ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 4ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮಗೆ ಒಳ್ಳೆಯದೇನೋ ಸಂಭವಿಸಲಿದೆ ಎಂಬ ಸೂಚನೆ ಈ ದಿನ ದೊರೆಯಲಿದೆ. ಒಂದು ವೇಳೆ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ಅದೇ ರೀತಿ ಈಗಾಗಲೇ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದೀರಿ ಅಂತಾದಲ್ಲಿ ಅಲ್ಲಿ ವೇತನ ಹೆಚ್ಚಳ ಅಥವಾ ಈಗ ಮಾಡುತ್ತಿರುವಂಥ ಉತ್ತಮ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಹುಡುಕಿಕೊಂಡು ಬರಬಹುದು. ಮನೆ ಖರೀದಿಗೆ ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಇದೆ. ಅದರಲ್ಲೂ ಕಟ್ಟಿರುವ ಮನೆಯನ್ನು ಹುಡುಕುತ್ತಿದ್ದೀರಿ ಅಂತಾದಲ್ಲಿ ಅಂಥವರಿಗೆ ಇಷ್ಟವಾಗುವಂಥದ್ದು ಸಿಗುವ ಅವಕಾಶಗಳು ಬಹಳ ಹೆಚ್ಚಿಗೆ ಇವೆ. ದೇವತಾ ಕಾರ್ಯಗಳಿಗೆ ನೀವು ತೊಡಗಿಕೊಳ್ಳುವುದರಿಂದ ಒಂದು ಬಗೆಯ ಮಾನಸಿಕವಾದ ನೆಮ್ಮದಿ ದೊರೆಯಲಿದೆ.
ಬಜೆಟ್ ಹಾಕಿಕೊಂಡಂತೆ ಯಾವುದೂ ಸಾಗುವುದಿಲ್ಲ. ಆರಂಭದಲ್ಲಿ ಹೇಳಿದಂತೆ ನಿಮಗೆ ಬೇಕಾದವರು ಸಹ ನಡೆದುಕೊಳ್ಳುವುದಿಲ್ಲ. ಆ ಕಾರಣಕ್ಕೆ ಹೆಚ್ಚುತ್ತಿರುವ ಖರ್ಚು ಹಾಗೂ ವೆಚ್ಚ ನಿಮ್ಮನ್ನು ಆತಂಕಕ್ಕೆ ಗುರಿ ಮಾಡಲಿದೆ. ನಿಮಗೆ ಅರಿವಿಲ್ಲದಂತೆಯೂ ಅಥವಾ ಯಾವುದೋ ಉತ್ಸಾಹದಲ್ಲಿ ಒಪ್ಪಿಕೊಂಡ ಕೆಲಸವು ಬಹಳ ಕಷ್ಟ ಎಂಬುದು ಆ ನಂತರ ಅರಿವಿಗೆ ಬರಲಿದೆ. ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಮಾಡುತ್ತಿರುವಂತಹವರಿಗೆ ಆದಾಯದಲ್ಲಿನ ಇಳಿಕೆ ಆತಂಕಕ್ಕೆ ಕಾರಣ ಆಗಲಿದೆ. ಹಣಕಾಸಿನ ವಿಚಾರಕ್ಕೆ ನಿಮಗೆ ನೆರವು ನೀಡುವುದಾಗಿ ಹೇಳಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಅರ್ಧದಷ್ಟು ಮುಗಿಸಿ ಆಗಿದೆ ಎಂಬಂತಹ ಕೆಲಸಗಳನ್ನು ಮತ್ತೆ ಮೊದಲಿಂದ ಆರಂಭಿಸಬೇಕಾದ ಸನ್ನಿವೇಶಗಳು ಎದುರಾಗಲಿವೆ.
