Horoscope 3 April: ದಿನಭವಿಷ್ಯ; ಯಾವ ರಾಶಿಗೆ ಏನು ಫಲ? ಯಾವ ರಾಶಿಯವರಿಗೆ ಅದೃಷ್ಟ?

| Updated By: ರಮೇಶ್ ಬಿ. ಜವಳಗೇರಾ

Updated on: Apr 03, 2024 | 1:08 AM

Rashi Bhavishya: 2024 ಏಪ್ರಿಲ್​​ 03 ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 3 April: ದಿನಭವಿಷ್ಯ; ಯಾವ ರಾಶಿಗೆ ಏನು ಫಲ? ಯಾವ ರಾಶಿಯವರಿಗೆ ಅದೃಷ್ಟ?
ರಾಶಿಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶಿವ , ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ 12:36 ರಿಂದ-14:08ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:59 ರಿಂದ 09:32 ರ ವರೆಗೆ, ಗುಳಿಕ ಕಾಲ ಬೆಳಗ್ಗೆ11:04 ರಿಂದ 12:36ರ ವರೆಗೆ.

ಮೇಷ ರಾಶಿ :ಇಂದು ನೀವು ಮನೆಯಿಂದ ಹೊರಗೆ ಕೆಲಸ ಮಾಡುತ್ತಿದ್ದರೆ ಎಚ್ಚರಿಕೆ ಅಗತ್ಯವಾಗಿ ಬೇಕು. ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಕಾಣಿಸಿಕೊಳ್ಳುವುದು. ತಾಯಿಯ ಆರೋಗ್ಯದ ವಿಚಾರಕ್ಕೆ ಹಣವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಬಗ್ಗೆ ನಕಾರಾತ್ಮಕ ಮನೋಭಾವವು ದೂರಾಗುವುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ವಹಿಸಿಕೊಂಡ ಕೆಲಸವನ್ನು ನಿಶ್ಚಿತ ಸಮಯಕ್ಕೆ ಮುಗಿಸಲು ಆಗದು. ಭಯದ ಕಾರಣಕ್ಕೆ ನೀವು ಎಲ್ಲ ಕಾರ್ಯಗಳಿಂದ ಹಿಮ್ಮುಖರಾಗುವಿರಿ. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಆದ ಕೆಲವು ಸಿದ್ಧಾಂತಗಳನ್ನು ಬಿಡುವುದು ಕಷ್ಟವಾಗುವುದು.

ವೃಷಭ ರಾಶಿ :ಯಾರ ಸಹಾನುಭೂತಿಯನ್ನು ನೀವು ಪಡೆದುಕೊಳ್ಳಲಾರಿರಿ. ನೀವು ಇತರರ ಸಲಹೆಯನ್ನು ಮಾತ್ರ ಅವಲಂಬಿಸಿದ್ದರೆ ಸಂಭಾವ್ಯ ಆರ್ಥಿಕ ನಷ್ಟಗಳ ಬಗ್ಗೆ ಜಾಗರೂಕರಾಗಿರಿ. ಇದಲ್ಲದೆ, ಭಾವನಾತ್ಮಕ ಅಡಚಣೆಗಳು ನಿಮ್ಮನ್ನು ಅಸ್ತವ್ಯಸ್ತಗೊಳಿಸಬಹುದು.  ಇಂದು ನೀವು ಎಲ್ಲ ಕಾರ್ಯಗಳನ್ನು ಶಿಸ್ತುಬದ್ಧವಾಗಿ ಮಾಡಲು ಪ್ರಯತ್ನಿಸುವಿರಿ. ಹಣಕಾಸಿನ ವ್ಯವಹಾರವು ಪೂರ್ಣಪ್ರಮಾಣದಲ್ಲಿ ನಿಮ್ಮದಾಗದು. ದ್ವೇಷವನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಸಜ್ಜನರ ಸಹವಾಸದಿಂದ ಕೆಲವು ಬದಲಾವಣೆಯನ್ನು ತಂದುಕೊಳ್ಳುವಿರಿ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು.

ಮಿಥುನ ರಾಶಿ :ಇಂದು ನಿಮ್ಮ ಬಿಡುವಿಲ್ಲದ ದಿನದಲ್ಲಿಯೂ ಕುಟುಂಬದವೆ ಬಗ್ಗೆ ಕಾಳಜಿ ಇರಲಿದೆ. ವಿದ್ಯುತ್ ಉಪಕರಣಗಳಿಗೆ ಧನವ್ಯಯವಾಗಬಹುದು. ನಿಮ್ಮ ಮಾತುಕತೆಗಳು ಪ್ರಾಮಾಣಿಕರಾಗಿರಲಿ. ಏಕೆಂದರೆ ನಾಟಕೀಯವಾಗಿ ಬದುಕುವುದರಿಂದ ಏನೂ ಪ್ರಯೋಜನವಿಲ್ಲ. ಎಲ್ಲದಕ್ಕೂ ಯಶಸ್ಸು ಸಿಗಬೇಕು ಎಂಬ ಮನೋಭಾವವು ಬದಲಾದರೆ ಒಳ್ಳೆಯದು. ಉದ್ಯಮದ ವಿಸ್ತಾರದ ಕುರಿತು ನಿಮ್ಮ ಆಲೋಚನೆ ವಿಭಿನ್ನವಾಗಿ ಇರುವುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು.

ಕಟಕ ರಾಶಿ :ನೀವು ನಿಮ್ಮ ಸ್ಥಾನವನ್ನು ಬಿಟ್ಟುಕೊಡಲು ತಯಾರಿಲ್ಲ. ಕುಟುಂಬ ಸದಸ್ಯರ ಬಗ್ಗೆ ನಿಮಗಿದ್ದ ನಿರೀಕ್ಷೆಗಳು ಹುಸಿಯಾಗಬಹುದು.  ಪ್ರೀತಿ ಇಂದು ನಿಮಗೆ ಸಂತೋಷವನ್ನು ತರಬಹುದು. ಕೆಲಸದಲ್ಲಿ ಉತ್ಪಾದಕ ದಿನವನ್ನು ನಿರೀಕ್ಷಿಸಿ. ಶುಭ ಸುದ್ದಿಯನ್ನು ನಿಮಗಾಗಿ ಕಾದಿದೆ. ಇಂದಿನ‌ ನಿಮ್ಮ ಸಂತೋಷಕ್ಕೆ ಬೇರೆ ಬೇರೆ ಕಾರಣಗಳು ಇರುವುದು.‌ ಮನೆಯವರನ್ನು ದೂಷಿಸುವುದು ನಿಮಗೆ ಸ್ವಭಾವದಂತೆ ಆಗಬಹುದು. ದೂರಾಲೋಚನೆಯು ಕ್ರಮಬದ್ಧವಾಗಿ ಇರಲಿ. ದಾಂಪತ್ಯದ ಕಲಹವು ಬೇರೆ ದಾರಿಯಲ್ಲಿ ನಡೆಯುವುದು. ಪರದೇಶಲ್ಲಿರುವವರಿಗೆ ಜೀವನ ಕಷ್ಟವೆನಿಸಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ.

ಸಿಂಹ ರಾಶಿ :ಇಂದು ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ಹಣವನ್ನು ಉಳಿಸುವ ನಿಮ್ಮ ಪ್ರಯತ್ನಕ್ಕೆ ಇಂದು ಅಡೆತಡೆಗಳನ್ನು ಬರಬಹುದು. ಯಾವುದೇ ಅನ್ಯ ಆಲೋಚನೆಗೆ ಅವಕಾಶವಿಲ್ಲದೇ ಇರಬಹುದು. ಒಂದೊಂದೇ ಕೆಲಸಗಳು ನಿಮಗೆ ಹೊರೆಯಾಗುತ್ತಾ ಹೋಗಬಹುದು. ಬೇರೆಯವರ‌ ಮಾತು ನಿಮಗೆ ಮನಸ್ಸಿಗೆ ನಾಟದೇ ನಿಮ್ಮದೇ ಆದ ವರ್ತನೆಯನ್ನು ಮುಂದುವರಿಸುವಿರಿ.
ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಷ್ಠೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.

