ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 23ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಇರುವಂಥ ಹಳೆ ವಸ್ತುಗಳನ್ನು ಮಾರಾಟ ಮಾಡಿ, ಅದರ ಬದಲಿಗೆ ಕೆಲವು ವಸ್ತುಗಳನ್ನು ಖರೀದಿಸಿ ತರುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಒಂದು ವೇಳೆ ಈ ಹಿಂದೆಯೇ ಸಾಲವೇನಾದರೂ ಪಡೆದುಕೊಂಡಿದ್ದಲ್ಲಿ ಅದನ್ನು ಹಿಂತಿರುಗಿಸುವುದು ಉತ್ತಮ. ಇಲ್ಲದಿದ್ದಲ್ಲಿ ಅವಮಾನದ ಪಾಲಾಗುತ್ತೀರಿ. ನಲವತ್ತು ವರ್ಷ ಮೇಲ್ಪಟ್ಟವರು ಇದ್ದಲ್ಲಿ ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ಪಡೆಯಬೇಕಾಗಲಿದೆ. ಯಾರಿಗೇ ಆದರೂ ಸಾಲ ನೀಡುವುದಕ್ಕೆ ಮುಂಚೆ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಆ ವ್ಯಕ್ತಿಯಿಂದ ನಿಮ್ಮ ಹಣವೂ ವಾಪಸಾಗುವುದಿಲ್ಲ ಹಾಗೂ ಇದರ ಜತೆಗೆ ಎಲ್ಲ ಕಡೆಗೂ ನಿಮ್ಮ ಬಗ್ಗೆ ತಪ್ಪಾಗಿ ಹೇಳಿಕೊಂಡು ಬರುತ್ತಾರೆ. ಇನ್ನು ಮನೆಯಿಂದ ಹೊರಗೆ- ದೂರದಲ್ಲಿ ಇರುವವರು ಊಟ- ತಿಂಡಿ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕಾಗುತ್ತದೆ.
ಹೊಸದಾಗಿ ಸೈಟು ಖರೀದಿಸಬೇಕು ಎಂದಿರುವವರು ಅಥವಾ ಈಗಾಗಲೇ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಹಣಕಾಸಿನ ಹರಿವಿನ ವಿಚಾರದಲ್ಲಿ ಒಂದಿಷ್ಟು ಆತಂಕ ಸೃಷ್ಟಿ ಆಗಲಿದೆ. ಬ್ಯಾಂಕ್ ನಿಂದ ಹಣ ಬಿಡುಗಡೆ ಆಗಬೇಕಿದ್ದಲ್ಲಿ ಕೂಡ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಮಕ್ಕಳಿಗೆ, ಅದರಲ್ಲೂ ಎಂಟು ವರ್ಷದೊಳಗೆ ಇರುವಂಥ ಮಕ್ಕಳು ಮನೆಯಲ್ಲಿ ಇದ್ದಲ್ಲಿ ಅವರಿಗೆ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಒಂದು ವೇಳೆ ನೀವು ಮನೆಯಿಂದ ದೂರದ ಪ್ರದೇಶಗಳಿಗೆ ತೆರಳಿದ್ದಲ್ಲಿ ದಿಢೀರನೇ ಅಲ್ಲಿಂದ ವಾಪಸ್ ಬರಲೇಬೇಕಾದ ಸನ್ನಿವೇಶ ಎದುರಾಗುತ್ತದೆ. ಅಲ್ಲಿಗೆ ಹೋದ ಕೆಲಸ ಪೂರ್ಣಗೊಳ್ಳುವ ಮುನ್ನವೇ ಹಿಂತಿರುಗಬೇಕಾಗುತ್ತದೆ. ಎಷ್ಟೇ ಭರವಸೆ, ನಂಬಿಕೆ ಇದ್ದರೂ ನಿಮ್ಮ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸಬೇಡಿ. ಬೆಳ್ಳಿ ವಸ್ತುಗಳ ಖರೀದಿಗೆ ಖರ್ಚು ಮಾಡುವಂಥ ಯೋಗ ಇದೆ.
