ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಧೃತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:21 ರಿಂದ 09:49ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:17 ರಿಂದ 12:46ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ.
ಸಿಂಹ ರಾಶಿ : ಇಂದಿನ ನಿಮ್ಮ ಘಟನೆಗಳು ನಿಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬಹುದು. ಯಾರದೋ ಬಳಿ ಕೈ ಚಾಚುತ್ತಾ ಇರುವುದು ನಿಮಗೇ ಸರಿ ಕಾಣಿಸದು. ನಿಮ್ಮವರ ಜೊತೆ ಅಂತರವನ್ನು ಕಾಯ್ದುಕೊಳ್ಳಿ. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ನೀರಿನಿಂದ ಭಯವು ಉಂಟಾಗುವುದು. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಕೆಲವು ವಿಚಾರಗಳಿಗೆ ಮತ್ತೆ ಮತ್ತೆ ಹೇಳಿಕೊಳ್ಳಬೇಕಾದೀತು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ. ನಿಮಗಾಗದವರ ಮಾತು ನಿಮ್ಮ ಮೇಲೆ ಬೇರೆ ರೀತಿಯ ಪರಿಣಾಮವನ್ನು ಉಂಟುಮಾಡುವುದು.
ಕನ್ಯಾ ರಾಶಿ : ನಿಮಗೆ ಇಂದು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಚಾತುರ್ಯವನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ನಿಮ್ಮಿಂದ ಆಗುವಷ್ಟನ್ನು ಮಾತ್ರ ಮಾಡಿ. ಒತ್ತಡದ ನಡುವೆಯೂ ತಾಳ್ಮೆಯನ್ನು ನೀವು ಕಂಡುಕೊಳ್ಳುವಿರಿ. ಕಾಣಾಂತರಗಳಿಂದ ನಿಲ್ಲಿಸಿದ್ದ ಕಾರ್ಯವನ್ನು ಪುನಃ ಪ್ರಾರಂಭಿಸುವಿರಿ. ಹಳೆಯ ವಾಹನವನ್ನು ಪಡೆದುಕೊಳ್ಳುವಿರಿ. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳಬೇಕಾಗುವುದು. ಯಾರನ್ನಾದರೂ ದೂಷಿಸಿ ಅವರ ವಿರೋಧವನ್ನು ಕಟ್ಟಿಕೊಳ್ಳುವಿರಿ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಮಾನಸಿಕ ತೊಳಲಾಟವನ್ನು ಪ್ರಯತ್ನಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಿ.
ತುಲಾ ರಾಶಿ : ನಿಮ್ಮ ಯೋಗ್ಯವಾದ ಕಾರ್ಯಗಳು ನಿಮಗೆ ಉಪಕಾರಕ್ಕೆ ಬರಲಿವೆ. ಕೆಲವನ್ನು ನೀವು ಅನಗತ್ಯವಾಗಿ ಪಡೆದುಕೊಂಡು ಸಂಕಟಪಡುವಿರಿ. ನಿಮ್ಮವರ ಪ್ರೀತಿಯನ್ನು ನೀವು ಗಳಿಸುವಿರಿ. ನಿಮ್ಮ ಇಂದಿನ ನಡೆ ಸಂಗಾತಿಗೆ ಅರ್ಥವಾಗದೇ ಇದ್ದೀತು. ಉನ್ನತ ಅಧಿಕಾರಿಗಳ ಜೊತೆ ಹೆಚ್ಚು ವ್ಯವಹಾರವನ್ನು ಮಾಡಬೇಕಾಗಿರುವ ಕಾರಣ ಅವರ ಜೊತೆ ಓಡಾಡುವಿರಿ. ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು. ಸ್ನೇಹತರ ಜೊತೆ ಮೋಜಿನಲ್ಲಿ ದಿನವನ್ನು ಮುಗಿಸುವಿರಿ. ಎಲ್ಲವನ್ನೂ ಒಮ್ಮೆಲೇ ಪಡೆಯಬೇಕು ಎಂಬ ಮನೋಭಾವವು ಸದ್ಯಕ್ಕೆ ಬೇಡ. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ.
ವೃಶ್ಚಿಕ ರಾಶಿ : ನೀವು ಪ್ರವಾಸದಿಂದಾಗಿ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಸೌಂದರ್ಯದ ಬಗ್ಗೆ ನಿಮಗೆ ಅತಿಯಾದ ಮೋಹವು ಬರಬಹುದು. ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿರೀಕ್ಷಿತ ಫಲವು ಲಭಿಸದು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ ಉಂಟಾಗಬಹುದು. ತಂದೆ – ತಾಯಿಯರ ವಿಚಾರದಲ್ಲಿ ನಿಮಗೆ ಅತೀವ ಅಕ್ಕರೆ ಇರುವುದು.