ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 6ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾರ್ಯಾರು ಸಾಲ ಮಾಡಿಕೊಂಡು ಅಥವಾ ವಿವಿಧ ಮೂಲಗಳಿಂದ ಹಣ ಹೊಂದಿಸಿಕೊಂಡು, ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದೀರೋ ಅಂಥವರಿಗೆ ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಆಗಲಿದೆ. ಇನ್ನು ಕೃಷಿಕರಿಗೆ, ಡೇರಿ ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳಿವೆ. ಸ್ವ ಉದ್ಯೋಗಿಗಳಿಗೆ ಆದಾಯದ ಮೂಲದಲ್ಲಿ ಹೆಚ್ಚಳ ಆಗಲಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಓಡಾಟ ನಡೆಸಲಿದ್ದೀರಿ. ಸರ್ಕಾರಿ ಉದ್ಯೋಗಿಗಳಿಗೆ ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಆದರೆ ದೇವತಾ ಅನುಗ್ರಹ ಇರಲಿದೆ.
ಹೆಣ್ಣುಮಕ್ಕಳು ತವರುಮನೆಗೆ ಹೋಗುವ ಯೋಗ ಇದೆ. ಸೋದರ ಅಥವಾ ಸೋದರಿಯ ಆಹ್ವಾನದ ಮೇರೆಗೆ ನೀವು ತೆರಳಬಹುದು. ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಚರ್ಚೆ ಆಗಲಿದೆ. ವೃತ್ತಿಪರರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ಸ್ವಂತ ವ್ಯಾಪಾರ-ವ್ಯವಹಾರ ನಡೆಸುತ್ತಿರುವವರು ಹೊಸ ಕಚೇರಿಗೆ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳುತ್ತೀರಿ. ಸಾಕು ಪ್ರಾಣಿಗಳನ್ನು ಮನೆಗೆ ತರುವಂಥ ಯೋಗ ಇದೆ. ಎಲೆಕ್ಟ್ರಿಕಲ್ ವಾಹನವನ್ನು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ.
ರಕ್ತದೊತ್ತಡ ಸಮಸ್ಯೆ ಇರುವವರು ಕಡ್ಡಾಯವಾಗಿ ಔಷಧೋಪಚಾರದ ಕಡೆಗೆ ಗಮನ ನೀಡಿ. ವೈದ್ಯರ ಬದಲಾವಣೆ ಅಥವಾ ಆಹಾರಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ತಂದೆ-ತಾಯಿಯ ಪ್ರಯಾಣ ಅಥವಾ ಆರೋಗ್ಯ ತಪಾಸಣೆಗೆ ಹಣ ಖರ್ಚು ಮಾಡಲಿದ್ದೀರಿ. ಕಾಲೇಜುಗಳಿಗೆ ವಾಹನಗಳಲ್ಲಿ ತೆರಳುವವರು ಸ್ವಲ್ಪ ಮುಂಚಿತವಾಗಿ ಮನೆಯಿಂದ ಹೊರಡಿ. ಸರ್ವೀಸ್ ಅಥವಾ ರಿಪೇರಿಗಾಗಿ ಹಣ ಖರ್ಚುಗಳಾಗಲಿದೆ. ಹೊಸಬರ ಜೊತೆಗೆ ವ್ಯವಹರಿಸುವಾಗ ಜಾಗ್ರತೆ ಅಗತ್ಯ.
ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬೇಕು ಎಂದಿರುವವರಿಗೆ ಅಗತ್ಯ ನೆರವು ದೊರೆಯಲಿದೆ. ಸ್ವಂತವಾಗಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ಸಾಲ ಬಾಧೆ ಕಾಡಲಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ ಇರುವವರಿಗೆ, ಸಂಗೀತಗಾರರಿಗೆ, ಪತ್ರಕರ್ತರಿಗೆ, ಕಲಾವಿದರಿಗೆ ಸಮಾಜದಲ್ಲಿ ಸನ್ಮಾನ ದೊರೆಯಲಿದೆ. ಹಿರಿಯ ಸಹೋದ್ಯೋಗಿಗಳಿಂದ ಅಮೂಲ್ಯವಾದ ಸಲಹೆ ದೊರೆಯಲಿದೆ. ಈ ಹಿಂದೆ ಹಣಕಾಸು ಹೂಡಿಕೆ ಮಾಡಿದ್ದಲ್ಲಿ ನಷ್ಟವು ಅನುಭವಕ್ಕೆ ಬರಲಿದೆ.
