Rashi Bhavishya: ನೀವು ಇಷ್ಟು ದಿನ ನಂಬಿಕೆ ಇಟ್ಟವರೇ ನಿಮ್ಮನ್ನು ವಂಚಿಸಬಹುದು

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ನೀವು ಇಷ್ಟು ದಿನ ನಂಬಿಕೆ ಇಟ್ಟವರೇ ನಿಮ್ಮನ್ನು ವಂಚಿಸಬಹುದು
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 24, 2023 | 5:30 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಗುಳಿಕ ಕಾಲ 10:53 ರಿಂದ 12:29ರ ವರೆಗೆ.

ಮೇಷ: ನೀವು ಇಷ್ಟು ದಿನ ನಂಬಿಕೆ ಇಟ್ಟವರು ನಿಮ್ಮನ್ನು ವಂಚಿಸಬಹುದು. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು. ತಲೆಯಲ್ಲಿ ಕೊರೆಯುವ ವಿಚಾರವನ್ನು ಆಪ್ತರಲ್ಲಿ ಹೇಳಿಕೊಂಡು ಹಗುರಾಗಿ. ಮಕ್ಕಳ‌ ಮೇಲೆ‌ ಸಿಟ್ಟಿಗೊಳ್ಳಬೇಕಾದ ಸ್ಥಿತಿಯೂ ಬರಬಹುದು. ನಿಮ್ಮ ಬಗ್ಗೆ ಆಪ್ತವಲಯದಲ್ಲಿ ಒಳ್ಳೆಯ ಅಭಿಪ್ರಾಯ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಶ್ರಮವಹಿಸಬೇಕಾಗಬಹುದು. ಹಣದ ವಿಚಾರದಲ್ಲಿ ನಿಮ್ಮ ಸಂಕಷ್ಟಕ್ಕೆ ಅಧಿಕಾರಿಗಳು ಸಹಾಯ ಮಾಡಬಹುದು. ನಾಗದೇವರ ಆರಾಧನೆಯನ್ನು ಮಾಡಿ.

ವೃಷಭ: ನೂತನ ವಾಹನದಲ್ಲಿ ದೂರ ಪ್ರಯಾಣ ಮಾಡುವಿರಿ. ಭೋಗ ವಸ್ತುಗಳ ಬಗ್ಗೆ ಹೆಚ್ಚು ಪ್ರೀತಿ ಇರುವುದು. ಸಂಗಾತಿಯು ನಿಮ್ಮನ್ನು ಅತಿಯಾಗಿ ಹಚ್ಚಿಕೊಳ್ಳಬಹುದು. ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿ. ಅದನ್ನು ಯಾರ ಮೇಲೂ ಹೇರುವುದು ಬೇಡ. ನಂಬಿಕೆ ಉಳಿಸಿಕೊಳ್ಳಲು ಸುಳ್ಳು ಹೇಳುವ ಅವಶ್ಯಕತೆ ಬರಬಹುದು. ಪ್ರಸಿದ್ದ ವ್ಯಕ್ತಿಗಳ ಜೊತೆ ಹತ್ತಿರದಿಂದ ಮಾತನಾಡುವಿರಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಮನಸ್ತಾಪಗಳು ಬರಬಹುದು. ತ್ರಿಪುರಸುಂದರಿಯನ್ನು ಸ್ತುತಿಸಿ.

ಮಿಥುನ: ದಾಂಪತ್ಯದಲ್ಲಿ ಸುಖವಿರಬಹುದು. ಎಷ್ಟೋ ದಿನಗಳ ಅನಂತರ ಪರಸ್ಪರ ಮಾತುಗಳು ಖುಷಿ ಕೊಡುವುದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವು ಆಗಬಹುದು. ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ನೋಡಬಹುದು. ಇಷ್ಟವಾಗದ ಸ್ಥಳದಿಂದ ನೀವು ದೂರ ಸರಿಯಬಹುದು. ಮಕ್ಕಳನ್ನು ಪಡೆಯ ಅಸೆ ಅತಿಯಾಗುವುದು. ಕುಟುಂಬದ ವಿಚಾರದಲ್ಲಿ ಖುಷಿಯಿದ್ದರೂ ಸಮಾಧಾನದ ಕೊರತೆ ಹೆಚ್ಚು ಕಾಣುವುದು. ಸುತ್ತಾಟದಿಂದ ಉಂಟಾದ ಕಾಲು ನೋವನ್ನು ಔಷಧೋಪಚಾರದಿಂದ ಬಗೆಹರಿಸಿಕೊಳ್ಳಿ. ಗಣಪತಿಯನ್ನು ಪೂಜಿಸಿ.

ಕಟಕ: ಇಂದು‌ ನೀವು ನಿಮಗೆ ಆಗುವಷ್ಟು ಕೆಲಸವನ್ನು ಮಾತ್ರ ಮಾಡಿ.‌ ಅತಿಯಾದ ಆಯಾಸವನ್ನೂ ಒತ್ತಡವನ್ನೂ ಮಾಡಿಕೊಳ್ಳುವುದು ಬೇಡ. ಹದಗೆಟ್ಟ ಆರೋಗ್ಯವು ಮತ್ತಷ್ಟು ಹದಗೆಡಬಹುದು. ಹಿರಿಯರ ಮನಸ್ಸನ್ನು ನೋಯಿಸುವಿರಿ. ತಾಯಿಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ವಾಹನದಲ್ಲಿ ಹೋಗಿವಾಗ ಎಚ್ಚರಿಕೆ ಇರಲಿ. ಮಾನಸಿಕ ಕಿರಿಕಿರಿಯು ಕಡಿಮೆ ಆದರೂ ನೆಮ್ಮದಿ ಬರಲು ಸ್ವಲ್ಪ ಸಮಯವು ಬೇಕಾದೀತು. ಆಗಾಗ ಬರುವ ತಲೆಯ ನೋವನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಪಿತ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಕುಲದೇವರಿಗೆ ಅನ್ನನೈವೇದ್ಯವನ್ನು ಮಾಡಿ.

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