ಮನೆ ಬದಲಾವಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಹೊಸ ಬಟ್ಟೆ, ವಾಚ್, ಇಯರ್ ಫೋನ್ ಅಥವಾ ಹೆಡ್ ಫೋನ್ ಖರೀದಿಸುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಭವಿಷ್ಯದಲ್ಲಿ ನಡೆಯುವಂಥ ಪ್ರಮುಖ ಬೆಳವಣಿಗೆಯೊಂದರ ಬಗ್ಗೆ ನಿಮಗೆ ಸುಳಿವು ದೊರೆಯಲಿದೆ. ತಂದೆ ಅಥವಾ ತಾಯಿ ಸಲುವಾಗಿ ಮೆಡಿಕಲ್ ಇನ್ಷೂರೆನ್ಸ್ ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಹೊಸದಾಗಿ ಕಾರು ಖರೀದಿಸಬೇಕು ಎಂದು ಆಲೋಚಿಸುತ್ತಿರುವವರು ಅದಕ್ಕೆ ಅಡ್ವಾನ್ಸ್ ನೀಡುವಂಥ ಯೋಗಗಳಿವೆ. ಸರ್ಕಾರದಿಂದ ಜಮೀನಿಗೆ ಸಂಬಂಧಿಸಿದ ಕೆಲಸಗಳು ಆಗಬೇಕಿದ್ದಲ್ಲಿ ಯಾರ ಮೂಲಕವಾಗಿ ಪ್ರಯತ್ನಿಸಬೇಕು ಎಂಬ ಸುಳಿವು ದೊರೆಯಲಿದೆ. ಯಾವುದಾದರೂ ಹಣಕಾಸಿನ ವಿಚಾರಕ್ಕೆ ಪ್ಲಾನ್ ಮಾಡುತ್ತಿದ್ದೀರಿ ಅಂತಾದಲ್ಲಿ ಕೈಲಿ ಇರುವಷ್ಟು ಹಣಕ್ಕೆ ಮಾತ್ರ ಬಜೆಟ್ ಮಾಡಿಕೊಳ್ಳಿ.
ಮಕ್ಕಳ ಉದ್ಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕವಾದ ಬೆಳವಣಿಗೆ ಆಗಲಿದೆ. ವಿದೇಶದಲ್ಲಿ ವ್ಯಾಸಂಗ ಅಥವಾ ಉದ್ಯೋಗವನ್ನು ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ದೊರೆಯಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ದೊಡ್ಡ ಪ್ರಾಜೆಕ್ಟ್ ವೊಂದರಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಈಗಾಗಲೇ ಅಂಥದ್ದೊಂದು ನಿರ್ವಹಣೆ ಮಾಡುತ್ತಾ ಇರುವವರಿಗೆ ನಿಗದಿ ಆಗಿದ್ದಕ್ಕಿಂತ ಹೆಚ್ಚಿನ ಹಣವು ದೊರೆಯುವ ಅವಕಾಶಗಳಿವೆ. ಮನೆಗೆ ದೊಡ್ಡ ಅಳತೆಯ ಟೀವಿ, ಹೋಮ್ ಥಿಯೇಟರ್ ಸಿಸ್ಟಮ್ ಅಥವಾ ಬಹಳ ಸಮಯದಿಂದ ಖರೀದಿಸಬೇಕು ಅಂದುಕೊಂಡಿದ್ದ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಈಗಾಗಲೇ ನೀವಾಗಿಯೇ ವಹಿಸಿಕೊಂಡ ಕೆಲಸಗಳನ್ನು ಅವಧಿಯ ಒಳಗಾಗಿ ಮಾಡಿ ಮುಗಿಸುವುದಕ್ಕೆ ಆದ್ಯತೆ ನೀಡಿ. ಇಲ್ಲದಿದ್ದಲ್ಲಿ ದೊಡ್ಡ ಮೊತ್ತದ ಹಣವನ್ನು ಕಳೆದುಕೊಳ್ಳುವಂತಾಗುತ್ತದೆ.
