
ನವೆಂಬರ್ 02 ರಿಂದ ನವೆಂಬರ್ 08 ವರೆಗೆ ಪ್ರೀತಿಯ ವಿಚಾರದಲ್ಲಿ ಮೊದಲು ನಂಬಿಕೆ, ಸಹಕಾರ, ತಾಳ್ಮೆ ಬೇಕು. ಕ್ಷಣಕ್ಷಣದ ವರ್ತನೆಗಳನ್ನೂ ಅಪಾರ್ಥ ಮಾಡಿಕೊಂಡಾಗ ಪ್ರೀತಿಯ ಅರ್ಥವೇ ಹೋಗುವುದು. ನಕಾರಾತ್ಮಕವಾದ ಯಾವ ಅಂಶವನ್ನೂ ಮುಂದುವರಿಸುವುದು ಬೇಡ. ಸಹರ್ತಿಗಳ ಸಲಹೆಗಳನ್ನು ಕೇಳಿ, ನಿಮ್ಮದೇ ಆದ ಸ್ವಂತ ನಿರ್ಧಾರಕ್ಕೇ ಒತ್ತು ನೀಡಿ. ಎಲ್ಲರ ಸತ್ಪ್ರೇಮವೂ ಸಫಲವಾಗಲಿ.
ಮೇಷ ರಾಶಿ: ರಾಶಿ ಚಕ್ರದ ಮೊದಲ ರಾಶಿಯವರಿಗೆ ಈ ವಾರ ನಿಮ್ಮ ಪ್ರೇಮ ಜೀವನ ಬಹಳ ವಿಶೇಷವಾಗಿ ಕಾಣಬಹುದು. ಸಪ್ತಮಾಧಿಪತಿ ಸಪ್ತಮದಲ್ಲಿ ಸ್ವ ರಾಶಿಯಲ್ಲಿ ಇರುವ ಕಾರಣ ಹಳೆಯ ಅಸಮಾಧಾನಗಳು ದೂರವಾಗುವ ಕಾಲ. ನೀವು ಸಂಬಂಧದಲ್ಲಿ ಇದ್ದರೆ, ಪರಸ್ಪರ ಅರ್ಥಮಾಡಿಕೊಳ್ಳುವ ಮನೋಭಾವದಿಂದ ಬಾಂಧವ್ಯ ಗಾಢವಾಗುತ್ತದೆ. ಪ್ರೀತಿಪಾತ್ರರು ನಿಮಗೆ ಅಚ್ಚರಿಯ ಆನಂದ ನೀಡುವ ಸಾಧ್ಯತೆ ಇದೆ. ಈ ವಾರ ನಿಮ್ಮ ಪ್ರೇಮ ಅತಿ ಚಂಚಲ.
ವೃಷಭ ರಾಶಿ: ಎರಡನೇ ರಾಶಿಯವರಿಗೆ ಈ ವಾರ ಪ್ರೇಮದಲ್ಲಿ ಸಹನೆ ಮತ್ತು ನಂಬಿಕೆ ಮುಖ್ಯ. ಪ್ರೇಮಾಧಿಪತಿಯೂ ರಾಶಿಯ ಅಧಿಪತಿಯೂ ಆದ ಶುಕ್ರ ಷಷ್ಠದಲ್ಲಿ ಇದ್ದುದರಿಂದ ಸಣ್ಣ ವಿಷಯಗಳ ಮೇಲೆ ಜಗಳ ಉಂಟಾದರೆ ಅದನ್ನು ತಕ್ಷಣವೇ ಪರಿಹಾರಕಂಡುಕೊಳ್ಳಿ. ಪ್ರಿಯ ವ್ಯಕ್ತಿಯ ಭಾವನೆಗಳನ್ನು ಕೇಳಿ, ಗೌರವಿಸುವುದು ಉತ್ತಮ. ಪ್ರೀತಿಯಲ್ಲಿ ಮೌನಕ್ಕೂ ಹೆಚ್ಚಿನ ಅರ್ಥವಿದೆ ಎಂದು ಈ ವಾರ ಗೊತ್ತಾಗುವುದು. ನೀವು ಇಷ್ಟಪಟ್ಟವರನ್ನು ಇನ್ಯಾರೂ ಗೆಲ್ಲುವರು.
