ಜನಿಸುವಾಗ ಚಂದ್ರನು ಯಾವ ರಾಶಿ (Zodiac Signs) ಯಲ್ಲಿ ಇರುವನೋ ಅದು ಅವರ ರಾಶಿಯಾಗಿರುತ್ತದೆ. ಇದು ರಾಶಿಯನ್ನು ತಿಳಿದುಕೊಳ್ಳುವ ಕ್ರಮವೂ ಆಗಿದೆ. ಈ ಚಂದ್ರನು ಒಂದು ರಾಶಿಯನ್ನು ದಾಟಲು ಎರಡು ವರೆ ದಿನವನ್ನು ತೆಗೆದುಕೊಳ್ಳುವನು.
ಮೇಷದಲ್ಲಿ ಚಂದ್ರನಿದ್ದಾಗ ಜನಿಸಿದರೆ ವೃತ್ತದ ಆಕಾರದಲ್ಲಿ ಕಣ್ಣುಗಳನ್ನು ಉಳ್ಳವನಾಗುವನು. ಬಿಸಿಯ ಆಹಾರವನ್ನು ಹೆಚ್ಚು ಸೇವಿಸುವವನೂ, ಆಹಾರದಲ್ಲಿ ಪ್ರೀತಿಯನ್ನು ಇಟ್ಟುಕೊಂಡವನೂ ಆಗುವನು. ಅಷ್ಟು ಮಾತ್ರ ಅಲ್ಲದೇ ಆಹಾರದಲ್ಲಿ ಮಿತಿಯೂ ಇರುವುದು. ಯಾರ ಮೇಲೂ ದೀರ್ಘಕಾಲದ ದ್ವೇಷವನ್ನೂ ಸಾಧಿಸದೇ ಬೇಗ ಪ್ರಸನ್ನ ಮನಃಸ್ಥಿತಿಯನ್ನು ಹೊಂದಿದವನು ಆಗಿರುವನು. ಒಂದು ಕಡೆ ಕುಳಿತಿರುವುದು ಅಥವಾ ವಾಸಸ್ಥಳವನ್ನು ಹೆಚ್ಚು ಬದಲಿಸುವವನೂ ಆಗಿರುತ್ತಾನೆ.
ಇದನ್ನೂ ಓದಿ: ಸಂಖ್ಯಾಶಾಸ್ತ್ರದಲ್ಲಿ ಆಧ್ಯಾತ್ಮಿಕ ಮಹತ್ವ ಹೊಂದಿರುವ 11:11 ರ ಶಕ್ತಿಯನ್ನು ತಿಳಿಯಿರಿ
ಮೇಷ ರಾಶಿಯಲ್ಲಿ ಜನಿಸಿದವನು ಕಾಮಿಯೂ ದುರ್ಬಲವಾದ ಕೈಕಾಲುಗಳನ್ನು ಉಳ್ಳವನೂ ಹಾಗೂ ಸಂಪತ್ತಿನ ಗಮನಾಗಮನವು ಹೆಚ್ಚು ಇರುವವನೂ ಸಾಹಸ ವೃತ್ತಿಯಲ್ಲಿ ಹೆಚ್ಚು ಆಸಕ್ತಯನ್ನು ಇಟ್ಟುಕೊಂಡಿರುವವನೂ ಆಗಿರುತ್ತಾನೆ. ಅಷ್ಟೇ ಅಲ್ಲದೇ ಸ್ತ್ರೀಯರಿಗೆ ಅತಿಪ್ರಿಯನೂ ಸೇವಾಮನೋಭಾವವನ್ನು ಹೊಂದಿದವನೂ ಕೆಟ್ಟ ಉಗುರುಗಳಿಂದ ಕೂಡಿದವನೂ ಇವನಾಗಿರುತ್ತಾನೆ.
ಇದನ್ನೂ ಓದಿ: Zodiac Signs: ಈ 6 ರಾಶಿಯವರು ಜೀವನದಲ್ಲಿ ಸದಾ ಸಂತೋಷವಾಗಿರುತ್ತಾರೆ
ಮೇಷ ರಾಶಿಯವರ ಶಿರೋಭಾಗದಲ್ಲಿ ಗಾಯದ ಚಿಹ್ನೆಗಳು ಇರುವುವು. ಈತನು ಎಲ್ಲರಿಂದ ಗೌರವಕ್ಕೆ ಪಾತ್ರರಾವವನೂ ಹೆಚ್ಚು ಸಹೋದರ ಅಥವಾ ಸಹೋದರಿಯನ್ನು ಹೊಂದಿದವನೂ ಅತಿಯಾದ ಆಸೆಯುಳ್ಳವನ್ನೂ ಸಮುದ್ರ, ಜಲಾಶಯ, ನದಿ, ಸರೋವರ ಮುಂತಾದ ನೀರಿನ ಪ್ರದೇಶಗಳನ್ನು ಕಂಡು ಭಯಗೊಳ್ಳುವನು.
ಇವಿಷ್ಟು ಮೇಷ ರಾಶಿಯಲ್ಲಿ ಚಂದ್ರಸ್ಥಿತನಾಗಿದ್ದಾಗ ಮನುಷ್ಯರ ಸ್ವಭಾವವಾಗಿರುತ್ತದೆ. ಇದಿಷ್ಟೇ ಅಲ್ಲದೇ ಅಲ್ಲಿನ ಉಳಿದ ಗ್ರಹರ ಸಹವಾಸದಿಂದ ಉಂಟಾಗುವ ಲಕ್ಷಣಗಳು ಸ್ವಭಾವಗಳು ಇನ್ನೂ ಅನೇಕ ಇರುತ್ತವೆ.
ಲೋಹಿತ ಶರ್ಮಾ
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:42 pm, Thu, 17 August 23