ವಾಟ್ಸ್ ಆ್ಯಪ್ ಬಳಕೆದಾರರೇ ನಿಮಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಬರುವ ಮೆಸೆಜ್ಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ ಈ ನಕಲಿ ವಾಟ್ಸ್ ಆ್ಯಪ್ ಸಂದೇಶ (Fake WhatsApp Message) ಕಳುಹಿಸಿ ನಿಮ್ಮಿಂದ ಹಣ ಲಪಟಾಯಿಸುವ ಜಾಲವೊಂದು ಸಕ್ರಿಯವಾಗಿದೆ. ಇದಕ್ಕೆ ದೊಡ್ಡದೊಡ್ಡ ಸಂಸ್ಥೆಗಳು ಕೂಡ ಬಲಿಯಾಗಿವೆ. ಈ ಹಿಂದೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ವಂಚಕರ ಬಲೆಗೆ ಬಿದ್ದು 1 ಕೋಟಿ ಕಳೆದುಕೊಂಡಿತ್ತು. ಇದೀಗ ಜೆಬಿಎಂ ಗ್ರೂಪ್ (JBM Group) ಕೂಡ ವಂಚನೆಗೆ ಒಳಗಾಗಿದೆ. ಜೆಬಿಎಂ ಗ್ರೂಪ್ ಹೆಸರಿನ ಆಟೋಮೊಬೈಲ್ ಕಂಪನಿಯ ಉಪಾಧ್ಯಕ್ಷರ ಹೆಸರಿನಲ್ಲಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಗೆ ನಕಲಿ ವಾಟ್ಸ್ ಆ್ಯಪ್ ಸಂದೇಶ ರವಾನಿಸಿ 7 ಬ್ಯಾಂಕ್ ಖಾತೆಗಳಿಂದ 1 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿ ವಂಚಿಸಲಾಗಿದೆ.
ಮಾಹಿತಿ ಪ್ರಕಾರ, ಸಿಎಫ್ಒ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ವಿವೇಕ್ ಗುಪ್ತಾ ಅವರು ನಕಲಿ ವಾಟ್ಸ್ ಆ್ಯಪ್ ಸಂದೇಶ ರವಾನಿಸಲಾಗಿದೆ. ನಕಲಿ ಸಂದೇಶದಲ್ಲಿ ಸೂಚಿಸಲಾದ ಬ್ಯಾಂಕ್ ಖಾತೆಗಳಿಗೆ ನಿರ್ದಿಷ್ಟ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಸಂದೇಶವನ್ನು ಗುಪ್ತಾ ಅವರು ಸ್ವೀಕರಿಸಿದ್ದಾರೆ. ಅದರಂತೆ ಒಟ್ಟು ಎಂಟು ವಹಿವಾಟುಗಳ ಮೂಲಕ ಏಳು ವಿವಿಧ ಬ್ಯಾಂಕ್ ಖಾತೆಗಳಿಂದ 1,11,97,696 ರೂಪಾಯಿ ವರ್ಗಾವಣೆ ಮಾಡಲಾಗಿದೆ.
“ವಂಚಕನು ತಾನು ಜೆಬಿಎಂ ಗ್ರೂಪ್ ಉಪಾಧ್ಯಕ್ಷ ನಿಶಾಂಕ್ ಆರ್ಯ ಎಂದು ಹೇಳಿಕೊಂಡಿದ್ದಾನೆ. ಕರೆ ಮಾಡಿದ ನಂಬರ್ನ ವಾಟ್ಸ್ ಆ್ಯಪ್ ಪ್ರೊಫೈಲ್ನಲ್ಲಿ ಆರ್ಯ ಅವರದ್ದೇ ಫೋಟೋ ಪ್ರದರ್ಶಿಸಿದೆ. ಟ್ರೂಕಾಲರ್ನಲ್ಲಿ ಸಂಖ್ಯೆಯನ್ನು ಪರಿಶೀಲಿಸಿದಾಗಲೂ ಅದು ಆರ್ಯ ಅವರ ನಂಬರ್ ಎಂದು ತೋರಿಸಿದೆ. ಅವರು ಮಹತ್ವದ ಸಭೆಯಲ್ಲಿ ನಿರತರಾಗಿದ್ದಾರೆ ಎಂದು ಸಂದೇಶ ಕಳುಹಿಸುವವರು ನನಗೆ ತಿಳಿಸಿದ್ದರಿಂದ ಯಾವುದೇ ಹೆಚ್ಚಿನ ವಿಚಾರಣೆ ಮಾಡಲು ನಾನು ನೇರವಾಗಿ ಕರೆ ಮಾಡಲು ಸಾಧ್ಯವಾಗಲಿಲ್ಲ” ಎಂದು ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಜೆಬಿಎಂ ಗ್ರೂಪ್ನ ಜೆಬಿಎಂ ಇಂಡಸ್ಟ್ರೀಸ್ ಮತ್ತು ಜೆಬಿಎಂ ಆಟೋ ಎಂಬ ಎರಡು ಘಟಕಗಳಿಂದ ಮೊತ್ತವನ್ನು ವರ್ಗಾಯಿಸಲಾಗಿದೆ. ಕೋರಿಕೆಯ ಮೇರೆಗೆ ಅಂತಹ ವರ್ಗಾವಣೆಗಳನ್ನು ದೃಢೀಕರಿಸುವ ಯುಟಿಆರ್ ಸಂಖ್ಯೆಯನ್ನು ಅದೇ ವಾಟ್ಸ್ ಆ್ಯಪ್ ಚಾಟ್ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಗುಪ್ತಾ ಅವರು ಹೇಳಿದ್ದಾರೆ.
ಸೈಬರ್ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?
ಮತ್ತಷ್ಟು ಉದ್ಯಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Mon, 19 September 22