ಯಾರದೋ ಮೇಲಿನ ಸಿಟ್ಟು ಇನ್ಯಾರ ಮೇಲೋ ತೋರಿಸುವಂತಾಗುತ್ತದೆ. ಆದ್ದರಿಂದ ಮಾನಸಿಕ ಸ್ತಿಮಿತ ಕಾಯ್ದುಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ಈ ಹಿಂದೆ ಯಾವಾಗಲೋ ಆಗಿರುವ ಕೆಲವು ತಪ್ಪನ್ನು ಈಗ ಎತ್ತಾಡಿ, ನಿಮಗೆ ಇನ್ನಷ್ಟು ಸಿಟ್ಟು ತರಿಸುವುದಕ್ಕೆ ಕೆಲವರು ಪ್ರಯತ್ನವನ್ನು ಮಾಡುತ್ತಾರೆ. ಮಕ್ಕಳ ಆರೋಗ್ಯ ಸ್ಥಿತಿಯು ನಿಮಗೆ ಚಿಂತೆಯನ್ನು ಉಂಟುಮಾಡುತ್ತದೆ. ವೈದ್ಯಕೀಯ ಪರೀಕ್ಷೆಗಳಿಗಾಗಿ ಸೂಚಿಸಿದಲ್ಲಿ ಕೂಡಲೇ ಮಾಡಿಸಿಕೊಳ್ಳುವುದು ಒಳ್ಳೆಯದು. ನಿಮ್ಮಲ್ಲಿ ಕೆಲವರು ಸೈಟನ್ನೋ ಅಥವಾ ಬಾಡಿಗೆ ಆದಾಯ ತರುವಂಥ ಮನೆಯನ್ನೋ ಖರೀದಿಸುವುದಕ್ಕೆ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ತಾತ್ಕಾಲಿಕವಾಗಿ ನಿರ್ಧಾರವನ್ನು ಮುಂದೂಡುವ ಸಾಧ್ಯತೆಗಳಿವೆ. ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿ ಅಥವಾ ತವರು ಮನೆ ಕಡೆಯವರಿಂದ ಅವಮಾನಗಳು ಆಗಬಹುದು. ಆದರೆ ಎಲ್ಲ ವಿಚಾರಕ್ಕೂ ವಿಪರೀತ ರಿಯಾಕ್ಟ್ ಮಾಡುವುದಕ್ಕೆ ಹೋಗದಿರಿ.
ಸಂಬಂಧಿಕರಲ್ಲೇ ಕೆಲವು ವ್ಯಕ್ತಿಗಳು ನಿಮ್ಮ ಜತೆಗೂಡಿ ವ್ಯಾಪಾರ- ವ್ಯವಹಾರ ಆರಂಭಿಸುವ ಬಗ್ಗೆ ಪ್ರಸ್ತಾವವನ್ನು ಮಾಡಲಿದ್ದಾರೆ. ಅಥವಾ ನೀವಾಗಿಯೇ ಇಂಥದ್ದೊಂದು ವಿಚಾರವನ್ನು ಯಾವುದಾದರೂ ಸಮಾರಂಭದಲ್ಲಿಯೋ ಗೆಟ್ ಟು ಗೆದರ್ ನಲ್ಲಿಯೋ ಹೇಳಲಿದ್ದೀರಿ. ಏನೇ ಹೊಸದಾದ ವ್ಯವಹಾರ- ವ್ಯಾಪಾರ ಆರಂಭಿಸಬೇಕು ಎಂದಿದ್ದರೂ ಅದಕ್ಕೆ ಬೇಕಾದಂಥ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮಲ್ಲಿ ಯಾರು ಸೆಕೆಂಡ್ ಹ್ಯಾಂಡ್ ಕಾರು ಅಥವಾ ಸ್ಕೂಟರ್- ಬೈಕ್ ಖರೀದಿ ಮಾಡಬೇಕು ಎಂದಿದ್ದೀರೋ ಅಂಥವರಿಗೆ ಅಂದುಕೊಂಡ ಮೊತ್ತಕ್ಕೆ ವಾಹನ ದೊರೆಯಲಿದೆ. ಸ್ವಂತ ಮನೆಯಲ್ಲಿ ಇರುವಂಥವರಿಗೆ ಹೆಚ್ಚುವರಿಯಾಗಿ ಕೋಣೆಗಳನ್ನು ನಿರ್ಮಾಣ ಮಾಡುವ ಯೋಗ ಇದ್ದು, ಇದಕ್ಕೆ ಸಂಬಂಧಿಸಿದಂತೆ ಕಾಂಟ್ರಾಕ್ಟರ್ ಗಳನ್ನು ಕರೆಸಿ ಮಾತನಾಡಲಿದ್ದೀರಿ. ನೀವು ಅಂದುಕೊಂಡ ಮೊತ್ತದೊಳಗೇ ಕೆಲಸ ಮುಗಿಯಲಿದೆ.
ಬಹಳ ಸಮಯದಿಂದ ಕಾಡುತ್ತಿದ್ದ ಚಿಂತೆ ನಿಮ್ಮಿಂದ ದೂರವಾಗಲಿದೆ. ನೀವು ಪ್ರಯತ್ನಿಸುತ್ತಿರುವ ಕೆಲಸಗಳನ್ನು ಆದ್ಯತೆ ಮೇಲೆ ಮಾಡುವುದಕ್ಕೆ ಪ್ರಯತ್ನಿಸಿ. ಬ್ಯಾಂಕ್ ನಲ್ಲಿ ಇಟ್ಟಿರುವಂಥ ಉಳಿತಾಯದ ಹಣವನ್ನೋ ಎಫ್.ಡಿ.ಯನ್ನೋ ಮುರಿಸಬೇಕು ಎಂಬ ನಿರ್ಧಾರಕ್ಕೆ ಬರಲಿದ್ದೀರಿ. ಸೋದರ- ಸೋದರಿಯರ ಕೌಟುಂಬಿಕ ವಿಚಾರಗಳಲ್ಲಿ ನಿಮ್ಮಿಂದ ಸಹಾಯ ಬೇಕಾಗಲಿದೆ. ಜ್ಯೋತಿಷ್ಯ, ಪೌರೋಹಿತ್ಯವನ್ನು ವೃತ್ತಿಯನ್ನಾಗಿ ಮಾಡಿಕೊಂಡವರು, ಆಧ್ಯಾತ್ಮಿಕ ಚಿಂತಕರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅಥವಾ ಮಹತ್ವವಾದ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿದೆ. ನಾನಾ ಕಾರಣಗಳಿಂದಾಗಿ ಮನೆ ನಿರ್ಮಾಣ ಕಾರ್ಯವು ಅರ್ಧಕ್ಕೆ ನಿಂತುಹೋಗಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಬೇಕಾದ ಅನುಕೂಲಗಳು ಒದಗಿಬರಲಿವೆ. ಮುಖ್ಯವಾದ ಕೆಲಸಕ್ಕಾಗಿ ತೆರಳುವ ಮುಂಚೆ ಮನೆ ದೇವರ ಆರಾಧನೆ ಅಥವಾ ಸ್ಮರಣೆಯನ್ನು ಮಾಡಿಕೊಂಡು ಹೊರಡಿ.
