ಜ್ಯೋತಿಷ್ಯದ ಪ್ರಭಾವ: ಈ ಎರಡು ರಾಶಿಯ ಜನರಿಗೆ ಸೆಪ್ಟೆಂಬರ್​ ಸಂಕಷ್ಟದ ತಿಂಗಳು ಯಾಕೆ? ತಿಳಿದುಕೊಳ್ಳಿ

| Updated By: ಆಯೇಷಾ ಬಾನು

Updated on: Aug 26, 2021 | 7:29 AM

ಆಗಸ್ಟ್​ ಮಾಸ ಮುಕ್ತಾಯವಾಗಲು ಇನ್ನೇನು ಒಂದೇ ವಾರವಿದೆ. ಅದಾದ ಬಳಿಕ ಸೆಪ್ಟೆಂಬರ್​ ತಿಂಗಳು ಕಾಲಿಡುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರು ಸಂಕಷ್ಟಗಳಿಗೆ ತುತ್ತಾಗುತ್ತಾರೆ. ನಿರ್ದಿಷ್ಟವಾಗಿ ಎರಡು ರಾಶಿಯ ಜನರ ಮೇಲೆ ಅದಾಗಲೇ ಶನಿ ಪ್ರಭಾವವಿದ್ದು, ಸಾಡೇ ಸಾತಿ ಎದುರಿಸುತ್ತಿದ್ದರೆ ಈ ತಿಂಗಳು ಇನ್ನೂ ಕಷ್ಟ ಕಷ್ಟವಾಗಲಿದೆ.

ಜ್ಯೋತಿಷ್ಯದ ಪ್ರಭಾವ: ಈ ಎರಡು ರಾಶಿಯ ಜನರಿಗೆ ಸೆಪ್ಟೆಂಬರ್​ ಸಂಕಷ್ಟದ ತಿಂಗಳು ಯಾಕೆ? ತಿಳಿದುಕೊಳ್ಳಿ
ಜ್ಯೋತಿಷ್ಯದ ಪ್ರಭಾವ: ಈ ಎರಡು ರಾಶಿಯ ಜನರಿಗೆ ಸೆಪ್ಟೆಂಬರ್​ ಸಂಕಷ್ಟದ ತಿಂಗಳು ಯಾಕೆ? ತಿಳಿದುಕೊಳ್ಳಿ
Follow us on

ಜ್ಯೋತಿಷ್ಯದ ಪ್ರಭಾವದಿಂದಾಗಿ ಈ ಎರಡು ರಾಶಿಯ ಜನರಿಗೆ ಸೆಪ್ಟೆಂಬರ್​ ಸಂಕಷ್ಟದ ತಿಂಗಳು ಆಗಿರುತ್ತದೆ. ಯಾಕೆ? ತಿಳಿದುಕೊಳ್ಳಿ. ಸೆಪ್ಟೆಂಬರ್​ ಮಾಸವು ನಿರ್ದಿಷ್ಟವಾಗಿ ಎರಡು ರಾಶಿಯ ಜನ ಜಾಗ್ರತೆಯಿಂದ ಇರಬೇಕು. ಶನಿ (Shani) ಮತ್ತು ಸಾಡೇ ಸಾತಿ (Sade Sati) ಪ್ರಕೋಪ ಯಾರ ಮೇಲೆ ಇರುತ್ತದೋ ಅವರು ಎಚ್ಚರಿಕೆಯಿಂದ ಇರಬೇಕು. ಹಾಗಾದರೆ ಯಾವ ರಾಶಿಗಳ ಜನರ ಮೇಲೆ ಶನಿದೇವರ ಸಾಡೇ ಸಾತಿ ಪ್ರಕೋಪ ಇರುತ್ತದೋ ತಿಳಿಯೋಣ ಬನ್ನೀ.

ಆಗಸ್ಟ್​ ಮಾಸ ಮುಕ್ತಾಯವಾಗಲು ಇನ್ನೇನು ಒಂದೇ ವಾರವಿದೆ. ಅದಾದ ಬಳಿಕ ಸೆಪ್ಟೆಂಬರ್​ ತಿಂಗಳು ಕಾಲಿಡುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರು ಸಂಕಷ್ಟಗಳಿಗೆ ತುತ್ತಾಗುತ್ತಾರೆ. ನಿರ್ದಿಷ್ಟವಾಗಿ ಎರಡು ರಾಶಿಯ ಜನರ ಮೇಲೆ ಅದಾಗಲೇ ಶನಿ ಪ್ರಭಾವವಿದ್ದು, ಸಾಡೇ ಸಾತಿ ಎದುರಿಸುತ್ತಿದ್ದರೆ ಈ ತಿಂಗಳು ಇನ್ನೂ ಕಷ್ಟ ಕಷ್ಟವಾಗಲಿದೆ.

