ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 22 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:06 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:20 ರಿಂದ 10:57ರ ವರೆಗೆ.
ಸಿಂಹ: ಹೊಸ ಆಲೋಚನೆಯನ್ನು ಮಾಡುವ ಮಾನಸಿಕತೆ ಇದ್ದರೆ ಇಂದು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಒಮ್ಮೆಲೇ ದೊಡ್ಡ ಯೋಚನೆಯನ್ನು ಕಾರ್ಯಗತಗೊಳಿಸುವುದು ಬೇಡ. ನೀವು ಮೊದಲು ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಲು ನೀವು ಹಿಂದೇಟು ಹಾಕುವುದು ಒಳ್ಳೆಯದು. ಪೂರ್ಣವಾಗಿ ಅರ್ಥವಾದಮೇಲೆ ಮುಂದುವರಿಯಿರಿ. ದಾಖಲೆಗಳನ್ನು ಇಟ್ಟುಕೊಂಡೇ ಕಾನೂನಿಗೆ ಸಂಬಂಧಿಸಿದ ಹೋರಾಟದಲ್ಲಿ ತೊಡಗಿ. ಅನಧಿಕೃತ ಪತ್ರಗಳಿಗೆ ನೀವು ಉತ್ತರಿಸುವ ಅವಶ್ಯಕತೆ ಇರುವುದಿಲ್ಲ.
ಕನ್ಯಾ: ಬಾಡಿಗೆ ಮನೆಯಲ್ಲಿ ಇದ್ದರೆ ಮನೆಯ ಯಜಮಾನನ ಕಿರಿಕಿರಿಯಿಂದ ಮನೆಯನ್ನು ಬದಲಿಸಬೇಕಾದೀತು. ಆಕಸ್ಮಿಕವಾಗಿ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಉಂಟಾಗಬಹುದು. ಹಣದ ಮೂಲವನ್ನು ಬದಲಿಸುವ ಸಾಧ್ಯತೆ ಇದೆ. ಹೆಚ್ಚಿನ ಆದಾಯದತ್ತ ನೀವು ಮುಖ ಮಾಡುವಿರಿ. ಸಂಗಾತಿಯು ನಿಮ್ಮಿಂದ ದೂರವಿದ್ದು ದೂರವಾಣಿಯ ಮೂಲಕ ಮಾತನಾಡಿ ಸಂತೋಷ ಪಡುವಿರಿ. ಕಛೇರಿಯ ಒತ್ತಡವನ್ನು ನೀವು ಕಳೆದುಕೊಳ್ಳಲು ಇಚ್ಛಿಸುವಿರಿ. ನಿಮ್ಮ ದಕ್ಷತೆಯು ಸ್ವಲ್ಪ ಮಟ್ಟಿಗೆ ಕ್ಷೀಣಿಸಬಹುದು. ಮಾತಿಗೆ ಅನಾದರವೂ ಉಂಟಾಗಬಹುದು. ನಿಮ್ಮನ್ನು ನೀವೇ ಬೈದುಕೊಳ್ಳುವಿರಿ.
ತುಲಾ: ನಿಮಗೆ ಪರಿಹರಿಸಿಕೊಳ್ಳಲು ಕಷ್ಟವಾದ ಸಮಸ್ಯೆಯನ್ನು ನೀವು ಅನುಭವಿಗಳ ಅಥವಾ ಆಪ್ತರ ಜೊತೆ ಹಂಚಿಕೊಳ್ಳಿ. ಸಜ್ಜನಿಕೆಯನ್ನು ತೋರಿಸಲು ಹೋಗಿ ಕಷ್ಟಕ್ಕೆ ಸಿಕ್ಕಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ನಿಮಗೆ ಬೇಸರವಾಗಬಹುದು. ನೀವು ಆರಂಭಿಸಿದ ಹೊಸ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಮಿತಿಯಲ್ಲಿ ಅವುಗಳನ್ನು ಸರಿಮಾಡಿಕೊಳ್ಳಿ. ಆಧಾರವಿಲ್ಲದೇ ಬಂದ ಸುದ್ದಿಗೆ ನೀವು ಭಯಪಡುವ ಅವಶ್ಯಕತೆ ಇಲ್ಲ. ಸಮಯಕ್ಕೆ ಬಂದುದನ್ನು ನೀವು ಸ್ವೀಕರಿಸಬೇಕಾದೀತು.
ವೃಶ್ಚಿಕ: ಆಹಾರವನ್ನು ಇಂದು ವ್ಯರ್ಥಮಾಡುವಿರಿ. ಯಾರಿಗಾದರೂ ಯೋಗ್ಯರಿಗೆ ದಾನವನ್ನು ಮಾಡಿ. ನಿಮ್ಮವರಿಗೆ ನೀಡಿದ ಹಣವನ್ನು ಪಡೆಯಲು ಬಹಳ ಸಾಹಸ ಪಡುವಿರಿ. ಸಂಗಾತಿಯನ್ನು ನೀವು ಅಲಕ್ಷಿಸುವ ಸಾಧ್ಯತೆ ಇದೆ. ಮಂದಗತಿಯಲ್ಲಿ ಸಾಗುವ ಕೆಲಸಕ್ಕೆ ವೇಗವನ್ನು ಕೊಡಬೇಕಾದೀತು. ನಿಮ್ಮಿಂದಾಗದ ಕೆಲಸಕ್ಕೆ ನೀವು ಹೋಗುವಿರಿ. ಕಾಳಜಿ ವಿಚಾರದಲ್ಲಿ ನೀವು ಬಹಳ ಹಿಂದುಳಿದವರಾಗಿದ್ದೀರಿ. ಶ್ರೀಮಂತಿಕೆಯ ಅಮಲು ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಸಂಗಾತಿಯ ನಡುವೆ ಹಳೆಯ ವಿಚಾರಕ್ಕೆ ಹೆಚ್ಚು ಮತ್ತೆ ಜಗಳವಾಗಬಹುದು. ಮೌನದಿಂದ ಇರುವುದು ಒಳ್ಳೆಯದು.