Horoscope: ನಿತ್ಯ ಭವಿಷ್ಯ; ನಿತ್ಯದ ಕೆಲಸದಿಂದ ಬೇಸರ, ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 11 ಮೇ​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ನಿತ್ಯದ ಕೆಲಸದಿಂದ ಬೇಸರ, ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ
ಪ್ರಾತಿನಿಧಿಕ ಚಿತ್ರ

Updated on: May 11, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಯಮಘಂಡ ಕಾಲ 14:05 ರಿಂದ 15:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:07 ರಿಂದ 07:43ರ ವರೆಗೆ.

ಮೇಷ ರಾಶಿ: ಇಂದು ನಿಮ್ಮ ಕಾರ್ಯದಲ್ಲಿ ವೇಗಕ್ಕಿಂತ ಉದ್ವೇಗವೇ ಹೆಚ್ಚು ಕಾಣಿಸುವುದು. ಹೊಸ ವಿಚಾರಗಳ ಅನ್ವೇಷಣೆಯು ನಿಮಗೆ ಖುಷಿಕೊಡುವುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳು ಇರಬಹುದು. ಉತ್ಸಾಹದಲ್ಲಿ ಅಥವಾ ತಮಾಷೆಯಲ್ಲಿ ಹೇಳಲಾದ ಯಾವುದನ್ನಾದರೂ ನಿಮ್ಮ ಪ್ರೀತಿಪಾತ್ರರು ಅಥವಾ ಸ್ನೇಹಿತರು ಕೆಟ್ಟದಾಗಿ ತೆಗೆದುಕೊಳ್ಳುತ್ತಾರೆ, ಆದ್ದರಿಂದ ಜಾಗರೂಕರಾಗಿರಿ. ಆದಾಯದ ಮೂಲವನ್ನು ನೀವು ಹೆಚ್ಚಿಸಿಕೊಳ್ಳಲು ಬಯಸುವಿರಿ. ಎಲ್ಲದರಿಂದ ದೂರಾಗಿ ಹೊಸತನ್ನು ಹುಡುಕುವ ಆಸಕ್ತಿ ಇರುವುದು. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ. ಸ್ತ್ರೀಯರ ಮಾತಿಗೆ ಮನಸೋಲುವ ಸಾಧ್ಯತೆ ಇದೆ.

ವೃಷಭ ರಾಶಿ: ನೀವು ಕುಟುಂಬ ಮತ್ತು ನಿಮ್ಮ ಆಪ್ತರ ಜೊತೆ ಸಮಯ ಕಳೆಯುವುದರಿಂದ ಸದ್ಭಾವ ಬೆಳೆಯುವುದು. ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಸ್ವಭಾವದಿಂದ ನಿಮ್ಮ ಸುತ್ತಮುತ್ತಲಿನ ಜನರನ್ನು ಮೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಕೆಲಸದಲ್ಲಿ ಏನಾದರೂ ಕೋಪಗೊಳ್ಳಬಹುದು. ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾದೀತು. ಭವಿಷ್ಯದ ನಿಮ್ಮ ಕಲ್ಪನೆಗೆ ಒಂದು ರೂಪವು ಸಿಕ್ಕಂತೆ ತೋರುವುದು. ದಿನ ನಿತ್ಯದ ಚಟುವಟಿಕೆಗಳು ಬೇಸರ ತರಿಸುವುದು. ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ. ಆಡಿದ ತಪ್ಪು ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು.

ಮಿಥುನ ರಾಶಿ: ನಿಮ್ಮ ಕಾರ್ಯವನ್ನು ಕಂಡು ಮೇಲಧಿಕಾರಿಗಳು ಪ್ರಶಂಸಿಸುವರು. ಅಧ್ಯಯನದಲ್ಲಿ ನೀವು ಮಾಡುವ ಪ್ರಯತ್ನಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ರಜೆಯ ಮೇಲೆ ಎಲ್ಲೋ ಹೋಗುವ ಸಾಧ್ಯತೆ ಇದೆ. ಹೊಸ ಉದ್ಯೋಗಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ವಿದ್ಯಾಭ್ಯಾಸದ ಬಗ್ಗೆ ಪ್ರೀತಿ ಕಡಿಮೆ ಆಗಲಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಮಯವು ಉತ್ತಮವಾಗಿದೆ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಕಛೇರಿಯಲ್ಲಿ ನಿಮಗೆ ಆರಾಮಾಗಿ ಇರುವ ಯೋಚನೆ ಇರುವುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು, ಸಾಧ್ಯತೆ ಇದೆ.

ಕಟಕ ರಾಶಿ: ಆರ್ಥಿಕವಾಗಿ ನೀವು ಅದೃಷ್ಟವಂತರು. ಬಾಂಧವ್ಯವನ್ನು ಉಳಿಸಿಕೊಳ್ಳುವುದು ನಿಮಗೆ ಹಿಡಿಸದು. ದಿನವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ ಆರೋಗ್ಯದ ಬಗ್ಗೆ ತೃಪ್ತಿಕರವಾಗಿರುತ್ತದೆ. ನಿಮ್ಮ ಪರವಾಗಿ ಮಾತನಾಡಲು ಯಾರಾದರೂ ಬೇಕಾಗುತ್ತಾರೆ. ಆದ್ದರಿಂದ ಈ ಪರಿಸ್ಥಿತಿಯಿಂದ ಓಡಿಹೋಗಬೇಡಿ. ಕೆಲಸದಲ್ಲಿ ನೀವು ಏನನ್ನು ನಿರೀಕ್ಷಿಸುತ್ತೀರೋ ಅದು ಶೀಘ್ರದಲ್ಲೇ ಆಗುವ ಸಾಧ್ಯತೆಯಿದೆ. ವಿದ್ಯಾಭ್ಯಾಸಕ್ಕೆ ಸಮಯ ಚೆನ್ನಾಗಿದೆ. ಉತ್ತಮ ಪ್ರದರ್ಶನದಿಂದಾಗಿ ಯಶಸ್ಸಿನ ಸಾಧ್ಯತೆಗಳು ಹೆಚ್ಚುತ್ತಿವೆ. ಕೃತಜ್ಞತೆಯು ಅನಿವಾರ್ಯವಾಗಿ ಬೇಕಾಗುವುದು. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಹಿತಶತ್ರುಗಳು ನಿಮ್ಮ ಸಂಪತ್ತನ್ನು ಬಳಸಿಕೊಳ್ಲಕುವರು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ.