Nitya Bhavishya: ಈ ರಾಶಿಯವರ ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು-ಎಚ್ಚರ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಫೆಬ್ರವರಿ 05, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Nitya Bhavishya: ಈ ರಾಶಿಯವರ ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು-ಎಚ್ಚರ
ರಾಶಿ ಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 05, 2024 | 12:15 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಫೆಬ್ರವರಿ 05) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಧ್ರುವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:20 ರಿಂದ 12:47 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:39ರ ವರೆಗೆ.

ಮೇಷ ರಾಶಿ : ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ಅನಗತ್ಯ ಖರ್ಚನ್ನು ಸಂಗಾತಿಯು ತಡೆಯಬಹುದು. ಅವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಯಾರನ್ನೋ ಮೆಚ್ಚಿಸಲು ನೀವು ಯೋಜನೆಯನ್ನು ಹಾಕಿಕೊಳ್ಳುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಅಶ್ರದ್ಧೆಯನ್ನು ಇತರರ ಎದುರು ಪ್ರಕಟಪಡಿಸುವುದು ಬೇಡ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಮಹಿಳೆಯರು ಯಾವುದೇ ಪಾಕದ ಉತ್ಪನ್ನದ ವ್ಯವಹಾರವನ್ನು ಆರಂಭಿಸಲು ಬಯಸುವಿರಿ. ಆರ್ಥಿಕ ಸಹಾಯಕ್ಕಾಗಿ ಯಾರದರೂ ನಿಮ್ಮನ್ನು ಪೀಡಿಸಬಹುದು.

ವೃಷಭ ರಾಶಿ : ಇಂದು ನೀವು ಯಾರದೋ ವಿರುದ್ಧವಾಗಿ ಹೋಗುವುದು ಬೇಡ. ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳಿ. ಕ್ರಿಯಾಶೀಲತೆಗೆ ನಿಮಗೆ ಯಾವುದೇ ಪ್ರಶಂಸೆ ಸಿಗದಿರುವುದು ನಿಮಗೆ‌ ಕಷ್ಟವಾದೀತು. ಒತ್ತಡವು ನಿಮ್ಮ ಗಮನವನ್ನು ಬೇರೆಡೆಗೆ ಹಾಕಲು ಬಿಡದು. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ‌‌. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಯಾರನ್ನೋ ಸೋಲಿಸುವುದಕ್ಕೆ ನಿಮ್ಮ ಪ್ರಯತ್ನ ಬೇಡ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮವರ ಬಗ್ಗೆ ಸರಿಯಾದ ಭಾವನೆಯು ಇಲ್ಲದೇ ಇರಬಹುದು. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದಲ್ಲಿ ನಿಮಗೆ ಪ್ರಾಮುಖ್ಯವು ಇಲ್ಲದೇ ಇರಬಹುದು.

ಮಿಥುನ ರಾಶಿ : ಇಂದು ನಿಮ್ಮ ಪೂರ್ವಜರ, ಹಿರಿಯರ ಕಾರ್ಯಗಳನ್ನು ನೆನಪಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುವುದು. ಸಂಗಾತಿಯ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಹೊರಗೆ ಸುತ್ತಾಡಲೂ ನಿಮಗೆ ಅವಕಾಶ ಸಿಗಬಹುದು. ಗೊತ್ತಿಲ್ಲದೇ ಯಾರ ಬಗ್ಗೆಯೂ ನಿಮ್ಮ ಮಾತುಗಳನ್ನು ಹರಿ ಬಿಡುವುದು ಬೇಡ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಆರೈಕೆಯ ಬಗ್ಗೆ ಗಮನವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಸುಲಭದ ಕೆಲಸವನ್ನು ಮೊದಲು ಮಾಡಿ, ಯಾರದ್ದಾದರೂ ಸಹಕಾರವನ್ನು ಪಡೆದುಕೊಳ್ಳಿ. ನೀವು ಎಲ್ಲರ ಜೊತೆ ಸಭ್ಯತೆಯನ್ನು ಮೀರದೇ ಮಾತನಾಡಬೇಕು. ಯಾರದೋ ಮೇಲೆ ಸಿಟ್ಟ ಮಾಡಿಕೊಳ್ಳುವಿರಿ.

ಕಟಕ ರಾಶಿ : ಎಲ್ಲರ ಜೊತೆ ಸೌಹಾರ್ದದಿಂದ ಇರುವಿರಿ. ಅಧ್ಯಾತ್ಮದ ಚಿಂತನೆಯಿಂದ ನಿಮ್ಮ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಯಾರನ್ನೂ ನೀವು ಪೂರ್ಣವಾಗಿ ನಂಬಲಾರಿರಿ. ತೊಂದರೆಗಳನ್ನು ನೀವು ಯಾರ ಜೊತೆಗೂ ಹಂಚಿಕೊಳ್ಳುವ ಮನಸ್ಸಾಗದು. ಸಂಗಾತಿಯ ಬಗ್ಗೆ ಕುತೂಹಲವಿರಬಹುದು. ಖರೀದಿಯಲ್ಲಿ ಉತ್ಸಾಹವು ಹೆಚ್ಚಿರುವುದು. ಮಾತು ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ಬೆರೆಯುವಿಕೆಯು ಕಡಿಮೆ ಆಗಬಹುದು. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಎಲ್ಲರೂ ಬಹಳ ಪ್ರಭಾವಿತರಾಗಬಹುದು. ನಿಮ್ಮ ಸಮಯವನ್ನು ಬೇಡದ ಕಾರ್ಯದಿಂದ ವ್ಯರ್ಥಮಾಡಿಕೊಳ್ಳುವಿರಿ. ಅಗತ್ಯ ಕಾರ್ಯಗಳ ಬಗ್ಗೆ ಆಲೋಚಿಸಿ.

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?