ಮಾರುತಿ ಸುಜುಕಿ ತನ್ನ ಕಾಂಪ್ಯಾಕ್ಟ್ SUV ಬ್ರೆಝಾ (compact SUV Brezza)ದ ಮುಂಬರುವ ಹೊಸ ಆವೃತ್ತಿಯನ್ನು ಜೂನ್ 30ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದೆ. ಹೊಸ ಬ್ರೆಝಾವನ್ನು ಹೊಸ ಯುಗದ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನಂತಹ ಫೀಚರ್ಸ್ಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಗ್ರಾಹಕರು 11,000 ರೂ. ಆರಂಭಿಕ ಪಾವತಿಯೊಂದಿಗೆ ಕಂಪನಿಯ ಯಾವುದೇ ಅರೆನಾ ಶೋರೂಮ್ಗಳು ಅಥವಾ ಅದರ ವೆಬ್ಸೈಟ್ ಮೂಲಕ ಕಾರನ್ನು ಬುಕ್ ಮಾಡಬಹುದು.
compact SUV Brezza ಕಾರಿನಲ್ಲಿ ಹೊಸದೇನಿದೆ?
ಹೊಸ ಮಾರುತಿ ಬ್ರೆಝಾವು 2016ರಲ್ಲಿ ಮಾರುಕಟ್ಟೆಗೆ ಬಂದ ಜನಪ್ರಿಯ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ SUV ಅನ್ನು ಬದಲಿಸುತ್ತದೆ. ಹೊಸ ಕಾರಿನಲ್ಲಿ ವಿಟಾರಾ ಎಂಬ ಪ್ರತ್ಯಯವನ್ನು ತೆಗೆದುಹಾಕಲಾಗಿದೆ. ಮೂಲಗಳ ಪ್ರಕಾರ, ಹೊಸ ಬ್ರೆಝಾವನ್ನು ಹಿಂದಿನ ಆವೃತ್ತಿಯ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಬಾಡಿ ಪ್ಯಾನೆಲ್‌ಗಳು ಮತ್ತು ಒಳಾಂಗಣಗಳು ಹೊಸದಾಗಿರಲಿದೆ. ಮಾರುತಿ ಸುಜುಕಿಯ ಟೀಸರ್ ಚಿತ್ರವು ಕೋನೀಯ ಹೆಡ್‌ಲ್ಯಾಂಪ್ ವಿನ್ಯಾಸ ಮತ್ತು ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಹೊಸ ಶೈಲಿಯನ್ನು ತೋರಿಸುತ್ತದೆ. SUV ಹೊಸ ಗ್ರಿಲ್, ಬಂಪರ್, ಹೆಡ್‌ಲ್ಯಾಂಪ್‌ಗಳು ಮತ್ತು ಬಾನೆಟ್ ಅನ್ನು ಚಪ್ಪಟೆಯಾದ ಮೂಗಿನೊಂದಿಗೆ ಪಡೆಯುತ್ತದೆ. ಹಿಂಭಾಗದಲ್ಲಿ ಟೈಲ್‌ಗೇಟ್ ಎಲ್ಲಾ ಹೊಸದಾಗಿದ್ದು, ಅಡ್ಡಲಾಗಿ ಸುತ್ತುವ ಟೈಲ್ ಲ್ಯಾಂಪ್ ಇದೆ.
ವೈಶಿಷ್ಟ್ಯಗಳು
ಹೊಸ ಬಲೆನೊದಂತೆಯೇ ಬ್ರೆಜ್ಜಾದ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವು ಅದರ ಒಳಾಂಗಣದಲ್ಲಿ ಪ್ರಮುಖ ಬದಲಾವಣೆಗಳನ್ನು ಕಾಣಲಿದೆ. ಹೊಸ ಬ್ರೆಝಾವು ಎರಡು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಆಯ್ಕೆಗಳನ್ನು ಪಡೆಯುತ್ತದೆ.
ಎಂಜಿನ್, ಗೇರ್ ಬಾಕ್ಸ್ ಆಯ್ಕೆ
ಮಾರುತಿ ಸುಜುಕಿ ಬ್ರೆಝಾದಲ್ಲಿ ಹೊಸ K15C ಎಂಜಿನ್ ಲಭ್ಯವಿರುತ್ತದೆ. ಈ ಎಂಜಿನ್ ಅನ್ನು ಎರ್ಟಿಗಾ ಮತ್ತು XL6 ನೊಂದಿಗೆ ಪರಿಚಯಿಸಲಾಗಿತ್ತು. ಈ ಎಂಜಿನ್ 103hp ಮತ್ತು 136Nm ಉತ್ಪಾದಿಸುತ್ತದೆ ಮತ್ತು ಇದನ್ನು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಈ ಎಂಜಿನ್‌ನಲ್ಲಿ ಇಂಧನ ಉಳಿತಾಯ ತಂತ್ರಜ್ಞಾನವೂ ಲಭ್ಯವಿರುತ್ತದೆ. ಆದರೆ ಹೊಸ ಬ್ರೆಝಾ ಕೆಲವು ರೂಪಾಂತರಗಳಲ್ಲಿ 6 ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ ಎಂದು ಮಾರುತಿ ಸುಜುಕಿ ದೃಢಪಡಿಸಿದೆ.
ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಜೊತೆ ಸ್ಪರ್ಧೆ
ಹೊಸ ಕಾರು ಬಿಡುಗಡೆಯೊಂದಿಗೆ ಅದರ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಅದಾಗ್ಯೂ ಆರಂಭಿಕ ಬೆಲೆ ಅದರ ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆನ್ಯೂ, ಕಿಯಾ ಸಾನೆಟ್, ಟಾಟಾ ನೆಕ್ಸನ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳಿಗಿಂತ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
Published On - 5:17 pm, Thu, 23 June 22