ಮಿಥುನ ರಾಶಿ: ಬುಧಾಧಿತ್ಯದ ಈ ರಾಶಿಗೆ ಈ ವಾರ ಒಳ್ಳೆಯ ಮನಸ್ಸಿನಿಂದ ಮಾಡಿದ ಸಂವಹನವು ನಿಮಗೂ ಎದುರಿನವರಿಗೂ ಸೌಹಾರ್ದತೆಯನ್ನು ನೀಡುವುದು. ಸಪ್ತಮಾಧಿಪತಿ ದ್ವಿತೀಯದಲ್ಲಿ ಇದ್ದು ನಿಮ್ಮ ಮಾತುಗಳಲ್ಲಿ ಚಾತುರ್ಯವನ್ನೂ ಅದು ಪ್ರಿಯ ವ್ಯಕ್ತಿಯ ಆಕರ್ಷಣೆಯನ್ನೂ ಮಾಡುವುದು. ದೂರವಿದ್ದ ಪ್ರೇಮಿಗಳು ಎಲ್ಲಿಯಾದರೂ ಕುಳಿತು ಮಾತನಾಡಲು ಬಯಸುವರು. ಪ್ರೇಮ ಸಂಬಂಧದಲ್ಲಿ ಹೊಸ ಚರಿತ್ರೆ ಪ್ರಯಾಣಗಳು ಸಾಧ್ಯ. ನಿಮ್ಮ ಹೃದಯವನ್ನು ತೆರೆಯಿರಿ.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ನಿಮ್ಮ ಭಾವನೆಯ ಆಳ, ಅಗಲಗಳು ಗೊತ್ತಾಗಲಿವೆ. ಆದರೆ ಅತಿಯಾದ ಸಂವೇದನಾಶೀಲತೆಯೂ ಗೊಂದಲ ತರಿಸುವುದು. ಪ್ರಿಯ ವ್ಯಕ್ತಿಯು ನಿಮ್ಮ ಬಗ್ಗೆ ಕಾಳಜಿ ತೋರಿಸುತ್ತಾರೆ, ಅದೇ ಪ್ರೀತಿ ಎಂದು ನೀವಾಗಿಯೇ ಭಾವಿಸುವಿರಿ. ವಿವಾಹಿತರಿಗೆ ಈ ವಾರ ಮನೆಯಲ್ಲಿ ನೆಮ್ಮದಿ ಸುಖ, ಬಗೆಬಗೆಯ ಪಾಕಗಳ ಸೇವನೆ ಎಲ್ಲವೂ ಇರುವುದು. ಒಂಟಿಯಾಗಿರುವ ನಿಮ್ಮನ್ನು ಅಪಹಾಸ್ಯ ಮಾಡುವರು. ಆದರೆ ನಿಮಗೆ ಯಾವುದು ಯೋಗ್ಯವೋ ಅದನ್ನೇ ಮಾಡಿ.
ಸಿಂಹ ರಾಶಿ: ಸೂರ್ಯನ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ಪ್ರೀತಿಯ ವಿಷಯದಲ್ಲಿ ಆತ್ಮವಿಶ್ವಾಸವೇ ನಿಮ್ಮ ಮುಖ್ಯ ಶಸ್ತ್ರ. ನೀವು ಪ್ರೀತಿಯನ್ನು ಘೋಷಿಸುವ ಮನೋಭಾವದಲ್ಲಿರಬಹುದು. ಹಾವಭಾವ ಎಲ್ಲವನ್ನೂ ತಿಳಿಸುತ್ತದೆ. ಹೊಸ ವ್ಯಕ್ತಿ ನಿಮ್ಮ ನಡವಳಿಕೆಯಿಂದ ಆಕರ್ಷಿತರಾಗಬಹುದು. ಪ್ರೇಮದಲ್ಲಿ ತಪ್ಪುಗಳಿದ್ದರೆ ಕ್ಷಮೆ ಕೇಳಿ. ಗೌರವ ಅಗೌರವಗಳಿಗಿಂತ ಅದು ಬಾಂಧವ್ಯ ಬಲವಾಗುವ ಸೂಚನೆ. ನಿಮ್ಮ ಉತ್ಸಾಹ ಪ್ರಿಯ ವ್ಯಕ್ತಿಗೆ ಶಕ್ತಿ ನೀಡುತ್ತದೆ.
