ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶಿ, ನಿತ್ಯನಕ್ಷತ್ರ: ಉತ್ತರಭಾದ್ರ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:57ರಿಂದ 09:29ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 12:34 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:07 ರಿಂದ ಮಧ್ಯಾಹ್ನ 03:40ರ ವರೆಗೆ.
ಧನು ರಾಶಿ: ಇಂದು ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಸುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿಕೊಂಡು ಜೀವನವನ್ನು ಸಾಗಿಸಿ. ಅನೇಕ ಬದಲಾವಣೆಗಳು ನಿಮ್ಮ ಜೀವನಕ್ಕೆ ಅಗತ್ಯವಿದೆ. ಎಲ್ಲವನ್ನೂ ಸರಿ ಮಾಡಬಲ್ಲೆನೆಂಬ ಮನಃಸ್ಥಿತಿಯಿಂದ ಹೊರಗುಳಿದು ಯೋಚಿಸಿ. ನಿಮ್ಮ ಸಾಮರ್ಥ್ಯವನ್ನು ಸಮಾಜದ ಎದುರು ತೆರೆದಿಡುವಿರಿ. ಉಳಿತಾಯಕ್ಕೆ ಬೇಕಾದ ಅನುಕೂಲವು ಸೃಷ್ಟಿಯಾಗುವುದು. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ. ವ್ಯಾಪಾರವನ್ನು ಹೆಚ್ಚಿಸಲು ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಗೌಪ್ಯತೆ ಇರಲಿ. ಸ್ಪರ್ಧಾತ್ಮಕ ವಿಚಾರದಲ್ಲಿ ಸಂಪೂರ್ಣವಾಗಿ ಎಚ್ಚರವಾಗಿರುವುದು ಅಗತ್ಯ.
ಮಕರ ರಾಶಿ: ಯಾರ ಮಾತನ್ನೂ ಗಂಭೀರವಾಗಿ ತೆಗೆದುಕೊಳ್ಳಲಾರಿರಿ. ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ದೂರದ ಪ್ರಯಾಣವನ್ನು ಮಾಡಬೇಡಿ. ಹಣದ ಅಗತ್ಯತೆ ಇಂದು ತುಂಬಾ ಕಾಡಲಿದೆ. ಸಂಗಾತಿಯ ಜೊತೆ ಸಂತೋಷದಿಂದ ಕಳೆಯಲು ಇಚ್ಛಿಸುವಿರಿ. ಕಛೇರಿಯಲ್ಲಿ ಗ್ರಾಹಕರ ಜೊತೆ ಮಾತುಗಳನ್ನು ಆಡುವಾಗ ಎಚ್ಚರವಿರಲಿ. ಕಛೇರಿಯಲ್ಲಿ ನಿಮ್ಮ ಮೇಲಿನ ಅಭಿಪ್ರಾಯ ಬದಲಾಗಬಹುದು. ನೀವು ಸಂಬಂಧಗಳನ್ನು ಬಳಸದೇ ಸಡಿಲಾಗಬಹುದು. ವಿದ್ಯಾರ್ಥಿಗಳು ಅಧ್ಯಯನ ಮಾಡುವುದರ ಕಡೆ ಇರುವುದು. ಕಛೇರಿಯಲ್ಲಿ ನೀವು ಬಹಳ ಚಿಂತನಶೀಲವಾಗಿ ಕೆಲಸ ಮಾಡುವಿರಿ. ನಿಮ್ಮ ಮೇಲೆ ಯಾರಾದರೂ ಪಿತೂರಿ ಮಾಡಬಹುದು. ಇಂದಿನ ನಿಮ್ಮ ಪ್ರಯಾಣದಿಂದ ಕಷ್ಟವಾಗಬಹುದು. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಯುವಕರು ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸನ್ನು ಸಾಧಿಸುವರು. ವ್ಯಾಪಾರದ ಏರುಪೇರುಗಳಿಂದ ಅಲ್ಪ ಅಸಮಾಧಾನ ಇರುವುದು. ಕುಟುಂಬದೊಂದಿಗೆ ಮೋಜಿನಲ್ಲಿ ದಿನ ಕಳೆಯುವುದು.
