Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

ಮಾರ್ಚ್ 29ರಿಂದ ಏಪ್ರಿಲ್ 04ರ ಈ ವಾರವು ಉದ್ಯೋಗ ಜೀವನದಲ್ಲಿ ಮಿಶ್ರ ಫಲಗಳನ್ನು ತರಲಿದೆ. ಆರಂಭದಲ್ಲಿ ಶ್ರಮ ನಿರರ್ಥಕವೆನಿಸಿದರೂ, ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ನಿಶ್ಚಿತ. ಹೊಸ ಜವಾಬ್ದಾರಿಗಳು, ಅವಕಾಶಗಳು ಸಿಗಲಿದ್ದು, ತಾಳ್ಮೆ ಮತ್ತು ಶಿಸ್ತು ಮುಖ್ಯ. ಸೃಜನಶೀಲತೆಗೆ ಮನ್ನಣೆ ದೊರೆಯಲಿದೆ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಖಚಿತ. ಆರ್ಥಿಕ ಲಾಭ ಹಾಗೂ ವೃತ್ತಿಯಲ್ಲಿ ಸ್ಥಿರತೆ ನಿರೀಕ್ಷಿಸಬಹುದು.

Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
ಉದ್ಯೋಗ ಭವಿಷ್ಯ
Edited By:

Updated on: Mar 29, 2026 | 11:05 AM

ಮಾರ್ಚ್ 29ರಿಂದ ಏಪ್ರಿಲ್ 04 ರವರೆಗೆ ಈ ವಾರವಿದ್ದು ​ಶ್ರಮವು ನಿರರ್ಥಕ ಎನಿಸಬಹುದು. ಕಲ್ಪಿಸಿಕೊಂಡಿದ್ದು ಆಗಿಲ್ಲ ಎಂಬ ನೋವು, ಬರಬೇಕಾದ ಹಣವು ತಲುಪದು‌. ಆತ್ಮವಿಶ್ವಾಸ ಅಲ್ಪ ಕಡಿಮೆಯಾದಂತೆ ತೋರಿದರೂ ಮತ್ತೆ ಅದು ಮೇಲೇರುವುದು. ಈಸ ಬೇಕು ಇದ್ದು ಜಯಿಸಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಲಿದೆ.

​ಮೇಷ:

ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ.

ವೃಷಭ:

ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಅನಗತ್ಯ ವಾಗ್ವಾದಗಳಿಂದ ದೂರವಿರಿ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆಯಿದೆ. ಸ್ವಲ್ಪ ಶ್ರಮ ವಹಿಸಿದರೆ ಯಶಸ್ಸು ಖಚಿತ.

ಮಿಥುನ:

ನಿಮ್ಮ ಸೃಜನಶೀಲತೆಗೆ ಮನ್ನಣೆ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ಈ ವಾರ ಶುಭ ಫಲ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ಸಮಯವಿದು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.

ಕರ್ಕಾಟಕ:

ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆಗಳಿವೆ. ಕೆಲಸದ ಒತ್ತಡ ಹೆಚ್ಚಾಗಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ಶಿಸ್ತಿನಿಂದ ಕೆಲಸ ನಿರ್ವಹಿಸಿದರೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು.

ಸಿಂಹ:

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ನಿಮ್ಮ ನಾಯಕತ್ವದ ಗುಣಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ಹೊಸ ಯೋಜನೆಗಳಿಗೆ ಇದು ಸೂಕ್ತ ಸಮಯ.

ಕನ್ಯಾ:

ಉದ್ಯೋಗದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಮಾತು ಬಿಗಿಹಿಡಿಯುವುದು ಉತ್ತಮ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಾಲಿಸಿ. ಆರ್ಥಿಕ ಲಾಭಕ್ಕಿಂತ ಅನುಭವಕ್ಕೆ ಪ್ರಾಮುಖ್ಯತೆ ನೀಡಿ.

ತುಲಾ:

ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗಿಗಳಿಗೆ ಬಡ್ತಿಯ ಸೂಚನೆಗಳಿವೆ. ತಂಡದ ಸದಸ್ಯರೊಂದಿಗೆ ಸಾಮರಸ್ಯದಿಂದ ಕಾರ್ಯನಿರ್ವಹಿಸಿ. ನಿರೀಕ್ಷಿತ ಗುರಿಯನ್ನು ಸುಲಭವಾಗಿ ತಲುಪುವಿರಿ.

ವೃಶ್ಚಿಕ:

ಶತ್ರುಗಳ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಿ. ಕಠಿಣ ಪರಿಶ್ರಮವೊಂದೇ ನಿಮಗೆ ಯಶಸ್ಸು ತಂದುಕೊಡಬಲ್ಲದು. ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ.

ಧನು:

ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಹೊಸ ಕೌಶಲ್ಯಗಳನ್ನು ಕಲಿಯಲು ಆಸಕ್ತಿ ತೋರುವಿರಿ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಮಕರ:

ಕೆಲಸದ ಒತ್ತಡದಿಂದ ಕುಟುಂಬದ ಕಡೆ ಗಮನ ನೀಡಲು ಸಾಧ್ಯವಾಗದಿರಬಹುದು. ನಿಗದಿತ ಸಮಯಕ್ಕೆ ಕೆಲಸ ಮುಗಿಸಲು ಪ್ರಯತ್ನಿಸಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯಿರಿ.

ಕುಂಭ:

ಧೈರ್ಯದಿಂದ ಕೆಲಸಗಳನ್ನು ಪೂರೈಸುವಿರಿ. ಸಣ್ಣ ಪ್ರವಾಸಗಳು ಉದ್ಯೋಗಕ್ಕೆ ಪೂರಕವಾಗಿರಲಿವೆ. ಸಹೋದ್ಯೋಗಿಗಳ ನಡುವೆ ಉಂಟಾಗಿದ್ದ ಗೊಂದಲಗಳು ಬಗೆಹರಿಯಲಿವೆ. ಆತ್ಮವಿಶ್ವಾಸ ಹೆಚ್ಚಲಿದೆ.

ಮೀನ:

ಆರ್ಥಿಕವಾಗಿ ಲಾಭದಾಯಕ ವಾರವಿದು. ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಹೂಡಿಕೆಗಳ ಬಗ್ಗೆ ಆಲೋಚಿಸುವಿರಿ. ಅಧಿಕಾರಿ ವರ್ಗದವರಿಂದ ಬೆಂಬಲ ಸಿಗಲಿದ್ದು, ಕೆಲಸದಲ್ಲಿ ನೆಮ್ಮದಿ ಇರಲಿದೆ.

– ಲೋಹಿತ ಹೆಬ್ಬಾರ್ – 8762924271

Follow Us