ಕನ್ಯಾ ರಾಶಿ: ಆರನೇ ರಾಶಿಯವರಿಗೆ ಈ ವಾರ ಪ್ರೇಮದ ವಿಚಾರದಲ್ಲಿ ಅಳುಕು. ಸಣ್ಣ ವಿಚಾರಗಳನ್ನೂ ಗಾಢವಾಗಿ ತಲೆಯೊಳಗೆ ಹಾಕಿಕೊಳ್ಳುವಿರಿ. ಪ್ರೀತಿಯ ವ್ಯಕ್ತಿಯಾದ ಮೇಲೆ ಅತಿಯಾದ ಸಂಶಯ ಬೇಡ. ಸ್ವತಂತ್ರವೂ ಪ್ರೀತಿಯ ಭಾಗವೇ ಆಗಲಿದೆ. ಅದನ್ನು ಇತಿಮಿತಿಯಲ್ಲಿ ಬಳಸಿ. ಶುಕ್ರನು ದ್ವಿತೀಯದಲ್ಲಿ ಸ್ವಸ್ಥಾನದಲ್ಲಿ ಇರುವ ಕಾರಣ ಸಂಬಂಧದಲ್ಲಿ ಸ್ಪಷ್ಟವಾದ ವಿಚಾರವನ್ನು ಪ್ರಸ್ತುತಪಡಿಸುವುದು ಮುಖ್ಯ. ಹೃದಯದಿಂದ ಮಾತು ಆಡಿದರೆ ತಪ್ಪುಅರ್ಥಗಳ ನಿವಾರಣೆ ಸಾಧ್ಯ. ಒಂಟಿಯಾಗಿ ಹೆಚ್ಚು ಸಮಯ ಕಾಯಬೇಕಾದ ಸ್ಥಿತಿ ಬಂದು ಸಿಟ್ಟಾಗುವಿರಿ.
ತುಲಾ ರಾಶಿ: ರಾಶಿಯ ಅಧಿಪತಿ ಈ ವಾರ ಇದೇ ರಾಶಿಯಲ್ಲಿದ್ದು ಪ್ರೀತಿಯ ಸಂಪೂರ್ಣ ಆನಂದ ಪಡೆಯುವ ಹರ್ಷದ ವಾರ. ನಿಮ್ಮ ಆಕರ್ಷಕ ನಡವಳಿಕೆ ಪ್ರಿಯ ವ್ಯಕ್ತಿಯನ್ನು ಮತ್ತಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಮಾತುಗಳನ್ನು ಕೊಟ್ಟು ಅನಂತರ ಸಂಕಟಕ್ಕೆ ಸಿಲುಕಬೇಡಿ. ಮನೋರಂಜನೆಗೆ ಬೇಕಾಗಿ ದೂರದ ಪ್ರದೇಶವನ್ನು ಆರಿಸಿಕೊಳ್ಳುವಿರಿ. ನಿಮ್ಮನ್ನು ನೋಡಿ ಅಸೂಯೆ ಪಡಬಹುದು.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಹೆ ಈ ವಾರ ಭಾವನೆಗಳಲ್ಲಿ ತೀವ್ರತೆ ಇದ್ದರೂ ಹದವರಿತು ವ್ಯಕ್ತಪಡಿಸುವುದೇ ಸೂಕ್ತ. ಪ್ರೇಮದಲ್ಲಿ ಗಂಭೀರವಾದ ಅಹಂಕಾರವನ್ನು ತೋರಿಸದಿರಿ. ಪ್ರಿಯ ವ್ಯಕ್ತಿಯು ನಿಮಗೆ ಅಚ್ಚರಿ ಉಡುಗೊರೆ ನೀಡಬಹುದು. ಸಂಗಾತಿಯ ಹುಸಿ ಮುನಿಸಿಗೆ ಭಯಗೊಳ್ಳಬಹುದು. ಹಳೆಯ ಪ್ರೇಮದ ನೆನಪಿನಲ್ಲಿ ಮುಳುಗದಿರಿ, ಹೊಸ ಪ್ರಾರಂಭಕ್ಕೆ ಅವಕಾಶ ಕೊಡಿ. ವಿವಾಹಿತರಿಗೆ ಪರಸ್ಪರ ವಿಶ್ವಾಸ ತುಂಬಾ ಅಗತ್ಯ. ನಿಮ್ಮಿಂದ ನಿರೀಕ್ಷಿಸಿದ್ದನ್ನು ಹೇಳಿಕೊಳ್ಳಲಾರರು.
