ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 30ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜಾಬ್ ಕನ್ಸಲ್ಟೆಂಟ್ ಮೂಲಕ ಉದ್ಯೋಗ ಬದಲಾವಣೆಗೆ ಪ್ರಯತ್ನ ಪಡುತ್ತಿರುವವರಿಗೆ ಒಂದಿಷ್ಟು ಹಣ ಖರ್ಚಾದರೂ ಉತ್ತಮ ಅವಕಾಶ ದೊರೆಯುವ ಸಾಧ್ಯತೆ ಇದೆ. ಇನ್ನು ಹೂಡಿಕೆ ಮಾಡಬೇಕು ಎಂದಿರುವವರಿಗೆ ಸಮಯಕ್ಕೆ ಸೂಕ್ತವಾಗಿ, ನೀವು ನಿರೀಕ್ಷೆಯೇ ಮಾಡಿರದಂತೆ ಇತರರ ನೆರವು- ಮಾರ್ಗದರ್ಶನ ದೊರೆಯಲಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಬದಲಾವಣೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ಎನ್‌ಜಿಒಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಇದಕ್ಕೆ ಇತರರ ನೆರವು ಸಿಗಲಿದೆ.
ಈ ದಿನ ಮನರಂಜನೆಗೆ ಏನೂ ಕೊರತೆ ಇರುವುದಿಲ್ಲ. ನಕ್ಕು ಸಮಯ ಕಳೆಯುವುದಕ್ಕೆ ಈ ದಿನ ಸಾಕಷ್ಟು ಕಾರಣಗಳು ದೊರೆಯುತ್ತವೆ. ಸ್ನೇಹಿತರು- ಸಂಬಂಧಿಕರಿಗೆ ಈ ದಿನ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ. ಆದ್ದರಿಂದ ಮೊಬೈಲ್‌ಫೋನ್ ಅಥವಾ ಬೇರೆ ಯಾವುದೇ ರೀತಿಯಲ್ಲಿ ಲಭ್ಯ ಇರುವಂತೆ ಗಮನ ವಹಿಸಿ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಥವಾ ವಾಟ್ಸಾಪ್ ಡಿಪಿಯಲ್ಲಿ ಲಕ್ಷ್ಮೀದೇವಿ ಚಿತ್ರವನ್ನು ಹಾಕಿಕೊಳ್ಳಿ.
ನಾವು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ ಈ ದಿನ ಒಳ್ಳೆಯದಲ್ಲ. ಹೀಗೆ ಮಾಡಿದಲ್ಲಿ ನಿಮ್ಮ ಆತ್ಮೀಯರು ಹಾಗೂ ಬಹಳ ಮೆಚ್ಚುವಂಥವರ ಜತೆಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಏರ್ಪಡಬಹುದು. ಇನ್ನು ಹಳೆಯ ನೋವು ಎಂದು ಕಾಡುತ್ತಿದ್ದಲ್ಲಿ ಮಂಡಿನೋವು ಈ ದಿನ ನಿಮಗೆ ಕಾಡಬಹುದು. ತೂಕದ ಸಮಸ್ಯೆ ಎದುರಿಸುತ್ತಿರುವವರು ಇಳಿಸಿಕೊಳ್ಳುವ ಕಡೆಗೆ ಗಮನ ವಹಿಸಿ. ಸರಿಯಾದ ವೈದ್ಯರ ಹಾಗೂ ಸೂಕ್ತ ಔಷಧೋಪಚಾರದ ಅಗತ್ಯ ಕಂಡುಬರಲಿದೆ.
ಸ್ನೇಹಿತರು, ಸಂಬಂಧಿಕರೊಂದಿಗೆ ಶಾಪಿಂಗ್ ತೆರಳುವ ಅವಕಾಶಗಳಿವೆ. ಇನ್ನು ಇದೇ ಸಮಯದಲ್ಲಿ ಹೊಸ ಬಟ್ಟೆ, ಆಭರಣಗಳನ್ನು ಖರೀದಿಸುವುದಕ್ಕೆ ಹಣ ಖರ್ಚು ಮಾಡುವ ಯೋಗ ಇದೆ. ಒಂದಿಷ್ಟು ಚೌಕಾಸಿ ಮಾಡಲಿದ್ದೀರಿ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸಿ, ಇಎಂಐಗೆ ಬದಲಾಯಿಸಿಕೊಳ್ಳಬೇಕು ಎಂದಿದ್ದಲ್ಲಿ ಅಂಥ ಖರ್ಚು ಯಾವುದು ಎಂಬುದನ್ನು ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ. ಯಾರೊಂದಿಗೂ ನಿಮ್ಮ ಪಿನ್ ಕೋಡ್ ಹಂಚಿಕೊಳ್ಳದಿರಿ.