ಪ್ರಸ್ತುತ ಮಕರ ರಾಶಿಯ (Capricorn) ವ್ಯಕ್ತಿಗಳ ಮೇಲೆ ಶನಿ ಮಹಾತ್ಮನ ಸಾಡೇ ಸಾತಿ ಎರಡನೆಯ ಪಾದ ನಡೆಯುತ್ತಿದೆ. ಮತ್ತು ಈ ಸಾಡೇ ಸಾತಿ 2028 ಸಾಲಿನ ಮಾರ್ಚ್​​ 29 ರವರೆಗೂ ಇರುತ್ತದೆ. ಇನ್ನು, ಕುಂಭ (Aquarius) ರಾಶಿಯವರಿಗೆ ಶನಿ ಮಹಾತ್ಮನ ಸಾಡೇ ಸಾತಿ ಇನ್ನೂ ಈಗ ಕಾಲಿಡುತ್ತಿದೆ. ಇದು 2028 ಸಾಲಿನ ಜನವರಿ 23 ರವರೆಗೂ ಇರುತ್ತದೆ. ಆದರೆ ಇದೇ ಸೆಪ್ಟೆಂಬರ್​ ತಿಂಗಳಿನಲ್ಲಿ ಈ ಎರಡೂ ರಾಶಿಯ ಜನರ ಮೇಲೆ ಸಾಡೇ ಸಾತಿ ಪ್ರಭಾವ ಅಧಿಕವಾಗಿರುತ್ತದೆ. ಹಾಗಾಗಿಯೇ ಈ ಎರಡೂ ರಾಶಿಯ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು.

1. ಮಕರ ರಾಶಿಯ (Capricorn):
ಮಕರ ರಾಶಿ ವ್ಯಕ್ತಿಗಳು ಮುಂದಿನ ಸೆಪ್ಟೆಂಬರ್​ ತಿಂಗಳಿನಲ್ಲಿ ಹಣಕಾಸು ವಿಚಾರದಲ್ಲಿ (Finance) ಹೆಚ್ಚು ಲೆಕ್ಕಾಚಾರದಿಂದ ಇರಬೇಕಾಗುತ್ತದೆ. ಸೆಪ್ಟೆಂಬರ್​ ತಿಂಗಳಿನಲ್ಲಿ ಹಣ ಹೂಡಿಕೆ ಮಾಡುವುದು ಬೇಡ. ಉಳಿತಾಯ ಮಂತ್ರ ಜಪಿಸುವುದು ಕ್ಷೇಮಕರ. ಒಂದು ವೇಳೆ ಹಣ ಖರ್ಚು ಮಾಡಲೇಬೇಕು ಅಂದರೆ ಬಹಳಷ್ಟು ಯೋಚಿಸಿ, ಅಳೆದುತೂಗಿ ಖರ್ಚು ಮಾಡಬೇಕು. ಏಕೆಂದರೆ ನಿಮ್ಮ ಹಣ ಯಾವುದೋ ಒಂದು ಮೂಲದಲ್ಲಿ ಸಿಕ್ಕಿ ಹಾಕಿಕೊಳ್ಳಿಬಿಡುವ ಅಪಾಯವಿರುತ್ತದೆ.