ಕುಂಭ ರಾಶಿ: ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವಿರಿ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಹಾಸ್ಯಪ್ರಜ್ಞೆಯು ನಿಮ್ಮ ಎಲ್ಲ ದುಃಖಗಳನ್ನು ಮರೆಸೀತು. ಸ್ನೇಹಿತರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆ ಕಾಲದ ಮಿತಿಯಿಲ್ಲದೇ ಹರಟೆಯನ್ನು ಹೊಡೆಯುವಿರಿ. ಯಾರದೋ ಮಾತಿಗೆ ಕಿವಿಯಾಗಬೇಡಿ. ನಿಮ್ಮ ಪ್ರತಿಭೆಯನ್ನು ಗುರುತಿಸಿ, ಅವುಗಳನ್ನು ನಿರ್ದಿಷ್ಟ ಕಾರ್ಯಕ್ಕೆ ಬಳಸಿ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಗೃಹಾಲಂಕಾರದ ಬಗ್ಗೆ ಹೆಚ್ಚು ಚಟುವಟಿಕೆಯಿಂದ ಇರುವಿರಿ. ನಿಮ್ಮ ಕೆಲಸವನ್ನು ಇತರರ ಜೊತೆ ಹಂಚಿಕೊಳ್ಳಲು ಕಲಿಯಿರಿ. ಅದು ನಿಮ್ಮ ಕೆಲಸದ ಹೊರೆಯನ್ನು ತಗ್ಗಿಸುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ಇಂದು ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡ. ರಾಜಿಯೂ ಬೇಡ. ಕುಟುಂಬದ ಎಲ್ಲ ಸದಸ್ಯರಿಗೆ ಸಂತೋಷವನ್ನು ನೀವು ಕೊಡುವಿರಿ.
ಮೀನ ರಾಶಿ: ನಿಮ್ಮ ಸಂಗಾತಿಯ ಆರೋಗ್ಯವು ಕೆಟ್ಟ ಕಾರಣ ನಿಮ್ಮ ಮಾನಸಿಕ ಸ್ಥಿತಿಯು ಸ್ತಿಮಿತದಲ್ಲಿ ಇರದು. ನಿಮ್ಮ ಆಸಕ್ತಿಗೆ ಯೋಗ್ಯವಾದ ಕಾರ್ಯವು ಸಿಗುವತನಕ ಕಾಯಬೇಕಾಗುವುದು. ಇತರರ ಮಾತನ್ನು ಕೇಳಿ ಖರೀದಿಯನ್ನು ಮಾಡಲು ಮುಂದಾಗಬೇಡಿ. ನಿಮ್ಮವರ ಜೊತೆ ಆನಂದದಿಂದ ಕಾಲವನ್ನು ಕಳೆಯುವಿರಿ. ಪರಸ್ಪರ ಚರ್ಚೆಯ ಮೂಲಕ ಹಳೆಯ ಹಲವು ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ವಿಶೇಷ ಪ್ರತಿಭೆಯು ಜನರಗೆ ಗೊತ್ತಾದೀತು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಎಚ್ಚರಿಕೆಯಿಂದ ಯೋಚಿಸಿ ಮುಂದುವರಿಯಿರಿ. ಪ್ರೀತಿಯಲ್ಲಿ ಪಾರದರ್ಶಕತೆ ಇರುವುದು ಬಹಳ ಮುಖ್ಯ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಆರೋಗ್ಯದಲ್ಲಿ ಜಾಗರೂಕತೆ ಅವಶ್ಯವಾಗಿ ಇರಲಿ. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಅನ್ಯಾನ್ಯ ಕಾರಣಗಳು ಇರಬಹುದು.