ಮಕ್ಕಳು ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಅವಕಾಶ ನಿಮಗಿದೆ. ಈ ದಿನ ನೀವು ರುಚಿಕಟ್ಟಾದ ಊಟ ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ಮನೆ ಜಮೀನು ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಕೆಲವು ಕೆಲಸಗಳು ನೀವು ಅಂದುಕೊಂಡಿದ್ದಕ್ಕಿಂತ ಬಹಳ ವೇಗವಾಗಿ ನಡೆದು ಹೋಗಲಿವೆ. ನಿಮಗೆ ಬಹಳ ಮುಖ್ಯ ಎನಿಸಿದ ಕೆಲಸಗಳನ್ನು ಸಾಧ್ಯವಾದಷ್ಟೂ ನೀವೇ ಮಾಡುವುದಕ್ಕೆ ಪ್ರಯತ್ನಿಸಿ. ನಿಮ್ಮಲ್ಲಿ ಕೆಲವರಿಗೆ ಈ ದಿನ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡುವಂತಹ ಯೋಗ ಇದೆ. ಇನ್ನೂ ಪೂರ್ತಿಯಾಗದ ಅಥವಾ ರಹಸ್ಯಗಳನ್ನು ಒಳಗೊಂಡ ವಿಚಾರಗಳನ್ನು ಯಾರ ಜೊತೆಗೂ ಈ ದಿನ ಹಂಚಿಕೊಳ್ಳಬೇಡಿ.
ಆತ್ಮವಿಶ್ವಾಸ ಇರುವುದು ಒಳ್ಳೆಯದೇ. ಆದರೆ ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ, ಈ ದಿನ ಯಾವುದೇ ಕೆಲಸವನ್ನು ಸರಳವಾಗಿ ತೆಗೆದುಕೊಳ್ಳಬಾರದು. ನಿಮ್ಮಲ್ಲಿ ಯಾರು ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿ ಇರುವಿರೋ ಅಂತಹವರಿಗೆ ಅಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಬಹಳ ಮುಖ್ಯವಾದ ಕಾಗದಪತ್ರಗಳು ಅಥವಾ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯ ದಿನಗಳಿಗಿಂತ ಇರಬೇಕಾದ ಎಚ್ಚರಿಕೆಗಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ. ನೀವು ಬಳಸುವಂತಹ ಮೊಬೈಲ್ ಫೋನ್, ಗ್ಯಾಜೆಟ್ ಗಳು ಅಥವಾ ಲ್ಯಾಪ್ ಟಾಪ್ ಅನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಈಗಾಗಲೇ ಮುಗಿದು ಹೋಗಿದೆ ಅದರ ಪ್ರಾಮುಖ್ಯ ಏನೂ ಇಲ್ಲ ಎಂದು ನೀವು ಅಂದುಕೊಂಡಿದ್ದ ವಿಚಾರಗಳಿಗೆ ವಿಪರೀತ ಆದ್ಯತೆ ದೊರೆಯಲಿದೆ.
ಕುಟುಂಬದ ಜತೆಗೆ ಕೂಡಿ ಪ್ರವಾಸಕ್ಕೆ ತೆರಳುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ಯಾರು ನಿಮ್ಮನ್ನು ಬೇಕೆಂತಲೇ ನಂಬಿಸಿ, ಅವಮಾನಕ್ಕೆ ಗುರಿ ಮಾಡಿದರೋ ಅವರಿಗೆ ಸರಿಯಾದ ರೀತಿಯಲ್ಲಿ ಪ್ರತೀಕಾರ ಹೇಳುವುದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಗೆ ಸೋಲಾರ್ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಅಥವಾ ಎಲೆಕ್ಟ್ರಿಕಲ್ ವಾಹನವನ್ನು ಖರೀದಿ ಮಾಡುವುದಕ್ಕಾದರೂ ಅಡ್ವಾನ್ಸ್ ಪಾವತಿಸಲಿದ್ದೀರಿ. ಮಕ್ಕಳ ಶಿಕ್ಷಣಕ್ಕಾಗಿ ಕೆಲವು ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಇದೇ ವೇಳೆ ಮನೆ ಬದಲಾವಣೆ ಮಾಡಿ, ಮಕ್ಕಳು ಓದುತ್ತಿರುವ ಶಿಕ್ಷಣ ಸಂಸ್ಥೆಗೆ ಹತ್ತಿರವಾಗಿ ಮನೆ ಹುಡುಕುವುದಕ್ಕೆ ಆರಂಭ ಮಾಡಲಿದ್ದೀರಿ. ಇನ್ನು ನಿಮ್ಮ ನಿರ್ಧಾರಗಳ ಬಗ್ಗೆ ಆತ್ಮವಿಶ್ವಾಸ ಹೆಚ್ಚಲಿದೆ.