ಕನ್ಯಾ ರಾಶಿ :ಇಂದು ನಿಮ್ಮ ಸಂತೋಷಕರ ನಡವಳಿಕೆಯು ಜನರ ಗಮನವನ್ನು ಸೆಳೆಯುವುದು. ಭೂಮಿ ಮಾರಾಟದ ಬಗ್ಗೆ ಯೋಚಿಸುತ್ತಿದ್ದರೆ ಇಂದು ಉತ್ತಮವಾಗಿರುವುದು. ನಿಮ್ಮ ಪ್ರೀತಿಪಾತ್ರರ ಭಾವನೆ ಜೊತೆ ಸಹಾನುಭೂತಿ ಹೊಂದುವಿರಿ. ನೀವು ಎಲ್ಲವನ್ನೂ ದಾನ ಮಾಡುವ ಮನಃಸ್ಥಿತಿಯನ್ನು ಹಿಂದಿರುವಿರಿ. ನಿಮ್ಮನ್ನು ಯಾರೂ ಏನನ್ನೂ ಪ್ರಶ್ನಿಸಲಾರರು ಎಂಬ ಮನೋಭಾವವು ನಿಮ್ಮಲ್ಲಿ ಇರುವುದು. ಯಾರನ್ನೂ ನಕಾರಾತ್ಮಕವಾಗಿ ತಿಳಿಯುವುದು ಬೇಡ. ಸಮಯವು ನಿಮಗೆ ಎಲ್ಲವನ್ನೂ ತಿಳಿಸುವುದು. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಅತಿಯಾದ ಕೋಪದಿಂದ ನಿಮ್ಮ ವ್ಯವಹಾರವು ಬುಡಮೇಲಾದೀತು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.

ತುಲಾ ರಾಶಿ :ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುವುದು. ನಿಮ್ಮ ನಿರ್ಧಾರಗಳು ಇಂದು ಹೆಚ್ಚುವರಿ ಹಣಕಾಸಿನ ಲಾಭವನ್ನು ತರಬಹುದು. ನಿಮ್ಮ ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ದೊರೆಯಲಿದೆ. ಇಂದು ನಿಮ್ಮ ಸೃಜನಶೀಲತೆಗೆ ಸರಿಯಾದ ಸ್ಥಾನವು ಸಿಗಲಿದೆ. ಇಂದು ಯಾವುದನ್ನೂ ಪರೀಕ್ಷಿಸದೇ ನೀವು ಒಪ್ಪುವುದು ಕಷ್ಟವಾಗುವುದು. ಕೈ ಸುಟ್ಟುಕೊಂಡ ಕಾರ್ಯದಲ್ಲಿ ಮತ್ತೆ ಮನಸ್ಸು ಇರಲಾರದು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು.

ವೃಶ್ಚಿಕ ರಾಶಿ :ನಿಮ್ಮ ಅತ್ಯಾಕರ್ಷಕ ಅವಕಾಶಗಳು ಲಭ್ಯವಾಗಬಹುದು. ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಲಭ್ಯವಾಗುವುದು. ಇಂದು ಎದುರಾಗುವ ಸವಾಲುಗಳು ನಿಮಗೆ  ಉದ್ಯೋಗದಲ್ಲಿ ಸ್ಥಿರತೆಯನ್ನು ತೋರಿಸುತ್ತದೆ. ನಿಮ್ಮ ಪಾಲುದಾರಿಕೆಯ ವ್ಯವಹಾರದಲ್ಲಿ ಯಾರಾದರೂ ಅನಗತ್ಯ ಗೊಂದಲವನ್ನು ಸೃಷ್ಟಿಸಬಹುದು. ಪ್ರೋತ್ಸಾಹದಿಂದ ನೀವು ನಿಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಿರಿ. ಭೂಮಿಯ ವ್ಯವಹಾರವು ನಿಮಗೆ ಶಕ್ತಿಯನ್ನು ತಂದೀತು. ಬೇಕಾದಷ್ಟು ಇದ್ದರೂ ಅದನ್ನು ಉಳಿಸಿಕೊಳ್ಳಲಾಗದು. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು.

ಧನು ರಾಶಿ :ಇಂದು ನಿಮಗೆ ವೃತ್ತಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ಒತ್ತಡ ಹೆಚ್ಚಾಗಲಿದೆ. ಇಂದು, ನಿಮ್ಮ ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಹೆಚ್ಚಾಗಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರಬಹುದು. ಇಂದು ನಿಮಗೆ ಅತಿಯಾದ ಕಾರ್ಯದ ಒತ್ತಡವು ದೇಹ ಮತ್ತು ಮನಸ್ಸುಗಳು ದುರ್ಬಲವಾದಂತೆ ಅನ್ನಿಸುವುದು. ಅಮೂಲ್ಯ ವಸ್ತುಗಳನ್ನು ಜೋಪಾನ ಮಾಡಿ. ಸಂಗಾತಿಯ ಜೊತೆ ಗುಟ್ಟನ್ನು ಮುಚ್ಚಿಡಲು ನಿಮಗೆ ಸಾಧ್ಯವಾಗದು. ವಾಹನ ಚಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುವುದು. ಉದ್ವೇಗದಿಂದ ಏನನ್ನಾದರೂ ಮಾಡಲು ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.