ಸಂಗಾತಿಯ ನಡವಳಿಕೆ ಅಥವಾ ವರ್ತನೆಯಿಂದ ಸಿಕ್ಕಾಪಟ್ಟೆ ಬೇಜಾರು ಆಗಲಿದೆ. ಈ ಹಿಂದೆ ತಾವು ನೀಡಿದ್ದ ಮಾತನ್ನು ಹಾಗೇ ಹೇಳಿಲ್ಲ ಎಂದು ವಾದ ಮಾಡಬಹುದು ಅಥವಾ ನೀವೇ ಸುಳ್ಳು ಹೇಳುತ್ತಿದ್ದೀರಿ ಎಂದು ಸಹ ಹೇಳಬಹುದು. ವಿವಾಹ ವಾರ್ಷಿಕೋತ್ಸವ, ಜನ್ಮದಿನ ಮೊದಲಾದ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿದ್ದು, ಅಲ್ಲಿ ನೀವು ಆಡುವಂಥ ಮಾತು ವಿವಾದಕ್ಕೆ ಕಾರಣ ಆಗಬಹುದು. ಇನ್ನು ಯಾರು ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿದ್ದೀರಿ ಅಂಥವರು ನಿರೀಕ್ಷೆ ಮಾಡಿದಂಥ ಹಣವು ಬಾರದೆ ಭಾರೀ ಒತ್ತಡಕ್ಕೆ ಸಿಲುಕಿಕೊಂಡಂತೆ ಆಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಮೈಗ್ರೇನ್, ಜ್ವರ ಮೊದಲಾದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಒಂದು ವೇಳೆ ಇದನ್ನು ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ಮಾಡಿದರೂ ಆ ನಂತರ ಪರಿತಪಿಸುವಂತೆ ಆಗುತ್ತದೆ. ಇತರರ ವಸ್ತುಗಳು ನಿಮ್ಮ ಬಳಿ ಇದೆಯೆಂದಾದರೆ ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು ಮುಖ್ಯ.
ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಮೀರಿ, ಕೆಲಸಗಳನ್ನು ಮಾಡುವ ಮೂಲಕ ಇತರರಲ್ಲಿ ಅಚ್ಚರಿಯನ್ನು ಮೂಡಿಸಲಿದ್ದೀರಿ. ತಂದೆ- ತಾಯಿಗಳ ಆರೋಗ್ಯದಲ್ಲಿ ಸುಧಾರಣೆ ತರುವುದಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ. ಇದರ ಜತೆಗೆ ನಾಲ್ಕಾರು ಜನರ ಬಳಿ ವಿಚಾರಿಸಿ, ಅತ್ಯುತ್ತಮ ಚಿಕಿತ್ಸೆ ದೊರೆಯುವ ಕಡೆಗೆ ಅವರನ್ನು ಕರೆದೊಯ್ಯಲಿದ್ದೀರಿ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡದೊಂದು ಅವಕಾಶ ದೊರೆಯಲಿದೆ. ನಿಮಗೆ ಬಾಕಿ ಬರಬೇಕಾದ ಹಣ ಇದ್ದಲ್ಲಿ ಅದಕ್ಕಾಗಿ ಈ ದಿನ ಪ್ರಯತ್ನಿಸಿ. ಕನಿಷ್ಠ ಪಕ್ಷ ಇಂಥ ಸಮಯದಲ್ಲಿ ಹಿಂತಿರುಗಿಸುವುದಾಗಿ ಪೋಸ್ಟ್ ಡೇಟೆಡ್ ಚೆಕ್ ನೀಡುವ ಸಾಧ್ಯತೆಯಾದರೂ ಇದೆ. ಪುಸ್ತಕ ಪ್ರಕಾಶಕರಾಗಿ, ಮುದ್ರಕರಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ದೊಡ್ಡ ಆರ್ಡರ್ ದೊರೆಯಲಿದೆ. ಸನ್ಮಾನಗಳು ಸಹ ಆಗುವ ಬಗ್ಗೆ ಮಾಹಿತಿ ಸಿಗಲಿದೆ.
ಲೇಖನ- ಎನ್.ಕೆ.ಸ್ವಾತಿ