ತಾಳ್ಮೆ, ಸಮಾಧಾನ, ನಿಧಾನ, ಆಲೋಚಿಸಿ ನಿರ್ಧಾರ ಮಾಡುವುದು ಇಂಥ ಯಾವುದನ್ನೂ ಈ ದಿನ ನಿಮ್ಮಿಂದ ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಖ್ಯ ಸಂಗತಿಗಳು ಎಂದಾಗ ತಕ್ಷಣವೇ ಅಥವಾ ಆವೇಶದಲ್ಲಿ ಏನನ್ನೂ ಹೇಳದಿರುವುದು ಉತ್ತಮ. ನಿಮಗೆ ತಾತ್ಕಾಲಿಕವಾಗಿ ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ದೀರ್ಘಾವಧಿ ವಿಚಾರಗಳನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಕುಟುಂಬದ ವ್ಯವಹಾರವನ್ನು ಮಾಡುತ್ತಾ ಬರುತ್ತಿರುವವರಿಗೆ ಈಗ ಮಾಡುತ್ತಿರುವುದರ ಜತೆಗೆ ಇನ್ನಷ್ಟು ವ್ಯವಹಾರವನ್ನು ಸೇರಿಸಿಕೊಳ್ಳಬೇಕು ಎಂಬ ಆಲೋಚನೆ ಮೂಡಬಹುದು. ಮತ್ತು ಇದನ್ನು ಮಾಡುವುದಕ್ಕೆ ಬೇಕಾದ ಹಣಕಾಸು ಹೊಂದಾಣಿಕೆ ಮಾಡುವುದಕ್ಕೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಪಾರ್ಟಿ, ಗೆಟ್ ಟು ಗೆದರ್ ಗಳಲ್ಲಿ ಭಾಗವಹಿಸುವ ಸಾಧ್ಯತೆ ಈ ದಿನ ಇದೆ. ಸಂಬಂಧಿಗಳು, ಸ್ನೇಹಿತರು ಹಾಗೂ ಪರಿಚಯಸ್ಥರು ಹಲವರನ್ನು ಭೇಟಿ ಆಗಲಿದ್ದೀರಿ. ನಿಮ್ಮ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಹಣಕಾಸಿನ ವಿಚಾರಕ್ಕೆ ಸ್ನೇಹಿತರು ಅಥವಾ ಆಪ್ತರ ಜತೆಗೆ ಚರ್ಚೆಯನ್ನು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವ ಮನೆಯನ್ನು ಬದಲಾಯಿಸಿ, ಬೇರೆ ಸ್ಥಳಕ್ಕೆ ತೆರಳಬೇಕು ಎಂದೇನಾದರೂ ಆಲೋಚನೆ ಮಾಡುತ್ತಿದ್ದಲ್ಲಿ ಅಗತ್ಯ ಇರುವಂಥ ಮಾಹಿತಿ ದೊರೆಯಲಿದೆ. ಇನ್ನು ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಉದ್ಯೋಗ ಬದಲಾವಣೆ ಅವಕಾಶಗಳು ತೆರೆದುಕೊಳ್ಳುವಂತೆ ಕಾಣುತ್ತವೆ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರು ಒಳ್ಳೆ ಮಾತುಗಳನ್ನು ಆಡಲಿದ್ದಾರೆ. ವೃತ್ತಿ, ವ್ಯವಹಾರ- ವ್ಯಾಪಾರ ಮಾಡುತ್ತಾ ಇರುವವರು ದೂರ ಪ್ರಯಾಣಕ್ಕೆ ಸಿದ್ಧರಾಗಬೇಕಾಗುತ್ತದೆ.
ನಿಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪೋಷಕರು ಹಣಕಾಸಿನ ನೆರವು ನೀಡುವ ಬಗ್ಗೆ ಖಚಿತವಾಗಿ ಹೇಳುವ ಸಾಧ್ಯತೆ ಇದೆ. ಈ ಹಿಂದೆ ನೀವು ಹೇಳಿದ್ದ ಪ್ರಾಜೆಕ್ಟ್ ಗಾಗಿಯೋ ಅಥವಾ ವ್ಯವಹಾರದ ಮೇಲಿನ ನಂಬಿಕೆಯಿಂದಲೋ ಹಣ ಹಾಕುವುದಕ್ಕೆ ಒಪ್ಪಿಗೆ ಸೂಚಿಸುವ ಅವಕಾಶಗಳು ಹೆಚ್ಚಿಗೆ ಇವೆ. ಇನ್ನು ಈ ದಿನ ರೆಸ್ಟೋರೆಂಟ್, ಸಿನಿಮಾ ಅಥವಾ ಮನರಂಜನೆಗಾಗಿ ಅಂತಲೇ ಕೆಲವು ಸ್ಥಳಗಳಿಗೆ ಕುಟುಂಬ ಸಮೇತ ತೆರಳುವಂಥ ಯೋಗ ಕಂಡುಬರುತ್ತಿದೆ. ವಾಹನವನ್ನು ಪಾರ್ಕಿಂಗ್ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯಿಂದ ಇರುವುದು ಮುಖ್ಯ. ಒಂದೋ ನೋ ಪಾರ್ಕಿಂಗ್ ಸೇರಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಬೀಳಬಹುದು ಅಥವಾ ಯಾವುದಾದರೂ ವಸ್ತು ನಿಮ್ಮ ವಾಹನದ ಮೇಲೆ ಬಿದ್ದು, ಅದರಿಂದ ಜಖಂ ಆಗಿ, ಹಣ ಖರ್ಚು ಮಾಡಬೇಕಾಗಲಿದೆ.
ಕೆಲವು ಸಂಗತಿಗಳನ್ನು ಯಾಕಾದರೂ ಹೇಳಿದೆನೋ ಎಂಬ ಪರಿಸ್ಥಿತಿ ನಿಮ್ಮದಾಗುತ್ತದೆ. ಒಂದೇ ವಿಚಾರಕ್ಕೆ ಒಬ್ಬ ವ್ಯಕ್ತಿ ಅಥವಾ ಹಲವರು ನಿಮ್ಮ ಬಳಿ ವಿಚಾರಿಸುವುದಕ್ಕೆ ಆರಂಭಿಸಬಹುದು ಅಥವಾ ತಮ್ಮ ಪರವಾಗಿ ಶಿಫಾರಸು ಮಾಡುವಂತೆ ಕೇಳಿಕೊಳ್ಳಬಹುದು. ಮಾನಸಿಕ ಹಿಂಸೆ ಆಯಿತೋ ಅಂತಲೋ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಕೋಪವನ್ನು ಹೊರ ಹಾಕುವುದಕ್ಕೆ ಹೋಗಬೇಡಿ. ಸಂಗಾತಿ ಕಡೆಯ ಸಂಬಂಧಿಕರು ಮನೆಗೆ ಬರುವಂಥ ಯೋಗ ಇದೆ. ಅವರ ಸಲುವಾಗಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚು- ವೆಚ್ಚಗಳನ್ನು ಮಾಡಲಿದ್ದೀರಿ. ಇನ್ನು ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಕೆಲಸವನ್ನೋ ಅಥವಾ ಕೈಗೊಂಡಿದ್ದ ನಿರ್ಧಾರವನ್ನೋ ನೆನಪಿಸಿ, ಮುಜುಗರ ಮಾಡಲಿದ್ದಾರೆ. ಒಟ್ಟು ಈ ದಿನ ಮನಸ್ಸು ಪ್ರಕ್ಷುಬ್ದವಾಗಿ ಇರಲಿದೆ, ಎಚ್ಚರಿಕೆ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