Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 26ರ ದಿನಭವಿಷ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 26, 2023 | 6:06 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 26ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 26ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Image Credit source: thesun.co.uk
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 26 ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಯಾವ ಸ್ವಭಾವವನ್ನು ನಿಮ್ಮ ಶಕ್ತಿ ಎಂದು ನೀವಂದುಕೊಂಡಿರುವುದಿಲ್ಲವೋ ಅದು ಬಲವಾಗಿ ಮಾರ್ಪಡುತ್ತದೆ. ಮನೆಗೆ ಅತಿಥಿಗಳು ಅಥವಾ ಸ್ನೇಹಿತರು ಬರುವಂಥ ಸಾಧ್ಯತೆಗಳಿವೆ. ಮನರಂಜನೆ, ಹೋಟೆಲ್, ಕಿರು ಪ್ರವಾಸ ಇಂಥವುಗಳಿಗಾಗಿ ಹಣ ಖರ್ಚು ಮಾಡಲಿದ್ದು, ಕುಟುಂಬದವರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ಸಾಧ್ಯವಾದಲ್ಲಿ ಮನೆದೇವರ ಸ್ಮರಣೆಯನ್ನು ಮಾಡಿ, ಇದರಿಂದ ನೆಮ್ಮದಿ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಪ್ರೇಮಿಗಳು ಸಂತೋಷವಾಗಿ ದಿನವನ್ನು ಕಳೆಯುವಂಥ ಯೋಗ ಇದೆ. ಮನೆ, ಅಪಾರ್ಟ್ ಮೆಂಟ್ ಇಂಥವುಗಳಿಗೆ ಹುಡುಕಾಟ ನಡೆಸುತ್ತಿರುವವರಿಗೆ ನಿಮ್ಮ ಮನಸ್ಸಿಗೆ ನೆಚ್ಚುವಂಥದ್ದು ದೊರೆಯಲಿದೆ. ಕ್ರೀಡಾಪಟುಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ವೈದ್ಯ ವೃತ್ತಿಯಲ್ಲಿ ಇರುವವರಿಗೆ, ಉನ್ನತಾಭ್ಯಾಸ ಮಾಡಬೇಕು ಎಂದು ಇರುವವರಿಗೆ ಸ್ಕಾಲರ್ ಶಿಪ್ ದೊರೆಯುವ ಸಾಧ್ಯತೆಗಳು ನಿಚ್ಚಳ ಆಗಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ನಿಮಗೆ ಮರೆವು ವಿಪರೀತ ಕಾಡಲಿದೆ. ಈ ಹಿಂದೆ ನೀವು ಕೊಟ್ಟಿದ್ದ ಮಾತು ಮರೆತು, ಟೀಕೆಗೆ ಗುರಿ ಆಗಬಹುದು. ಅಥವಾ ತೆಗೆದುಕೊಂಡ ವಸ್ತುವನ್ನು ನಾನು ತೆಗೆದುಕೊಂಡೇ ಇಲ್ಲ ಎಂದು ವಾದಿಸಿ, ಹೀಗಳಿಕೆಮೂದಲಿಕೆಗೆ ಗುರಿ ಆಗಬಹುದು. ನಿಮ್ಮ ಮನೆಯ ಬಳಿ ಸತ್ಯನಾರಾಯಣ ಸ್ವಾಮಿ ದೇವಾಲಯ ಇದ್ದಲ್ಲಿ ಅಲ್ಲಿಗೆ ತೆರಳಿ ದರ್ಶನ ಮಾಡಿ. ಸಾಧ್ಯವಾದಷ್ಟೂ ಯಾವುದೇ ಮುಖ್ಯವಾದ ಮಾತುಕತೆ ಈ ದಿನ ಮಾಡದಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಒಂದೇ ವಿಷಯದ ಬಗ್ಗೆ ನಿಮ್ಮ ಕುಟುಂಬಸ್ಥರು, ಸ್ನೇಹಿತರು ಪದೇ ಪದೇ ಮಾತನಾಡಿ ನಿಮಗೆ ಬೇಸರ ತರಬಹುದು. ಆದರೆ ಅವರನ್ನು ಬಯ್ಯುವುದೋ ಅಥವಾ ಕೋಪದಿಂದ ದೂರ ಮಾಡಿಕೊಳ್ಳುವುದೋ ಸರಿಯಲ್ಲ. ಬಾಡಿಗೆ ಮನೆಯಲ್ಲಿ ವಾಸವಿದ್ದು, ಅದನ್ನು ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂಥ ವಾತಾವರಣ, ಮನೆ ದೊರೆಯಲಿದೆ. ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ ಇಂಥ ವಿಚಾರಗಳ ಬಗ್ಗೆ ಗಂಭೀರವಾದ ಚಿಂತೆ ಕಾಡುತ್ತದೆ. ಸ್ನೇಹಿತರ ಸಲಹೆಯಿಂದ ನಿಮಗೆ ಅನುಕೂಲ ಒದಗಿಬರಲಿದೆ. ಮಾನಸಿಕ ಖಿನ್ನತೆ ಕಾಡುತ್ತಿರುವವರು ಕಡ್ಡಾಯವಾಗಿ ಮನಶ್ಶಾಸ್ತ್ರಜ್ಞರನ್ನು ಭೇಟಿ ಆಗಿ. ವಿದೇಶಗಳಲ್ಲಿ ವ್ಯಾಪಾರವ್ಯವಹಾರ ಮಾಡುತ್ತಿರುವವರು ಅಲ್ಲಿನ ಮಳಿಗೆ ಅಥವಾ ಉದ್ಯಮವನ್ನು ಮುಚ್ಚುವ ಬಗ್ಗೆ ಅಥವಾ ಮಾರಿಬಿಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಬೆಲೆಬಾಳುವ ಗ್ಯಾಜೆಟ್, ಲ್ಯಾಪ್ ಟಾಪ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಆಫರ್ ಇದೆ ಅಂತಲೋ ಅಥವಾ ಈಗ ಬಡ್ಡಿ ಇಲ್ಲದ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯಕ್ಕೆ ಮೀರಿದ ಖರೀದಿ ಮಾಡದಿರಿ. ಮಹಿಳೆಯರು ಹೊರಗಿನ ಆಹಾರವನ್ನು ಸೇವಿಸದಿರುವುದು ಉತ್ತಮ. ಮಸಾಲೆಯುಕ್ತ, ಎಣ್ಣೆಯಲ್ಲಿ ಖರೀದಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್, ಹೊಟ್ಟೆಯುರಿಯಂಥ ಸಮಸ್ಯೆಗಳು ಕಾಡಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕುಟುಂಬದವರ ಜತೆಗೆ ಉತ್ತಮ ಸಮಯ ಕಳೆಯುವಂಥ ಯೋಗ ಇದೆ. ಮಕ್ಕಳ ಏಳ್ಗೆಯಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ. ದೂರ ಪ್ರಯಾಣಕ್ಕೆ ತೆರಳುವಾಗ ಕಡ್ಡಾಯವಾಗಿ ಗಣಪತಿ ಸ್ಮರಣೆಯನ್ನು ಮಾಡಿ. ಈ ಹಿಂದೆ ನಿಮಗೆ ಪರಿಚಯ ಆಗಿದ್ದ ಸ್ನೇಹಿತರ ಸಹಾಯದಿಂದ ಹೊಸಬರ ಪರಿಚಯ ಆಗಲಿದೆ. ಪಾರ್ಟಿಗೆಟ್ ಟು ಗೆದರ್ ಇಂಥವುಗಳಿಗೆ ನಿಮಗೆ ಆಹ್ವಾನ ಬರಲಿದ್ದು, ರುಚಿಕಟ್ಟಾದ ಭೋಜನವನ್ನು ಸವಿಯುವ ಯೋಗ ನಿಮಗಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಆದಾಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ಆಲೋಚನೆ ಮಾಡುತ್ತಿರುವವರಿಗೆ ಮಾರ್ಗಗಳು ಕಾಣಿಸಿಕೊಳ್ಳುತ್ತವೆ. ಈ ಹಿಂದಿನ ನಿಮ್ಮ ಶ್ರಮವನ್ನು ಗುರುತಿಸಿ, ಕೆಲವು ಆಫರ್ ಬರುವ ಸಾಧ್ಯತೆಗಳಿವೆ. ಹೊಸದಾಗಿ ಕಾರು, ಬೈಕ್, ಸ್ಕೂಟರ್ ಖರೀದಿ ಮಾಡಬೇಕು ಎಂದಿರುವವರು ಒಂದೋ ಖರೀದಿಸಲಿದ್ದೀರಿ ಅಥವಾ ಅಡ್ವಾನ್ಸ್ ನೀಡಿ, ಬುಕ್ ಮಾಡಲಿದ್ದೀರಿ. ನಿಮಗೆ ಬಹಳ ಇಷ್ಟವಾಗುವ ವ್ಯಕ್ತಿಗಳ ಜತೆಗೆ ಈ ದಿನ ಸಮಯವನ್ನು ಕಳೆಯಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮಷ್ಟಕ್ಕೆ ಭವಿಷ್ಯದ ಯೋಜನೆಗಳು, ಹೂಡಿಕೆ, ಉಳಿತಾಯ ಇಂಥದ್ದರ ಬಗ್ಗೆ ಆಲೋಚನೆ ಮಾಡುವ ಸಾಧ್ಯತೆ ಇದೆ. ಮನೆಆಸ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಯಾರಿಗಾದರೂ ಅವುಗಳನ್ನು ತೋರಿಸಬೇಕು, ಅಥವಾ ಮತ್ಯಾವುದಾದರೂ ಕಾರಣಕ್ಕೆ ಹೊರಗೆ ತೆಗೆದುಕೊಂಡು ಹೋಗುವಂತಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಎಲ್ಲವೂ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