾ ಸಿವಿಲ್ ಇಂಜಿನಿಯರ್‌ಗಳಿಗೆ ದೊಡ್ಡ ಲಾಭ ನಿರೀಕ್ಷಿಸಬಹುದು. ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಅಥವಾ ರಕ್ತದಾನದಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೋಪವನ್ನು ಹತೋಟಿಯಲ್ಲಿಡುವುದು ನಿಮ್ಮ ಕುಟುಂಬದ ನೆಮ್ಮದಿಗೆ ಅತಿ ಮುಖ್ಯ. ಸಹೋದರರೊಂದಿಗೆ ಇದ್ದ ಆಸ್ತಿ ವಿವಾದಗಳು ಇತ್ಯರ್ಥವಾಗುವ ಹಂತಕ್ಕೆ ಬರಲಿವೆ. ಆರ್ಥಿಕವಾಗಿ ನೀವು ಬಹಳ ಸಬಲರಾಗುವ ದಿನವಿದು. ಶಸ್ತ್ರಚಿಕಿತ್ಸೆಯಂತಹ ವೈದ್ಯಕೀಯ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಲೇಖನ- ಎನ್.ಕೆ.ಸ್ವಾತಿ