AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನ ಭವಿಷ್ಯ; ಇಂದು ಈ ರಾಶಿಯವರು ಸ್ತ್ರೀಯರಿಂದ ಅಪಮಾನಕ್ಕೆ ಒಳಗಾಗುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 23 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನ ಭವಿಷ್ಯ; ಇಂದು ಈ ರಾಶಿಯವರು ಸ್ತ್ರೀಯರಿಂದ ಅಪಮಾನಕ್ಕೆ ಒಳಗಾಗುವಿರಿ
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 23, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಪರಿಘ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 14:06ರಿಂದ 15:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05ರಿಂದ ಬೆಳಗ್ಗೆ 07:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ.

ಸಿಂಹ ರಾಶಿ :ರೂಪಕ್ಕೆ ತಕ್ಕಂತೆ ಸ್ವರೂಪವಿರುವುದಿಲ್ಲ ಎನ್ನುವುದು ಸತ್ಯವಾಗುವುದು. ಯಾರದೋ ಮಾತಿನಿಂದ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ನಿಮಗೆ ಸಲ್ಲದ ಮಾತುಗಳು ನಿಮ್ಮೆದುರು ಬರಬಹುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ನಿಮ್ಮನ್ನು ಅನ್ಯರಂತೆ ಕಂಡಾರು. ಮೇಲಧಿಕಾರಿಗಳ ಜೊತೆ ಅಥವಾ ಸಹೋದ್ಯೋಗಿಗಳ ಜೊತೆ ಕಲಹವಾದರೂ ಆದೀತು. ಸಿಗಬೇಕಾದುದು ಸಿಕ್ಕಿಲ್ಲವೆಂದರೆ ಅದರ ಬಗ್ಗೆ ಹೆಚ್ಚು ವಿಚಾರ ಬೇಡ. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ಮೋಹದಿಂದ ಹೊರಬರುವುದು ಕಷ್ಟವಾದೀತು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮ ನೇರವಾದ ಮಾತು ನಿಮಗಷ್ಟೇ ಚೆನ್ನಾಗಿದೆ ಎನ್ನಿಸಬಹುದು.

ಕನ್ಯಾ ರಾಶಿ :ನೀವು ಉದ್ಯಮದಲ್ಲಿ ಒತ್ತಡಗಳು ಇಲ್ಲದೇ ಇಂದು ನಿಶ್ಚಿಂತೆಯಿಂದ ಕೆಲಸವನ್ನು ಮಾಡುವಿರಿ. ದುಶ್ಚಟಗಳನ್ನು ಸ್ನೇಹಿತರು ನಿಮಗೆ ಹಿಡಿಸಬಹುದು. ವಿಶ್ವಾಸಘಾತಕರು ನಿಮ್ಮ ಸುತ್ತಲೇ ಇದ್ದಾರೆ ಎಂದು ಅನ್ನಿಸುತ್ತದೆ. ಸಣ್ಣ ಅನಾಹುತವೂ ನಿಮ್ಮ ವೃತ್ತಿಗೆ ಕಂಟಕವಾದೀತು. ಸ್ತ್ರೀಯರಿಂದ ಅಪಮಾನಕ್ಕೆ ಒಳಗಾಗುವಿರಿ. ಇದು ನಿಮ್ಮ ಮನೋಬಲವನ್ನು ಕುಗ್ಗಿಸೀತು. ಸ್ವಂತ ಆಲೋಚನೆಗಳಿಂದ ಮಾಡಬೇಕಾದುದನ್ನು ಮಾಡಿಕೊಳ್ಳಿ. ಎಲ್ಲವನ್ನೂ ಒಂದೇ ತೂಕದಲ್ಲಿ ನೋಡುವುದು ಬೇಡ. ಋಣಮುಕ್ತರಾಗಲು ನೀವು ಬಹಳ ಶ್ರಮಪಡಬೇಕಾಗಿದೆ. ಚೂರಾದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಕಾಗುವುದು.

ತುಲಾ ರಾಶಿ :ಸೋಮಾರಿತನದಿಂದ ಆಗುವ ನಷ್ಟವು ಇಂದು ನಿಮಗೆ ಗೊತ್ತಾಗುವುದು. ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ಮಕ್ಕಳಿಂದ ತಲೆ ತಗ್ಗಿಸುವ ಕೆಲಸವಾಗಲಿದೆ. ಸಮಾಜಸೇವೆಗೆ ನಿಮ್ಮನ್ನು ತೊಡಗಿಸಿಕೊಳ್ಳುವ ಹಂಬಲದಲ್ಲಿ ಇರುತ್ತೀರಿ. ಬೆಳಗಿನಿಂದ ಮನಸ್ಸು ಭಾರವಾದಂತೆ ಅನ್ನಿಸುವುದು. ಬಹಳ ದಿನಗಳಿಂದ ಇದ್ದ ಆಸೆಯನ್ನು ಇಂದು ಪೂರೈಸಿಕೊಳ್ಳುವಿರಿ. ಸಿಗದ ಹಣದ ಬಗ್ಗೆ ನಿಮಗೆ ಬೇಸರವಿರುವುದು. ಅದನ್ನು ಹೇಗಾದರೂ ಮಾಡಿ ಗಳಿಸುವ ತವಕ ಇರುವುದು. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಪಾತ್ರರು ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು.

ವೃಶ್ಚಿಕ ರಾಶಿ :ನೀವು ನಿಮ್ಮ ಮಕ್ಕಳ ಬಗ್ಗೂ ಇತರರ ಬಗ್ಗೆಯೂ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವಿರಿ. ಅನೇಕ ದಿನಗಳಿಂದ ಸಣ್ಣ ಪುಟ್ಟ ಅನಾರೋಗ್ಯದ ತೊಂದರೆಯಾಗಲಿದ್ದು ವೈದ್ಯರ ಸಲಹೆಯನ್ನು ಒಮ್ಮೆ ಪಡೆಯುವುದು ಉತ್ತಮ. ಅಪರಿಚಿತರ ವರ್ತನೆಯಿಂದ ಸಹವಾಸವನ್ನು ಮಾಡಬೇಡಿ. ಸಹಾಯವನ್ನು ಮಾಡಿ ಸಮಯವನ್ನು ವ್ಯರ್ಥಮಾಡಬೇಡಿ. ವೃತ್ತಿಯಿಂದ ನಿಮಗೆ ಬೇಸರವುಂಟಾಗಬಹುದು. ಸಂಗಾತಿಯಿಂದ ನಿಮಗೆ ಕಿರಿಕಿರಿ ಆಗಬಹುದು. ಯಾವುದೇ ನಿರ್ಧಾರಗಳನ್ನು ಇಂತಹ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಡಿ. ಹಣವು ಖರ್ಚಾಗುವುದೆಂಬ ಆತಂಕ ಬೇಡ. ಅಧಿಕಾರವು ಕ್ಷಣಿಕ ಎಂಬ ಭಾವವು ನಿಮ್ಮೊಳಗೆ ಇರಲಿ. ಚಿಕ್ಕ ಕೆಲಸವನ್ನಾದರೂ ಬಹಳ ಅಚ್ಚುಕಟ್ಟಿನಿಂದ ಮಾಡಿಕೊಳ್ಳುವಿರಿ. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಕೆಲವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದೀತು. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವುದು ಅನಿವಾರ್ಯ.