ಇದು ಜನವರಿ ತಿಂಗಳ ಮೊದಲ ವಾರವಿದಾಗಿದೆ. 29-12-2024 ರಿಂದ 04-01-2025ರವರೆಗೆ ಇರಲಿದೆ. ಬುಧ ಹಾಗೂ ಸೂರ್ಯರ ಸಂಯೋಗವು ಗುರುವಿನ ರಾಶಿಯಲ್ಲಿ ಆಗಲಿದೆ. ಗುರುಬಲವಿರುವವರಿಗೆ ಈ ಯೋಗ ಶುಭಕರ. ಅದಿಲ್ಲದೇ ಇದ್ದವರಿಗೆ ಪೂರ್ಣ ಶುಭವಿಲ್ಲ. ಅಲ್ಪದರಲ್ಲಿ ತೃಪ್ತಿಪಡಬೇಕು.
ಮೇಷ ರಾಶಿ: ಹೊಸ ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ದ್ವಿತೀಯಾಧಿಪತಿ ಏಕಾದಶಕ್ಕೆ ಬಂದು ಹಣವನ್ನು ಕೊಡಿಸುವನು. ವಿನ್ಯಾಸದ ವೃತ್ತಿಯವರಿಗೆ ಉತ್ತಮ ಅವಕಾಶವೂ ಲಭ್ಯ. ನಿಮ್ಮನ್ನು ಪ್ರಕಟಗೊಳಿಸಿಕೊಳ್ಳುವ ವಾರವೂ ಆಗಲಿದೆ. ಆರೋಗ್ಯದ ಬಗ್ಗೆ ಗಮನಕೊಡುವ ಅವಶ್ಯಕತೆ ಹೆಚ್ಚಿದೆ. ಪ್ರಯಾಣವನ್ನು ಮಾಡುವ ಮನಸ್ಸನ್ನು ಮಾಡಬೇಡಿ. ಆಲಸ್ಯದಿಂದ ನಿಮ್ಮ ಕಾರ್ಯಗಳು ಆಗದೇ ಇರಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳಬಹುದು. ಶತ್ರುಗಳು ನಿಮ್ಮ ವಿರುದ್ಧ ಬಾರದೇ ಇದ್ದಾಗ ಸುಮ್ಮನೇ ಶತ್ರುತ್ವವನ್ನು ಸಾಧಿಸಲು ಹೋಗಬೇಡಿ. ಚಂಚಲವಾದ ಮನಸ್ಸನ್ನು ನಿಯಂತ್ರಿಸಿ. ಸಾಲವನ್ನು ಮುಕ್ತಾಯ ಮಾಡಿಕೊಂಡು ನಿಶ್ಚಿಂತರಾಗುವಿರಿ. ಆಲೋಚಿಸಿ ನಿರ್ಧಾರವನ್ನು ಮಾಡಿಕೊಳ್ಳಿ.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿ ಶುಕ್ರನು ದಶಮದಲ್ಲಿ ಇದ್ದು ಮನೋರಂಜನೆಗೆ ಒತ್ತು ನೀಡುವನು. ಯಾವುದೋ ಮೂಲಕ ಅನಿರೀಕ್ಷಿತವಾಗಿ ಧನಾಗಮನವಾಗಬಹುದು. ನಿಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯಲಿವೆ. ಕುಟುಂಬದವರ ಜೊತೆ ಕಲಹವು ಉಂಟಾಗಬಹುದು. ಅಶುಭವಾರ್ತೆಯಿಂದ ಸ್ವಲ್ಪ ಉದ್ವಿಗ್ನಗೊಳ್ಳಲಿದ್ದೀರಿ. ಅನಿವಾರ್ಯವಾಗಿ ಬಂದ ಪ್ರಯಾಸದಿಂದ ನಿಮಗೆ ಕಿರಿಕಿರಿಯಾಗಲಿದೆ. ವಿದ್ಯಾರ್ಥಿಗಳಿಗೆ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ. ಸ್ವಂತ ತೀರ್ಮಾನವು ಅಸಾಧ್ಯವಾದರೆ ಹಿರಿಯರ ಜೊತೆ ಚರ್ಚಿಸಿ ಮುನ್ನಡೆಯಿರಿ.
