Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 25ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 25 ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 25ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಭಾವನಾತ್ಮಕವಾದ ನಿರ್ಧಾರಗಳು ನಿಮ್ಮನ್ನು ಬಹಳ ದಣಿಯುವಂತೆ ಮಾಡುತ್ತವೆ. ನೀವು ಹೀಗಾಗಬಹುದು ಎಂಬ ಸಣ್ಣ ಊಹೆ ಕೂಡ ಮಾಡಲು ಸಾಧ್ಯವಾಗದಂಥ ಸನ್ನಿವೇಶದಲ್ಲಿ ಹಳೇ ಪ್ರೇಮ ಪ್ರಕರಣಗಳಲ್ಲಿ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ ಭಾವನಾತ್ಮಕವಾಗಿ ಹಾಗೂ ನೈತಿಕವಾಗಿ ನೀವು ಗಟ್ಟಿಯಾಗಿ ನಿಲ್ಲುವುದು ಮುಖ್ಯವಾಗುತ್ತದೆ. ಖರ್ಚಿನ ವಿಚಾರದಲ್ಲಿ ಕೆಲವರಿಗೆ ಅಸಮಾಧಾನ ಆಗಲಿದೆ. ಕ್ರೀಡಾಪಟುಗಳಿಗೆ ಬಹಳ ಮುಖ್ಯವಾದ ದಿನ ಇದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮುಂಚಿನ ರೀತಿಯಲ್ಲಿ ಹೇಳಿದ ತಕ್ಷಣ ಕೆಲಸಗಳು ಆಗುವುದಿಲ್ಲ. ಇದೇ ಕಾರಣಕ್ಕೆ ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ನೀವು ಅನುಸರಿಸುವ ಧರ್ಮದ ಅಥವಾ ಮನಸಿಗೆ ನೆಮ್ಮದಿ- ಚೈತನ್ಯ ನೀಡುವಂಥ ಆಡಿಯೋಗಳನ್ನು ಕೇಳಿಸಿಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹಣದ ಪ್ರಾಮುಖ್ಯ ವಿಪರೀತ ಹೆಚ್ಚಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೂ ಮೀರಿ ಹೊಸ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಸಿನಿಮಾ ತಾರೆಯರು, ಧಾರಾವಾಹಿಗಳಲ್ಲಿ ನಟಿಸುವಂಥವರಿಗೆ ಯಾವುದೋ ದೊಡ್ಡ ಪ್ರಾಜೆಕ್ಟ್ ಬರುವಂಥ ಸಾಧ್ಯತೆ ಇದೆ. ಆದರೆ ಇದನ್ನು ಅಂದಾಜು ಮಾಡುವುದು ಬಹಳ ಮುಖ್ಯ. ನಿಮ್ಮಿಂದ ಇದು ಸಾಧ್ಯ ಆಗದಿದ್ದಲ್ಲಿ ಹಿರಿಯರು, ಅನುಭವಿಗಳ ಸಹಾಯ ಪಡೆಯಿರಿ. ರಫ್ತು ಉದ್ಯಮಿಗಳಿಗೆ ಸಾಲದ ಅಗತ್ಯ ಹೆಚ್ಚಾಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮೊದಲ ನೋಟಕ್ಕೆ ಸರಿ ಎನಿಸುವಂಥದ್ದನ್ನು ಒಪ್ಪಿಕೊಳ್ಳಿ. ಸೀದಾ ಸಾದಾ ಸಂಗತಿಗಳು ನಿಮ್ಮ ಪಾಲಿಗೆ ಅನುಕೂಲವಾಗಿ ಮಾರ್ಪಡಲಿವೆ. ಈ ಹಿಂದಿನ ಪ್ರಾಜೆಕ್ಟ್‌ಗಳು ಈಗ ನಿಮಗೆ ಹಣ ತಂದುಕೊಂಡುವ ಸಾಧ್ಯತೆಗಳಿವೆ. ಆದರೆ ಸಣ್ಣ- ಪುಟ್ಟ ವಿಚಾರಗಳನ್ನೂ ಮರೆಯದಿರಿ. ಮಡ್‌ಬಾತ್, ಸ್ಟೀಮ್‌ಬಾತ್ ಹೀಗೆ ದೇಹಕ್ಕೆ ಆರಾಮದಾಯಕ ಆಗುವಂಥದ್ದನ್ನು ಮಾಡಿಸಲು ಸಾಧ್ಯವಾದಲ್ಲಿ ಮಾಡಿಸಿಕೊಳ್ಳಿ, ಏಕೆಂದರೆ ಮುಂಬರುವ ದಿನಗಳಲ್ಲಿ ಬಹಳ ಬಿಜಿ ಆಗಿಬಿಡುತ್ತೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮುನ್ನ ಈ ದಿನ ದುರ್ಗಾ ದೇವಿಯ ಧ್ಯಾನ ಮಾಡಿ. ನಿಮ್ಮ ಧರ್ಮಾಚರಣೆ ಬೇರೆ ಆಗಿದ್ದಲ್ಲಿ ಬಿಳಿ ವಸ್ತ್ರವೊಂದನ್ನು ನಿಮ್ಮ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹೊಸದಾದ ಕಾರು, ಬೈಕ್ ಖರೀದಿ ಮಾಡಬೇಕು ಎಂದು ಇರುವವರು ಈ ದಿನ ಅಂತಿಮವಾಗಿ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಆದರೆ ಬಜೆಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಉದ್ಯೋಗ, ವೃತ್ತಿಯಿರಲಿ ಬಂದಿದ್ದೇನು- ಖರ್ಚಾಗಿದ್ದೆಷ್ಟು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲಿಂದಲೋ ಬಂದು ನಿಮ್ಮ ಕೈ ಹಿಡಿದು ಮೇಲೆ ಎತ್ತುತ್ತಾರೆ ಎಂಬ ಭ್ರಮೆ ಬೇಡ. ನಿಮ್ಮ ಆಧ್ಯಾತ್ಮ ಮನೋಭಾವ ಸ್ಫೂರ್ತಿ ಆಗಬೇಕೇ ವಿನಃ ಯಾವುದೇ ಕೆಲಸಕ್ಕೆ ವಿರಕ್ತಿ ಆಗದಿರಲಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನೇರವಂತಿಕೆ ಈ ದಿನ ನಿಮ್ಮನ್ನು ಕಾಪಾಡಲಿದೆ. ಒಂದು ನಿರುಪದ್ರವಿ ಸುಳ್ಳಿನಿಂದ ಏನೂ ಸಮಸ್ಯೆ ಆಗಲಿಕ್ಕಿಲ್ಲ ಎಂದೆಲ್ಲ ಯೋಚಿಸಿ ತಪ್ಪು ಹೆಜ್ಜೆ ಇಡಬೇಡಿ. ಜ್ಯೋತಿಷಿಗಳು, ಪುರೋಹಿತರು, ಮ್ಯಾಜಿಷಿಯನ್‌ಗಳಿಗೆ ಉತ್ತಮವಾದ ದಿನ ಇದು. ದೂರದ ಸ್ಥಳಗಳಿಂದ ನಿಮಗೆ ಆಹ್ವಾನ ಬರಲಿದೆ. ಸನ್ಮಾನ ಆಗುವ ಸಾಧ್ಯತೆ ಇದೆ. ನೀವಾಗಿಯೇ ಕೆಲವು ಜವಾಬ್ದಾರಿಗಳನ್ನು ಅತ್ಯುತ್ಸಾಹದಲ್ಲಿ ಮೈಮೇಲೆ ಎಳೆದುಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯವನ್ನು ನೋಡಿ, ನಿರ್ಧರಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಇತರರ ಪಾಲಿಗೆ ನೀವು ಬೆರಗು ಮೂಡಿಸುವಂಥ ವ್ಯಕ್ತಿ ಆಗುತ್ತೀರಿ. ನೀವು ಹೇಳಿದಂತೆಯೇ ಆಯಿತು, ನಾವು ನಿಮ್ಮ ಮಾತು ಕೇಳಬೇಕಿತ್ತು ಎಂದು ನಿಮ್ಮಿಂದ ದೂರವಾದ ಸ್ನೇಹಿತರು ಅಥವಾ ನಿಮ್ಮ ಜತೆ ಕೆಲಸ ಮಾಡುತ್ತಿದ್ದವರು ಮತ್ತೆ ಬರಬಹುದು. ಈ ಸಲ ತುಂಬ ಕಠಿಣವಾಗಿ ವರ್ತಿಸಬೇಡಿ, ಹಂಗಿಸಬೇಡಿ. ಅಂದಹಾಗೆ ಇದರಲ್ಲಿ ನಿಮ್ಮ ಸಂಬಂಧಿಕರು, ಕುಟುಂಬದವರು ಸಹ ಇರಬಹುದು. ಇನ್ನು ಈ ದಿನ ರುಚಿಕಟ್ಟಾದ ಭೋಜನ ಸವಿಯುವ ಯೋಗ ನಿಮ್ಮ ಪಾಲಿಗಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಕೆಲಸದ ನಿಮಿತ್ತವಾಗಿ ಪ್ರಯಾಣಕ್ಕೆ ಸಿದ್ಧರಾಗುತ್ತಿರುವವರಿಗೆ ಬಿಡುವಿಲ್ಲದಂಥ ವೇಳಾಪಟ್ಟಿ ಇರುತ್ತದೆ. ಬದಲಾವಣೆಯೊಂದಕ್ಕೆ ನೀವು ಸಿದ್ಧರಾಗಲಿದ್ದೀರಿ. ಇಷ್ಟು ಸಮಯ ವಿಚಾರಿಸಿ, ಅಳೆದು- ತೂಗಿ ನೋಡಿಯಾಗಿದೆ ಅಂದ ಮೇಲೆ ಇನ್ನೇನು ಅಖಾಡಕ್ಕೆ ಇಳಿಯುವುದು ಮಾತ್ರ ಬಾಕಿ. ಈ ದಿನ ಅಲರ್ಜಿ ಆಗಬಹುದಾದ ಆಹಾರದಿಂದ ದೂರ ಇರಿ. ಬಾಯಿ ಚಪಲಕ್ಕೆ ಬಿದ್ದಿರೋ ಆರೋಗ್ಯ ಸಮಸ್ಯೆ ಆದೀತು.
ಲೇಖನ- ಎನ್.ಕೆ.ಸ್ವಾತಿ
Published On - 5:29 am, Sat, 25 February 23