AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋಣಾನುಬಂಧ ಎಂದರೇನು? ಅಧ್ಯಾತ್ಮಿಕ ಮಹತ್ವ ಇಲ್ಲಿದೆ

ಋಣಾನುಬಂಧ ಎಂದರೇನು? ಅಧ್ಯಾತ್ಮಿಕ ಮಹತ್ವ ಇಲ್ಲಿದೆ

Ganapathi Sharma
|

Updated on: Jun 12, 2025 | 7:06 AM

Share

ಡಾ. ಬಸವರಾಜ್ ಗುರೂಜಿ ಅವರು ಋಣಾನುಬಂಧದ ಬಗ್ಗೆ ಈ ವಿಡಿಯೋದಲ್ಲಿ ಚರ್ಚಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಋಣಾನುಬಂಧ ಇದೆ ಎಂದು ಅವರು ವಿವರಿಸುತ್ತಾರೆ. ತಂದೆ-ತಾಯಿ, ಪತಿ-ಪತ್ನಿ, ಮಕ್ಕಳು ಇವರೆಲ್ಲರೂ ಋಣಾನುಬಂಧದ ಭಾಗ. ಈ ಋಣಾನುಬಂಧವನ್ನು ಅರ್ಥಮಾಡಿಕೊಂಡು ಸುಖಮಯ ಜೀವನ ನಡೆಸುವುದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ. ತೃಪ್ತಿ ಮತ್ತು ಶಾಂತಿಯುತ ಜೀವನಕ್ಕೆ ಋಣಾನುಬಂಧದ ಅರಿವು ಅವಶ್ಯಕ ಎಂದು ಅವರು ಹೇಳಿದ್ದಾರೆ.

‘ಋಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯಃ’. ಈ ಮಾತನ್ನು ನಾವು ಪೂರ್ವದಿಂದಲೂ ಕೇಳಿಕೊಂಡು ಬಂದಿದ್ದೇವೆ. ಇದರ ಅರ್ಥ ಏನು? ಎಷ್ಟು ನಮಗೆ ಋಣ ಇರುತ್ತದೆಯೋ ಜೀವನದಲ್ಲಿ ಅಷ್ಟೇ ದೊರೆಯುತ್ತದೆ. ಈ ಪ್ರಪಂಚದಲ್ಲಿ ಯಾವುದು ಕೂಡ ಪರಿಪೂರ್ಣ ಹಾಗೂ ಶಾಶ್ವತ ಅಲ್ಲ. ಋಣಾನುಬಂಧವನ್ನು ಅರ್ಥ ಮಾಡಿಕೊಂಡರೆ ಜೀವನ ಸುಗಮವಾಗಬಹುದು. ಅದು ಹೇಗೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.