ಮಿಥುನ ರಾಶಿ: ಹೊಸ ವರ್ಷದ ಹೊಸ ತಿಂಗಳ ಹೊಸ ವಾರದಲ್ಲಿ ನಿಮಗೆ ಶುಭಾಶುಭ ಫಲ. ರಾಶಿಯ ಅಧಿಪತಿ ಸಪ್ತಮದಲ್ಲಿ ಇದ್ದು ಬಂಧುಗಳಿಂದ ಸಹಾಯ, ಸಹಕಾರ ಪ್ರಾಪ್ತಿ. ಸಂಗಾತಿಯ ಮೇಲೆ ವೈಮನಸ್ಯ. ಆರ್ಥಿಕ ಸ್ಥಿತಿಯು ಕ್ಷೀಣಿಸುವ ಸಾಧ್ಯತೆ ಇದೆ. ಅಂದುಕೊಂಡಂತೆ ಆಗಿಲ್ಲವೆಂದು ಅಸಮಾಧಾನವು ಇರಲಿದೆ. ನಿಮ್ಮ ಆಸ್ತಿಯನ್ನು ಪರರ ಪಾಲಾಗಬಹುದು ಎಂಬ ಆತಂಕವಾಗಲಿದೆ. ಗುರುಬಲವಿಲ್ಲದ ಕಾರಣ ಆರೋಗ್ಯದ ವ್ಯತ್ಯಾಸದಿಂದ ನೆಮ್ಮದಿಯು ದೂರಾಗಬಹುದು. ಮೊದಲು ಮಾಡಿಕೊಂಡ ತಪ್ಪಿನಿಂದ ಇಂದು ನೀವು ಪಶ್ಚಾತ್ತಾಪಪಡಬೇಕಾಗಬಹುದು. ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಕ್ರಮದ ಕುರಿತು ಆಲೋಚಿಸುವಿರಿ, ವೈದ್ಯರ ಸಲಹೆಯನ್ನು ಪಾಲಿಸಿ.
ಕರ್ಕಾಟಕ ರಾಶಿ: ಜನವರಿ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭಾಶುಭ. ಶುಕ್ರನು ಅಷ್ಟಮದಲ್ಲಿ ಇದ್ದು ಸಂಗಾತಿಯಿಂದ ಪೀಡೆ ಅಥವಾ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಕುಟುಂಬಕ್ಕೆ ಸಂಬಂಧಿಸಿದ ಖರ್ಚು ಹೆಚ್ಚಾಗಲಿದೆ. ನೀವು ಮಾಡಲು ಹೊರಟ ಕಾರ್ಯಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಕುಜನು ನೀಚನಾಗಿ ನಿಮ್ಮ ರಾಶಿಯಲ್ಲಿ ಇದ್ದುದು ನಿಮಗೆ ಹತಾಶಭಾವವು ಉಂಟಾಗುವುದು. ನಿಮ್ಮ ರಹಸ್ಯ ವಿಚಾರಗಳು ಎಲ್ಲರಿಗೂ ಗೊತ್ತಾಗಿ ನಿಮಗೆ ಮುಜುಗರವಾಗಬಹುದು. ಬಂಧುಗಳು ನಿಮ್ಮ ವರ್ತನೆಯಿಂದ ದೂರಾಗಬಹುದು. ಮಾತಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳುವುದು ಉತ್ತಮ.
ಸಿಂಹ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಜನವರಿಯ ಮೊದಲ ವಾರ ಶುಭ. ರಾಶಿಯ ಅಧಿಪತಿ ಪಂಚಮದಲ್ಲಿ ಇದ್ದು ಸಂತಾನದ ಸಂತೋಷವನ್ನು ನೀಡುವನು. ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಏರೆಪೇರಾಗುವ ಸಾಧ್ಯತೆ ಇದೆ. ದುರಭ್ಯಾಭ್ಯಾಸವುಳ್ಳವರಿಗೆ ಅನಾರೋಗ್ಯವು ಕಾಡಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಸಹಾಯಮಾಡಲು ಬರಬಹುದು. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ವಿವಾದಗಳು ಆಗಬಹುದು. ಶುಕ್ರನು ಷಷ್ಠದಲ್ಲಿ ಇರುವ ಕಾರಣ ಬರಬೇಕಾದ ಹಣವು ಸ್ವಲ್ಪಮಟ್ಟಿಗೆ ಬರಲಿದೆ. ನಿರಂತರ ಪರಿಶ್ರಮದ ಕಾರ್ಯಕ್ಕೆ ಫಲವು ಸಿಗಬಹುದಾಗಿದೆ. ದುಡುಕಿ ಅನರ್ಥವನ್ನು ಮಾಡಿಕೊಳ್ಳುವುದು ಬೇಡ.