ಉದ್ಯಮದಲ್ಲಿ ಇರುವವರು, ವ್ಯಾಪಾರ- ವ್ಯವಹಾರ ನಡೆಸುತ್ತಿರುವವರು ಲಾಭ-ನಷ್ಟದ ಲೆಕ್ಕ ಹಾಕಿಕೊಳ್ಳದೆ ಉತ್ತಮ ಉದ್ದೇಶದಿಂದ ಕೆಲವು ಕೆಲಸಗಳನ್ನು ಮಾಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ-ಮಾರಾಟ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿ ದೇವತಾರಾಧನೆ ಆಯೋಜಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಇದಕ್ಕಾಗಿ ಸಂಬಂಧಪಟ್ಟ ಕ್ಷೇತ್ರದಲ್ಲಿ ಹೆಸರಾದವರನ್ನು ಭೇಟಿ ಆಗಲಿದ್ದೀರಿ. ಕುಟುಂಬದಲ್ಲಿನ ಖರ್ಚಿನ ಪ್ರಮಾಣ ಹೆಚ್ಚಾಗಲಿದೆ.
ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಇತ್ಯಾದಿ ವೃತ್ತಿಯಲ್ಲಿ ಇರುವವರಿಗೆ ಬಹಳ ಗೊಂದಲ ಏರ್ಪಡಲಿದೆ. ಭವಿಷ್ಯದ ಯೋಜನೆಗಳ ಅನುಷ್ಠಾನವನ್ನು ಕೆಲ ಸಮಯ ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಬಂಧುಗಳು, ಸ್ನೇಹಿತರ ಮನೆಗೆ ದೇವತಾರಾಧನೆಗೆ ಆಹ್ವಾನ ಬರಲಿದೆ. ಇನ್ನು ಈ ದಿನ ಬಹಳ ಸಮಯದಿಂದ ಭೇಟಿಯಾಗದೇ ಇದ್ದ ಬಂಧು-ಮಿತ್ರರನ್ನು ಭೇಟಿಯಾಗಿ, ತೀರ್ಥಕ್ಷೇತ್ರ ದರ್ಶನ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಇತರರು ಮೆಚ್ಚುವಂತೆ ಕೆಲವು ಕೆಲಸಗಳನ್ನು ಮಾಡಲಿದ್ದೀರಿ.
ಗೃಹ ಬಳಕೆ ವಸ್ತು ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂತೆ ಇದ್ದರೆ ಖರ್ಚಿನ ಮೇಲೆ ನಿಗಾ ಇರಲಿದೆ. ಪ್ರತಿಷ್ಠೆಗಾಗಿ ಯಾವ ವಿಷಯವನ್ನೂ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಕೃಷಿಕರಿಗೆ ಸಾಲದ ಬಾಕಿ ಬರಬೇಕಿದ್ದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ಕ್ರಿಯೇಟಿವ್ ರಂಗದಲ್ಲಿ ಇರುವವರಿಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಆಹಾರ- ನೀರು ಸೇವನೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದಲ್ಲಿ ಅಲರ್ಜಿ ಇತ್ಯಾದಿ ಅನಾರೋಗ್ಯ ಸಮಸ್ಯೆ ಆಗಬಹುದು.
ಸಂಗಾತಿಯ ಜವಾಬ್ದಾರಿಗಳ ಪೈಕಿ ಕೆಲವನ್ನು ನೀವು ಹಂಚಿಕೊಳ್ಳಲಿದ್ದೀರಿ. ಸ್ವಂತ ವ್ಯಾಪಾರ-ವ್ಯವಹಾರ ನಡೆಸುತ್ತಿರುವವರಿಗೆ ಅಲ್ಪಪ್ರಗತಿ ಇದೆ. ರುಚಿಕಟ್ಟಾದ ಊಟ ತಿಂಡಿ ಸವಿಯುವ ಯೋಗ ಇದೆ. ಅನಿರೀಕ್ಷಿತವಾಗಿ ಧನಾಗಮದ ಯೋಗ ಇದ್ದು, ಅದು ಹಾಗೇ ಖರ್ಚು ಕೂಡ ಆಗಬಹುದು. ಮೈಗ್ರೇನ್ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗುವ ಸಾಧ್ಯತೆಗಳಿವೆ. ಪ್ರವಚನಕಾರರು, ಸಂಶೋಧನೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಬೆಳವಣಿಗೆ ಇದೆ.
ಮನೆಯ ಸದಸ್ಯರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಶುಭ ಸಮಾರಂಭಗಳಿಗಾಗಿ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಕಿರುಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಇನ್ನು ಪ್ರೇಮಿಗಳಿಗೆ ಜತೆಯಾಗಿ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಮಕ್ಕಳ ಮದುವೆಗಾಗಿ ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಸೂಕ್ತ ವಧು ಅಥವಾ ವರ ದೊರೆಯಲಿದ್ದಾರೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