ಹಣಕಾಸಿನ ವಿಚಾರಗಳ ಜತೆಗೆ ಭಾವನಾತ್ಮಕ ಸಂಗತಿಗಳು ಕೂಡ ತಳುಕು ಹಾಕಿಕೊಳ್ಳಲಿವೆ. ಆದ್ದರಿಂದ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಬೇಕು. ಇನ್ನು ವಿದೇಶದಲ್ಲಿ ಉದ್ಯೋಗ, ವ್ಯಾಸಂಗಕ್ಕೆ ಅಥವಾ ಅಲ್ಲೇ ನೆಲೆಸುವುದಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಈ ದಿನ ಮಹತ್ವವಾದ ಮಾಹಿತಿಯು ದೊರೆಯಲಿದೆ. ಇತರರ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಜತೆಗೆ ಕೆಲಸ ಮಾಡುವವರ ಮೇಲೆ ಯಾವುದೇ ಕಾರಣಕ್ಕೂ ರೇಗಬೇಡಿ.
ನಿಮ್ಮ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚಾಗಲಿದ್ದು, ಅದಕ್ಕಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಪ್ರೀತಿಪಾತ್ರರ ಜತೆಗೆ ಸಮಯವನ್ನು ಕಳೆಯಲಿದ್ದೀರಿ. ಈಗಾಗಲೇ ಆರಂಭಿಸಿ, ಅರ್ಧದಷ್ಟು ಮುಗಿದ ಕೆಲಸವನ್ನು ಮೊದಲಿಂದ ಆರಂಭ ಮಾಡಬೇಕಾಗಬಹುದು. ಸೋದರಮಾವನ ಆರೋಗ್ಯದ ಕಡೆಗೆ ಜಾಗ್ರತೆಯನ್ನು ವಹಿಸಿ. ನೀವಾಗಿಯೇ ತೆಗೆದುಕೊಂಡ ಜವಾಬ್ದಾರಿಯನ್ನು ಗಡುವಿನೊಳಗೆ ಮುಗಿಸುವುದಕ್ಕೆ ಪ್ರಯತ್ನಿಸಿ.
ಆರ್ಥಿಕ ಬೆಳವಣಿಗೆಯಿಂದಾಗಿ ನಿಮ್ಮೊಳಗೆ ಒಂದು ಆತ್ಮವಿಶ್ವಾಸ ಬೆಳೆಯಲಿದೆ. ಏಕೆಂದರೆ ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ವಿವಾಹ ವಯಸ್ಕರಾಗಿದ್ದಲ್ಲಿ, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆ ದಿನ ಇದು. ಹೊಸ ಗ್ಯಾಜೆಟ್, ಲ್ಯಾಪ್‌ಟಾಪ್, ಟೀವಿ ಇಂಥದ್ದನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚಾಗುವ ಯೋಗ ಇದೆ.
ಈ ದಿನ ನಿಮ್ಮ ಆತ್ಮಗೌರವ, ಪ್ರತಿಷ್ಠೆಗೆ ಪಟ್ಟು ನೀಡುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಕುಟುಂಬದ ಬಗ್ಗೆ ನಿಮ್ಮ ಯೋಚನೆ ಜಾಸ್ತಿ ಆಗುತ್ತದೆ. ಇನ್ನು ಮನೆ ಕಟ್ಟುತ್ತಿರುವವರು, ಸೈಟು ಖರೀದಿಸಬೇಕು ಎಂದಿರುವವರಿಗೆ ಈ ದಿನ ಮಹತ್ವದ್ದಾಗಿರುತ್ತದೆ. ಷೇರು – ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಅಂತರಂಗದ ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಆರೋಗ್ಯದ ಬಗ್ಗೆ ನಿಮ್ಮ ಪ್ರಾಶಸ್ತ್ಯ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಆಯುರ್ವೇದ ಚಿಕಿತ್ಸೆಗೆ ಮುಂದಾಗಬಹುದು. ಇನ್ನು ಯೋಗ, ಜಿಮ್ ಇಂಥದ್ದಕ್ಕೆ ಸೇರ್ಪಡೆ ಆಗುವಂಥ ಸಾಧ್ಯತೆಗಳಿವೆ. ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಗಳು, ಕಾಗದ- ಪತ್ರಗಳು ದೊರೆಯುವ ಸಾಧ್ಯತೆಗಳಿವೆ. ಗಣಪತಿ ಆರಾಧನೆಯನ್ನು ಮಾಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಕಾಂಟ್ಯಾಕ್ಟ್‌ಗಳು ದೊರೆಯಲಿವೆ.
ಲೇಖನ- ಎನ್.ಕೆ.ಸ್ವಾತಿ