ಕನ್ಯಾ ರಾಶಿ: ಜನವರಿ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಚತುರ್ಥದಲ್ಲಿ ಇದ್ದು ಕುಟುಂಬ ಸುಖವನ್ನೂ ಕೊಡುವನು. ವಿದೇಶ ಪ್ರವಾಸಕ್ಕೆ ಬೇಕಾದ ಸಿದ್ಧತೆಯಯನ್ನು ಮಾಡಿಕೊಳ್ಳಬಹುದು. ಉದ್ಯೋಗದ ಸ್ಥಳದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ. ಭಡ್ತಿಯೂ ಸಿಗಬಹುದು. ಅವಿವಾಹಿತರಿಗೆ ವಿವಾಹಭಾಗ್ಯವು ಸಿಗಬಹುದು. ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹುದು. ಮನೆಯಿಂದ ದೂರದಲ್ಲಿ ವಾಸಮಾಡಬೇಕಾಗಿಬರಬಹುದು. ಅಗ್ನಿಯ ಭೀತಿಯು ಉಂಟಾಗಬಹುದು. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ ಇದೆ. ಧಾರ್ಮಿಕಕ್ಷೇತ್ರದವರಿಗೆ ಶುಭವಾಗಬಹುದು. ಒತ್ತಡವನ್ನು ಈಗಲೇ ಕಡಿಮೆಮಾಡಿಕೊಳ್ಳಲು ತೀರ್ಮಾನಿಸಿ.
ತುಲಾ ರಾಶಿ: ಜನವರಿಯ ಮೊದಲ ವಾರದಲ್ಲಿ ನಿಮಗೆ ಅಶುಭ. ರಾಶಿಯ ಅಧಿಪತಿ ಪಂಚಮದಲ್ಲಿ ಪಂಚಮ ಶನಿಯ ಯೋಗದಲ್ಲಿ ಅಶುಭನಾಗಿರುವನು. ಮಕ್ಕಳಿಂದ ಕಿರಿಕಿರಿ ಸಾಧ್ಯತೆ ಇದೆ. ಭೂಮಿಗೆ ಸಂಬಂಧಿಸಿದ ವಿವಾದಗಳು ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ. ಹೆಚ್ಚು ಧನವ್ಯಯವಾಗುವ ಸಾಧ್ಯತೆ ಇದೆ. ಹಿರಿಯ, ದೇವರ ನಿಂದನೆಯೂ ನಿಮ್ಮ ಹತಾಶಭಾವದಿಂದ ನಡೆಯಲಿವೆ. ಸತತ ಸೋಲುಂಡ ನಿಮಗೆ ಉತ್ಸಾಹವೇ ಇಲ್ಲದಂತಾಗಬಹುದು. ಯಾವುದೂ ಅನರ್ಥವಾದ ಕಾರ್ಯಗಳನ್ನು ಮಾಡಲು ಹೋಗಬೇಡಿ. ಇನ್ನಷ್ಟು ದುಃಖಿಸಬೇಕಾದ ಸನ್ನಿವೇಶವು ಬರಬಹುದು. ಪೂರ್ವಾಪರಜ್ಞಾನವಿಲ್ಲದೇ ತೀರ್ಮಾನಕ್ಕೆ ಬರುವುದು ಬೇಡ.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಶುಭ. ದ್ವಿತೀಯದಲ್ಲಿ ಇರುವ ಸೂರ್ಯನು ಶುಭಕರನಾಗಿರುವನು. ತಂದೆಯಿಂದ ನಿಮಗೆ ಆರ್ಥಿಕ ಸಹಕಾರ ಅಥವಾ ಪ್ರಭಾವ ಸಿಗಲಿದೆ. ಓದಿನ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಆರಕ್ಷಕರಾಗುವ ಮನಸ್ಸುಳ್ಳವರಿಗೆ, ರಕ್ಷಣಾವಿಭಾಗದಲ್ಲಿ ಕಾರ್ಯವನ್ನು ಮಾಡುವವರಿಗೆ ಸದವಕಾಶವು ಸಿಗಲಿದೆ. ಬುಧನು ದ್ವಿತೀಯದಲ್ಲಿ ಇದ್ದು ಭೂವ್ಯವಹಾರದಲ್ಲಿ ಜಯವನ್ನು ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಗುವು. ಅಧಿಕಾರವನ್ನು ದುರುಯೋಗ ಪಡಿಸಿಕೊಳ್ಳಬೇಡಿ. ಜಾಗರೂಕತೆಯಿಂದ ನಿರ್ವಹಿಸಿ. ಧಾರ್ಮಿಕ ಕಾರ್ಯವನ್ನು ಮಾಡುವ ಯೋಗವು ಇರಲಿದೆ. ಉಪಕಾರಕ್ಕೆ ಪ್ರತ್ಯುಪಕಾರವು ಸಿಗಲಿದೆ.
