ರೈತನ ಶ್ರಮ ಬೆಂಕಿಗೆ ಆಹುತಿ: ಗದಗದಲ್ಲಿ 15 ಟ್ರ್ಯಾಕ್ಟರ್ ಶೇಂಗಾ ಭಸ್ಮ

ಗದಗದ ರೈತನೋರ್ವ ಸಾಲ ಮಾಡಿ ಬೆಳೆದಿದ್ದ 15 ಟ್ರ್ಯಾಕ್ಟರ್ ಶೇಂಗಾ ಬೆಂಕಿಗೆ ಆಹುತಿಯಾಗಿದೆ. ರೈತನ ಕಣ್ಣೀರು ಮುಗಿಲು ಮುಟ್ಟಿದೆ.

ರೈತನ ಶ್ರಮ ಬೆಂಕಿಗೆ ಆಹುತಿ: ಗದಗದಲ್ಲಿ 15 ಟ್ರ್ಯಾಕ್ಟರ್ ಶೇಂಗಾ ಭಸ್ಮ
ಸುಟ್ಟು ಬೂದಿಯಾಗಿರುವ ಶೇಂಗಾ

Updated on: Dec 12, 2020 | 1:11 PM

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಕಟ್ಟಿ ಗ್ರಾಮದಲ್ಲಿ ರೈತರೋರ್ವರ ಶ್ರಮ ಭಸ್ಮವಾಗಿದೆ. ಆಕಸ್ಮಿಕ ಬೆಂಕಿ ತಗುಲಿ ನಿಂಗಪ್ಪ ಮಾಗಡಿ ಎಂಬ ರೈತ ಬೆಳೆದ 15 ಟ್ರ್ಯಾಕ್ಟರ್ ಶೇಂಗಾ‌ ಬಣವೆ ಸುಟ್ಟು‌ ಭಸ್ಮವಾಗಿದೆ.

ರೈತನ ಶ್ರಮ ಬೆಂಕಿ ಪಾಲು..

15 ಎಕರೆ ಪ್ರದೇಶದಲ್ಲಿ ನಿಂಗಪ್ಪ ಮಾಗಡಿ ಸಾಲ ಮಾಡಿ ಶೇಂಗಾ ಬೆಳೆದಿದ್ದರು. ಕೊಯ್ಲಿನ ನಂತರ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಶೇಂಗಾವನ್ನು ದಾಸ್ತಾನಿಟ್ಟಿದ್ದರು. ಆದರೆ, ಈಗ 15 ಟ್ಯಾಕ್ಟರ್ ಶೇಂಗಾ ಬಣವೆ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ‌ ಸಿಬ್ಬಂದಿ‌ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಜೊತೆಗೆ ತಾವು ಬೆಳೆದ ಬೆಳೆ ಬೂದಿಯಾಗಿರುವುದನ್ನು ಕಂಡು ನಿಂಗಪ್ಪ ಮಾಗಡಿ ಕಣ್ಣೀರು ಹಾಕುವಂತಾಗಿದೆ.

ಶೇಂಗಾ ಇದ್ದ ಜಾಗದಲ್ಲಿ ಈಗಿರುವುದು ಬರೀ ಬೂದಿ ಮಾತ್ರ

ರೈತನ ಕಣ್ಣೀರಿಗೆ ಕೊನೆ ಎಂದು..?

ಬೆಂಕಿ ನಂದಿಸಲು ಅಗ್ನಿಶಾಮಕದಳದ ಪ್ರಯತ್ನ 

Published On - 12:41 pm, Sat, 12 December 20