ಇನ್ನು ಕೇವಲ ಆರ್ಥಿಕ ಆರೋಗ್ಯವಷ್ಟೇ ಅಲ್ಲ; ದೈಹಿಕ ಆರೋಗ್ಯದ ಮೇಲೂ ಸೆಪ್ಟೆಂಬರ್​ ತಿಂಗಳಿನಲ್ಲಿ ಶನಿ ಮಹಾತ್ಮನ ಸಾಡೇ ಸಾತಿ ಪ್ರಭಾವ ಹೆಚ್ಚಾಗುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ಕಡೆ ಗಮನವಿರಲಿ. ಗಾಯಗಳಾಗುವ ಅಪಾಯವಿರುತ್ತದೆ. ಜೊತೆಗೆ ಇತರೆ ದುರ್ಘಟನೆಗಳ ಆತಂಕವೂ ಮನೆ ಮಾಡುತ್ತದೆ. ಇದರಿಂದ ಹಾಗಾಗಿ ಆದ್ಯ ಗಮನವಿಟ್ಟು ವಾಹನಗಳನ್ನು ಚಲಾಯಿಸಿ. ಏನಾದರೂ ಅಚಾತುರ್ಯಗಳಾದರೆ ಅದರಿಂದ ಖರ್ಚುವೆಚ್ಚ ಅಧಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತೀರಿ. ಆದರೆ ಮುಂಚಿತವಾಗಿಯೇ ಸಾವಧಾನದಿಂದ ಎಚ್ಚರ ವಹಿಸಿ ನಡೆದುಕೊಂಡರೆ ಹೆಚ್ಚು ಭಾದೆಗೆ ತುತ್ತಾಗುವುದನ್ನು ತಪ್ಪಿಸಬಹುದು.

2. ಕುಂಭ ರಾಶಿ (Aquarius):
ಕುಂಭ ರಾಶಿಯ ವ್ಯಕ್ತಿಗಳು ಯಾವುದೇ ವಿವಾದಕ್ಕೆ ತುತ್ತಾಗಬಾರದು. ಇಲ್ಲಾಂದರೆ ಅಪಾಯಕ್ಕೆ ಸಿಲುಕುವುದು ಖಚಿತ. ಆದಾಗ್ಯೂ ಸೆಪ್ಟೆಂಬರ್​ ತಿಂಗಳಿನಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈಹಾಕಬೇಡಿ. ಇಲ್ಲಾಂದ್ರೆ ಕೋರ್ಟ್​ ಕಚೇರಿ ಅಂತಾ ಅಲೆದಾಡುವ ಸಂದರ್ಭ ಎದುರಾಗುತ್ತದೆ. ಹಣ ಕೊಟ್ಟು-ಪಡೆಯುವ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲಾಂದ್ರೆ ಜಗಳ, ವ್ಯಾಜ್ಯಗಳು ಎದುರಾಗುವ ಸಾಧ್ಯತೆಯಿರುತ್ತದೆ. ಯಾರಿಂದಲಾದರೂ ಸಾಲಸೋಲ ಪಡೆದರೆ ಅದು ಅನಿಷ್ಟವೇ ಆಗಬಿಡುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ.

ಇದರಿಂದ ಹೊರಬರುವ ಅಥವಾ ಸಂಕಷ್ಟಗಳನ್ನು ಕಡಿಮೆ ಮಾಡಿಕೊಳ್ಳುವ ಉಪಾಯಗಳು ಏನು?

ಇನ್ನು ಮಕರ ರಾಶಿಯವರು ಮತ್ತು ಕುಂಭ ರಾಶಿಯ ಜನ ಸೆಪ್ಟೆಂಬರ್​ ತಿಂಗಳಿನಲ್ಲಿ ಅಪಾಯಕ್ಕೆ ಸಿಲುಕದಂತೆ, ಸಂಕಷ್ಟಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪರಿಹಾರೋಪಾಯಗಳು ಏನು ಅಂದರೆ ಶನಿವಾರದಂದು ಕಪ್ಪು ಎಳ್ಳು ಅಥವಾ ಕಪ್ಪು ಹೆಸರು ಬೇಳೆಗಳನ್ನು ಅರ್ಹರಿಗೆ ದಾನ ಮಾಡಬೇಕು. ಜೊತೆಗೆ, ಸರಸ್ವತಿಯ ಆರಾಧನೆ ಮಾಡಿ. ಶಾರದೆಯ ಉಪಾಸನೆ ಮಾಡುವುದರಿಂದ ಸದ್ಬುದ್ಧಿ ದೊರಕುತ್ತದೆ. ಸುಬುದ್ಧಿಯೊಂದಿಗೆ ಸಕಾಲದಲ್ಲಿ ಸಮಂಜಸ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ನೆರವಾಗಲಿದೆ.

(september month can be difficult for 2 zodiac signs who suffer from shani sade sati astrological prediction)

Published On - 7:26 am, Thu, 26 August 21