ಧನು ರಾಶಿ: ಜನವರಿ ತಿಂಗಳ ಮೊದಲ ವಾರದಲ್ಲಿ ನಿಮಗೆ ಅಶುಭ. ಸೂರ್ಯನು ನಿಮ್ಮ ರಾಶಿಯಲ್ಲಿ ಇದ್ದು ಒತ್ತಡ ಹೆಚ್ಚು ಮಾಡುವನು. ಯಾವ ಕಾರ್ಯವೂ ಆಗುತ್ತಿಲ್ಲ, ಮುಂದುವರಿಯುತ್ತಿಲ್ಲ ಎಂಬ ಅಸಮಾಧಾನವನ್ನು ಹೊರಹಾಕುವಿರಿ. ನಿಮ್ಮ ಸಂಗಾತಿಯ ಕೆಲವು ವರ್ತನೆ ಹಿಡಿಸದು. ಆದರೆ ಅದನ್ನು ಪ್ರಕಟಿಸುವ ಧೈರ್ಯ ಇಲ್ಲ. ಪುನರಾವರ್ತಿತವಾದ ವರ್ತನೆಗಳು ನಿಮಗೆ ಮಾನಸಿಕ ಹಿಂಸೆಯನ್ನು ಕೊಡುವುದು. ದುಶ್ಚಟಕ್ಕೆ ಬೀಳಬಹುದು. ಉದ್ಯೋಗದಲ್ಲಿ ಸ್ಥಾನಾಂತರವಾಗಬಹುದು ಅಥವಾ ಕಳೆದುಕೊಳ್ಳಲೂಬಹುದು. ಅನಿರೀಕ್ಷಿತ ಧನವ್ಯಯವು ನಿಮಗೆ ನಿರಾಶೆಯನ್ನು ಉಂಟುಮಾಡುವುದು. ಸ್ನೇಹಿತರು ನಿಮ್ಮ ಜೊತೆಗಿದ್ದು ಸಮಾಧಾನ ಮಾಡುವರು.
ಮಕರ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಶುಭಾಶುಭ. ಬುಧನು ದ್ವಾದಶದಲ್ಲಿ ಸೂರ್ಯನ ಜೊತೆಗಿದ್ದು ದೇಹ ಪೀಡಿ, ಕೊಡುವನು. ಈ ವಾರವೂ ನೀವು ಅಂದುಕೊಂಡಲ್ಲಿಗೆ ಹೋಗಲಾಗದು. ಕುಜನು ಸಪ್ತಮದಲ್ಲಿ ಇದ್ದು ದಾಂಪತ್ಯದಲ್ಲಿ ವಿವಾದಗಳು ನಡೆಯುವುದು. ಪರಸ್ಪರ ದ್ವೇಷವನ್ನು ಸಾಧಿಸಲು ಹೊರಡಬೇಕಾದ ಸ್ಥಿತಿಯೂ ಬರಬಹುದು. ಅಪವಾದವು ನಿಮಗೆ ಬರಬಹುದು. ಪರಸ್ತ್ರೀಯರಿಂದ ನಿಮಗೆ ಕಲಂಕತರುವ ಪ್ರಯತ್ನಗಳು ಆಗಬಹುದು. ಕೃಷಿಕಾರ್ಯದಿಂದ ಹಣವನ್ನು ಸಂಪಾದಿಸಬಹುದಾಗಿದೆ. ವಿದ್ಯುತ್ ಉಪಕರಣಗಳಿಂದ ನಷ್ಟವಾಗುವ ಸಾಧ್ಯತೆ ಇದೆ.
