ರಾಜ್ಯದಲ್ಲಿ ಇಂದು ಹೊಸದಾಗಿ 416 ಜನರಿಗೆ ಕೊರೊನಾ, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನೇ ದಿನ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ಇಂದು ರಾಜ್ಯದಲ್ಲಿ 416ಕೇಸ್​ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 94 ಪ್ರಕರಣಗಳು ಪತ್ತೆಯಾಗಿದೆ. ಬೀದರ್ 73, ಬಳ್ಳಾರಿ 38, ರಾಮನಗರ 38, ಕಲಬುರಗಿ 34, ಮೈಸೂರು 22, ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ 5, ಚಿಕ್ಕಬಳ್ಳಾಪುರ 5, ದಕ್ಷಿಣ […]

ರಾಜ್ಯದಲ್ಲಿ ಇಂದು ಹೊಸದಾಗಿ 416 ಜನರಿಗೆ ಕೊರೊನಾ, ಯಾವ ಜಿಲ್ಲೆಯಲ್ಲಿ ಎಷ್ಟು?
Edited By:

Updated on: Jun 20, 2020 | 7:10 PM

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನೇ ದಿನ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ಇಂದು ರಾಜ್ಯದಲ್ಲಿ 416ಕೇಸ್​ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 94 ಪ್ರಕರಣಗಳು ಪತ್ತೆಯಾಗಿದೆ.

ಬೀದರ್ 73, ಬಳ್ಳಾರಿ 38, ರಾಮನಗರ 38, ಕಲಬುರಗಿ 34, ಮೈಸೂರು 22, ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ 5, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4, ಮಂಡ್ಯ 4, ಉತ್ತರಕನ್ನಡ, ಬೆಂಗಳೂರು ಗ್ರಾ, ಕೋಲಾರದಲ್ಲಿ ತಲಾ 4 ಕೇಸ್, ದಾವಣಗೆರೆ 3, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ 2 ಕೇಸ್, ಗದಗ, ತುಮಕೂರು ಜಿಲ್ಲೆಯಲ್ಲಿ ತಲಾ ಎರಡು ಕೇಸ್‌, ಬೆಳಗಾವಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದು ಕೇಸ್‌ ಪತ್ತೆಯಾಗಿದೆ.

ಇಂದು ಕೊರೊನಾಗೆ 9 ಮಂದಿ ಬಲಿ:
ಕೊರೊನಾ ಸೋಂಕು ಇಂದು 9 ಜನರನ್ನು ಬಲಿಪಡೆದಿದೆ. ಬೆಂಗಳೂರಿನಲ್ಲಿ ಇಂದು ಮೂವರು ಮೃತಪಟ್ಟಿದ್ದಾರೆ. ಜೊತೆಗೆ ಸೋಂಕಿತರ ಪೈಕಿ 5391 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.