ಮಕರ ರಾಶಿ :ನಿಮಗೆ ಇಂದು ಹಣದ ಒಳಹರಿವು ಚೆನ್ನಾಗಿದ್ದು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರುವಿರಿ. ಕೆಲಸ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ವ್ಯಾಪಾರದ ಆದ ಸ್ವಲ್ಪ ಅಜಾಗರೂಕತೆಯೂ ಭಾರೀ ನಷ್ಟವನ್ನು ಉಂಟುಮಾಡಬಹುದು. ಇಂದು ನಿಮ್ಮ ಹೂಡಿಕೆಯ ಬಗ್ಗೆ ಹೆಚ್ಚು ಆಲೋಚನೆಗಳು ಇರುವುದು. ಬಹಳ ದಿನಗಳ ಅನಂತರ ಅತಿಥಿಗಳ ಆಗಮನವಾಗಲಿದ್ದು, ಖುಷಿಯಾಗಲಿದೆ. ವಿವಾಹಕ್ಕೆ ಪೂರಕವಾದ ವಾರ್ತೆಗಳು ಇರಲಿದೆ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ.

ಕುಂಭ ರಾಶಿ :ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ನಿಮ್ಮ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಬಹುದು. ಗುಣಮಟ್ಟದ ಹೂಡಿಕೆಯು ನಿಮಗೆ ಲಾಭವನ್ನು ತರಲಿದೆ. ನಿಮ್ಮ ಅನಾರೋಗ್ಯವು ಕಡಿಮೆ ಆಗುವುದು, ನಿಮ್ಮ ಮನಸ್ಸು ಹಗುರಾಗುವುದು. ಆರ್ಥಿಕವಾಗಿ ಸುಧಾರಣೆಯಿಂದ ಧೈರ್ಯವು ಬರಲಿದೆ. ವೃತ್ತಿಯ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಪ್ರತಿಫಲವು ಪ್ರಾಪ್ತವಾಗುವುದು. ಇಂದು ಅಪಾಯದ ಸೂಚನೆಯು ನಿಮಗಾಗಬಹುದು. ಪ್ರಯಾಣದಿಂದ ಆಯಾಸಗೊಂಡು ವಿಶ್ರಾಂತಿ ಪಡೆಯುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು.

ಮೀನ ರಾಶಿ :ಇಂದು ನಿಮ್ಮ ಬಹಳ ದಿನಗಳ ಚಿಂತೆಯಿಂದ ಮುಕ್ತಿ ಸಿಗುವುದು. ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೂ, ಇಂದು ಅತಿಯಾಗಿ ಖರ್ಚು ಮಾಡದಿರುವುದು ಒಳ್ಳೆಯದು. ನಿಮ್ಮ ಸಂಗಾತಿಯ ವಿಷಯದಲ್ಲಿ ಅತಿಯಾಗಿ ವರ್ತಿಸದಿರುವುದು ಉತ್ತಮ. ಇಂದು ನಿಮ್ಮ ನಿರಂತರ ಪ್ರಯತ್ನದಿಂದ ಕುಟುಂಬದ ಸದಸ್ಯರ ಬೆಂಬಲವು ನಿಮಗೆ ದೊರೆಯುವುದು. ಇಷ್ಟಫಲವು ಇರಲಿದೆ. ಆರೋಗ್ಯವನ್ನು ಹಾಳು‌ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಿರುವುದು. ಸಾಹಿತಿಗಳಿಗೆ ಅವಕಾಶಗಳು ಸಿಕ್ಕಿದ್ದು ಅದನ್ನು ಉಪಯೋಗಿಸಿಕೊಳ್ಳುವಿರಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು.

-ಲೋಹಿತ ಹೆಬ್ಬಾರ್ – 8762924271 (what’s app only)