ಕುಂಭ ರಾಶಿ: ಜನವರಿ ತಿಂಗಳ ಮೊದಲ ವಾರದಲ್ಲಿ ಶುಭ. ಬುಧನು ಶನಿಯ ಮಿತ್ರನಾಗಿದ್ದು ಏಕಾದಶ ಸ್ಥಾನಕ್ಕೆ ಬರಲಿದ್ದಾನೆ. ಸೂರ್ಯ ಹಾಗು ಬುಧರ ಯುತಿಯಿಂದ ವೈದ್ಯವೃತ್ತಿಗೆ ಆದಾಯ ಅಧಿಕ. ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಮಿತ್ರರು ಶತ್ರುಗಳಾಗಬಹುದು ನಿಮ್ಮ ಮಾತು ಹಾಗು ವರ್ತನೆಯಿಂದ. ಅವರ ಬಗ್ಗೆ ಗಮನವಿರಲಿ ಹಾಗಯೇ ಮಾತಿನ ಬಗ್ಗೆಯೂ ಬೇಕು. ಸಮಯಸ್ಫೂರ್ತಿಗೆ ಪ್ರಶಂಸೆಯು ಸಿಗಲಿದೆ. ಸ್ವಗೃಹದಲ್ಲಿಯೇ ವಾಸಮಾಡುವ ಮನಸ್ಸು ಮಾಡುವಿರಿ. ಮಕ್ಕಳು ಸಂತಸದ ವಾರ್ತೆಯನ್ನು ಹೇಳುವವರು. ಸ್ವಲ್ಪಮಟ್ಟಿನ ಆಲಸ್ಯವಿರಲಿದೆ.
ಮೀನ ರಾಶಿ: ಈ ವಾರದಲ್ಲಿ ನಿಮಗೆ ಶುಭ. ಬುಧನು ನಿಮ್ಮ ರಾಶಿಗೆ ದಶಮದಲ್ಲಿ ಇರುವನು. ಬೌದ್ಧಿಕ ಕಸರತ್ತು ಹೆಚ್ಚು ಮಾಡಬೇಕಾಗುವುದು. ಒತ್ತಡದಿಂದ ಇರುವುದು ಹಿತ, ಗೌರವದ ಸಂಕೇತವಾಗುವುದು. ವಾಹನವನ್ನು ಚಲಿಸುವಾಗ ಜಾಗರೂಕರಾಗಿರಿ. ಆಸ್ತಿಯ ವಿಚಾರದಲ್ಲಿ ವಿವಾದಗಳು ಆಗಬಹುದು. ಹಿರಿಯರ ಜೊತೆ ಚರ್ಚಿಸಿ ಮುಂದುವರಿಯಿರಿ. ಭೂಮಿಯ ವ್ಯವಹಾರಸ್ಥರಿಗೆ ಸ್ವಲ್ಪ ಹಿನ್ನೆಡೆ ಇರಲಿದೆ. ಶುಭಸಮಾರಂಭಗಳಿಗೆ ತೆರಳುವ ಮನಸ್ಸನ್ನು ಹೊಂದುವಿರಿ. ಆದ ಖರ್ಚುಗಳ ಬಗ್ಗೆ ಅತಿಯಾದ ಬೇಸರ ಬೇಡ. ಆದರೆ ಉಳಿತಾಯದ ಬಗ್ಗೆ ಗಮನ ನೀಡುವುದು ಉತ್ತಮ. ಅವಕಾಶಗಳು ಎಷ್ಟೇ ಇದ್ದರೂ ಯೋಗವಿದ್ದಷ್ಟೇ ಸಿಗುವುದು ಎಂಬ ಮಾತು ನೆನಪಿರಲಿ.
ಲೋಹಿತ ಹೆಬ್ಬಾರ್ – 8762924271 (what’s app only)