ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 24 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.
ಸಿಂಹ: ಸ್ನೇಹಿತರಿಂದ ಸಾಲವನ್ನು ಕೇಳುವ ಮನಸ್ಸಿದ್ದರೂ ಹೆದರಿಕೆ ಅಂಜಬಹುದು. ನಿಮ್ಮ ಕೆಲಸವೇ ನಿಮಗೆ ತಪ್ಪಿನಂತೆ ಕಾಣಬಹುದು. ದೂರದರ್ಶಿತ್ವವು ನಿಮ್ಮ ಸಹಾಯಕ್ಕೆ ಬಾರದು. ಭವಿಷ್ಯದ ಚಿತ್ರಣವೂ ನಿಮಗೆ ಅಸ್ಪಷ್ಟವಾಗಿಯೇ ಇರುವುದು. ಒತ್ತಡದಿಂದ ನಿಮ್ಮ ಕೆಲಸವು ನಿಧಾನವಾದೀತು. ಏನು ಮಾಡಬೇಕೆಂದು ತೋಚದೇ ಇರುವುದು. ಸಂಗಾತಿಯ ಮಾತನ್ನು ಧಿಕ್ಕರಿಸಿದ್ದಕ್ಕೆ ಕೋಪಗೊಳ್ಳುವ ಸಾಧ್ಯತೆ ಇದೆ. ಸಂಕಷ್ಟವನ್ನು ಯಾರ ಬಳಿಯೂ ಹೇಳದೇ ನೀವೇ ನುಂಗಿಕೊಳ್ಳುವಿರಿ. ದೇವರ ವಿಚಾರದಲ್ಲಿ ಆಸಕ್ತಿಯು ಹೆಚ್ಚುವುದು. ಆದಿತ್ಯಹೃದಯವನ್ನು ಪಠಿಸಿ.
ಕನ್ಯಾ: ನಿಮ್ಮ ಭೂಮಿಯನ್ನು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುವಿರಿ. ನಂಬಿಕೆ ದ್ರೋಹಕ್ಕೆ ನೀವು ಬಹಳ ದುಃಖಪಡುವಿರಿ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟು ಸಣ್ಣವರಾಗುವಿರಿ. ಮಿತ್ರರು ನಿಮ್ಮನ್ನು ದೂರವಿರಿಸಿಲು ಪ್ರಯತ್ನಿಸುವರು. ಸಣ್ಣ ಸಾಲದ ಹೊರೆಯನ್ನು ಇಳಿಸಿಕೊಂಡು ಹಗುರಾಗುವಿರಿ. ನಿಮ್ಮ ಹೆಸರಿಗೆ ಕಳಂಕ ಬಳಿಯುವ ಕೆಲಸವಾಗಬಹುದು. ಎಲ್ಲ ಕಡೆಗೂ ಕಿಯಿಡುವುದು ಅವಶ್ಯ ಇದೆ. ತಪ್ಪಿಗೆ ಕಾರಣಗಳನ್ನು ಹುಡುಕುತ್ತ ಇರುವುದರಿಂದ ಪ್ರಯೋಜನವಾಗದು. ಮುಂದೆ ನಡೆಯುವುದು ಉತ್ತಮ. ವಿಷ್ಣುಸಹಸ್ರನಾಮವನ್ನು ಪ್ರಾತಃಕಾಲದಲ್ಲಿ ಶ್ರವಣ ಮಾಡಿ.
ತುಲಾ: ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ನಿಮ್ಮ ಚಿಂತನೆಗಳು ಬರಬಹುದು. ಕುಟುಂಬದಲ್ಲಿ ಆಗುವ ಕಲಹವನ್ನು ನೀವು ನಿಭಾಯಿಸಬೇಕಾದೀತು. ಆಪ್ತರನ್ನು ಕಳೆದುಕೊಳ್ಳುವ ಭೀತಿಯೂ ಬರಬಹುದು. ಸನ್ಮಾನ, ಗೌರವಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ದೃಶ್ಯಮಾಧ್ಯಮದವರು ಹೆಚ್ಚಿನ ಆದಾಯ ಬರುವಲ್ಲಿಗೆ ಹೋಗುವ ಯೋಚನೆ ಮಾಡುವರು. ಮಕ್ಕಳು ನಿಮ್ಮ ಮಾತಿಗೆ ಅನಾದರ ತೋರಿಸಬಹುದು. ಬಹಳ ಕೋಪ ಬರುವುದು. ಅದನ್ನು ನಿಮ್ಮೊಳಗೆ ಇಟ್ಟುಕೊಳ್ಳುವಿರಿ. ಲಲಿತಾಸಹಸ್ರನಾಮವನ್ನು ಜಪಿಸಿ, ಇಲ್ಲವೇ ಶ್ರದ್ಧೆಯಿಂದ ಶ್ರವಣ ಮಾಡಿ.
ವೃಶ್ಚಿಕ: ಉದ್ಯೋಗದ ಸ್ಥಳದಲ್ಲಿ ನಿಮ್ಮ ಮಾತಿಗೆ ಎದುರು ಮಾತು ಬರಬಹುದು. ಇದು ಕಲಹವಾಗಿಯೂ ಪರಿವರ್ತಿತವಾದದೀತು. ಹುಡುಗಾಟದ ಮನೋಭಾವವು ಗಂಭೀರಸ್ವರೂಪವನ್ನು ಪಡೆದುಕೊಳ್ಳುವುದು. ಕಲೆಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆ ಇರುವುದು. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಕಾಣುವಿರಿ. ವಿದ್ಯಾರ್ಥಿಗಳು ಮನಸ್ಸಿಟ್ಟು ಓದಬೇಕು. ಇಲ್ಲಿಯವರೆಗಿನ ಓದು ಕೇವಲ ಕಾಟಾಚೆರದ ಓದೇ ಆಗಿತ್ತು. ತೇರ್ಗಡೆಯಾಗುವ ಮನಸ್ಸಿನಿಂದ ಅಭ್ಯಾಸ ಮಾಡಿ. ಅನಾರೋಗ್ಯದಿಂದ ನಿಮ್ಮ ಪ್ರಯಾಣವನ್ನು ಮುಂದೂಡುವಿರಿ. ಸುಬ್ರಹ್ಮಣ್ಯನ ಸ್ತೋತ್ರವನ್ನು ಪಠಿಸಿ.
-ಲೋಹಿತಶರ್ಮಾ ಇಡುವಾಣಿ