ಧನು ರಾಶಿ: ಗುರುವಿನ ಆಧಿಪತ್ಯದ ಈ ರಾಶಿಗೆ ಈ ವಾರ ದೂರದಲ್ಲಿದ್ದ ಪ್ರಿಯ ವ್ಯಕ್ತಿಯೊಂದಿಗೆ ಸಂಪರ್ಕ ಮರುಸ್ಥಾಪನೆ. ಸಾಮಾಜಿಕ ಒಡನಾಟದಲ್ಲಿ ಪ್ರೇಮವು ಆರಂಭವಾಗಲಿದೆ. ಒಟ್ಟಿಗೆ ಪ್ರಯಾಣ ಅಥವಾ ಸಂಭ್ರಮದ ಸಮಯ ಬರಬಹುದು. ಬಾಲ್ಯದಲ್ಲಿ ಅತ್ಯಂತ ಹೇಟ್ ಮಾಡುವ ವ್ಯಕ್ತಿಯೇ ವಿವಾಹ ಸಂಬಂಧಕ್ಕೆ ಬಂದಿದ್ದು ಅಚ್ಚರಿ. ನಿಮ್ಮ ಪ್ರೀತಿಯಲ್ಲಿ ವಯೋಮಾನದ ಅಂತರ ಹೆಚ್ಚಿರಲಿದೆ. ಅನಿವಾರ್ಯವಾಗಿ ಆರ್ಥಿಕತೆ ಇದಕ್ಕೆ ಮೂಲ ಕಾರಣ.
ಮಕರ ರಾಶಿ: ನವೆಂಬರ್ ತಿಂಗಳಲ್ಲಿ ಈ ರಾಶಿಯವರಿಗೆ ಕೆಲಸದ ಒತ್ತಡದಿಂದ ಪ್ರೇಮಕ್ಕೆ ಸಮಯ ಸಿಗದೇ, ಪ್ರಿಯ ವ್ಯಕ್ತಿಗೆ ಕಾಳಜಿ ತೋರಿಸುವ ಸಣ್ಣ ಕ್ರಮವೂ ಪ್ರೇಮವನ್ನು ಉಳಿಸುತ್ತವೆ. ಇದೇ ನಿಜವಾದ ಪ್ರೇಮ. ಈ ವಾರ ನಿಮ್ಮ ಶಾಂತ ಸ್ವಭಾವವು ಪ್ರಿಯರಿಗೆ ಭದ್ರತೆಯ ಭಾವನೆ ನೀಡುತ್ತದೆ. ಪೂರ್ವ ನಿಶ್ಚಿತ ವಿವಾಹಿತರಿಗೆ ಕುಟುಂಬದ ವಿಚಾರದಲ್ಲಿ ಒಗ್ಗಟ್ಟು ಸಾಧ್ಯ.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಪ್ರೇಮದಲ್ಲಿ ಕನಸುಗಳನ್ನು ಕಾಣುವಿರಿ, ಅದನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ ಕೂಡ. ವರ್ತಮಾನಕ್ಕಿಂತ ಹೆಚ್ಚಾಗಿ ಭವಿಷ್ಯವೇ ನಿಮ್ಮನ್ನು ಕಾಡಲಿದೆ. ಉದ್ಯೋಗ, ಮನೆ, ಮಕ್ಕಳು, ಪಾಲಕರು, ವಾಹನ ಖರೀದಿ, ಹೂಡಿಕೆ ಮುಂತಾದ ವಿಚಾರಕ್ಕೆ ಸಮಯ ಮೀಸಲಾಗುವುದು. ನಿಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುತ್ತಲೇ ಇರುವಿರಿ.
ಮೀನ ರಾಶಿ: ನವೆಂಬರ್ ತಿಂಗಳ ಮೊದಲ ವಾರದ ಆರಂಭದಲ್ಲಿ ಭಾವನೆಗಳು ಮೃದು ಮತ್ತು ಪ್ರಾಮಾಣಿಕವಾಗಿಯೇ ಇರಲಿದೆ. ಅನಂತರ ಒತ್ತಡಗಳು ನಿಮ್ಮ ಮಾತು ವರ್ತನೆಯನ್ನು ಬದಲಾಯಿಸವುದು. ಹೊಸ ಪ್ರೇಮಕ್ಕೆ ಇದು ಆಘಾತವನ್ನೇ ತರಿಸುವುದು. ಸಂಬಂಧದಲ್ಲಿ ಕ್ಷಮೆ ಮತ್ತು ಪ್ರೀತಿ ಎರಡೂ ಪರಸ್ಪರ ಪೂರಕ. ವಿವಾಹಿತರಿಗೆ ಪ್ರೀತಿಯ ಹೊಸ ಅರಿವು ಬರುತ್ತದೆ. ಕನಸುಗಳನ್ನು ವರ್ಣನಾತ್ಮಕವಾಗಿ ಸಂಗಾತಿಯ ಮುಂದೆ ಪ್ರಸ್ತುತಪಡಿಸುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)